ಮಂಗಳೂರಿನಲ್ಲಿ ಸಾವಿನ ಗುಂಡಿಗೆ ಮಹಿಳೆ ಬಲಿ – ಹೊಂಡ ತಪ್ಪಿಸಲು ಹೋಗಿ ಘೋರ ದುರಂತ

ಮಂಗಳೂರಿನಲ್ಲಿ ರಸ್ತೆ ಗುಂಡಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಕೂಳೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಮಾಧವಿ ಎಂಬ 40 ವರ್ಷದ ಮಹಿಳೆ ರಸ್ತೆಯಲ್ಲಿದ್ದ ಗುಂಡಿಯಿಂದಾಗಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಭುಗಿಲೆದ್ದ ಜನರ ಆಕ್ರೋಶ – ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ
ಕೂಳೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಮತ್ತು ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಆದರೆ, ಮಹಿಳೆ ಬಲಿಯಾಗಿರುವುದು ರಸ್ತೆಯಲ್ಲಿರುವ ಗುಂಡಿಯಿಂದಾಗಿ ಅನ್ನೋದೇ ದುರಂತ. ಹೌದು. ಮಂಗಳೂರಿನ ಕೂಳೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ದ್ವಿಚಕ್ರ ವಾಹನದಲ್ಲಿ 40 ವರ್ಷದ ಮಾಧವಿ ಎನ್ನುವವರು ತಮ್ಮ ಕೆಲಸಕ್ಕೆ ತೆರಳುತ್ತಿದ್ದರು. ದ್ವಿಚಕ್ರವಾಹನದಲ್ಲಿ ತೆರಳುತ್ತಿರುವಾಗ ಗುಂಡಿ ತಪ್ಪಿಸಲು ಹೋಗಿ ಸ್ಕಿಡ್ ಆಗಿ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಮೀನು ಸಾಗಣೆಯ ಲಾರಿ ಆಕೆಯ ಮೇಲೆ ಹರಿದಿದೆ. ಪರಿಣಾಮ ಮಾಧವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾಧವಿ ಮಂಗಳೂರಿನ ಕುಂಟಿಕಾನದ ಎ.ಜೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸೆ.9ರ ಬೆಳಗ್ಗೆ 8.30ರ ವೇಳೆಗೆ ಮಾಧವಿ ತಮ್ಮ ಖಾಸಗಿ ಸ್ಕೂಟಿಯಲ್ಲಿ ತಾವು ನೆಲಸಿರುವ ಕೂಳೂರಿನಿಂದ ಎ.ಜೆ. ಆಸ್ಪತ್ರೆ ಕಡೆಗೆ ಕೆಲಸಕ್ಕಾಗಿ ಹೋಗುತ್ತಿದ್ದರು. ಆದರೆ, ಹೆದ್ದಾರಿಯಲ್ಲಿ ದೊಡ್ಡ ಹೊಂಡ ಕಾಣಿಸಿಕೊಂಡಿತ್ತು. ಅವರು ಅದನ್ನು ತಪ್ಪಿಸಲು ನಿಧಾನವಾಗಿ, ಚಲಾಯಿಸಿತ್ತಿರುವ ವೇಳೆ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಲಾರಿಯೂ ಅವರ ಮೇಲೆ ಹರಿದಿದೆ. ಮಾಧವಿಗೆ ಗಂಭೀರಗಾಯವಾಗಿ, ರಕ್ತಸ್ರಾವವಾವಿದ್ದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಗಳೂರಿನಲ್ಲಿ ಗುಂಡಿ ಗಂಡಾಂತರ ಹೆದ್ದಾರಿ ಬಳಿ ಸಂಭವಿಸಿದ ಅಪಘಾತದ ಬಗ್ಗೆ ನಾಗರಿಕ ಹಿತ ರಕ್ಷಣಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.ಕೊಟ್ಟಾರ ಚೌಕಿಯಿಂದ ಬೈಕಂಪಾಡಿ ವರೆಗಿನ ಹೆದ್ದಾರಿಯಲ್ಲಿ ಇಲ್ಲಿಯವರೆಗೂ ಸಂಭವಿಸಿದ ಅಪಘಾತದಲ್ಲಿ, ಐವರು ಮೃತಪಟ್ಟಿದ್ದಾರೆ. ಪ್ರಾಧೀಕಾರಕ್ಕೆ ಕಳಪೆ ಹೆದ್ದಾರಿ ಬಗ್ಗೆ ದೂರು ಈ ಘಟನೆಯ ಬಗ್ಗೆ ನಾಗರಿಕ ಹಿತ ರಕ್ಷಣಾ ಸಮಿತಿಯವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೊಟ್ಟಾರ ಚೌಕಿಯಿಂದ ಬೈಕಂಪಾಡಿ ವರೆಗಿನ ಹೆದ್ದಾರಿಯಲ್ಲಿ ಸಂಭವಿಸಿದ ಐದನೇ ಸಾವು ಇದಾಗಿದೆ. ಜೊತೆಗೆ ನಾಗರಿಕ ಹಿತ ರಕ್ಷಣಾ ಸಮಿತಿಯ ನೇತೃತ್ವದಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ ಕೂಡಾ ನಡೆಯಿತು. ಮಂಗಳೂರು ಸಂಚಾರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಅಪಘಾತದ ಸ್ಥಳವನ್ನು ಪರಿಶೀಲಿಸಿದರು. ಲಾರಿ ಚಾಲಕನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.

ನೋಡಿರಿ

