ಬೇಸಿಗೆ ಬಿಸಿಲಲ್ಲಿ ಹೊತ್ತಿ ಉರಿಯುತ್ತಿದೆ ಕಾಡು – ಬೆಂಕಿ ಕೆನ್ನಾಲಗೆಗೆ ಮರಗಳು, ಜೀವಸಂಕುಲ ಭಸ್ಮ..!

ಬೇಸಿಗೆ ಬಿಸಿಲಲ್ಲಿ ಹೊತ್ತಿ ಉರಿಯುತ್ತಿದೆ ಕಾಡು – ಬೆಂಕಿ ಕೆನ್ನಾಲಗೆಗೆ ಮರಗಳು, ಜೀವಸಂಕುಲ ಭಸ್ಮ..!

ಕರ್ನಾಟಕದ ಗಡಿಗೆ ಹೊಂದಿಕೊಂಡಂತಿರುವ ಗೋವಾದ ಮಹಾದಾಯಿ ವನ್ಯಜೀವಿ ಧಾಮದಲ್ಲಿ ಭಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಕಳೆದ 9 ದಿನಗಳಿಂದ ಬೆಂಕಿ ಧಗಧಗಿಸುತ್ತಿದ್ದು 11 ವಿವಿಧ ಬೆಟ್ಟಗಳಿಗೆ ಬೆಂಕಿ ಹಬ್ಬಿದೆ. ಬೆಂಕಿ ನಂದಿಸಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದ್ದು, ಈಗಾಗ್ಲೇ ಭಾರತೀಯ ವಾಯುಪಡೆ ಮತ್ತು ನೌಕಾಪಡೆಯನ್ನು ಸಹ ಬಳಸಿಕೊಳ್ಳಲಾಗುತ್ತಿದೆ. ಇಷ್ಟಾದ್ರೂ ಅಗ್ನಿನರ್ತನ ಮಾತ್ರ ಕಡಿಮೆಯಾಗುತ್ತಿಲ್ಲ. ಪರಿಣಾಮ 100 ವರ್ಷಕ್ಕೂ ಹಳೆಯದಾದ ಮರಗಳು ಸೇರಿದಂತೆ ಜೀವಸಂಕುಲಗಳು ಭಸ್ಮವಾಗುತ್ತಿವೆ.

ಇದನ್ನೂ ಓದಿ : ಕಾಫಿ ನಾಡಿನಲ್ಲಿ ಕಾಡ್ಗಿಚ್ಚು – ಬೆಂಕಿ ನಂದಿಸಲು ಹೋದ ಅರಣ್ಯ ಇಲಾಖೆ ಸಿಬ್ಬಂದಿ ಬೈಕ್ ಗಳು ಭಸ್ಮ

ಮಹಾದಾಯಿ (Mahadayi) ವನ್ಯಜೀವಿ ಧಾಮದಲ್ಲಿರುವ ಸಾಟ್ರೆಮ್‌ ಗ್ರಾಮದ ಬಳಿ ಮಾರ್ಚ್‌ 5ರಂದು ಮೊದಲ ಬಾರಿಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಕಾಣಿಸಿಕೊಂಡ ಬೆಂಕಿ (Fire) 1 ವಾರದಲ್ಲಿ ರಕ್ಷಿತಾರಣ್ಯದ ಬಹುತೇಕ ಭಾಗಗಳಿಗೆ ಹಬ್ಬಿದೆ. ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಡೀ ಅರಣ್ಯ ಬಹುತೇಕ ಒಣಗಿದ್ದು, ಹೀಗಾಗಿ ಬೆಂಕಿ ಬಹುಬೇಗವಾಗಿ ಹಬ್ಬುತ್ತಿದೆ.

ಬೆಂಕಿ ವ್ಯಾಪಿಸಿದಂತೆಲ್ಲಾ ವನ್ಯಜೀವಿಗಳು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿದೆ ಓಡಿವೆ. ಆದ್ರೂ ಅಗ್ನಿ ನರ್ತನಕ್ಕೆ 100 ವರ್ಷಕ್ಕೂ ಹಳೆಯದಾದ ಮರಗಳು, ಪಕ್ಷಿಗಳು, ಸರೀಸೃಪಗಳು ಸುಟ್ಟು ಭಸ್ಮವಾಗುತ್ತಿವೆ. ಪರಿಸರ ಸಂರಕ್ಷಣಾವಾದಿ ಚಂದ್ರಕಾಂತ ಶಿಂಧೆ ಕಾಡ್ಗಿಚ್ಚಿನ ಬಗ್ಗೆ ಆತಂಕ ಹೊರಹಾಕಿದ್ದಾರೆ.

suddiyaana