6 ದಿನ 16 ಗಂಟೆಗಳಲ್ಲೇ ವಿಶ್ವದ 7 ಅದ್ಭುತ ಸ್ಥಳಗಳಿಗೆ ಭೇಟಿ – ಗಿನ್ನೆಸ್ ವಿಶ್ವದಾಖಲೆ ಬರೆದ ಸಾಹಸಿ!

6 ದಿನ 16 ಗಂಟೆಗಳಲ್ಲೇ ವಿಶ್ವದ 7 ಅದ್ಭುತ ಸ್ಥಳಗಳಿಗೆ ಭೇಟಿ – ಗಿನ್ನೆಸ್ ವಿಶ್ವದಾಖಲೆ ಬರೆದ ಸಾಹಸಿ!

ಬ್ರಿಟನ್‌ನ ಅಡ್ವೆಂಚರ್‌ಮ್ಯಾನ್ ಎಂದು ಕರೆಸಿಕೊಳ್ಳುವ ಜೇಮೀ ಮೆಕ್‌ಡೊನಾಲ್ಡ್ ಹೊಸ ದಾಖಲೆಯೊಂದನ್ನ ಬರೆದಿದ್ದಾರೆ. ಈಗಾಗಲೇ ಬ್ಯಾಂಕಾಕ್‌ನಿಂದ ಗ್ಲೌಸೆಸ್ಟರ್‌ಗೆ ಸೈಕ್ಲಿಂಗ್, ಅಮೆರಿಕದಾದ್ಯಂತ ಒಂಟಿಯಾಗಿ ಓಡುವುದು ಮತ್ತು ಸ್ಟಾಟಿಕ್ ಸೈಕಲ್ ಸವಾರಿ ಮೂಲಕ 268 ಗಂಟೆಗಳ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ತಮ್ಮ ಜೀವನದುದ್ದಕ್ಕೂ ಇಂತಹ ಸವಾಲಿನ ಆಟಗಳ ಮೂಲಕ ಗಮನಾರ್ಹ ಸಾಧನೆಗಳನ್ನು ಸಾಧಿಸಿದ್ದಾರೆ.

ಈಗ ಈ ಸಾಹಸಿಯು ಮತ್ತೊಂದು ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಏಳು ದಿನಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಸಾರ್ವಜನಿಕ ಸಾರಿಗೆ ಮತ್ತು ಟ್ಯಾಕ್ಸಿ ಬಳಸಿ, ಪ್ರಪಂಚದ ಎಲ್ಲಾ ಏಳು ಅದ್ಭುತ ಸ್ಥಳಗಳಿಗೆ ಭೇಟಿ ಕೊಟ್ಟಿದ್ದಾರೆ. ಮೆಕ್‌ಡೊನಾಲ್ಡ್ ಅವರಿಗೆ UK ಮೂಲದ ಟ್ರಾವೆಲ್ ಟೆಕ್ನಾಲಜಿ ಕಂಪನಿಯಾದ ಟ್ರಾವೆಲ್‌ಪೋರ್ಟ್ ಅವರ ಇತ್ತೀಚಿನ ತಂತ್ರಜ್ಞಾನವಾದ ಟ್ರಾವೆಲ್‌ಪೋರ್ಟ್+ ಅನ್ನು ಪರೀಕ್ಷಿಸುವ ಸಾಧನವಾಗಿ ಸವಾಲೊಂದನ್ನ ಪ್ರಸ್ತುತಪಡಿಸಿತು. ಅದರಂತೆಯೇ ಮೆಕ್‌ ಡೊನಾಲ್ಡ್ ಚೀನಾದ ಮಹಾಗೋಡೆ, ತಾಜ್ ಮಹಲ್, ಪೆಟ್ರಾ, ಕೊಲೋಸಿಯಮ್, ಕ್ರೈಸ್ಟ್ ದಿ ರಿಡೀಮರ್, ಮಚು ಪಿಚು ಮತ್ತು ಚಿಚೆನ್ ಇಟ್ಜಾಗೆ ಕೇವಲ ಆರು ದಿನ 16 ಗಂಟೆಗಳು ಮತ್ತು 14 ನಿಮಿಷಗಳಲ್ಲಿ ಯಶಸ್ವಿಯಾಗಿ ಪೂರೈಸಿದ್ದಾರೆ.

ಅಂದ ಹಾಗೇ ಈ ಸವಾಲಿನ ಪ್ರಯಾಣದಲ್ಲಿ ಜೇಮಿ ಒಂಬತ್ತು ದೇಶಗಳನ್ನು ಸುತ್ತುವರಿದ ನಾಲ್ಕು ಖಂಡಗಳಲ್ಲಿ ಸುತ್ತಾಡಿದ್ರು. 13 ವಿಮಾನಗಳು, 16 ಟ್ಯಾಕ್ಸಿ, ಒಂಬತ್ತು ಬಸ್, ನಾಲ್ಕು ರೈಲು ಮತ್ತು ಒಂದು ಟೋಬೊಗನ್ ಪ್ರಯಾಣವನ್ನ ಒಳಗೊಂಡಿತ್ತು. ಒಟ್ಟಾರೆಯಾಗಿ, ಅವರು ಅಂದಾಜು 22,856 ಮೈಲುಗಳನ್ನು ಪ್ರಯಾಣಿಸಿದ್ದರು.

ಜೇಮಿಯವರ ಸಾಹಸದಾಯಕ ಪ್ರಯಾಣವು ಗ್ರೇಟ್ ವಾಲ್ ಆಫ್ ಚೈನಾದಿಂದ ಆರಂಭವಾಯಿತು. ನಂತರ ಅವರು ಐಕಾನಿಕ್ ತಾಜ್ ಮಹಲ್ ನೋಡಲು ಭಾರತಕ್ಕೆ ಬರುತ್ತಾರೆ. ಮುಂದೆ ಅವರು ಜೋರ್ಡಾನ್‌ಗೆ ತೆರಳುತ್ತಾರೆ ಮತ್ತು ಇಂಡಿಯಾನಾ ಜೋನ್ಸ್ ಮತ್ತು ಲಾಸ್ಟ್ ಕ್ರುಸೇಡ್ ಚಲನಚಿತ್ರದಲ್ಲಿ ಪ್ರಸಿದ್ಧವಾದ ಪ್ರಾಚೀನ ನಗರವಾದ ಪೆಟ್ರಾಕ್ಕೆ ತೆರಳಿದರು. ಮುಂದೆ ಅಡ್ವೆಂಚರ್‌ಮ್ಯಾನ್ ರೋಮ್‌ಗೆ ಹಾರುತ್ತಾರೆ ಅಲ್ಲಿ ಅವರು ಪ್ರಸಿದ್ಧ ಕೊಲೋಸಿಯಮ್‌ ತಲುಪುತ್ತಾರೆ ಮತ್ತು ನಂತರ ವಿಶ್ವದ ಅತಿದೊಡ್ಡ ಆರ್ಟ್ ಡೆಕೊ ಪ್ರತಿಮೆಯಾದ ಕ್ರೈಸ್ಟ್ ದಿ ರಿಡೀಮರ್‌ನ ಭವ್ಯತೆಯನ್ನು ವೀಕ್ಷಿಸಲು ಬ್ರೆಜಿಲ್‌ಗೆ ಹೋದರು. ಅವರ ಕೊನೆಯ ಪ್ರವಾಸವು ಪೆರುವಿನಲ್ಲಿರುವ ಮಚು ಪಿಚು ಮತ್ತು ಮೆಕ್ಸಿಕೋದ ಚಿಚೆನ್ ಇಟ್ಜಾವನ್ನು ಒಳಗೊಂಡಿತ್ತು, ಕೇವಲ ಆರು ದಿನಗಳಲ್ಲಿ ಅವರ ಅಸಾಮಾನ್ಯ ಪ್ರಯಾಣವನ್ನು ಮುಕ್ತಾಯಗೊಳಿಸುತ್ತಾರೆ.

suddiyaana