ಟೀಮ್ ಇಂಡಿಯಾ ಫೀಲ್ಡಿಂಗ್‌ನಲ್ಲೂ ಸಖತ್ ಪವರ್ – ಮ್ಯಾಚ್‌ನ ಬೆಸ್ಟ್ ಫೀಲ್ಡರ್‌ಗೆ ಗೋಲ್ಡ್ ಮೆಡಲ್

ಟೀಮ್ ಇಂಡಿಯಾ ಫೀಲ್ಡಿಂಗ್‌ನಲ್ಲೂ ಸಖತ್ ಪವರ್ – ಮ್ಯಾಚ್‌ನ ಬೆಸ್ಟ್ ಫೀಲ್ಡರ್‌ಗೆ ಗೋಲ್ಡ್ ಮೆಡಲ್

ಟೀಂ ಇಂಡಿಯಾದ ಜೋಶ್​ ನಿಜಕ್ಕೂ ನೆಕ್ಸ್ಟ್ ಲೆವೆಲ್​​ನಲ್ಲಿದೆ. ಈ ಟೀಮ್ ಆಡ್ತಿರೋದನ್ನ ನೋಡಿದ್ರೆ ಈ ಬಾರಿ ವರ್ಲ್ಡ್​​ಕಪ್​​ ಮಿಸ್ ಆಗೋ ಚಾನ್ಸೇ ಇಲ್ಲ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲದ್ರಲ್ಲೂ ಹೈಕ್ಲಾಸ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಭಾರತೀಯ ಕ್ರಿಕೆಟ್​ನ ಈ ಹಿಂದಿನ ಎಲ್ಲಾ ಟೀಂಗಳಿಗಿಂತಲೂ ಈ ತಂಡ ತುಂಬಾನೆ ಡಿಫರೆಂಟ್ ಆಗಿದೆ. ಈ ವರ್ಲ್ಡ್​ಕಪ್​ಗಾಗಿಯೇ ಟೀಂ ಇಂಡಿಯಾದಲ್ಲಿ ಅಳವಡಿಸಿರುವ ಒಂದು ಸ್ಪೆಷಲ್ ಕಲ್ಚರ್ ಬಗ್ಗೆ ವಿವರ ಇಲ್ಲಿದೆ.

ಇದನ್ನೂ ಓದಿ: 18 ರನ್ ನೀಡಿ 5 ವಿಕೆಟ್ ಪಡೆದ ಮೊಹಮ್ಮದ್ ಶಮಿ – ಲಂಕಾ ವಿಕೆಟ್ ದಹನ ಮಾಡಲು ಶಮಿಗೆ ಸಿರಾಜ್ ಸಾಥ್

ವರ್ಲ್ಡ್​​ಕಪ್​ ಟೂರ್ನಿಯುದ್ದಕ್ಕೂ ಟೀಂ ಇಂಡಿಯಾದ ಫೀಲ್ಡಿಂಗ್​ ಹೇಗಿದೆ ಅನ್ನೋದು ಎಲ್ಲರಿಗೂ ಗೊತ್ತು. ಭಾರತದ ಗೆಲುವಿನಲ್ಲಿ ಬ್ಯಾಟಿಂಗ್, ಬೌಲಿಂಗ್​ ಮಾತ್ರವಲ್ಲ ಫೀಲ್ಡಿಂಗ್ ಕೂಡ ತುಂಬಾನೆ ಎಫೆಕ್ಟಿವ್ ಆಗಿದೆ. ಫೀಲ್ಡಿಂಗ್​​ ಡಿಪಾರ್ಟ್​ಮೆಂಟ್​​ಗೆ ಬೂಸ್ಟ್​ ಸಿಗಲಿ ಅನ್ನೋ ಕಾರಣಕ್ಕೆ ಕೋಚಿಂಗ್ ಸ್ಟಾಫ್​ ಹೊಸ ಐಡಿಯಾ ಮಾಡಿತ್ತು. ಪ್ರತಿ ಮ್ಯಾಚ್​​ನಲ್ಲೂ ಬೆಸ್ಟ್​ ಫೀಲ್ಡಿಂಗ್​​ ಮಾಡಿದವರಿಗೆ ಗೋಲ್ಡ್ ಮೆಡಲ್ ನೀಡಲಾಗುತ್ತೆ. ಅತ್ಯುತ್ತಮವಾಗಿ ಕ್ಯಾಚ್ ಹಿಡಿದರೆ, ಸ್ಕೋರ್​ ತಡೆದರೆ ಆ ಫೀಲ್ಡರ್​ಗೆ ಗೋಲ್ಡ್ ಮೆಡಲ್​ ನೀಡಲಾಗುತ್ತಿದೆ. ಇದರ ಸಂಪೂರ್ಣ ಹೊಣೆ ಹೊತ್ತುಕೊಂಡಿರೋದು ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಟಿ.ದಿಲೀಪ್. ಭಾರತ ಫೀಲ್ಡಿಂಗ್ ಮಾಡೋವಾಗ ಗ್ರೌಂಡ್​ನ ಸುತ್ತಲೂ ರೌಂಡ್ಸ್ ಹೊಡೆಯೋ ದಿಲೀಪ್, ಬೆಸ್ಟ್ ಫೀಲ್ಡಿಂಗ್ ಮಾಡಿದವರು ಯಾರು ಅನ್ನೋದನ್ನ ನೋಟ್ ಮಾಡಿಕೊಳ್ತಾರೆ. ಬಳಿಕ ಮ್ಯಾಚ್ ಮುಗಿದ್ಮೇಲೆ ಡ್ರೆಸ್ಸಿಂಗ್​ ರೂಮ್​ನಲ್ಲಿ ಅನೌನ್ಸ್ ಮಾಡಲಾಗುತ್ತೆ.

ಈ ಅನೌನ್ಸ್​ಮೆಂಟ್ ಕೂಡ ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ. ಮ್ಯಾಚ್​ನ ಬೆಸ್ಟ್ ಫೀಲ್ಡರ್ ಯಾರು ಅನ್ನೋದನ್ನ ಹಾಗೆ ಸುಮ್ನೆ ಅನೌನ್ಸ್ ಮಾಡೋದಿಲ್ಲ. ಕೋಚ್ ದಿಲೀಪ್ ಇಲ್ಲೂ ಒಂದಷ್ಟು ಕ್ರಿಯೇಟಿವಿಟಿ ತೋರಿಸುತ್ತಾರೆ. ಆರಂಭದಲ್ಲಿ ರಾಹುಲ್​ ದ್ರಾವಿಡ್​ ಅನೌನ್ಸ್ ಮಡಿದ್ರು. ಬಳಿಕ ಡ್ರೆಸ್ಸಿಂಗ್​ ರೂಮ್​ನಲ್ಲಿರುವ ಟಿವಿ ಸ್ಕ್ರೀನ್​​ನಲ್ಲಿ ಬೆಸ್ಟ್​ ಫೀಲ್ಡರ್​ ಹೆಸರು ಡಿಸ್​​ಪ್ಲೇ ಮಾಡಲಾಗುತ್ತದೆ. ಅದಾದ ನಂತರ ಸ್ಟೇಡಿಯಂನಲ್ಲಿ ದೊಡ್ಡ ಪರದೆ ಮೇಲೆ ಬೆಸ್ಟ್​​ ಫೀಲ್ಡಿಂಗ್​ನ ವಿಡಿಯೋ ಪ್ಲೇ ಮಾಡಿ ಆಗ ರವೀಂದ್ರ ಜಡೇಜಾಗೆ ಮೆಡಲ್​ ನೀಡಲಾಗಿತ್ತು. ಇದಾದ ಬಳಿಕ ಧರ್ಮಶಾಲಾದಲ್ಲಿ ಶ್ರೇಯಸ್ ಅಯ್ಯರ್​ ಹೆಸರನ್ನ ಸ್ಪೈಡರ್​ ಕ್ಯಾಮರಾದ ಮೂಲಕ ಘೋಷಣೆ ಮಾಡಲಾಯ್ತು. ಕ್ಯಾಮರಾಗೆ ಶ್ರೇಯಸ್ ಅಯ್ಯರ್ ಫೋಟೋ ಪ್ಲೇಟ್​​ನ್ನ ಫಿಕ್ಸ್ ಮಾಡಲಾಗಿತ್ತು. ಮುಂಬೈನಲ್ಲಿ ಶ್ರೀಲಂಕಾ ವಿರುದ್ಧದ ಮ್ಯಾಚ್​ ಬಳಿಕ ಬೆಸ್ಟ್​ ಫೀಲ್ಡರ್ ಅನೌನ್ಸ್​ಮೆಂಟ್​ ಇನ್ನೂ ಇಂಟ್ರೆಸ್ಟಿಂಗ್ ಆಗಿತ್ತು. ಕ್ರಿಕೆಟ್ ದಂತಕಥೆ ಸಚಿನ್​​ ತೆಂಡೂಲ್ಕರ್​​ ಮೂಲಕ ಬೆಸ್ಟ್​​ ಫೀಲ್ಡರ್​ ಹೆಸರನ್ನ ಅನೌನ್ಸ್​ ಮಾಡಲಾಯ್ತು. ಶ್ರೇಯಸ್ ಅಯ್ಯರ್​ಗೆ 2ನೇ ಬಾರಿಗೆ ಗೋಲ್ಡ್ ಮೆಡಲ್ ಸಿಕ್ಕಿದೆ. ಆದ್ರೆ ಶ್ರೇಯಸ್ ಹೆಸರು ಅನೌನ್ಸ್ ಮಾಡೋ ಮುನ್ನ ಟೀಂನ್ನ ಉದ್ದೇಶಿಸಿ ಸಚಿನ್ ಮಾತನಾಡ್ತಾರೆ. 2003ರ ವರ್ಲ್ಡ್​​ಕಪ್​​ ವೇಳೆ ಟೀಂ ಇಂಡಿಯಾ ಡ್ರೆಸ್ಸಿಂಗ್​ ರೂಮ್​ನಲ್ಲಿ ಒಂದು ಚಾರ್ಟ್ ಸಿದ್ಧಪಡಿಸಿಡ್ತಿದ್ರಂತೆ. I CAN.. WE CAN ಅನ್ನೋದು. ಗ್ರೌಂಡ್​ಗೆ ಎಂಟ್ರಿಯಾಗೋ ಮುನ್ನ ಪ್ರತಿಯೊಬ್ಬ ಪ್ಲೇಯರ್​ ಕೂಡ ಆ ಚಾರ್ಟ್​ ಮುಂದೆ ಸೈನ್​ ಹಾಕಬೇಕಿತ್ತು. ಅಂದ್ರೆ ನಾನು ದೇಶಕ್ಕಾಗಿ, ಟೀಂಗಾಗಿ 100 ಪರ್ಸೆಂಟ್ ಎಫೆರ್ಟ್ ಹಾಕ್ತೇನೆ. ನನ್ನಿಂದಾಷ್ಟು ಕೊಡುಗೆ ನೀಡ್ತೇನೆ ಅನ್ನೋ ಕಮಿಟ್​ಮೆಂಟ್ ಅದು. ಪ್ರತಿಯೊಬ್ಬರು ಈ ರೀತಿ ಜವಾಬ್ದಾರಿ ತಗೊಂಡಾಗ, ಕಲೆಕ್ಟಿವ್ ಪರ್ಫಾಮೆನ್ಸ್ ಇದ್ದಾಗ ಮಾತ್ರ ಟೀಂ ಗೆಲ್ಲೋಕೆ ಸಾಧ್ಯ ಅನ್ನೋದು ಇದ್ರ ಪ್ರಮುಖ ಉದ್ದೇಶ.

ಇನ್ನು ಬೆಸ್ಟ್​ ಫೀಲ್ಡರ್​​ಗೆ ಗೋಲ್ಡ್ ಮೆಡಲ್ ನೀಡುವ ಈ ಐಡಿಯಾ ಹೊಳೆದಿದ್ದು, ಬಿಸಿಸಿಐನ ಅಫೀಶಿಯಲ್ ಒಬ್ಬರಿಗೆ. ಆ ವ್ಯಕ್ತಿ ಯಾರು ಅನ್ನೋದು ಇನ್ನೂ ಕೂಡ ರಿವೀಲ್ ಆಗಿಲ್ಲ. ಆದ್ರೆ ವರ್ಲ್ಡ್​​ಕಪ್​ಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಸೀರಿಸ್​​ನಲ್ಲಿ ಟೀಂ ಇಂಡಿಯಾದ ಫೀಲ್ಡಿಂಗ್​​ ಅಷ್ಟೊಂದು ಕ್ವಾಲಿಟಿ ಇರಲಿಲ್ಲ. ಒಂದಷ್ಟು ಕ್ಯಾಚ್​ಗಳು ಡ್ರಾಪ್ ಆಗಿತ್ತು, ಮಿಸ್​ ಫೀಲ್ಡಿಂಗ್ ಆಗಿತ್ತು. ಈ ವೇಳೆ ಬಿಸಿಸಿಐ ಅಫೀಶಿಯಲ್​ ವರ್ಲ್ಡ್​​ಕಪ್​ ಟೂರ್ನಿಯಲ್ಲಿ ಪ್ರತಿ ಮ್ಯಾಚ್​ನಲ್ಲಿ ಬೆಸ್ಟ್​ ಫೀಲ್ಡರ್​ಗೆ ಮೆಡಲ್​ ನೀಡುವ ಬಗ್ಗೆ ಸಲಹೆ ಕೊಟ್ಟಿದ್ರಂತೆ. ಹೀಗಾಗಿ ಫೀಲ್ಡಿಂಗ್​ ಮಾಡುವಾಗ ಪ್ಲೇಯರ್ಸ್​​ಗಳ ನಡುವೆಯೇ ಕಾಂಪಿಟೀಶನ್ ಇರುತ್ತೆ. ಒಂದು ಬಾರಿಯಾದ್ರೂ ಮೆಡಲ್​ ಗೆಲ್ಲಲೇಬೇಕು​ ಅನ್ನೋ ಹಠ ಎಲ್ಲಾ ಆಟಗಾರರಿಗೂ ಬರುತ್ತೆ. ತಮ್ಮ ಫೀಲ್ಡಿಂಗ್​ನ್ನ ಕೂಡ ಇಂಪ್ರೂವ್​ ಮಾಡಿಕೊಳ್ತಾರೆ. ಹೀಗಾಗಿ ಕೊನೆಗೆ ಟೀಂ ಮ್ಯಾನೇಜ್ಮೆಂಟ್​ ಬಿಸಿಸಿಐ ಲೋಗೊ ಇರುವ ಗೋಲ್ಡ್ ಮೆಡಲ್ ನೀಡೋಕೆ ನಿರ್ಧರಿಸಿತ್ತು. ಈಗ ಡೈವ್ ಮಾಡಿ ಕ್ಯಾಚ್ ಹಿಡಿದಾಗ, ಅದ್ಭೂತವಾಗಿ ಬಾಲ್​ ತಡೆದಾಗ ಆಟಗಾರರೇ ಮೆಡಲ್​ ನಿಡುವಂತೆ ಸಿಗ್ನಲ್ ಮಾಡ್ತಾರೆ. ಅದ್ರಲ್ಲೂ ರವೀಂದ್ರ ಜಡೇಜಾ ಅಂತಾ ಪ್ರತಿ ಬಾರಿ ಡೈವ್ ಮಾಡಿ ಕ್ಯಾಚ್ ಹಿಡಿದಾಗಲೂ ಮೆಡಲ್ ನೀಡುವಂತೆ ಸಿಗ್ನಲ್ ಮಾಡ್ತಾರೆ. ವರ್ಲ್ಡ್​​ಕಪ್​ನಲ್ಲಿ ಟೀಂ ಇಂಡಿಯಾ ಫೀಲ್ಡಿಂಗ್ ಇಂಪ್ರೂ ಆಗೋಕೆ ಈ ಮೆಡಲ್​ನದ್ದೂ ರೋಲ್ ಇರೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

ಹಾಗಿದ್ರೆ ಇದುವರೆಗೆ ಯಾರೆಲ್ಲಾ ಬೆಸ್ಟ್ ಫೀಲ್ಡರ್​ ಮೆಡಲ್ ಗೆದ್ದಿದ್ದಾರೆ ಅನ್ನೋದನ್ನ ಕೂಡ ನೋಡೋಣ.

ಬೆಸ್ಟ್ ಫೀಲ್ಡರ್​ ವಿನ್ನರ್ಸ್!

ವಿರಾಟ್ ಕೊಹ್ಲಿ       – 1 ಮೆಡಲ್

ಶಾರ್ದುಲ್ ಠಾಕೂರ್ – 1 ಮೆಡಲ್

ರವೀಂದ್ರ ಜಡೇಜಾ     – 1 ಮೆಡಲ್

ಕೆ.ಎಲ್.ರಾಹುಲ್     – 2 ಮೆಡಲ್

ಶ್ರೇಯಸ್ ಅಯ್ಯರ್   – 2 ಮೆಡಲ್

Sulekha