ಮೊಬೈಲ್ ಬಳಸದಿದ್ರೆ 8 ಲಕ್ಷ ಬಹುಮಾನ! – ಸ್ಪರ್ಧೆಯಲ್ಲಿ ಯಾರೆಲ್ಲಾ ಭಾಗವಹಿಸಬಹುದು?
ಕೈಲಿದ್ರೆ ಮೊಬೈಲ್ ಪ್ರಪಂಚವೇ ಕೈಯೊಳಗಿದೆ ಅಂತ ಫೀಲ್ ಮಾಡಿಕೊಳ್ಳುವ ಕಾಲದಲ್ಲಿ ನಾವಿದ್ದೇವೆ. ಈಗ ಎಲ್ಲದಕ್ಕೂ ಫೋನ್ ಬೇಕೆ ಬೇಕು.. ಸೋಶಿಯಲ್ ಮೀಡಿಯಾ, ಮನರಂಜನೆ, ದಿನನಿತ್ಯದ ಸುದ್ದಿ, ದುಡ್ಡಿನ ವ್ಯವಹಾರಕ್ಕೂ ಫೋನ್ ಬೇಕೇ ಬೇಕು. ಹೀಗಾಗಿಯೇ ಫೋನ್ ಬಿಟ್ಟು ಒಂದು ದಿನ ಕೂಡ ಇರೋದು ಅಂದ್ರೆ ಅದಕ್ಕಿಂತ ದೊಡ್ಡ ಚಾಲೆಂಜ್ ಬೇರೆ ಇರಲು ಸಾಧ್ಯವಿಲ್ಲ. ಆದ್ರೆ ಇಲ್ಲೊಂದು ಕಂಪನಿ ಆಫರ್ ವೊಂದನ್ನ ಕೊಟ್ಟಿದೆ. ನೀವು ಒಂದು ತಿಂಗಳು ಫೋನ್ ಯೂಸ್ ಮಾಡಿಲ್ಲ ಅಂದ್ರೆ ಬರೋಬ್ಬರಿ 8 ಲಕ್ಷ ರೂಪಾಯಿ ಹಣ ನೀಡುತ್ತೆ.
ಇದನ್ನೂ ಓದಿ: ಅಯೋಧ್ಯೆಯ ಹೋಟೆಲ್‌ಗಳಿಗೆ ಹಣದ ಹೊಳೆ! – 3 ದಿನದ ಆದಾಯ ಇಷ್ಟೊಂದಾ?
ಐಸ್ಲ್ಯಾಂಡಿಕ್ ಬ್ರಾಂಡ್ ‘ಸಿಗ್ಗಿ’ ಜನರಿಗಾಗಿ ವಿಶಿಷ್ಟ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧಿಗಳು ಒಂದು ತಿಂಗಳ ಕಾಲ ತಮ್ಮ ಜೀವನದಿಂದ ಫೋನ್ಗಳನ್ನು ದೂರವಿಡಬೇಕಾಗುತ್ತದೆ. 10 ಅದೃಷ್ಟಶಾಲಿಗಳಿಗೆ 10 ಸಾವಿರ ಡಾಲರ್ ಅಂದರೆ ಸುಮಾರು 8.31 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ ಅಂತಾ ಕಂಪನಿ ತಿಳಿಸಿದೆ.
‘SIGGI’ ಈ ಸ್ಪರ್ಧೆಗೆ ‘ಡಿಜಿಟಲ್ ಡಿಟಾಕ್ಸ್ ಪ್ರೋಗ್ರಾಂ’ ಎಂದು ಹೆಸರಿಟ್ಟಿದೆ. ಇದರಲ್ಲಿ ಭಾಗವಹಿಸುವ ಜನರು ತಮ್ಮ ಸ್ಮಾರ್ಟ್ಫೋನ್ಗಳು ಅಥವಾ ಫೋನ್ಗಳಿಂದ ದೂರವಿರಬೇಕು, ಅದೂ ಭರ್ತಿ ಒಂದು ತಿಂಗಳ ಕಾಲ. ಅವರು ಇದನ್ನು ಮಾಡಲು ಸಾಧ್ಯವಾದರೆ 10 ಸಾವಿರ ಡಾಲರ್ಗಳನ್ನು ಬಹುಮಾನವಾಗಿ ಗೆಲ್ಲುವ ಅವಕಾಶವಿರುತ್ತದೆ. ಈ ಸ್ಪರ್ಧೆಯ ಮೂಲಕ ಜನರಿಗೆ ಸಾಮಾನ್ಯ ಪ್ರಪಂಚದೊಂದಿಗೆ ಮರುಸಂಪರ್ಕಿಸಲು ಅವಕಾಶವನ್ನು ನೀಡುತ್ತಿದೆ ಎಂದು ಕಂಪನಿ ಹೇಳಿದೆ. ಭಾಗವಹಿಸುವ ಸ್ಪರ್ಧಿಯು ತನ್ನ ಫೋನ್ ಅನ್ನು ಬಾಕ್ಸ್ನಲ್ಲಿ ಇರಿಸಬೇಕು. ಒಂದು ತಿಂಗಳು ಸ್ಮಾರ್ಟ್ಫೋನ್ ಇಲ್ಲದೆ ದಿನಗಳನ್ನು ಕಳೆಯಬೇಕಾಗುತ್ತದೆ. ಹಾಗಿದ್ದರೂ ಯಾವುದಾದರೂ ತುರ್ತು ಸಂದರ್ಭಗಳಿದ್ದಲ್ಲಿ ಸ್ಪರ್ಧಿಗಳಿಗೆ ಸಿಮ್ ಕಾರ್ಡ್ ಮತ್ತು ಫೋನ್ ಅನ್ನು ನೀಡಲಾಗುತ್ತದೆ. ತುರ್ತು ಪರಿಸ್ಥಿತಿ ಇದ್ದಾಗ ಮಾತ್ರ ಇದನ್ನು ಬಳಸಬಹುದು. ”ನಾವು ಮದ್ಯದ ವ್ಯಸನವನ್ನು ಬಿಟ್ಟುಬಿಡಿ ಎಂದು ಜನರನ್ನು ಕೇಳುತ್ತಿಲ್ಲ, ಸ್ಮಾರ್ಟ್ಫೋನ್ ಚಟದಿಂದ ದೂರವಿರಲು ಪ್ರಯತ್ನಿಸುತ್ತಿದ್ದೇವೆ,” ಎಂದು ಕಂಪನಿ ಹೇಳಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವವರಿಗೆ ಜನವರಿ 31 ರವರೆಗೆ ಅವಕಾಶವಿದೆ. ಅರ್ಜಿಯನ್ನು SIGGI ವೆಬ್ಸೈಟ್ನಲ್ಲಿ ನೀಡಬಹುದು. ಆದ್ರೆ ಬಿಗ್ ಬಾಸ್ ರೀತಿಯಲ್ಲಿ ಮೊಬೈಲ್ ಬಿಟ್ಟವರನ್ನು ಯಾವುದಾದರೂ ಮನೆಯಲ್ಲಿ ಕೂಡಿ ಹಾಕ್ತಾರಾ ಎಂಬುದು ಇನ್ನೂ ಗೊತ್ತಾಗಿಲ್ಲ.