ಬಂಗಾರದ ಬೆಲೆ ಮತ್ತೆ ಕುಸಿತ – ಬೆಳ್ಳಿ ರೇಟ್ ಕೂಡಾ ಕಡಿಮೆ – ಚಿನ್ನ ಕೊಳ್ಳುವವರಿಗೆ ಒಳ್ಳೇ ಕಾಲ..!

ಬಂಗಾರದ ಬೆಲೆ ಮತ್ತೆ ಕುಸಿತ – ಬೆಳ್ಳಿ ರೇಟ್ ಕೂಡಾ ಕಡಿಮೆ – ಚಿನ್ನ ಕೊಳ್ಳುವವರಿಗೆ ಒಳ್ಳೇ ಕಾಲ..!

ಚಿನ್ನ ಕೊಳ್ಳುವವರಿಗೆ ಒಳ್ಳೆಯ ಟೈಮ್ ಬಂದಿದೆ. ಮತ್ತೆ ಚಿನ್ನದ ದರ ಕಡಿಮೆಯಾಗಿದೆ. ಜೊತೆಗೆ ಬೆಳ್ಳಿ ದರ ಕೂಡಾ ಕಡಿಮೆಯಾಗಿದೆ.

ಇದನ್ನೂ ಓದಿ:ಪಾನ್‌ ತಿಂದು ಎಲ್ಲೆಂದರಲ್ಲಿ ಉಗಿಯುತ್ತೀರಾ? – ರಸ್ತೆಯಲ್ಲಿ ಉಗಿದಿದ್ದಕ್ಕೆ ಬಿತ್ತು 3.4 ಲಕ್ಷ ರೂ. ಫೈನ್!‌

ಕಳೆದ ನಾಲ್ಕು ದಿನಗಳಿಂದ ಇಳಿದ ಚಿನ್ನದ ದರ ಶನಿವಾರ ಮತ್ತಷ್ಟೂ ಇಳಿಕೆ ಕಂಡಿದೆ. ಮಾರ್ಚ್ 21ರಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿಇಳಿಕೆಯಾಗಿದೆ. ಹಬ್ಬ, ಮದುವೆ ಶುಭ ಸಮಾರಂಭಗಳ ನಡುವೆ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿರುವುದು ಆಭರಣ ಖರೀದಿಸುವ ಗ್ರಾಹಕರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ಮಾರ್ಚ್ 20ರ ಶುಕ್ರವಾರವಾದ ನಿನ್ನೆ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 1370 ರುಪಾಯಿ ಹಾಗೂ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1200 ರುಪಾಯಿ ಇಳಿಕೆ ಕಂಡಿತ್ತು. ಅದೇ ಟ್ರೆಂಡ್ ಶನಿವಾರವಾದ ಇಂದೂ ಮುಂದುವರೆದಿದೆ. ಮಾರ್ಚ್ 21ರಂದು ಪ್ರತಿ ಗ್ರಾಂ 24 ಕ್ಯಾರಟ್ ಚಿನ್ನದ ಮೇಲೆ 294 ರುಪಾಯಿ ಇಳಿಕೆ ಕಂಡಿದ್ದು, ಗ್ರಾಂಗೆ 14,597 ರುಪಾಯಿಗಳಾಗಿವೆ. ಅಂದರೆ ಪ್ರತಿ 10 ಗ್ರಾಮ್ 24 ಕ್ಯಾರಟ್ ಚಿನ್ನದ ಮೇಲೆ ಬರೋಬ್ಬರಿ 2,940 ರುಪಾಯಿ ಇಳಿಕೆಯಾದಂತೆ ಆಗಿದೆ. ಇನ್ನು ಚಿನ್ನ ಮಾತ್ರವಲ್ಲದೇ ಬೆಳ್ಳಿ ಬೆಲೆಯಲ್ಲೂ ಮಹಾ ಕುಸಿತವಾಗಿದೆ. ನಿನ್ನೆಯ ರೇಟ್‌ಗೆ ಹೋಲಿಸಿದರೆ, ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 10,000 ರುಪಾಯಿ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿಯು 2,45,000 ರುಪಾಯಿಗೆ ಮಾರಾಟವಾಗುತ್ತಿದೆ. ಒಟ್ಟಾರೆಯಾಗಿ ಕಳೆದ 10 ದಿನಗಳಲ್ಲಿ 24 ಕ್ಯಾರಟ್ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 16,250 ರುಪಾಯಿ ಇಳಿಕೆಯಾಗಿದ್ದರೇ, ಆಭರಣ ಚಿನ್ನವಾದ 22 ಕ್ಯಾರಟ್ 10 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ 14,900 ರುಪಾಯಿ ಇಳಿಕೆಯಾಗಿದೆ.

Sulekha