ಕ್ಯಾಂಡಿ ಬೇಕು ಅಂತಾ ಹಠ ಹಿಡಿದಿದ್ದಕ್ಕೆ ಕೊಡಿಸಿದ ತಾಯಿ – ತಿಂದ ಕೆಲವೇ ಹೊತ್ತಲ್ಲಿ ಮೂಗಿಯಾದ್ಲು!

ಕ್ಯಾಂಡಿ ಬೇಕು ಅಂತಾ ಹಠ ಹಿಡಿದಿದ್ದಕ್ಕೆ ಕೊಡಿಸಿದ ತಾಯಿ – ತಿಂದ ಕೆಲವೇ ಹೊತ್ತಲ್ಲಿ ಮೂಗಿಯಾದ್ಲು!

ಈಗಿನ ಮಕ್ಕಳಿಗೆ ಕಣ್ಣಿಗೆ ಕಂಡಿದ್ದೆಲ್ಲಾ ಬೇಕು.. ಹೆತ್ತವರು ಕೂಡ ಮಕ್ಕಳ ಹಠ ಮಾಡುವುದನ್ನು ಒಮ್ಮೆ ನಿಲ್ಲಿಸಲಿ ಅಂತಾ ಅವರು ಕೇಳಿದ್ದನ್ನೆಲ್ಲಾ ಕೊಡಿಸುತ್ತಾರೆ. ಕೆಲವರಂತೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತೆ ಅಂತಾನೂ ಒಂಚೂರು ಯೋಚನೆ ಮಾಡುವುದಿಲ್ಲ. ಇಲ್ಲೂ ಕೂಡ ಇದೇ ಆಗಿದೆ. ಮಗಳು ಹಠ ಮಾಡಿದ್ಲು ಅಂತಾ ತಾಯಿ ಡೇಂಜರ್‌ ಕ್ಯಾಂಡಿ ಕೊಡಿಸಿದ್ದಾಳೆ. ಇದೀಗ ಆ ಒಂದು ಸ್ವೀಟ್ಸ್‌ನಿಂದ ಪುಟ್ಟ ಬಾಲಕಿ ಜೀವನ ಪರ್ಯಂತ ಮೂಗಿಯಾಗಿದ್ದಾಳೆ.

ಇದನ್ನೂ ಓದಿ: ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ – ಗೆಲ್ಲಲೇ ಬೇಕಾದ ಅನಿವಾರ್ತೆಯಲ್ಲಿ ಗುಜರಾತ್ ಟೈಟಾನ್ಸ್

ಅಚ್ಚರಿಯಾದ್ರೂ ಸತ್ಯ. ಈ ಘಟನೆ ಯುಕೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಮಿಯಾ-ರೋಸ್ ಬೋಯರ್(10) ಎಂಬ ಬಾಲಕಿ, ತನ್ನ ಕುಟುಂಬದೊಂದಿದೆ. ಸಿನಿಮಾ ನೋಡಲು ಹೋಗಿದ್ದಳು. ಸಿನಿಮಾ ನೋಡಿ ಹೊರ ಬರುತ್ತಿದ್ದಂತೆ ಹಠ ಮಾಡಿ ಕ್ಯಾಂಡಿ ಒಂದನ್ನು ಖರೀದಿಸಿ ತಿಂದಿದ್ದಾಳೆ. ತಿಂದ ಕೆಲ ಹೊತ್ತಿನಲ್ಲೇ ಆರೋಗ್ಯದಲ್ಲಿ ಏರು ಪೇರಾಗಿದ್ದು, ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಚಿಕಿತ್ಸೆ ನೀಡಿದ ವೈದ್ಯರು ಬಾಲಕಿ ಶಾಶ್ವತವಾಗಿ ಧ್ವನಿ ಕಳೆದುಕೊಂಡು ಮೂಕಿಯಾಗಿದ್ದಾಳೆ ಎಂದು ತಿಳಿಸಿದ್ದಾರೆ

ಬಾಲಕಿ  ‘ಬ್ಲ್ಯಾಕ್ ಡೆತ್’ ಸ್ವೀಟ್ ಎನ್ನುವ ಈ ಸಿಹಿಯನ್ನು ತಿಂದಿದ್ದಾಳೆ. ಈ ಸ್ವೀಟ್ಸ್‌ ತುಂಬಾ ಹುಳಿಯಾಗಿದ್ದರಿಂದ ಉಗುಳಲು ಯತ್ನಿಸಿದ್ದು, ತಪ್ಪಾಗಿ ನುಂಗಿ ಬಿಟ್ಟಿದ್ದಾಳೆ. ಅದು ನೇರವಾಗಿ ಗಂಟಲಿನ ಕೆಳಗೆ ಸಿಲುಕಿಕೊಂಡಿದ್ದು, ಆರೋಗ್ಯದಲ್ಲಿ ಏರುಪೇರಾಗಿದೆ. ಈ ಸಿಹಿಯನ್ನು ‘ಬ್ಲ್ಯಾಕ್ ಡೆತ್’ ಎನ್ನುವ ಕರೆಯಲು ಸಾಕಷ್ಟು ಕಾರಣವಿದೆ. ಇದನ್ನು ಬಹಳ ಎಚ್ಚರಿಕೆಯಿಂದ ತಿನ್ನಬೇಕು. ಏಕೆಂದರೆ ಇದು ಕೆಲವೊಮ್ಮೆ ಮನುಷ್ಯರಿಗೆ ಅಪಾಯಕಾರಿಯಾಗಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.

LadBible ವೆಬ್‌ಸೈಟ್‌ನ ವರದಿಯ ಪ್ರಕಾರ, ಮಿಯಾ ತುಟಿಗಳು ನೀಲಿ ಬಣ್ಣಕ್ಕೆ ತಿರುಗಿದವು. ಸುಮಾರು ಎರಡು ನಿಮಿಷಗಳ ನಂತರ, ಗಂಟಲಿನಲ್ಲಿ ಸಿಲುಕಿಕೊಂಡಿದ್ದ ಸಿಹಿತಿಂಡಿಗಳನ್ನು ತೆಗೆದುಹಾಕಲಾಯಿತು, ಆದರೆ ಹುಡುಗಿ ಸರಿಯಾಗಿ ಉಸಿರಾಡಲು ಸಾಧ್ಯವಾಗಲಿಲ್ಲ ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಕ್ಷಣ ವೈದ್ಯರು ಆಮ್ಲಜನಕ, ಸ್ಟೆರಾಯ್ಡ್ ಮತ್ತು ಆ್ಯಂಟಿಬಯೋಟಿಕ್‌ಗಳನ್ನು ನೀಡಿದ್ದು, ಇದರಿಂದ ಉಸಿರಾಟದ ತೊಂದರೆ ಕಡಿಮೆಯಾಗಿದೆ. ಬಾಲಕಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದ್ದು,ಬ್ಲಾಕ್ ಡೆತ್ ತಿಂದು ಮಗಳ ಧ್ವನಿ ಶಾಶ್ವತವಾಗಿ ಕಳೆದುಕೊಂಡಿದ್ದಾಳೆ ಎಂದು ಆಕೆಯ ತಾಯಿ ಕಳವಳ ವ್ಯಕ್ತಪಡಿಸಿದ್ದಾರೆ.

‘ವಿಶ್ವದ ಹುಳಿ ಕ್ಯಾಂಡಿ ಎಂದು ಕರೆಯಲ್ಪಡುವ ಬ್ಲಾಕ್ ಡೆತ್ ಸ್ವೀಟ್ ನಿಂಬೆಯಂತೆ ಅತ್ಯಂತ ಹುಳಿಯಾಗಿದೆ. ಇದು ತಾತ್ಕಾಲಿಕ ಬಾಯಿ ಮತ್ತು ಹೊಟ್ಟೆಯ ಕಿರಿಕಿರಿಯನ್ನು ಉಂಟುಮಾಡುತ್ತದೆ. ಅದನ್ನು ಮಾರಾಟ ಮಾಡುವ ಮುನ್ನ ಕೆಲವು ಷರತ್ತುಗಳನ್ನೂ ವಿಧಿಸಲಾಗಿದೆ. ಎಂಟು ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಅದೇ ರೀತಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮಾತ್ರ ಈ ಸ್ವೀಟ್‌ ಸೇವಿಸಬಹುದು.  ಹೀಗಾಗಿಯೇ ಇದನ್ನು ಬಹಳ ಎಚ್ಚರಿಕೆ ವಹಿಸಿ ಮಾರಾಟ ಮಾಡಲಾಗುತ್ತದೆ.

Shwetha M

Leave a Reply

Your email address will not be published. Required fields are marked *