RCBಯಲ್ಲಿ ಮ್ಯಾಕ್ಸಿ ಪವರ್ – ಭಾರತದ ಚೆಲುವೆ ಗ್ಲೆನ್ ಲವರ್ – ಸಿಡಿಗುಂಡು ಮ್ಯಾಕ್ಸಿ Life story ನಿಮಗೆಷ್ಟು ಗೊತ್ತು?
ನಮ್ಮ ಆರ್‌ಸಿಬಿ ಟೀಮ್‌ನ ಮೈನ್ ಸ್ಟ್ರೆಂಥ್ ಆಗಬೇಕಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಸರಿಯಾದ ಸಮಯಕ್ಕೆ ಕೈಕೊಟ್ಟಿದ್ದಾರೆ. ಮ್ಯಾಕ್ಸಿ. ಮ್ಯಾಕ್ಸಿ ಅಂತಾ ಫ್ಯಾನ್ಸ್ ಕೂಗಿದ್ದೇ ಬಂತು. ಈಗ ನನಗೆ ವಿಶ್ರಾಂತಿ ಬೇಕು. ಆರ್‌ಸಿಬಿ ಟೀಮ್ ಗೆ ನನ್ನ ಅವಶ್ಯಕತೆಯಿದ್ದಾಗ ಬರ್ತೀನಿ.. ಟಾಟಾ ಬಾಯ್ ಬಾಯ್ ಅಂತಾ ರೆಸ್ಟ್‌ನಲ್ಲಿದ್ದಾರೆ ಗ್ಲೆನ್ ಮ್ಯಾಕ್ಸ್‌ವೆಲ್. ಈಗ ಆರ್‌ಸಿಬಿ ಗೆಲುವಿನ ಟ್ರ್ಯಾಕ್‌ಗೆ ಬರ್ತಿದೆ. ಇನ್ನಾದ್ರೂ ಮ್ಯಾಕ್ಸಿ ಬಂದು ಟೀಮ್‌ಗೆ ಜಾಯ್ನ್ ಆಗಬಹುದು. ಇದ್ರ ಮಧ್ಯೆ ಮ್ಯಾಕ್ಸಿ ಪರ್ಸನಲ್ ಲೈಫ್ ಬಗ್ಗೆ ಕುತೂಹಲ ಗರಿಗೆದರಿದೆ. ಯಾಕೆಂದ್ರೆ, ಗ್ಲೆನ್ ಮ್ಯಾಕ್ಸ್‌ವೆಲ್ ನಮ್ಮ ಭಾರತದ ಅಳಿಯ.
ಇದನ್ನೂ ಓದಿ: ಆಸೀಸ್ ಗೆ ಹುಲಿ.. RCBಯಲ್ಲಿ ಇಲಿ – ಗೇಮ್ ಚೇಂಜರ್ ಆಗಿದ್ದ ಮ್ಯಾಕ್ಸ್ ವೆಲ್ RCB ಪಾಲಿಗೆ ಫ್ಲಾಪ್ ಹೀರೋ!
ಆಸ್ಟ್ರೇಲಿಯಾದ ದೈತ್ಯ ಕ್ರಿಕಿಟಿಗ ಗ್ಲೆನ್ ಮ್ಯಾಕ್ಸ್‌ವೆಲ್. ಗ್ಲೇನ್ ಮ್ಯಾಕ್ಸ್‌ವೆಲ್ ಕ್ರೀಸ್ನಲ್ಲಿ ಇದ್ರು ಅಂದ್ರೆ ರಿಸಲ್ಟ್ ಬಗ್ಗೆ ಏನನ್ನೂ ಹೇಳೋಕೆ ಸಾಧ್ಯವಿಲ್ಲ. ಮ್ಯಾಕ್ಸ್ವೆಲ್ರನ್ನ ಔಟ್ ಮಾಡೋವರೆಗೂ ಬೌಲಿಂಗ್ ಟೀಂ ರಿಲ್ಯಾಕ್ಸ್ ಆಗೋಕೆ ಸಾಧ್ಯವೇ ಇಲ್ಲ. ಎಂಥಾ ಮ್ಯಾಚ್ನ್ನ ಬೇಕಾದ್ರೂ ಮ್ಯಾಕ್ಸ್‌ವೆಲ್ ಟರ್ನ್ ಮಾಡಿ ಬಿಡ್ತಾರೆ. ಮ್ಯಾಚ್ ವಿನ್ ಮಾಡಿಸಿಕೊಡುವಂಥಾ ಸ್ಪೆಷಲ್ ಎಬಿಲಿಟಿ ಮ್ಯಾಕ್ಸ್ವೆಲ್ಗೆ ಇದೆ. ವರ್ಲ್ಡ್ ಕ್ರಿಕೆಟ್, ಇಂಥಾ ಸಾಮರ್ಥ್ಯವಿರೋ ಕೆಲವೇ ಕೆಲ ಆಟಗಾರರನ್ನ ಕಂಡಿದೆಯಷ್ಟೇ. ಅದ್ರಲ್ಲೂ ಮ್ಯಾಕ್ಸ್ವೆಲ್ರಂಥಾ ಬ್ಯಾಟ್ಸ್ಮನ್ ಈಗ ಯಾರೂ ಕೂಡ ಇಲ್ಲ. ಆದ್ರೆ, ಅದ್ಯಾಕೋ ಏನೋ ಈ ಬಾರಿ ಐಪಿಎಲ್‌ನಲ್ಲಿ ಮ್ಯಾಕ್ಸಿ ಬ್ಯಾಟ್ ಸೌಂಡ್ ಮಾಡ್ಲೇ ಇಲ್ಲ. ಆರ್‌ಸಿಬಿ ಟೀಮ್‌ನ ಮೈನ್ ಸ್ಟ್ರೆಂಥ್ ಆಗಿರೋ ಮ್ಯಾಕ್ಸಿ ಬ್ಯಾಟ್ ಮಾಡೋಕೆ ಬಂದ್ರು ಅಂತಾ ಚಪ್ಪಾಳೆ ತಟ್ಟುತ್ತಿರುವಾಗ್ಲೇ ಅದೇ ವೇಗದಲ್ಲಿ ವಾಪಸ್ ಹೋಗ್ತಿದ್ರು. ಸೆಂಚುರಿ ಹೊಡಿತಾರೆ ಅಂತಾ ಫ್ಯಾನ್ಸ್ ಕಾದ್ರೆ ಝೀರೋ ಸುತ್ತಿದ್ದೇ ಜಾಸ್ತಿ. ಬಹುಶಃ ಗ್ಲೆನ್ ಮ್ಯಾಕ್ಸ್‌ವೆಲ್ ತನ್ನ ಪವರ್ ನ್ನೆಲ್ಲಾ ಟಿ20 ವಿಶ್ವಕಪ್‌ಗೆ ಇರಲಿ ಅಂತಾ ಪೆಂಡಿಂಗ್ ಇಟ್ಕೊಂಡಿರಬೇಕು. ನಮ್ಮ ಬೆಂಗಳೂರು ತಂಡದಲ್ಲಿ ಚಾನ್ಸ್ ಪಡೆದಿರೋ ಮ್ಯಾಕ್ಸಿಗೆ ಇಂಡಿಯಾ ಅಂದ್ರೆ ತುಂಬಾ ಇಷ್ಟ. ಯಾಕೆಂದ್ರೆ ಆಸ್ಟ್ರೇಲಿಯಾದ ಈ ಆಟಗಾರ ನಮ್ಮ ಭಾರತದ ಅಳಿಯ.
2013ರಲ್ಲಿ ನಡೆದ ಮೆಲ್ಬೋರ್ನ್ ಸ್ಟಾರ್ಸ್ ಕಾರ್ಯಕ್ರಮದಲ್ಲಿ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ಮೊದಲ ಭಾರಿಗೆ ಭೇಟಿಯಾಗುತ್ತಾರೆ. ವಿನಿ ರಾಮನ್ ಅವರ ಸಿಂಪಲ್ ಬ್ಯೂಟಿ ನೋಡಿ ಮ್ಯಾಕ್ಸಿ ಕ್ಲೀನ್ ಬೌಲ್ಡ್ ಆಗ್ತಾರೆ. ವಿನಿ ಮೇಲೆ ಪ್ರೀತಿ ಮೂಡಿದ್ದೇ ತಡ, ಮ್ಯಾಕ್ಸ್‌ವೆಲ್ ಮಂಡಿಯೂರಿ ವಿನಿ ರಾಮನ್‌ಗೆ ಲವ್ ಪ್ರಪೋಸ್ ಮಾಡ್ತಾರೆ. ಅಂದಹಾಗೆ ವಿನಿ ರಾಮನ್ ತಮಿಳುನಾಡಿನವರು. ವಿನಿ ರಾಮನ್ ಆಸ್ಟ್ರೇಲಿಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವಾಗ ಮ್ಯಾಕ್ಸಿ ಪರಿಚಯವಾಗಿತ್ತು. ಮಾರ್ಚ್ 27, 2022 ರಲ್ಲಿ ಬಹು ಕಾಲದ ಗೆಳತಿ ವಿನಿ ರಾಮನ್ ಜೊತೆ ಗ್ಲೆನ್ ಮ್ಯಾಕ್ಸ್‌ವೆಲ್ ಮೆಲ್ಬೋರ್ನ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ರು. ಇವರಿಬ್ಬರ ಪ್ರೀತಿಗೆ ಹೆತ್ತವರು ಕೂಡಾ ಖುಷಿಯಲ್ಲೇ ಆಶೀರ್ವಾದ ಮಾಡಿದ್ದರು. ಜಾತಿ, ಧರ್ಮ, ದೇಶ, ವಿದೇಶಗಳನ್ನು ಮೀರಿದ ಪ್ರೀತಿ ಇವರದ್ದಾಗಿತ್ತು. ಈ ಶುದ್ಧ ಪ್ರೀತಿಗೆ ಹೆತ್ತವರ ಆಶೀರ್ವಾದ ಸಿಕ್ಕಿದ್ದು ಕೂಡಾ ದಂಪತಿಯ ಸಂಭ್ರಮ ಇಮ್ಮಡಿಗೊಳಿಸಿತ್ತು. ಮೊದಲು ಆಸ್ಟ್ರೇಲಿಯಾದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದೊಂದಿಗೆ ಮದುವೆ ನೆರವೇರಿತ್ತು. ನಂತರ ಭಾರತದಲ್ಲಿ ಮಾರ್ಚ್ 27, 2022 ರಂದು ತಮಿಳು ಪದ್ಧತಿಯಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ವಿನಿ ರಾಮನ್‌ಗಿಂತ ಮ್ಯಾಕ್ಸ್‌ವೆಲ್ 4 ವರ್ಷ 5 ತಿಂಗಳು ದೊಡ್ಡವರು. ವಿನಿ ರಾಮನ್ ತಮಿಳುನಾಡು ಮೂಲದವರಾಗಿದ್ದರಿಂದ ವಿವಾಹ ಸಮಾರಂಭ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ನೆರವೇರಿತ್ತು. ಜೊತೆಗೆ ವಿನಿ ರಾಮನ್ ಸೀಮಂತ ಕೂಡಾ ತಮಿಳುನಾಡಿನ ಹಿಂದೂ ಸಂಪ್ರದಾಯದಂತೆ ನೆರವೇರಿಸಲಾಗಿತ್ತು. ಸೀಮಂತ ಸಮಾರಂಭದಲ್ಲಿ ವಿನಿ ರಾಮನ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಹಾಗೆಯೇ ಪತ್ನಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಫೋಟೋಗೆ ಪೋಸ್ ನೀಡಿದ್ದು ನೋಡಿ ಭಾರತೀಯ ಅಳಿಯ ಅಂದ್ರೆ ಹೀಗಿರಬೇಕು ಅಂತಾ ಫ್ಯಾನ್ಸ್ ಕೊಂಡಾಡಿದ್ದರು.
ಮಿಸ್ಟರ್ ಆ್ಯಂಡ್ ಮಿಸೆಸ್ ಮ್ಯಾಕ್ಸ್ ವೆಲ್ ಗಂಡು ಮಗುವಿನ ಪೋಷಕರಾಗಿದ್ದಾರೆ. ಮುದ್ದು ಮಗನಿಗೆ ಲೋಗನ್ ಮೇವರಿಕ್ ಅಂತಾ ನಾಮಕರಣ ಮಾಡಿದ್ದಾರೆ. ಇನ್ನು ಭಾರತೀಯ ಮಹಿಳೆಯನ್ನು ವರಿಸುತ್ತಿರುವ ಎರಡನೇ ಆಸೀಸ್ ಕ್ರಿಕೆಟಿಗರಾಗಿದ್ದಾರೆ ಮ್ಯಾಕ್ಸ್‌ವೆಲ್. ಈ ಹಿಂದೆ ಆಸೀಸ್ ವೇಗದ ಬೌಲರ್ ಶಾನ್ ಟೈಟ್ ಸಹ ಭಾರತೀಯ ಚೆಲುವೆಯನ್ನು ವಿವಾಹವಾಗಿದ್ದರು. ನೋಡಿದ್ರಲ್ಲಾ ಸ್ನೇಹಿತರೇ, ಮ್ಯಾಕ್ಸ್‌ವೆಲ್ ನಮ್ಮ ಬೆಂಗಳೂರು ಟೀಮ್‌ನ ಆಟಗಾರನಾಗಿ ಹತ್ತಿರವಾಗಿದ್ರು. ನಂತರ ಭಾರತೀಯ ಅಳಿಯನಾಗಿಯೂ ಹತ್ತಿರವಾಗಿದ್ದಾರೆ.