ತನ್ನದೇ ನಿವಾಸದ ಕೆಳಗೆ ಹೊಂಚು ಹಾಕಿತ್ತು ಸಾವು –ಅಪಾರ್ಟ್‌ಮೆಂಟ್‌ ಬಳಿ ಕರೆಂಟ್ ಶಾಕ್‌ಗೆ ಬಾಲಕಿ ಬಲಿ

ತನ್ನದೇ ನಿವಾಸದ ಕೆಳಗೆ ಹೊಂಚು ಹಾಕಿತ್ತು ಸಾವು –ಅಪಾರ್ಟ್‌ಮೆಂಟ್‌ ಬಳಿ ಕರೆಂಟ್ ಶಾಕ್‌ಗೆ ಬಾಲಕಿ ಬಲಿ

ನಿತ್ಯ ಸಂಜೆ ಸ್ವಿಮ್ಮಿಂಗ್ ಹೋಗುವುದು ಅಂದರೆ ಆ ಬಾಲೆಗೆ ತುಂಬಾ ಖುಷಿ. 10 ವರ್ಷದ ಬಾಲಕಿ ತಾನಾಗಿಯೇ ಲಿಫ್ಟ್ ಮೂಲಕ ತಾನು ವಾಸ ಮಾಡುತ್ತಿರುವ ಅಪಾರ್ಟ್‌ಮೆಂಟ್ ಲ್ಲಿರುವ ಸ್ವಿಮಿಂಗ್ ಫೂಲ್ ಗೆ ಹೋಗಿದ್ದಾಳೆ. ಅದು ಹೋಮ್ ವರ್ಕ್ ಎಲ್ಲಾ ಮುಗಿಸಿ, ಕೈಯಲ್ಲಿ ಸೇಬು ಹಣ್ಣನ್ನು ಹಿಡಿದುಕೊಂಡು ತಿನ್ನುತ್ತಾ ಲಿಫ್ಟ್ ಒಳಗೆ ಡಾನ್ಸ್ ಮಾಡುತ್ತಾ ಖುಷಿಯಾಗಿಯೇ ಈಜಲು ತೆರಳಿದ್ದಾಳೆ. ಮುದ್ದು ಬಾಲೆಯ ಖುಷಿ ಆ ಕ್ಷಣವೇ ಕೊನೆಯಾಗುತ್ತೆ ಅಂತಾ ಯಾರಿಗೆ ಗೊತ್ತಿತ್ತು.

ಇದನ್ನೂ ಓದಿ: 5 ವರ್ಷಗಳು, ಅಸ್ಥಿಪಂಜರಗಳು – 2019ರ ಕ್ಯಾಲೆಂಡರ್ ಹೇಳುತ್ತಿದೆ ಐವರ ಸಾವಿನ ರಹಸ್ಯ..!

ಡಿಸೆಂಬರ್ 28 ಗುರುವಾರ ಸಂಜೆ 7.30 ರ ಸಮಯ. ಬೆಂಗಳೂರಿನ ವರ್ತೂರಿನ ಅಪಾರ್ಟ್‌ಮೆಂಟ್ ವೊಂದರಲ್ಲಿ ವಾಸವಾಗಿರುವ ಬಾಲಕಿ ಮಾನ್ಯ ಸ್ವಿಮಿಂಗ್ ಫೂಲ್ ಗೆ ತೆರಳಿದ್ದಳು. ಲಿಫ್ಟ್‌ನಲ್ಲಿ ಖುಷಿ ಖುಷಿಯಾಗಿ ತೆರಳಿರುವ ವಿಡಿಯೋ ಕೂಡಾ ಸಿಕ್ಕಿದೆ. ಸ್ವಿಮ್ಮಿಂಗ್ ಪೂಲ್ ಪಕ್ಕದ ವಿದ್ಯುತ್ ದೀಪದ ತಂತಿಯನ್ನು ಗೊತ್ತಾಗದೇ ಮಾನ್ಯ ತುಳಿದ ಪರಿಣಾಮ ಶಾಕ್ ಹೊಡೆದಿದೆ. ಇದರಿಂದ ಪ್ರಜ್ಞೆ ತಪ್ಪಿ ಮಾನ್ಯ ಸ್ವಿಮಿಂಗ್ ಫೂಲ್ ಒಳಗೆ ಬಿದ್ದಿದ್ದಾಳೆ. ಇದನ್ನು ಕಂಡ ಅಪಾರ್ಟ್ಮೆಂಟ್ ನಿವಾಸಿಗಳು ಮಾನ್ಯಳನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಮಾನ್ಯ ಮೃತಪಟ್ಟಿದ್ದಾಳೆ. ಪ್ರಕರಣ ಸಂಬಂಧ ಮೃತ ಮಾನ್ಯ ತಂದೆ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಬಾಲಕಿ ಮಾನ್ಯ ಸಾವಿಗೆ ಅಪಾರ್ಟ್ಮೆಂಟ್‌ನ ನಿರ್ವಹಣಾ ಸಿಬ್ಬಂದಿ ಬೇಜವಾಬ್ದಾರಿ ಕಾರಣವೆಂದು ನಿವಾಸಿಗಳು ಆರೋಪ ಮಾಡಿದ್ದಾರೆ. ನಿರ್ವಹಣಾ ಸಿಬ್ಬಂದಿ ವಿರುದ್ಧ ರಾತ್ರಿಯಿಡೀ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸಹ ನಮಗೆ ವಿದ್ಯುತ್ ಶಾಕ್ ಅನುಭವವಾಗಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರು ನಿರ್ವಹಣಾ ಸಿಬ್ಬಂದಿ ಕ್ರಮಕೈಗೊಂಡಿಲ್ಲ. ನಿರ್ವಹಣಾ ಸಿಬ್ಬಂದಿ ಸರಿಯಾದ ರೀತಿ ಕೆಲಸ ಮಾಡುತ್ತಿಲ್ಲ. ಆದರಿಂದಲೇ ಈ ಘಟನೆ ಸಂಭವಿಸಿದೆ ಎಂದು ನಿವಾಸಿಗಳು ಆರೋಪಿಸಿದರು. ಮಗು ಸ್ವಿಮಿಂಗ್ ಫೂಲ್ನಲ್ಲಿ ಮೃತಪಟ್ಟಿದೆ ಅಂತ ವಿಚಾರ ತಿಳಿದಿದೆ. ಮಗುವಿನ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತಿದ್ದಾರೆ. ತನಿಖೆ ಬಳಿಕ ಉತ್ತರ ತಿಳಿದು ಬರಲಿದೆ. ತನಿಖೆ ನಡೆಯುತ್ತಿರುವಾಗ ನಾವು ಏನು ಹೇಳಲು ಆಗುವುದಿಲ್ಲ. ಅವರು ಆರೋಪ ಮಾಡುತಿದ್ದಾರೆ ಸತ್ಯ ಏನು ಎಂಬುವುದು ತನಿಖೆ ನಂತರ ತಿಳಿಯುತ್ತೆ. ಮಗುವಿನ ಸಾವಿನ ಬಗ್ಗೆ ನಮಗೂ ಬೇಸರವಿದೆ ಎಂದು ಸೆಕ್ಯೂರಿಟಿ ಮ್ಯಾನೇಜರ್ ಹೇಳಿದರು.

Sulekha