ಜೋಕಾಲಿ ಆಡುವಾಗ ಕುತ್ತಿಗೆಗೆ ಸುತ್ತಿಕೊಳ್ತು ಹಗ್ಗ – 6 ವರ್ಷದ ಬಾಲಕಿ ದುರಂತ ಸಾವು

ಜೋಕಾಲಿ ಆಡುವಾಗ ಕುತ್ತಿಗೆಗೆ ಸುತ್ತಿಕೊಳ್ತು ಹಗ್ಗ – 6 ವರ್ಷದ ಬಾಲಕಿ ದುರಂತ ಸಾವು

ಮಕ್ಕಳ ಬಗ್ಗೆ ಎಷ್ಟೇ ಎಚ್ಚರಿಕೆ ವಹಿಸಿದ್ರೂ ಸಾಕಾಗೋದಿಲ್ಲ. ಆಟ ಆಡಲಿ, ಊಟ ಮಾಡಲಿ, ಅಷ್ಟೇ ಯಾಕೆ ನಿದ್ದೆ ಮಾಡುತ್ತಿದ್ದರೂ ಅವರ ಮೇಲೆ ಪೋಷಕರು ಕಣ್ಣಿಟ್ಟಿರಬೇಕು. ಇಲ್ಲದಿದ್ದರೆ ಯಾವ ಸಂದರ್ಭದಲ್ಲಿ ಏನು ಅನಾಹುತ ಆಗುತ್ತದೆಯೋ ಹೇಳೋಕೆ ಆಗಲ್ಲ. ಯಾಕಂದರೆ ಜೋಕಾಲಿ ಆಡುತ್ತಿದ್ದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.

ಇದನ್ನೂ ಓದಿ : ಉದ್ಯಮಿಯನ್ನು ಬುಟ್ಟಿಗೆ ಬೀಳಿಸಲು ಹೆಂಡ್ತಿಯನ್ನೇ ಛೂ ಬಿಟ್ಟಿದ್ದ ಪಾಪಿ – ಹನಿಟ್ರ್ಯಾಪ್ ಮಾಡಿ ಹಣ ಪೀಕಲು ದಂಪತಿಯ ಖತರ್ನಾಕ್ ಪ್ಲ್ಯಾನ್

ಜೋಕಾಲಿ ಅಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ಮಕ್ಕಳಿಗೆ ಅಚ್ಚುಮೆಚ್ಚ್. ಹೀಗೆಯೇ ಕೇರಳದ ಮಳಪ್ಪುರಂ ಜಿಲ್ಲೆಯ ಕುಟ್ಟಿಪ್ಪುರಂನಲ್ಲಿ ಸಹ 6 ವರ್ಷದ ಬಾಲಕಿ ಹಯಾ ಫಾಥಿಮಾ (Haya Fathima) ಜೋಕಾಲಿ ಆಡುತ್ತಿದ್ದಳು. ಬೆಳಗ್ಗೆ ಶಾಲೆಗೆ ಹೋಗಿದ್ದ ಮಗು, ಮನೆಗೆ ಬಂದ ಮೇಲೆ ಜೋಕಾಲಿ ಆಡುತ್ತಿದ್ದಳು. ಆದರೆ ಇಲ್ಲೇ ನೋಡಿ ಆಗಿದ್ದು ಎಡವಟ್ಟು. ಯಾಕಂದ್ರೆ ಜೋಕಾಲಿ ಆಡುವಾಗ ಕೆಲವರು ಹಿಂದಕ್ಕೆ ಮುಂದಕ್ಕೆ ಉಯ್ಯಾಲೆ ಆಡುತ್ತಾರೆ. ಇನ್ನೂ ಕೆಲವರು ಕುಂತಲ್ಲೇ ರೌಂಡ್ ಹೊಡೆಯುತ್ತಾರೆ. ಅಂದ್ರೆ ಸುರುಳಿ ಆಕಾರದಲ್ಲಿ ಕುಂತಲ್ಲೇ ಸುತ್ತುತ್ತಾರೆ. ಇಂಥ ಟೈಮಲ್ಲಿ ಹಗ್ಗವೂ ಸಹ ಸುತ್ತಿಕೊಂಡು ಸುತ್ತಿಕೊಂಡು ಬಳಿಕ ಅದು ಕುತ್ತಿಗೆಗೆ ಸಿಲುಕಿಕೊಂಡಿದೆ. ಇದ್ರಿಂದ ಬಾಲಕಿಗೆ ಉಸಿರು ಕಟ್ಟಿದೆ.

ಹಗ್ಗ ಕುತ್ತಿಗೆಗೆ ಬಿಗಿದಿದ್ದರಿಂದ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಪೋಷಕರು ಬಂದು ನೋಡುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಳು. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಬಾಲಕಿ ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಸಿಲುಕಿ ಸಾವನ್ನಪ್ಪಿರುವ ಬಗ್ಗೆ ಶಂಕೆ ಇದೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆಕೆಯನ್ನು ಬದುಕಿಸಿಕೊಳ್ಳಲು ಆಗಲಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Shantha Kumari