ಭಾರತದ ಪ್ರವಾಸೋದ್ಯಮಕ್ಕೆ ಸುವರ್ಣ ಯುಗ! – ಅಯೋಧ್ಯೆ ರಾಮಮಂದಿರದಲ್ಲಿ ವರ್ಷಕ್ಕೆ 5 ಕೋಟಿ ಭಕ್ತರ ನಿರೀಕ್ಷೆ!

ಕೋಟ್ಯಂತರ ಹಿಂದೂಗಳ ಕನಸು ಕೊನೆಗೂ ನನಸಾಗಿದೆ. ಸಾವಿರಾರು ಕರಸೇವಕರ ಹೋರಾಟಕ್ಕೆ ಜಯ ಸಿಕ್ಕಿದೆ. ಆಯೋಧ್ಯೆ ರಾಮಮಂದಿರ ಲೋಕಾರ್ಪಣೆಗೊಂಡಿದೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಮಾಡ್ತಿದ್ದಾರೆ. ಮಂಗಳವಾರದಿಂದ ಭವ್ಯ ರಾಮ ಮಂದಿರ ಸಾರ್ವಜನಿಕರಿಗೆ ಮುಕ್ತವಾಗಲಿದೆ.
ಹೌದು, ಅಯೋಧ್ಯೆಯಲ್ಲಿ ರಾಮಂದಿರ ಲೋಕಾರ್ಪಣೆಗೊಂಡಿದೆ. ಮಂಗಳವಾರದಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ. ರಾಮಮಂದಿರ ಇನ್ನುಮುಂದೆ ಕೇವಲ ಭಕ್ತಿ ಅಥವಾ ಧಾರ್ಮಿಕವಾಗಿ ಮಾತ್ರವಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಲೋಕಾರ್ಪಣೆ ಮಾಡ್ತಿರೋದ್ರಿಂದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಅಂದರೆ ನಕಾರಾತ್ಮಕವಾಗಿ ಅಲ್ಲ, ಭಾರತಕ್ಕೆ ಮತ್ತೊಂದು ಅಥವಾ ಹೊಸದೊಂದು ಪ್ರವಾಸಿ ಹಾಟ್ಸ್ಪಾಟ್ ಆಗಲಿದ್ದು, ಇದು ವರ್ಷಕ್ಕೆ 50 ಮಿಲಿಯನ್ ಅಂದ್ರೆ 5 ಕೋಟಿಗೂ ಅಧಿಕ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಬ್ರೋಕರೇಜ್ ಸಂಸ್ಥೆ ಜೆಫರೀಸ್ ಹೇಳಿದೆ.
ಇದನ್ನೂ ಓದಿ: ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಕಾರ್ಯ ಹೇಗೆ ನಡೆಯುತ್ತೆ? – ಇದರ ಪ್ರಕ್ರಿಯೆಗಳೇನು?
ಇವಿಷ್ಟೇ ಅಲ್ಲದೇ ಹೊಸ ವಿಮಾನ ನಿಲ್ದಾಣ, ನವೀಕರಿಸಿದ ರೈಲು ನಿಲ್ದಾಣ, ಟೌನ್ಶಿಪ್, ಸುಧಾರಿತ ರಸ್ತೆ ಸಂಪರ್ಕದಿಂದ 10 ಬಿಲಿಯನ್ ಡಾಲರ್ ಮೇಕ್ ಓವರ್ನಿಂದ ಹೊಸ ಹೋಟೆಲ್‌ಗಳು ಮತ್ತು ಇತರ ಆರ್ಥಿಕ ಚಟುವಟಿಕೆಗಳೊಂದಿಗೆ ಹೆಚ್ಚು ಗುಣಕ ಪರಿಣಾಮವನ್ನು ಉಂಟುಮಾಡುತ್ತದೆ. ಇದು ಪ್ರವಾಸೋದ್ಯಮ ಬೆಳವಣಿಗೆಗೆ ಹಾಗೂ ಆರ್ಥಿಕತೆಗೆ ಸಹಾಯವಾಗಲಿದೆ ಎಂದು ವರದಿಯಾಗಿದೆ.
ಕೋವಿಡ್ ಸಾಂಕ್ರಾಮಿಕಕ್ಕೂ ಮುನ್ನ, ಪ್ರವಾಸೋದ್ಯಮವು FY19 GDP ಗೆ 194 ಬಿಲಿಯನ್ ಡಾಲರ್ ಕೊಡುಗೆ ನೀಡಿತ್ತು. ಇದು ಈಗ FY 2033 ರ ವೇಳೆಗೆ 8 ಪ್ರತಿಶತ CAGR ನಲ್ಲಿ 443 ಬಿಲಿಯನ್ ಡಾಲರ್ಗೆ ಬೆಳೆಯುವ ನಿರೀಕ್ಷೆಯಿದೆ. ಪ್ರಸ್ತುತ, GDP ಯ 6.8 ಪ್ರತಿಶತದಷ್ಟು ಭಾರತದಲ್ಲಿ ಪ್ರವಾಸೋದ್ಯಮದಿಂದ GDP ಅನುಪಾತವು ದೇಶವನ್ನು ಹೆಚ್ಚಿನ ಉದಯೋನ್ಮುಖ ಮತ್ತು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಿಗಿಂತ ಕೆಳಗಿರಿಸಿದೆ. ಇದು 3-5 ಶೇಕಡಾವಾರು ಅಂಕಗಳಿಂದ ಹೆಚ್ಚಾಗಿರುತ್ತದೆ ಎಂದೂ ಊಹಿಸಲಾಗಿದೆ.
ಪ್ರಾಚೀನ ನಗರವನ್ನು ಜಾಗತಿಕ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರವಾಸಿ ಹಾಟ್ಸ್ಪಾಟ್ ಆಗಿ ಪರಿವರ್ತಿಸಲು ಈಗ ಬದಲಾವಣೆಯನ್ನು ಹೊಂದಿಸಲಾಗಿದೆ. ನೂತನ ರಾಮ ಮಂದಿರಕ್ಕೆ 225 ಮಿಲಿಯನ್ ಡಾಲರ್ ವೆಚ್ಚವಾಗ್ತಿದ್ದು, ಆದರೆ, ಇದರಿಂದ ಪ್ರವಾಸೋದ್ಯಮ ಉಲ್ಬಣಗೊಳ್ಳುವ ನಿರೀಕ್ಷೆಯಿದೆ ಎಂದೂ ಜೆಫರೀಸ್ ಸಂಸ್ಥೆ ಹೇಳಿದೆ. ಹಾಗೆ, ಅಯೋಧ್ಯೆಗೆ ಹೆಚ್ಚಿದ ಆರ್ಥಿಕ ಮತ್ತು ಧಾರ್ಮಿಕ ವಲಸೆಯ ಮಧ್ಯೆ, ಹೋಟೆಲ್‌ಗಳು, ಏರ್ಲೈನ್‌ಗಳು, ಆತಿಥ್ಯ, ಎಫ್ಎಂಸಿಜಿ, ಪ್ರಯಾಣ ಪೂರಕಗಳು, ಸಿಮೆಂಟ್ ಇತ್ಯಾದಿಗಳನ್ನು ಒಳಗೊಂಡಂತೆ ಬಹು ವಲಯಗಳು ಪ್ರಯೋಜನ ಪಡೆಯುತ್ತವೆ ಎಂದು ಸಂಸ್ಥೆಯು ಬಿಡುಗಡೆ ಮಾಡಿದ ವರದಿಯಲ್ಲಿ ಸೇರಿಸಲಾಗಿದೆ.
ಈ ಮಧ್ಯೆ, ಅಯೋಧ್ಯೆ ವಿಮಾನ ನಿಲ್ದಾಣದ 1 ನೇ ಹಂತವು 175 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಮತ್ತು ಸದ್ಯ 1 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸಬಲ್ಲದು. ಹಾಗೂ, 2025 ರ ವೇಳೆಗೆ 6 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಅಂತರರಾಷ್ಟ್ರೀಯ ಟರ್ಮಿನಲ್ ಅನ್ನು ನಿರೀಕ್ಷಿಸಲಾಗಿದೆ. ವಿಮಾನ ನಿಲ್ದಾಣವಷ್ಟೇ ಅಲ್ಲ, ರೈಲು ನಿಲ್ದಾಣವನ್ನೂ ದ್ವಿಗುಣಗೊಳಿಸಲಾಗಿದ್ದು, ದಿನಕ್ಕೆ 60,000 ಪ್ರಯಾಣಿಕರು ಪ್ರಯಾಣಿಸಬಹುದು. ಇದಲ್ಲದೆ, 1,200 ಎಕರೆ ಗ್ರೀನ್ಫೀಲ್ಡ್ ಟೌನ್ಶಿಪ್ ಅನ್ನು ಯೋಜಿಸಲಾಗುತ್ತಿದ್ದು, ರಸ್ತೆ ಸಂಪರ್ಕವನ್ನು ಸಹ ಹೆಚ್ಚಿಸಲಾಗುತ್ತಿದೆ.