‘ಚಿಂತೆ ಮಾಡದೇ ಎಷ್ಟು ಮಕ್ಕಳಿಗೆ ಬೇಕಾದ್ರೂ ನೀವು ಜನ್ಮ ನೀಡಿ.. ಮೋದಿ ಮನೆ ಕಟ್ಟಿಸಿಕೊಡ್ತಾರೆʼ! – ಬಿಜೆಪಿ ಸಚಿವನಿಂದ ಭರವಸೆ!

‘ಚಿಂತೆ ಮಾಡದೇ ಎಷ್ಟು ಮಕ್ಕಳಿಗೆ ಬೇಕಾದ್ರೂ ನೀವು ಜನ್ಮ ನೀಡಿ.. ಮೋದಿ ಮನೆ ಕಟ್ಟಿಸಿಕೊಡ್ತಾರೆʼ! – ಬಿಜೆಪಿ ಸಚಿವನಿಂದ ಭರವಸೆ!

ರಾಜಕೀಯ ನಾಯಕರಿಗೆ ಮೈಕ್‌ ಸಿಕ್ಕಿದ್ರೆ ಸಾಕು.. ಗಂಟೆಗಟ್ಟೆಲೆ ತಮ್ಮನ್ನ ತಾವೇ ಹೊಗಳಿಕೊಂಡು ಇರುತ್ತಾರೆ.. ಇನ್ನು ಎಲೆಕ್ಷನ್‌ ಹತ್ರ ಬಂದ್ರೆ ಕೇಳ್ಬೇಕೇ? ನಾನ್‌ ಸ್ಟಾಪ್‌ ಭಾಷಣ.. ಚುನಾವಣೆ ಹತ್ತಿರ ಬರುತ್ತಿದ್ದಂತೆ ಏನೇ ಸಮಸ್ಯೆ ಇದ್ರೂ ಕ್ಷಣದಲ್ಲೇ ಪರಿಹಾರ ಕೂಡ ಸಿಗುತ್ತೆ. ಮನಬಂದಂತೆ ಆಶ್ವಾಸನೆ ನೀಡುತ್ತಾರೆ. ಇದೀಗ ಇಲ್ಲೊಬ್ಬ ರಾಜಕಾರಣಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಜನರಿಗೆ ಭರವಸೆಯೊಂದನ್ನ ನೀಡಿದ್ದು, ಎಲ್ಲರೂ ಶಾಕ್‌ ಆಗುವಂತೆ ಆಗಿದೆ.

ಬಿಜೆಪಿ ಸಚಿವರೊಬ್ಬರು ರಾಜಸ್ಥಾನದ ಜನರಿಗೆ ಹೊಸ ಆಫರ್ ಕೊಟ್ಟಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿರುವ ಅವರು ಚಿಂತೆ ಬಿಡಿ ನೀವು ಎಷ್ಟು ಮಕ್ಕಳಿಗೆ ಬೇಕಾದ್ರೂ ಜನ್ಮ ಕೊಡಿ. ಊಟ, ಮನೆಯ ಸೌಲಭ್ಯವನ್ನ ಪ್ರಧಾನಿ ನರೇಂದ್ರ ಮೋದಿ ಜೀ ಕೊಡ್ತಾರೆ ಎಂದಿದ್ದಾರೆ ಅಂತಾ ಹೇಳಿದ್ದಾರೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: 3 ಡಿಸಿಎಂ ಹುದ್ದೆಗೆ ಪಟ್ಟು!- ಡಿಸಿಎಂ ಕಚ್ಚಾಟಕ್ಕೆ ಕಾಂಗ್ರೆಸ್ ಮನೆಯಲ್ಲಿ ಕೋಲಾಹಲ..!

ಇಂತಹದೊಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ರಾಜಸ್ಥಾನದ ಸಚಿವ ಬಾಬುಲಾಲ್ ಖರಾಡಿ. ಉದಯ್‌ಪುರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಬಾಬುಲಾಲ್ ಖರಾಡಿ, ಚಿಂತೆ ಮಾಡದೇ ಎಷ್ಟು ಮಕ್ಕಳಿಗೆ ಬೇಕಾದ್ರೂ ನೀವು ಜನ್ಮ ನೀಡಿ. ಪ್ರಧಾನಿ ನರೇಂದ್ರ ಮೋದಿ ನಿಮಗೆ ಮನೆ ಕಟ್ಟಿಸಿ ಕೊಡುತ್ತಾರೆ. ಯಾರು ಹಸಿವಿನಿಂದ ಮಲಗದಂತೆ ಮಾಡೋದು ಪ್ರಧಾನಮಂತ್ರಿಯವರ ಕನಸು. ನೀವು ಚಿಂತೆ ಮಾಡಬೇಡಿ ಎಂದು ಕರೆ ಕೊಟ್ಟಿದ್ದಾರೆ.

2023ರ ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 115 ಕ್ಷೇತ್ರಗಳನ್ನ ಗೆದ್ದು ರಾಜಸ್ಥಾನದಲ್ಲಿ ಹೊಸ ಸರ್ಕಾರ ರಚನೆ ಮಾಡಿದೆ. ಸಿಎಂ ಭಜನ್‌ಲಾಲ್ ಶರ್ಮಾ ಸರ್ಕಾರದಲ್ಲಿ ಸಚಿವರಾಗಿರುವ ಬುಡಕಟ್ಟು ಪ್ರದೇಶ ಅಭಿವೃದ್ಧಿ ಸಚಿವ ಬಾಬುಲಾಲ್ ಖರಾಡಿ ಅವರು ಈ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾರೆ.

ಬಿಜೆಪಿ ಸರ್ಕಾರ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 450 ರೂಪಾಯಿಗೆ ನೀಡುತ್ತಿದೆ. ಈ ದೇಶದ ಸಾಮಾನ್ಯ ಜನರಿಗಾಗಿ ಬಹಳಷ್ಟು ಯೋಜನೆಗಳನ್ನ ಘೋಷಣೆ ಮಾಡಿದೆ. ಇದಕ್ಕಿಂತ ನಿಮಗೇನು ಬೇಕು. ನಮ್ಮ ಪ್ರಧಾನಮಂತ್ರಿಗಳು ಯಾರೊಬ್ಬರು ಹಸಿವಿನಿಂದ ಮಲಗಬಾರದು. ಯಾರೂ ಕೂಡ ಮನೆಯಿಲ್ಲದೇ ಇರಬಾರದು ಅನ್ನೋ ಕನಸು ಕಾಣುತ್ತಿದ್ದಾರೆ. ಪ್ರಧಾನಮಂತ್ರಿ ನಿಮಗೆ ಮನೆಗಳನ್ನು ಕಟ್ಟಿಸಿಕೊಡುತ್ತಾರೆ. ಚಿಂತೆ ಮಾಡುವುದನ್ನು ಬಿಟ್ಟು ಎಷ್ಟು ಮಕ್ಕಳಿಗಾದ್ರೂ ಜನ್ಮ ನೀಡಿ. ಇದರಲ್ಲಿ ನಿಮಗೇನು ಕಷ್ಟ ಎಂದು ಪ್ರಶ್ನಿಸಿದ್ದಾರೆ. ಬಾಬುಲಾಲ್ ಖರಾಡಿ ಅವರು ಮಾಡಿದ ಭಾಷಣದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Shwetha M