ಕಂದು ಬಣ್ಣದ ಮರಿಗೆ ಜನ್ಮ ನೀಡಿದ ಜಿರಾಫೆ! –  ಅಪರೂಪದಲ್ಲಿ ಅಪರೂಪ ಎಂದ ಮೃಗಾಲಯದ ಸಿಬ್ಬಂದಿ

ಕಂದು ಬಣ್ಣದ ಮರಿಗೆ ಜನ್ಮ ನೀಡಿದ ಜಿರಾಫೆ! –  ಅಪರೂಪದಲ್ಲಿ ಅಪರೂಪ ಎಂದ ಮೃಗಾಲಯದ ಸಿಬ್ಬಂದಿ

ಜಿರಾಫೆ ಅಂದ್ರೆ ನಮಗೆ ನಿಮಗೆಲ್ಲ ಅದರ ಉದ್ದನೆಯ ಕತ್ತು, ಎತ್ತರದ ದೇಹ, ಪಟ್ಟೆ ಪಟ್ಟೆ ಇರುವ ಮೈಚರ್ಮ ನೆನಪಾಗುತ್ತದೆ. ಇದು ಭೂಮಿಯ ಮೇಲೆ ವಾಸಿಸುವ ಎಲ್ಲಾ ಪ್ರಾಣಿಗಳಿಂತಲೂ ಅತ್ಯಂತ ಎತ್ತರದ ಪ್ರಾಣಿ ಅನ್ನೋದು ಗೊತ್ತಿದೆ. ಆದ್ರೆ ಅಮೆರಿಕದ ಬ್ರೈಟ್ ಝೂನಲ್ಲಿ ಜಿರಾಫೆಯೊಂದು ಅಪರೂಪದ ಮರಿಗೆ ಜನ್ಮ ನೀಡಿದೆ. ಈ ಜಿರಾಫೆ ಮರಿಯ ಒಂದೇ ಬಣ್ಣದಿಂದ ಕೂಡಿದೆ!

ಇದನ್ನೂ ಓದಿ: ಮರಿಯ ಕುತ್ತಿಗೆ ಹಿಡಿದಿತ್ತು ಸಿಂಹ – ಕಂದನನ್ನು ಕಾಪಾಡಿದ್ದೇಗೆ ಗೊತ್ತಾ ಜಿರಾಫೆ?

ಸಾಮಾನ್ಯವಾಗಿ ಜಿರಾಫೆಯ ಬಣ್ಣ ಕಂದು ಮತ್ತು ಬಿಳಿ ಬಣ್ಣದಿಂದ ಕೂಡಿರುತ್ತದೆ. ಆದರೆ ಅಮೆರಿಕದ ಬ್ರೈಟ್ ಝೂನಲ್ಲಿ ಜನಿಸಿದ ಹೆಣ್ಣು ಜಿರಾಫೆ ಮರಿ ಕೇವಲ ಕಂದು ಬಣ್ಣದಲ್ಲಿ ಮಾತ್ರ ಜನಿಸಿದೆ. ಈ ಮರಿ ಜಿರಾಫೆಯ ಮೇಲೆ ಪ್ಯಾಚ್ ರೀತಿಯ ಅಂದ್ರೆ ಬಿಳಿ ಬಣ್ಣದ ಗೆರೆಗಳಿಲ್ಲ. ಜುಲೈ 31 ರಂದು ಜನಿಸಿರುವ ಈ ಮರಿ ಜಿರಾಫೆ ಪ್ರಸ್ತುತ ಆರು ಅಡಿ ಎತ್ತರವಾಗಿದೆ. ಹಾಗೇ ಆರೋಗ್ಯವಾಗಿ ಕೂಡ ಇದೆ. ಇದು ಅಪರೂಪದಲ್ಲೇ ಅಪರೂಪದ ಮರಿ ಎಂದು ವನ್ಯಜೀವಿತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಈ ಅಪರೂಪದ ಜಿರಾಫೆಯನ್ನ ನೋಡಲು ಪ್ರವಾಸಿಗರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಭೇಟಿ ನೀಡ್ತಿದ್ದಾರೆ ಎನ್ನಲಾಗಿದೆ.

ಜಿರಾಫೆ ಕನ್ಸರ್ವೇಶನ್ ಫೌಂಡೇಶನ್ (GCF) ಪ್ರಕಾರ, ಈ ಜಿರಾಫೆಯು ನಾಲ್ಕು ವಿಶಿಷ್ಟ ಜಾತಿಗಳಲ್ಲಿ ಒಂದಾಗಿದೆ. ಇದನ್ನು ರಕ್ಷಿಸುವ ಗುರಿಯನ್ನು ಸಂಸ್ಥೆಯು ಹೊಂದಿದೆ. 2018ರಲ್ಲಿ ಇಂಟರ್​ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಈ ಮರಿಯನ್ನು ಅಳಿವಿನಂಚಿನಲ್ಲಿರುವ ತಳಿ ಎಂದು ಗುರುತಿಸಿದೆ. ಕಳೆದ ಮೂರು ದಶಕಗಳಲ್ಲಿ ಶೇ 40 ಜಿರಾಫೆಗಳು ಕಾಡಿನಲ್ಲಿ ಕಾಣೆಯಾಗಿವೆ. ಹಾಗಾಗಿ ಜಿರಾಫೆಗಳನ್ನು ರಕ್ಷಿಸುವ ತುರ್ತು ಇದೆ’ ಎಂದು ಮೃಗಾಲಯದ ಸಂಸ್ಥಾಪಕ ಟೋನಿ ಬ್ರೈಟ್​ ಹೇಳಿದ್ದಾರೆ.

ಬ್ರೈಟ್ಸ್ ಮೃಗಾಲಯವು ಜಿರಾಫೆಗೆ ಮುದ್ದಾದ ಹೆಸರನ್ನು ಹುಡುಕುತ್ತಿದೆ. ತನ್ನ ಫೇಸ್​ಬುಕ್​ ಪುಟದಲ್ಲಿ ಹೆಸರುಗಳನ್ನು ಸೂಚಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.

suddiyaana