ಹಾರುತಾ ದೂರ ದೂರ.. ದಾಖಲೆ ಬರೆಯುತಾ ಬಾರಾ ಬಾರಾ..!
ನಿರಂತರ ಬರೋಬ್ಬರಿ 13 ಸಾವಿರ ಕಿಲೋಮೀಟರ್ ಹಾರಿದ ಗೋಡ್ವಿಟ್ ಹಕ್ಕಿ..!
ಹಾರುತಾ ದೂರ ದೂರ ಆಹಾರ ಹುಡುಕುತಾ ಬಾರಾ ಬಾರಾ ಅಂತಾ ಹಕ್ಕಿಗಳು ವಲಸೆ ಹೋಗುವುದು ಸಾಮಾನ್ಯ. ಇನ್ನು ಸಂತಾನೋತ್ಪತ್ತಿಗಾಗಿಯೂ ಪಕ್ಷಿಗಳು ಎಷ್ಟು ದೂರ ಕೂಡಾ ಕ್ರಮಿಸುತ್ತವೆ. ಆಯಾ ಋುತುವಿಗೆ ಸರಿಯಾಗಿ ಪಕ್ಷಿಗಳು ತಮ್ಮ ವಲಸೆ ಜಾಗವನ್ನ ಬದಲಾಯಿಸುತ್ತವೆ. ಇದಕ್ಕಾಗಿ ಸಾವಿರ ಕಿಲೋಮೀಟರ್ ಕ್ರಮಿಸುವುದು ಕೂಡಾ ಸಾಮಾನ್ಯ. ಪಕ್ಷಿಗಳು ತಮ್ಮ ಗುಂಪಿನ ಜೊತೆ ಹಾರುವಾಗ ಅದೆಷ್ಟೋ ಪಕ್ಷಿಗಳು ಹಾರಲಾಗದೇ ಜೀವ ಕಳೆದುಕೊಳ್ಳುತ್ತವೆ. ಆದರೆ ನಿರಂತರವಾಗಿ ಹಾರುತಾ ಬರೋಬ್ಬರಿ 13 ಸಾವಿರ ಕಿಲೋಮೀಟರ್ ಹಕ್ಕಿಯೊಂದು ಕ್ರಮಿಸಿದೆ ಅಂದರೆ ನೀವು ನಂಬಲೇಬೇಕು. ಅಚ್ಚರಿಯಾದರೂ ಇಷ್ಟು ದೂರ ಗೋಡ್ವಿಟ್ ಜಾತಿಯ ಹಕ್ಕಿಯೊಂದು ಕ್ರಮಿಸಿದೆ. ತನ್ನ ಹಾರಾಟದ ಮೂಲಕವೇ ವಿಶ್ವದಾಖಲೆಯನ್ನ ನಿರ್ಮಿಸಿದೆ.
ಇದನ್ನೂ ಓದಿ: ಸಾವನ್ನಪ್ಪಿದವರಿಗೆ ಮರುಜೀವ ನೀಡಲು ದೇಹಗಳ ಸಂರಕ್ಷಣೆ – ವಿಜ್ಞಾನಲೋಕದಲ್ಲಿ ನಡೆಯುತ್ತಾ ವಿಸ್ಮಯ..!?
ಹಕ್ಕಿಗಳು ವಲಸೆ ಹೋಗುವ ಪ್ರಕ್ರಿಯೆ ಸಾಮಾನ್ಯವಾಗಿದೆ. ಅದರಲ್ಲೂ ಬಾರ್-ಟೈಲ್ಡ್ ಗೋಡ್ವಿಟ್ ಹಕ್ಕಿಗಳು ವಲಸೆಗೆ ಹೆಸರುವಾಸಿ. ಉತ್ತರಧ್ರುವ-ದಕ್ಷಿಣಧ್ರುವ ನಡುವೆ ಈ ಹಕ್ಕಿಗಳು ಆಹಾರ ವಿಹಾರಕ್ಕಾಗಿ ಹಾರಾಡುತ್ತವೆ. ಆದರೆ ಹಕ್ಕಿಗಳು ಎಷ್ಟು ದೂರ ಕ್ರಮಿಸುತ್ತವೆ. ಇಂಥದ್ದೇ ಹಕ್ಕಿ ಇಷ್ಟೇ ದೂರ ಹಾರುತ್ತದೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಸಿಕ್ಕಿದೆ. ಅದೇ ಹಕ್ಕಿ ವಿಶ್ವದಾಖಲೆ ನಿರ್ಮಾಣ ಮಾಡಿದೆ. ಕಳೆದ ಅಕ್ಟೋಬರ್‌ನಲ್ಲಿ ವಲಸೆ ಅಧ್ಯಯನಕ್ಕಾಗಿ ವಿಜ್ಞಾನಿಗಳು ಐದು ತಿಂಗಳು ಪ್ರಾಯದ 400 ಗ್ರಾಂ ತೂಕದ ಗೋಡ್ವಿಟ್ ಹಕ್ಕಿ ಯೊಂದಕ್ಕೆ 5G ಸಾಟಲೈಟ್ ಟ್ಯಾಂಗಿಂಗ್ ಮಾಡಿದ್ದರು. ಆ ಹಕ್ಕಿ ಎಲ್ಲಿಗೆ ಹೋಗುತ್ತದೆ, ಎಲ್ಲಿ ಆಹಾರ ಸೇವಿಸುತ್ತದೆ. ಎಲ್ಲಿ ವಿಶ್ರಾಂತಿ ಪಡೆಯುತ್ತೆ ಅಂತಾ ನೋಡಲು ವಿಜ್ಞಾನಿಗಳು ಬಯಸಿದ್ದರು. ಹೀಗಾಗಿಯೇ ಹಕ್ಕಿಯ ಹಾರಾಟವನ್ನ ಮಾನಿಟರ್ ಮಾಡಿದ್ದಾರೆ. ಈ ವಿಚಾರದಲ್ಲಿ ಅಚ್ಚರಿಯಾಗಿದ್ದು ಸ್ವತಃ ವಿಜ್ಞಾನಿಗಳಿಗೆ. 13,560 ಕಿಮೀ ದೂರ ನಾನ್‌ಸ್ಟಾಪ್ ಥರ ಹಕ್ಕಿ ಹಾರಿಕೊಂಡೇ ಹೋಗಿದೆ. ಅಲಾಸ್ಕಾದಿಂದ ಅಕ್ಟೋಬರ್ 13ರಂದು ಈ ಹಕ್ಕಿ ಹಾರಿದೆ. ಆಮೇಲೆ ಎಲ್ಲೂ ಇಳಿದಿಲ್ಲ. ಆಹಾರ , ನೀರು, ಸೇವಿಸದೇ, ಸಮುದ್ರ, ಸಾಗರಗಳ ಮೇಲೆ ಹಾರುತ್ತಾ ಹಾರುತ್ತಾ ಹನ್ನೊಂದನೇ ದಿನ ಆಸ್ಟ್ರೇಲಿಯಾದ ತಾಸ್ಮಾನಿಯಾದಲ್ಲಿ ಬಂದಿಳಿದಿದೆ. ಗಂಟೆಗೆ 51 ಕಿಮೀ ವೇಗದಲ್ಲಿ ಹಕ್ಕಿ ನಿರಂತರವಾಗಿ ಹಾರಿದೆ. ಸೆಪ್ಟೆಂಬರ್ 16ರಂದು ಅಮೇರಿಕಾದ ನೈರುತ್ಯ ಅಲಾಸ್ಕಾದಿಂದ ಹಾರಾಟ ಪ್ರಾರಂಭಿಸಿದ ಈ ಹಕ್ಕಿ 11 ದಿನ ಕಳೆಯುವಷ್ಟರಲ್ಲಿ ನ್ಯೂಜಿಲೆಂಡ್‌ನ ಆಕ್ಲೆಂಡ್‌ಗೆ ಬಂದು ತಲುಪಿದೆ. ತನ್ನ ಅತಿ ದೀರ್ಘದ ಹಾರಾಟದ ಮೂಲಕ ಗೋಡ್ವಿಟ್ ಹಕ್ಕಿ ಈ ಹಿಂದೆ 2007ರಲ್ಲಿ 11680 ಕಿಲೋಮೀಟರ್ ಕ್ರಮಿಸಿದ್ದ ಹೆಣ್ಣು ಶೋರ್‌ಬರ್ಡ್ ಹಕ್ಕಿಯ ದಾಖಲೆ ಯನ್ನು ಅಳಿಸಿಹಾಕಿದೆ.. ಈ ಹಕ್ಕಿಗಳು ತಮ್ಮ ಪ್ರಯಾಣ ಕಾಲದಲ್ಲಿ ನಿದ್ದೆ ಮಾಡಲ್ವಂತೆ. ಗೋಡ್ವಿಟ್ ಹಕ್ಕಿಗಳ ದೇಹ ವಿನ್ಯಾಸ ಜೆಟ್ ಫೈಟರ್‌ಗಳ ರೀತಿ ಇರುತ್ತೆ ಅಂತಾರೆ ಗ್ಲೋಬಲ್ ಫ್ಲೈ ವೇ ನೆಟ್‌ವರ್ಕ್‌ನ ಡಾ.ಜೆಸ್ಸಿ ಕಾಂಕ್ಲೀನ್..