ಕಣ್ಣು ನೋವಿದ್ರೆ ನಿರ್ಲಕ್ಷ್ಯ ಬೇಡ! – ಕುರುಡರನ್ನಾಗಿಸುತ್ತೆ ಗ್ಲುಕೋಮಾ ಸಮಸ್ಯೆ!
ಕಣ್ಣಿನ ಸಮಸ್ಯೆಗಳು ಯಾವ ವಯಸ್ಸಿನಲ್ಲಿ ಬೇಕಾದ್ರೂ ಬರಬಹುದು. ಇತ್ತೀಚೆಗೆ ದೊಡ್ಡವರು ಮಾತ್ರ ಅಲ್ಲ ಮಕ್ಕಳಲ್ಲಿಯೂ ಗ್ಲುಕೋಮಾ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದ್ರೆ ಮುಂದೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ.
ಗ್ಲುಕೋಮಾ ಎಂಬುದು ಕಣ್ಣಿಗೆ ಸಂಬಂಧಿಸಿದ ಒಂದು ಕಾಯಿಲೆ ಆಗಿದೆ. ವಯಸ್ಸಾಗುತ್ತಾ ಹೋದಂತೆ ಕಣ್ಣಿನೊಳಗಿನ ಹೆಚ್ಚಿದ ಒತ್ತಡವು ಆಪ್ಟಿಕ್ ನರದ ಅಂಗಾಂಶಕ್ಕೆ ಹಾನಿ ಮಾಡುತ್ತದೆ. ಇದರಿಂದ ದೃಷ್ಟಿ ದುರ್ಬಲವಾಗುತ್ತದೆ. ಹಾಗೆಯೇ ಕುರುಡುತನಕ್ಕೂ ಕಾರಣವಾಗಬಹುದು. ಹೀಗಾಗಿ ಈ ಸಮಸ್ಯೆಯ ಬಗ್ಗೆ ಎಚ್ಚರ ವಹಿಸೋದು ಮುಖ್ಯ.
ಇದನ್ನೂ ಓದಿ: ಕಚಗುಳಿ ಮಾಡುವಾಗ ನಗು – ಕೋಪ ಬರಲು ಇದೇ ಕಾರಣ!
ಗ್ಲುಕೋಮಾ ಅಂದರೆ ಕಣ್ಣಿನಲ್ಲಿ ಪೊರೆ ಬರುವುದು. ಭಾರತದಲ್ಲಿ ಈ ಸಮಸ್ಯೆಯಿಂದ ಸುಮಾರು 1ಕೋಟಿ 20 ಲಕ್ಷದಷ್ಟು ಜನ ಬಳಲುತ್ತಿದ್ದಾರೆ ಅಂತಾ ವರದಿಯಿಂದ ಗೊತ್ತಾಗಿದೆ. ಗ್ಲುಕೋಮಾ ಕಾಯಿಲೆ ತಡೆಗೆ ಪ್ರತೀ ವರ್ಷ ನಿಮ್ಮ ಕಣ್ಣುಗಳ ತಪಾಸಣೆ ಮಾಡಿಸಬೇಕಾಗುತ್ತದೆ. ತೀವ್ರವಾದ ಕೋನ ಮುಚ್ಚುವಿಕೆಯ ಗ್ಲುಕೋಮಾ ಸ್ಥಿತಿಯು ಹೆಚ್ಚು ಅಪಾಯಕಾರಿಯಾಗಿದೆ.
ಗ್ಲುಕೋಮಾ ಸಮಸ್ಯೆಯ ಲಕ್ಷಣಗಳು
ಗ್ಲುಕೋಮಾ ಸಾಮಾನ್ಯವಾಗಿ ಕೆಲವು ರೋಗ ಲಕ್ಷಣಗಳು ಗೋಚರಿಸಲು ಕಾರಣವಾಗುತ್ತದೆ. ತೀವ್ರ ಕಣ್ಣಿನ ನೋವು, ವಾಕರಿಕೆ, ವಾಂತಿ, ಕಣ್ಣಿನಲ್ಲಿ ಕೆಂಪು ದದ್ದು, ಹಠಾತ್ ದೃಷ್ಟಿ ಅಡಚಣೆಯಾಗುವುದು, ದೀಪಗಳ ಸುತ್ತಲೂ ಬಣ್ಣದ ಉಂಗುರಗಳ ಸೃಷ್ಟಿಯಾಗುವುದು ಗೋಚರ, ಹಠಾತ್ ದೃಷ್ಟಿ ಮಂದವಾಗುವುದು ಲಕ್ಷಣಗಳಾಗಿವೆ.
ಗ್ಲುಕೋಮಾ ಸಮಸ್ಯೆ ಉಂಟಾಗಲು ಕಾರಣ ಏನು?
ಈ ಸಮಸ್ಯೆ ಉಂಟಾಗಲು ಕಾರಣ, ಕಣ್ಣಿನೊಳಗೆ ಎಕ್ಯೂಯಸ್ ಹ್ಯೂಮರಾ ಎಂಬ ದ್ರವವಿದೆ. ಈ ದ್ರವವು ಕಣ್ಣಿನಲ್ಲಿರುವ ಜಾಲರಿಯಂತಹ ರಚನೆಯ ಮೂಲಕ ಹೊರಬರುತ್ತದೆ. ಆದರೆ ಕೆಲವೊಮ್ಮೆಈ ದ್ರವ ಕಣ್ಣಿನಲ್ಲಿ ಉಳಿಯುತ್ತೆ. ಇದ್ರಿಂದಾಗಿ ಗ್ಲುಕೋಮಾ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಇದನ್ನು ಕಡೆಗಣಿಸಿದರೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇದರ ಲಕ್ಷಣಗಳು ಕಂಡುಬಂದರೆ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳುವುದು ಉತ್ತಮ.