ದಿನಕ್ಕೆ 12 ಸಾವಿರ ಬಾರಿ ಸೀನುತ್ತಾಳೆ ಈ ಯುವತಿ -ವೈದ್ಯರಿಗೂ ಸವಾಲಾಯ್ತು ಸೀನುವ ವಿಚಿತ್ರ ಕಾಯಿಲೆ!

ದಿನಕ್ಕೆ 12 ಸಾವಿರ ಬಾರಿ ಸೀನುತ್ತಾಳೆ ಈ ಯುವತಿ -ವೈದ್ಯರಿಗೂ ಸವಾಲಾಯ್ತು ಸೀನುವ ವಿಚಿತ್ರ ಕಾಯಿಲೆ!

ದಿನಕ್ಕೆ ಒಂದೋ, ಎರಡು ಸಲವೋ ಸೀನು ಬಂದ್ರೆ ಏನು ಶೀತ ಆಯ್ತಾ ಅಂತಾ ಕೇಳ್ತಾರೆ. ಆದ್ರೆ ಈ ಯುವತಿ ದಿನಕ್ಕೆ 12 ಸಾವಿರ ಬಾರಿ ಸೀನುತ್ತಾಳಂತೆ. ಅವಳ ಸಮಸ್ಯೆ ಅದೆಷ್ಟರ ಮಟ್ಟಿಗೆ ಇದೆ ಅಂದ್ರೆ ಅವಳಿಗೆ ಸರಿಯಾಗಿ ಊಟ ತಿಂಡಿ ಮಾಡೋಕೆ ಆಗ್ತಿಲ್ಲ. ಅಷ್ಟೇ ಯಾಕೆ ನಿದ್ದೆ ಮಾಡೋಕೂ ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ : ನೀವು ಮಧ್ಯಾಹ್ನದ ವೇಳೆ ನಿದ್ದೆ ಮಾಡ್ತೀರಾ?

ಅಮೆರಿಕದ ಟೆಕ್ಸಾಸ್‌ನಲ್ಲಿ ವಾಸವಿರುವ 20 ವರ್ಷದ ಕ್ಯಾಟ್ಲಿನ್ ಥಾರ್ನ್ಲಿ ಎಂಬ ಯುವತಿ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಕಾಯಿಲೆ ಎಷ್ಟು ವಿಚಿತ್ರವೆಂದರೆ ದಿನಕ್ಕೆ 12 ಸಾವಿರ ಬಾರಿ ಸೀನುತ್ತಾಳೆ. ಇದ್ರಿಂದಾಗಿ ಸರಿಯಾಗಿ ಊಟ, ತಿಂಡಿ ಮಾಡಲು ಆಗ್ತಿಲ್ಲ. ಕೆಲವೊಮ್ಮೆ ನಿದ್ದೆ ಮಾಡಲು ಸಾಧ್ಯವಾಗೋದಿಲ್ಲ. ಪದೇಪದೇ ಸೀನೋದ್ರಿಂದ ಅವಳ ದೇಹದಲ್ಲಿ ನಡುಕ ಶುರುವಾಗಿದೆ. ಆರಂಭದ ದಿನಗಳಲ್ಲಿ ಯಾವುದೋ ಅಲರ್ಜಿಯಿಂದ ಹೀಗೆ ಆಗ್ತಿರಬಹುದು. ಇಲ್ಲ ಮೂಗಿನಲ್ಲಿ ಏನಾದ್ರೂ ಸಮಸ್ಯೆ ಇರಬಹುದು ಅಂದುಕೊಂಡಿದ್ರು. ಆದ್ರಿದು ತುಂಬಾ ದಿನಗಳವರೆಗೆ ಮುಂದುವರಿದ ಕಾರಣ ವೈದ್ಯರಿಗೆ ತೋರಿಸಿದ್ದಾರೆ. ಆಗ ಇದು ಸೀನುವಿಕೆಯ ವಿಚಿತ್ರ ರೋಗ ಅನ್ನೋದು ಗೊತ್ತಾಗಿದೆ. 2015 ರಲ್ಲಿ ಈ ವಿಚಿತ್ರ ಕಾಯಿಲೆ ಪತ್ತೆಯಾಗಿದ್ದು, ಈ ಯುವತಿ ಈಗಲೂ ಸೀನುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಏಕೆಂದರೆ ಅವಳ ಈ ಕಾಯಿಲೆಗೆ ಕಾರಣ ಏನೆಂದು ಕಂಡುಹಿಡಿಯಲು ವೈದ್ಯರಿಗೆ ಇನ್ನೂ ಸಾಧ್ಯವಾಗಿಲ್ಲ.

Shantha Kumari