ಯುವ ರೈತರನ್ನು ಮದುವೆಯಾಗೋ ಯುವತಿಯರಿಗೆ 5 ಲಕ್ಷ ರೂ. ಪರಿಹಾರ ಕೊಡಿ! – ಸರ್ಕಾರಕ್ಕೆ ಬ್ಯಾಚುಲರ್ಸ್‌ ಹೊಸ ಡಿಮ್ಯಾಂಡ್!‌

ಯುವ ರೈತರನ್ನು ಮದುವೆಯಾಗೋ ಯುವತಿಯರಿಗೆ 5 ಲಕ್ಷ ರೂ. ಪರಿಹಾರ ಕೊಡಿ! – ಸರ್ಕಾರಕ್ಕೆ ಬ್ಯಾಚುಲರ್ಸ್‌ ಹೊಸ ಡಿಮ್ಯಾಂಡ್!‌

ಒಂದ್ಕಡೆ ಡಿವೋರ್ಸ್‌ ಪಡೆದುಕೊಳ್ಳುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗ್ತಿದೆ. ಮತ್ತೊಂದ್ಕಡೆ ಹೆಣ್ಣು ಸಿಗ್ತಿಲ್ಲ ಅನ್ನೋದು ಯುವಕರ ಗೋಳು. ಇತ್ತೀಚೆಷ್ಟೇ ಮಂಡ್ಯದಲ್ಲಿ ನಮಗೆ ಯಾರೂ ಹೆಣ್ಣು ಕೊಡ್ತಿಲ್ಲ. ಮಠ ಕಟ್ಟಿಸಿಕೊಡಿ ಎಂದು ಬ್ಯಾಚುಲರ್ಸ್‌ ಪಂಚಾಯ್ತಿಗೆ ಮನವಿ ಮಾಡಿದ್ರು. ಇದೀಗ ಯುವ ರೈತರನ್ನ ಮದುವೆಯಾಗುವ ಯುವತಿಯರಿಗೆ 5 ಲಕ್ಷ ಪರಿಹಾರ ನೀಡಬೇಕು ಎಂಬ ಡಿಮ್ಯಾಂಡ್‌ ಶುರುವಾಗಿದೆ.

ಇದನ್ನೂ ಓದಿ: ಯುವಕನ ಪಾಲಿಗೆ ಯಮನಾದ ಫಾರಿನ್‌ ಗಿಳಿ! – ಪ್ರಾಣ ಉಳಿಸಲು ಹೋದಾತ ದುರಂತ ಅಂತ್ಯ!

ಮದುವೆಗೆ ಹೆಣ್ಣು ಸಿಗದೇ ಯುವಕರು ಮಠಕ್ಕೆ ಬೇಡಿಕೆ ಇಟ್ಟಿದ್ರು. ಇದೀಗ ಈ ಯುವಕರ ಸಹಾಯಕ್ಕೆ ಬಿಜೆಪಿ ಕಾರ್ಯಕರ್ತರು ನಿಂತಿದ್ದಾರೆ. ಮಂಡ್ಯ ಡಿಸಿ ಕಚೇರಿ ಬಳಿ ವಿಭಿನ್ನ ರೀತಿಯ ಪ್ರತಿಭಟನೆ ಮಾಡಿದ್ದಾರೆ. ಕೈಯಲ್ಲಿ ತಾಂಬೂಲ ಹಿಡಿದು, ವರನಂತೆ ಬಟ್ಟೆ ತೊಟ್ಟು, ಹಣೆಗೆ ಬಾಸಿಂಗ ಕಟ್ಟಿ, ಮಂಡ್ಯ ಡಿಸಿ ಕಚೇರಿ ಮುಂದೆ ಧರಣಿಗೆ ನಿಂತಿದ್ದಾರೆ. ಯುವ ರೈತರನ್ನ ಮದುವೆಯಾಗುವ ಯುವತಿಯರಿಗೆ 5 ಲಕ್ಷ ರೂಪಾಯಿ ಪ್ರೋತ್ಸಾಹ ಧನಕ್ಕೆ ಆಗ್ರಹಿಸಿ ಮಂಡ್ಯ ಡಿಸಿಗೆ ಮನವಿ ಸಲ್ಲಿಸಿದ್ದಾರೆ.

ಬಿಜೆಪಿ ಮುಖಂಡ ಸಿ.ಟಿ. ಮಂಜುನಾಥ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯ್ತು. ರೈತರ ಗಂಡು ಮಕ್ಕಳಿಗೆ ಹೆಣ್ಣು ಸಿಗದೆ ಕಂಗಲಾಗಿದ್ದಾರೆ. ಮಠ ಕಟ್ಟಿಸಿಕೊಡಿ ಎಂದು ಮನವಿ ಕೂಡ ಮಾಡಿದ್ದಾರೆ. ರಾಜ್ಯ ಸರ್ಕಾರ ಗ್ಯಾರಂಟಿ ಕೊಟ್ಟಹಾಗೆ ರೈತರ ಮಕ್ಕಳ ಮದುವೆಯಾಗುವ ಯುವತಿಯರಿಗೆ 5 ಲಕ್ಷ ರೂಪಾಯಿ ಪ್ರೋತ್ಸಾಹ ಹಣ ಕೊಡಬೇಕು. ಶಾದಿ ಭಾಗ್ಯದ ರೀತಿ ರೈತನ ಮಕ್ಕಳ ಜೀವನಕ್ಕೆ ಆಸರೆಯಾಗುವಂತೆ ಯೋಜನೆ ತನ್ನಿ ಅಂತ ಆಗ್ರಹಿಸಿದ್ರು. ಮಂಡ್ಯ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಿದ್ರು.

Shwetha M