ಶ್ರೇಯಸ್ ಮೇಲೆ ಕಣ್ಣಿಟ್ಟ BCCI – GOLD ಗೆದ್ರಷ್ಟೇ ಕ್ಯಾಪ್ಟನ್ಸಿ ಸೇಫ್!
ಏಷ್ಯನ್ ಗೇಮ್ಸ್ ದಾರಿ ಸುಲಭನಾ?

ಏಷ್ಯನ್ ಗೇಮ್ಸ್ನಲ್ಲಿ ಮೆನ್ಸ್ ಕ್ರಿಕೆಟ್ ಮ್ಯಾಚಸ್ ಸೆಪ್ಟೆಂಬರ್ 24ರಿಂದ ಸ್ಟಾರ್ಟ್ ಆಗಿದ್ದು ಭಾರತ ಸೆಪ್ಟೆಂಬರ್ 28ಕ್ಕೆ ಕ್ವಾರ್ಟಲ್ ಫೈನಲ್ ಪಂದ್ಯದ ಮೂಲಕ ಜರ್ನಿ ಸ್ಟಾರ್ಟ್ ಮಾಡಲಿದೆ. ಟೂರ್ನಮೆಂಟ್ನಲ್ಲಿ ಟೀಂ ಇಂಡಿಯಾನೇ ಗೋಲ್ಡ್ ಮೆಡಲ್ ಗೆಲ್ಲುವಂಥ ಫೇವರೆಟ್ ಟೀಂ ಕೂಡ. ಹಾಗಂತ ಬೇರೆ ತಂಡಗಳನ್ನ ಈಸಿಯಾಗಿ ತಗೊಳ್ಳೋಕೂ ಆಗಲ್ಲ. ಯಾಕಂದ್ರೆ ಜಪಾನ್ನಂಥ ಕ್ರಿಕೆಟ್ ಶಿಶುವೇ ಭಾರತಕ್ಕೆ ಸೋಲಿನ ಭಯ ಹುಟ್ಟಿಸಿತ್ತು. ಹೀಗಾಗಿ ಭಾರತ ಕೇರ್ಫುಲ್ ಆಗಿ ಆಡ್ಬೇಕಿದೆ. ಌಂಡ್ ಇಲ್ಲಿ ತಂಡಕ್ಕಿಂತ ಜಾಸ್ತಿ ನಾಯಕ ಶ್ರೇಯಸ್ ಅಯ್ಯರ್ ಮೇಲೆ ಹೆಚ್ಚಿನ ಪ್ರೆಶರ್ ಇದೆ.
ಇದನ್ನೂ ಓದಿ : ಏಷ್ಯನ್ ಗೇಮ್ಸ್ ನಲ್ಲೂ ಆಡಲ್ಲ ವೈಭವ್? – ಅಭಿಷೇಕ್ & ಸಂಜುನೇ ಓಪನರ್ಸ್
2023ರ ಹ್ಯಾಂಗ್‌ಝೌನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ನಲ್ಲಿ ಮೆನ್ಸ್ ವಿಭಾಗದಲ್ಲಿ ಭಾರತ ಚಿನ್ನ ಗೆದ್ದು ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿದೆ. ಈಗ 2026ಕ್ಕೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಮತ್ತೊಮ್ಮೆ ಗೋಲ್ಡ್ ಮೆಡಲ್ಗೆ ಮುತ್ತಿಡೋದು ತುಂಬಾನೇ ಮಹತ್ವದ್ದಾಗಲಿದೆ. 2024 ಮತ್ತು 2026ರ ಟಿ20 ವಿಶ್ವಕಪ್ನಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಆಗಿರೋ ಭಾರತ ಟಿ-20ಐ ತಂಡಕ್ಕೆ ಪೂರ್ಣ ಪ್ರಮಾಣದ ನಾಯಕನಾಗಿರೋ ಶ್ರೇಯಸ್ಗೆ ತಮ್ಮ ಕ್ಯಾಪ್ಟನ್ಸಿ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಸಾಬೀತುಪಡಿಸಲು ಇದೊಂದು ಸುವರ್ಣ ಅವಕಾಶವಾಗಿದೆ.
ಸತತ ಸೋಲಿನಲ್ಲೇ ಕ್ಯಾಪ್ಟನ್ಸಿ ಆರಂಭಿಸಿರುವ ಶ್ರೇಯಸ್!
2026ರ ಐಪಿಎಲ್ ಆದ್ಮೇಲೆ ಶ್ರೇಯಸ್ ಅಯ್ಯರ್ ಕಳೆದ ಜೂನ್ ನಲ್ಲಿ ಭಾರತದ T20I ತಂಡದ ನಾಯಕನಾಗಿ ನೇಮಕ ಆದ್ರು. ಅವ್ರ ನಾಯಕತ್ವದಲ್ಲಿ ಭಾರತ ಇದುವರೆಗೆ ನಾಲ್ಕು ಸರಣಿಗಳನ್ನ ಆಡಿದೆ. ಮೊದಲ ಸರಣಿಯಲ್ಲೇ ಐರ್ಲೆಂಡ್ ವಿರುದ್ಧ ಎರಡಕ್ಕೆ ಎರಡೂ ಪಂದ್ಯ ಸೋತ್ರು. ನೆಕ್ಸ್ಟ್ ಇಂಗ್ಲೆಂಡ್ ವಿರುದ್ಧವೂ ಕ್ಲೀನ್ ಸ್ವೀಪ್. ಅದಾದ್ಮೇಲೆ ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದು ಮೊದಲ ಗೆಲುವಿನ ರುಚಿ ಕಂಡ್ರು. ಌಂಡ್ ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧ ಮೂರಕ್ಕೆ ಮೂರೂ ಪಂದ್ಯಗಳನ್ನ ಗೆದ್ದು ಏಷ್ಯನ್ ಗೇಮ್ಸ್ಗೆ ಹಾರಿದ್ದಾರೆ. ಹೀಗಾಗಿ ಏಷ್ಯನ್ ಗೇಮ್ಸ್ ನಲ್ಲಿ ಗೋಲ್ಡ್ ಗೆಲ್ಲೋದು ತುಂಬಾನೇ ಮುಖ್ಯವಾಗಲಿದೆ. ಹೇಗೆ ಅನ್ನೋದನ್ನ ನೋಡ್ತಾ ಹೋಗೋಣ.
ಶ್ರೇಯಸ್ ಮುಂದಿನ ಸವಾಲುಗಳು!
ನಾಯಕನಾಗಿ ಮೊದಲ ಬಾರಿಗೆ ದೊಡ್ಡ ಬಹುರಾಷ್ಟ್ರೀಯ ಟೂರ್ನಿಗೆ ನಾಯಕತ್ವ
2023ರಲ್ಲಿ ಚಿನ್ನ ಗೆದ್ದಿರೋದ್ರಿಂದ ಅದನ್ನ ಡಿಫೆನ್ಸ್ ಮಾಡಿಕೊಳ್ಳುವ ಜವಾಬ್ದಾರಿ
ಅಭಿಷೇಕ್, ಬುಮ್ರಾ, ಸಂಜು, ಕಿಶನ್, ಅಕ್ಷರ್ ರಂತಹ ಸ್ಟಾರ್ ಪ್ಲೇಯರ್ಸ್ ಟೀಂ
ಚಿನ್ನ ಗೆದ್ದರೆ ಶ್ರೇಯಸ್ ನಾಯಕತ್ವದಲ್ಲಿ ಭಾರತ ಏಷ್ಯನ್ ಗೇಮ್ಸ್ ಗೆದ್ದ ದಾಖಲೆ
ಮಲ್ಟಿ ನೇಷನ್ಸ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನಿರ್ಧಾರಗಳ ಮೇಲೆ ಫೋಕಸ್
ಆರಂಭದಲ್ಲಿ ಕಂಡಿರುವ ಸತತ ಸೋಲುಗಳ ಮುಖಭಂಗದಿಂದ ಹೊರಬರಬಹುದು
ಹೆಡ್ ಕೋಚ್ & ಮ್ಯಾನೇಜ್ ಮೆಂಟ್ ನಂಬಿಕೆ ಉಳಿಸಿಕೊಳ್ಳಲು ಸಹಾಯಕ
ಹೀಗೆ ಸಾಕಷ್ಟು ವಿಚಾರಗಳಿಂದ ಏಷ್ಯನ್ ಗೇಮ್ಸ್ ಶ್ರೇಯಸ್ ಅಯ್ಯರ್ ಪಾಲಿಗೆ ಗೋಲ್ಡನ್ ಆಪರ್ಚುನಿಟಿ ಆಗಿದೆ. ಅದೂ ಅಲ್ದೇ ಏಷ್ಯನ್ ಗೇಮ್ಸ್ನಲ್ಲಿ ಬಲಿಷ್ಠ ತಂಡಗಳಂತ ಯಾರೂ ಇಲ್ಲ. ಶ್ರೀಲಂಕಾ, ಬಾಂಗ್ಲಾ ಹಾಗೇ ಪಾಕಿಸ್ತಾನ ತಂಡಗಳೇ ಭಾರತದ ಮುಂದಿರೋ ಆವರೇಜ್ ಟೀಮ್ಸ್. ಇರೋರಲ್ಲಿ ಬಲಿಷ್ಠರು. ಸೋ ಇಂಥಾ ತಂಡಗಳ ವಿರುದ್ಧವೇ ಭಾರತ ಗೆದ್ದಿಲ್ಲ ಅಂದ್ರೆ ನೆಕ್ಸ್ಟ್ ಸ್ಟ್ರಾಂಗ್ ಟೀಮ್ಗಳ ಎದುರಲ್ಲಿ ಭಾರತವನ್ನ ಹೇಗೆ ಲೀಡ್ ಮಾಡ್ತಾರೆ ಅನ್ನೋ ಪ್ರಶ್ನೆಗಳು ಮೂಡುತ್ವೆ. ಅದೂ ಅಲ್ದೇ ಶ್ರೇಯಸ್ ಗೆದ್ದಿರೋ ಜಿಂಜಾಬ್ವೆ ಮತ್ತು ಅಫ್ಘಾನಿಸ್ತಾನ ವಿರುದ್ಧದ ಸರಣಿಗಳನ್ನ. ಈಗ ಏಷ್ಯನ್ ಗೇಮ್ಸ್ ಆದ್ಮೇಲೆ ವಿಂಡೀಸ್ ವಿರುದ್ಧ 5 ಪಂದ್ಯಗಳ ಟಿ-20ಐ ಸರಣಿ ಅದಾದ್ಮೇಲೆ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ-20ಐ ಸರಣಿ ಇದೆ. ಇವೆರಡೂ ಸರಣಿಗಳಿಗೂ ಮುನ್ನ ಏಷ್ಯನ್ ಗೇಮ್ಸ್ ಗೆದ್ರೆ ಶ್ರೇಯಸ್ಗೆ ಪಾಸಿಟಿವ್ ವೈಬ್ಸ್ ನೀಡುತ್ತೆ.

ನೋಡಿರಿ

