ಇಷ್ಟ ಪಟ್ಟು ತಿನ್ನುವ ಸ್ಟ್ರೀಟ್ ಫುಡ್ ನಿಂದಲೇ ಆಪತ್ತು! – ಗೋಬಿ ಮಂಚೂರಿ ಬ್ಯಾನ್!

ಗೋಬಿ ಮಂಚೂರಿ. ತುಂಬಾ ಜನ್ರಿಗೆ ಇಷ್ಟವಾಗುವ ಸ್ಟ್ರೀಟ್ ಫುಡ್. ಮಕ್ಕಳಿಗಂತೂ ಫೇವರೆಟ್. ಗಲ್ಲಿ ರಸ್ತೆಗಳಿಂದ ಹಿಡಿದು ಫೈವ್ ಸ್ಟಾರ್ ಹೋಟೆಲ್, ರೆಸ್ಟೋರೆಂಟ್ಗಳಲ್ಲೂ ಈ ಖಾದ್ಯ ಸಿಗುತ್ತೆ. ಸಾವಿರಾರು ಕುಟುಂಬಗಳು ರಸ್ತೆ ಬದಿಗಳಲ್ಲಿ ಗೋಬಿ ಮಂಚೂರಿ ಮಾರಿಕೊಂಡೇ ಜೀವನ ನಡೆಸ್ತಿದ್ದಾರೆ. ಆದ್ರೆ ಇದೇ ಇಂಡೋ ಚೀನೀಸ್ ಖಾದ್ಯವನ್ನ ಬ್ಯಾನ್ ಮಾಡಲಾಗಿದೆ.
ಇದನ್ನೂ ಓದಿ: ಪಾಕ್‌ನಲ್ಲಿ ಚುನಾವಣೆಗೆ ಕೌಂಟ್‌ಡೌನ್ – ಸ್ವತಂತ್ರ ಅಭ್ಯರ್ಥಿಯ ಕಚೇರಿಯ ಹೊರಗೆ ಬಾಂಬ್ ಸ್ಫೋಟ, 26 ಮಂದಿ ಸಾವು
ಮಕ್ಕಳಿಂದ ಹಿಡಿದು ದೊಡ್ಡವರೂ ಇಷ್ಟಪಡುವ ಗೋಬಿ ಮಂಚೂರಿ ಭಾರತದ ಯಾವುದೇ ನಗರ, ಪಟ್ಟಣಕ್ಕೆ ಹೋದ್ರೂ ಸಿಗುತ್ತೆ. ಆದರೆ ಭಾರತದ ಜನಪ್ರಿಯ ಪ್ರವಾಸಿ ನಗರ ಗೋಬಿ ಮಂಚೂರಿಯನ್ ಮಾರಾಟ ನಿಷೇಧಿಸಿದೆ. ಗೋವಾದ ಮಪುಸಾ ನಗರದಲ್ಲಿ ಯಾರೂ ಗೋಬಿ ಮಂಚೂರಿಯನ್ ಮಾರಾಟ ಮಾಡುವಂತಿಲ್ಲ. ಗೋವಾದ ಮಪುಸಾ ಮುನ್ಸಿಪಲ್ ಕಾರ್ಪೋರೇಶನ್ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಒಂದ್ವೇಳೆ ನಿಯಮ ಮೀರಿ ಮಾರಾಟ ಮಾಡಿದ್ರೆ ದುಬಾರಿ ದಂಡದ ಜೊತೆಗೆ ವ್ಯಾಪಾರದ ಲೈಸೆನ್ಸ್ ಕೂಡ ರದ್ದಾಗಲಿದೆ. ಅಷ್ಟಕ್ಕೂ ಗೋಬಿ ಮಂಚೂರಿ ಬ್ಯಾನ್ ಮಾಡಲು ಪ್ರಮುಖ ಕಾರಣ ನೈರ್ಮಲ್ಯ ಕಾಳಜಿ ಮತ್ತು ಅದಕ್ಕೆ ಬಳಸುವ ಹಾನಿಕಾರಕ ಬಣ್ಣ.
ಉತ್ತರ ಗೋವಾ ಜಿಲ್ಲೆಯ ಮಾಪುಸಾದ ಕೌನ್ಸಿಲರ್ ತಾರಕ್ ಅರೋಲ್ಕರ್ ಕಳೆದ ತಿಂಗಳು ಬೋಡಗೇಶ್ವರ ದೇವಸ್ಥಾನದ ಜಾತ್ರೆಗೆ ತೆರಳಿದ್ದರು. ಅಲ್ಲಿ ಗೋಬಿ ಮಂಚೂರಿ ತಯಾರಿಕೆಗೆ ಬಳಸುವ ರುಚಿಕಾರಕ, ಕೃತಕ ಬಣ್ಣ, ಕಡಿಮೆ ಬೆಲೆಯ ಸಾಸ್ ನ ಗಮನಿಸಿದ್ದರು. ಜೊತೆಗೆ ಆರೋಗ್ಯದ ಮೇಲೆ ಬೀರುವ ಪರಿಣಾಮ, ಶುಚಿತ್ವ, ನೈರ್ಮಲ್ಯದ ಬಗ್ಗೆ ಹಲವು ದೂರುಗಳು ದಾಖಲಾಗಿದ್ವು. ಈ ಬಗ್ಗೆ ಆಹಾರ ಇಲಾಖೆ ಕೂಡ ದಾಳಿ ನಡೆಸಿ ವ್ಯಾಪಾರಿಗಳಿಗೆ ನೋಟಿಸ್ ನೀಡಿತ್ತು. ಆದರೆ ಯಾರೊಬ್ಬರೂ ತಲೆ ಕೆಡಿಸಿಕೊಂಡಿರಲಿಲ್ಲ. ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಒಂದು ಪ್ಲೇಟ್ ಗೋಬಿ ಮಂಚೂರಿ ಬೆಲೆ 70 ರೂಪಾಯಿಯಿಂದ 200, 300 ರೂಪಾಯಿಗಳವರೆಗೂ ಇರುತ್ತೆ. ಆದ್ರೆ ಬೀದಿಬದಿಯ ಸ್ಟಾಲ್‌ಗಳಲ್ಲಿ 30 ರೂಪಾಯಿ, 40 ರೂಪಾಯಿಗೂ ಸಿಗುತ್ತೆ. ಗುಣಮಟ್ಟ ಇಲ್ಲದ ಕಾರಣಕ್ಕೆ ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಇದೇ ಕಾರಣಕ್ಕೆ ಗೋಬಿ ಮಂಚೂರಿಯನ್ ನಿಷೇಧ ಮಾಡಿ ಆದೇಶ ನೀಡಲಾಗಿದೆ.

ನೋಡಿರಿ

