ಪ್ರೇಯಸಿಯ ಬೆತ್ತಲೆ ಫೋಟೋ ವೈರಲ್ – ದೂರು ನೀಡಲು ಬಂದ ಪ್ರಿಯಕರನೇ ಅಂದರ್!
ಅವರಿಬ್ಬರು ಸುಮಾರು 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆತನೇ ತನ್ನ ಪ್ರಪಂಚ.. ಆತನೇ ತನಗೆ ಎಲ್ಲಾ ಅಂತಾ ಆಕೆ ನಂಬಿದ್ದಳು. ಇನ್ನೇನು ಆ ಯುವತಿ ಆತನೊಂದಿಗೆ ಮದುವೆಯಾಗಲು ಸಜ್ಜಾಗಿದ್ದಳು. ಆದರೆ ಇದೇ ಸಮಯಕ್ಕೆ ಆ ಯುವತಿಗೆ ಶಾಕ್ ಎದುರಾಗಿತ್ತು. ಅದೊಂದು ಫೋಟೋಆಕೆಯ ಕನಸನ್ನು ನುಚ್ಚು ನೂರಾಗಿಸುವಂತೆ ಮಾಡಿತ್ತು. ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಆಕೆಗೆ ತನ್ನ ಪ್ರೇಮಿಯ ನೀಚ ಬುದ್ದಿ ಗೊತ್ತಾಗಿದೆ.
ಏನಿದು ಘಟನೆ?
ತಮಿಳುನಾಡು ಮೂಲದ ಆ ಯುವಕ-ಯುವತಿ ಸುಮಾರು 10 ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಶಿಕ್ಷಣ ಮುಗಿದ ತಕ್ಷಣ ಮದುವೆ ಆಗೋ ಪ್ಲಾನ್ ಕೂಡ ಮಾಡಿದ್ದರು. ಅಷ್ಟರಲ್ಲಿ ಯುವತಿಯ ಬೆತ್ತಲೆ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಫೋಟೋ ನೋಡಿದ ಯುವತಿ ಪ್ರಿಯಕರನಿಗೆ ವಿಷಯ ಮುಟ್ಟಿಸಿದಳು. ಹೀಗೆಲ್ಲಾ ಆಗಿದ್ಯಾ ನಡೀ ಪೊಲೀಸರಿಗೆ ದೂರು ನೀಡೋಣ ಎಂದು ತಾನೇ ಮುಂದೆ ನಿಂತು ಬೆಂಗಳೂರಿನ ಆಗ್ನೇಯ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ತನಿಖೆಯಲ್ಲಿ ಅಸಲಿ ಕಹಾನಿ ಬಯಲಾಗಿದೆ..
ಇದನ್ನೂ ಓದಿ: ಹೈಪರ್ ಟೆನ್ಷನ್, ಮೂಡ್ ಸ್ವಿಂಗ್ಸ್ ನಿಂದ ಬಳಲುತ್ತಿರುವ ಪತ್ನಿ – ಕಿರುಕುಳಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ!
ಪ್ರಿಯಕರನ ನಿಜ ಬಣ್ಣ ಬಯಲು!
ದೂರು ದಾಖಲಾಗುತ್ತಿದ್ದಂತೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಫೋಟೋ ಎಲ್ಲಿಂದ ಬಂತು. ಯಾರು ಶೇರ್ ಮಾಡಿದ್ದಾರೆ ಎಂದು ತನಿಖೆ ನಡೆಸಿದ್ದಾರೆ. ಈ ವೇಳೆ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯುವತಿಯ ಫೋಟೋ ಶೇರ್ ಮಾಡುತ್ತಿರುವುದು ಬೇರೆ ಯಾರು ಅಲ್ಲ ಆಕೆಯ ಪ್ರಿಯತಮ ಅಂತಾ ಗೊತ್ತಾಗಿದೆ. ಸದ್ಯ ಈ ವಿಕೃತ ಕಾಮಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಸ್ನೇಹಿತರ ಗ್ರೂಪ್‌ನಲ್ಲಿ ಫೋಟೋ ಶೇರ್ ಮಾಡುತ್ತಿದ್ದ!
ಪೊಲೀಸರ ಅತಿಥಿಯಾಗಿರುವ ಆರೋಪಿ ಸಂಜಯ್ ನಗರದ ಖಾಸಗಿ ಕಾಲೇಜಿನಲ್ಲಿ ಬಿಇ ಪ್ಲಾನಿಂಗ್ ಕೋರ್ಸ್ ಮಾಡುತ್ತಿದ್ದ. ಈ ಜೋಡಿ ಮದುವೆಯಾಗುವುದಕ್ಕೂ ಮೊದಲೇ ದೈಹಿಕ ಸಂಬಂಧವನ್ನೂ ಬೆಳೆಸಿದ್ದರು. ಈ ವೇಳೆ ತೆಗೆದುಕೊಂಡ ಬೆತ್ತಲೆ ಫೋಟೋಗಳನ್ನು ಪ್ರಿಯಕರ ಸಂಜಯ್ ಟೆಲಿಗ್ರಾಂನ ಸ್ನೇಹಿತರ ಗ್ರೂಪ್‌ನಲ್ಲಿ ಶೇರ್ ಮಾಡಿಕೊಂಡಿದ್ದ ಎಂಬ ವಿಚಾರ ತನಿಖೆ ವೇಳೆ ಬಯಲಾಗಿದೆ.
ಯುವತಿಯ ಸ್ನೇಹಿತರನ್ನು ಟಾರ್ಗೆಟ್ ಮಾಡಿದ್ದ ನೀಚ!
ಈ ಯುವಕ ಹಾಗೂ ಆತನ ಸ್ನೇಹಿತರು ಆಕೆಯನ್ನು ಮಾತ್ರ ಟಾರ್ಗೆಟ್ ಮಾಡಿರಲಿಲ್ಲ. ಪ್ರಿಯತಮೆ ಸೇರಿದಂತೆ ಆಕೆಯ ಸ್ನೇಹಿತರು, ಪರಿಚಿತ ಯುವತಿಯರ ಫೋಟೋಗಳನ್ನು ಕೂಡಾ ಬೆತ್ತಲೆಯಾಗಿ ನೋಡೋಕೆ ಅಂತಲೇ, ಬಾಟ್ ಅನ್ನೋ ಆ್ಯಪ್ ಕಂಡು ಹಿಡಿದಿದ್ದ. ಆ ಆ್ಯಪ್‌ನಲ್ಲಿ ಯಾವುದೇ ಯುವತಿಯ ಫೋಟೋ ಅಪ್ಲೋಡ್ ಮಾಡಿದರೂ ಅದು ಬೆತ್ತಲೆಯಾಗಿ ತೋರಿಸುತ್ತಿತ್ತು. ಅದನ್ನು ನೋಡಿ ವಿಕೃತ ಖುಷಿಪಡ್ತಿದ್ದರು. ಈ ಎಲ್ಲಾ ವಿಚಾರಗಳು ತನಿಖೆಯಲ್ಲಿ ಗೊತ್ತಾಗುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.