‘ಗೋಲ್ಡನ್ ಬೂಟ್’ ಯಾರಿಗೆ ?- ಮೆಸ್ಸಿ, ಎಂಬಪ್ಪೆ ನಡುವೆ ‘ಅದೃಷ್ಟ’ದ ಸೆಣಸಾಟ

‘ಗೋಲ್ಡನ್ ಬೂಟ್’ ಯಾರಿಗೆ ?- ಮೆಸ್ಸಿ, ಎಂಬಪ್ಪೆ ನಡುವೆ ‘ಅದೃಷ್ಟ’ದ ಸೆಣಸಾಟ

ಫಿಫಾ ವಿಶ್ವಕಪ್‌ನಲ್ಲಿ ಬಲಿಷ್ಠ ತಂಡಗಳಾದ ಅರ್ಜೆಂಟೀನಾ ಮತ್ತು ಫ್ರಾನ್ಸ್ ಫೈನಲ್ ಹಣಾಹಣಿ ನಡೆಸಲಿವೆ. ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಮತ್ತು ಫ್ರಾನ್ಸ್ ಯುವ ಆಟಗಾರ ಕೈಲಿಯನ್ ಎಂಬಪ್ಪೆ ನಡುವೆ ಎಲ್ಲರ ಚಿತ್ತ ನೆಟ್ಟಿದೆ. ಇದರ ನಡುವೆ ಈ ಬಾರಿಯ ‘ಗೋಲ್ಡನ್ ಬೂಟ್’ ಯಾರಿಗೆ ಸಿಗಲಿದೆ ಎಂಬ ಕುತೂಹಲವೂ ಗರಿಗೆದರಿದೆ.

ಇದನ್ನೂ ಓದಿ :  ‘ನಿನ್ನ ಶ್ರಮಕ್ಕೆ ತಕ್ಕ ಪ್ರತಿಫಲ…. ‘- ಮರಿ ತೆಂಡೂಲ್ಕರ್‌ಗೆ ಭಾವನಾತ್ಮಕ ಪತ್ರ ಬರೆದ ಅಕ್ಕ ಸಾರಾ

ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಲಿಯೋನೆಲ್ ಮೆಸ್ಸಿ ಮತ್ತು ಕೈಲಿಯನ್ ಎಂಬಪ್ಪೆ ಇಬ್ಬರೂ ಕೂಡಾ ತಲಾ 5 ಗೋಲುಗಳನ್ನು ಗಳಿಸಿದ್ದಾರೆ. ಇಬ್ಬರೂ ಕೂಡಾ ‘ಗೋಲ್ಡನ್ ಬೂಟ್’ ಗಾಗಿ ಪ್ರಬಲ ಸ್ಪರ್ಧಿಗಳಾಗಿದ್ದಾರೆ. ಹೀಗಾಗಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ‘ಗೋಲ್ಡನ್ ಬೂಟ್’ ಅನ್ನು ಯಾರಿಗೆ ನೀಡಲಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಲಿಯೋನೆಲ್ ಮೆಸ್ಸಿ ಈ ಬಾರಿಯ ವಿಶ್ವಕಪ್‌ನಲ್ಲಿ ಪೆನಾಲ್ಟಿಯನ್ನು 3 ಬಾರಿ ಗೋಲಾಗಿ ಪರಿವರ್ತಿಸಿದ್ದಾರೆ. ನೆದರ್ಲ್ಯಾಂಡ್ಸ್, ಕ್ರೊವೇಷಿಯಾ ಮತ್ತು ಸೌದಿ ಅರೇಬಿಯಾ ವಿರುದ್ಧ ಮೆಸ್ಸಿ ಪೆನಾಲ್ಟಿಗಳಲ್ಲಿ ಗೋಲು ಗಳಿಸಿದ್ದಾರೆ. ಕಿಲಿಯನ್ ಎಂಬಪ್ಪೆ ತನ್ನ ಎಲ್ಲಾ ಐದು ಗೋಲುಗಳನ್ನು ಔಟ್ ಫೀಲ್ಡ್ ಮೂಲಕ ಗಳಿಸಿದ್ದಾರೆ. ಈಗ ಲಿಯೋನೆಲ್ ಮೆಸ್ಸಿ ಫೈನಲ್‌ನಲ್ಲಿ ಗೋಲು ಗಳಿಸಿದರೆ ಮತ್ತು ಕೈಲಿಯನ್ ಎಂಬಪ್ಪೆ ಫೈನಲ್‌ನಲ್ಲಿ ಯಾವುದೇ ಗೋಲು ಗಳಿಸಲು ಸಾಧ್ಯವಾಗದಿದ್ದರೆ, ಮೆಸ್ಸಿ ಗೋಲ್ಡನ್ ಬೂಟ್ ಪ್ರಶಸ್ತಿ ಗೆಲ್ಲುವುದು ಗ್ಯಾರಂಟಿ.

suddiyaana