ಎಲ್ಲೆಲ್ಲೂ ‘ಗೋ ಬ್ಯಾಕ್ ಆರ್.ಅಶೋಕ್’ ಪೋಸ್ಟರ್ – ಮಂಡ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ!
ರಾಜ್ಯ ರಾಜಕೀಯದಲ್ಲಿ ಈಗ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಮೂರೂ ರಾಜಕೀಯ ಪಕ್ಷಗಳು ತಮ್ಮದೇ ಶೈಲಿಯಲ್ಲಿ ಕಾರ್ಯತಂತ್ರ ರೂಪಿಸುತ್ತಿವೆ. ಜೊತೆಗೆ ಜಿಲ್ಲಾ ಮಟ್ಟದಲ್ಲಿ ಮತಗಳನ್ನ ಸೆಳೆಯೋಕೆ ಕೆಲ ಬದಲಾವಣೆಗಳನ್ನೂ ಮಾಡ್ತಿದ್ದಾರೆ. ಆದ್ರೆ ಇದೇ ಬದಲಾವಣೆಗೆ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಚುನಾವಣೆ ಹೊಸ್ತಿಲಲ್ಲಿ ನಡೆದ ದಿಢೀರ್ ಬದಲಾವಣೆ ಬಿಜೆಪಿ ಕೋಟೆಯಲ್ಲಿ ಬೆಂಕಿ ಹಚ್ಚಿದೆ. ಜಿಲ್ಲಾ ಉಸ್ತುವಾರಿ ಸಚಿವರನ್ನ ಬದಲಾವಣೆ ಮಾಡಿದ್ದಕ್ಕೆ ಮಂಡ್ಯ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮಂಡ್ಯದ ವಿವಿ ರಸ್ತೆ, ಸುಭಾಷ್ ರಸ್ತೆ ಗೋಡೆ ಮೇಲೆ ‘ಗೋ ಬ್ಯಾಕ್ ಆರ್.ಅಶೋಕ್’ ಎಂಬ ಭಿತ್ತಿಪತ್ರ ಅಂಟಿಸಿ ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ದಿ. ಜಯಲಲಿತಾ ಆಸ್ತಿ ಹರಾಜಿಗೆ ಕೋರ್ಟ್ ಅನುಮತಿ – ಕರ್ನಾಟಕಕ್ಕೆ ಎಷ್ಟು ಹಣ ಸಿಗುತ್ತೆ ಗೊತ್ತಾ..!?
ಮಂಡ್ಯ ಉಸ್ತುವಾರಿ ಸಚಿವರಾಗಿದ್ದ ಕೆ. ಗೋಪಾಲಯ್ಯರನ್ನ ದಿಢೀರ್ ಬದಲಾವಣೆ ಮಾಡಿ ಆರ್. ಅಶೋಕ್ರನ್ನ ನೇಮಿಸಲಾಗಿತ್ತು. ಆದ್ರೆ ಈ ಬೆಳವಣಿಗೆಯ ವಿರುದ್ಧ ಜಿಲ್ಲೆಯ ಕೇಸರಿ ಕಾರ್ಯಕರ್ತರು ಕೆಂಡಾಮಂಡಲರಾಗಿದ್ದಾರೆ. ಕೆಲ ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದು, ಸಚಿವ ಆರ್.ಅಶೋಕ್ ಹೊಂದಾಣಿಕೆ ರಾಜಕಾರಣ ನಡೆಸುತ್ತಿದ್ದಾರೆ ಎಂದಿದ್ದಾರೆ. ಹಾಗೂ ‘ಗೋ ಬ್ಯಾಕ್ ಆರ್. ಅಶೋಕ್’ ಎಂದು ಭಿತ್ತಿಪತ್ರಗಳನ್ನ ಅಂಟಿಸಿ ಆಕ್ರೋಶ ಹೊರಹಾಕಿದ್ದಾರೆ.
ಆರ್. ಅಶೋಕ್ರನ್ನ ಮಂಡ್ಯ ಉಸ್ತುವಾರಿಯಾಗಿ ನೇಮಿಸಿದ್ದಕ್ಕೆ ಸಿದ್ದರಾಮಯ್ಯ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಕೆಲಸ ಮಾಡ್ತಿದ್ರು. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಬೇಕಿರಲಿಲ್ಲ ಎಂದಿದ್ದಾರೆ.