ಮಳೆಗೆ ಬಾಲಕಿಯ ದುರಂತ ಅಂತ್ಯ- ಮಲಗಿದ್ದಲ್ಲೇ ಚಿರನಿದ್ದೆಗೆ ಜಾರಿದ ಮುದ್ದಿನ ಮಗಳು

ಮಳೆಗೆ ಬಾಲಕಿಯ ದುರಂತ ಅಂತ್ಯ- ಮಲಗಿದ್ದಲ್ಲೇ ಚಿರನಿದ್ದೆಗೆ ಜಾರಿದ ಮುದ್ದಿನ ಮಗಳು

ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಅದರಲ್ಲೂ ಯಾದಗಿರಿಯಲ್ಲಿ ಮಳೆಯ ಆರ್ಭಟಕ್ಕೆ ಮನೆಯಲ್ಲಿ ಮಲಗಿದ್ದ ಬಾಲಕಿ ಜೀವಬಿಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಹೃದಯಹಿಂಡುವಂತಿದೆ.

ಇದನ್ನೂ ಓದಿ:ಪೋಷಕರ ಕಣ್ಣೆದುರಲ್ಲೇ ಮಗನನ್ನು ಕೊಂದ ಚಿರತೆ! – ಮೃತ ಬಾಲಕನ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ

ಯಾದಗಿರಿ  ಜಿಲ್ಲೆಯ ವಡಗೇರಾ ತಾಲ್ಲೂಕಿನ ತುಮಕೂರು ಗ್ರಾಮದಲ್ಲಿ ಮಳೆಯಿಂದಾಗಿ ದುರಂತ ಘಟನೆ ನಡೆದಿದೆ. ತಡರಾತ್ರಿ ಸುರಿದ ಭಾರೀ ಮಳೆಗೆ ಸಿದ್ದಪ್ಪ ಕೊಪ್ಪರ ಎಂಬುವವರ ಮನೆಗೋಡೆ ಕುಸಿದಿದೆ. ಏಕಾಏಕಿ ಕುಸಿದು ಬಿದ್ದ ಗೋಡೆಯಿಂದಾಗಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ, ಮತ್ತಿಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ. ಮಗಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಎಸ್ಪಿ ಪೃಥ್ವಿಕ್ ಶಂಕರ್ ಮತ್ತು ಜಿಪಂ ಸಿಒಇ ಲವೀಶ್ ಒರಡಿಯಾ ಭೇಟಿ ನೀಡಿದ್ದು, ಅಧಿಕಾರಿಗಳು ಕೂಡ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮಗಳನ್ನ ಕಳೆದುಕೊಂಡು ಕಣ್ಣೀರು ಹಾಕ್ತಿದ್ದ ಕುಟುಂಬಕ್ಕೆ ಡಿಸಿ ಸಾಂತ್ವನ ಹೇಳಿದ್ದಾರೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮಲೆನಾಡಲ್ಲೂ ಮಳೆಯ ಅಬ್ಬರ ಜೋರಾಗಿದೆ. ಸೋಮವಾರ ರಾತ್ರಿ ಬಿರುಗಾಳಿಯೊಂದಿಗೆ ಧಾರಾಕಾರವಾಗಿ ಮಳೆಯಾಗಿದ್ದು, ಕಳಸ ತಾಲೂಕಿನ ಕಲ್ಮಕ್ಕಿ ಹಿನಾರಿ ಗ್ರಾಮದಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಮನೆ ಮೇಲೆ‌ ಮರ ಬಿದ್ದಿದೆ. ವನಜಾಕ್ಷಿ ಎಂಬುವರಿಗೆ ಸೇರಿದ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದ್ದು, ಮನೆ ಮೇಲ್ಚಾವಣಿಗೆ ಹಾನಿಯಾಗಿದೆ. ಮತ್ತೊಂದೆಡೆ ಕೊಪ್ಪ ತಾಲೂಕಿನ ಬಾರ್ಗಲ್ ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದು, ಕೊಪ್ಪ – ಬಾರ್ಗಲ್ ಸಂಚಾರ ಬಂದ್ ಆಗಿದೆ.ಬಿರುಗಾಳಿ ಆರ್ಭಟಕ್ಕೆ ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಬಾರ್ಗಲ್ ಗ್ರಾಮದಲ್ಲೇ 30 ಕ್ಕೂ ಅಧಿಕ ವಿದ್ಯುತ್ ಕಂಬಗಳು ದಾರಿಯುದ್ದಕ್ಕೂ ಬಿದ್ದಿವೆ.

Sulekha

Leave a Reply

Your email address will not be published. Required fields are marked *