2 ವರ್ಷಗಳಲ್ಲಿ 240 ಸಿಂಹಗಳು ಸಾವು – ಗಿರ್ ಅರಣ್ಯದಲ್ಲಿ ಮೃಗರಾಜನ ಜೀವಕ್ಕೆ ಕಂಟಕ ಬಂದಿದ್ದು ಹೇಗೆ?

2 ವರ್ಷಗಳಲ್ಲಿ 240 ಸಿಂಹಗಳು ಸಾವು – ಗಿರ್ ಅರಣ್ಯದಲ್ಲಿ ಮೃಗರಾಜನ ಜೀವಕ್ಕೆ ಕಂಟಕ ಬಂದಿದ್ದು ಹೇಗೆ?

ಗುಜರಾತ್​ನ ಗಿರ್ ರಾಷ್ಟ್ರೀಯ ಅರಣ್ಯ ಏಷ್ಯಾ ಸಿಂಹಗಳ ಪಾಲಿನ ಏಕೈಕ ತವರೂರು. ಆದ್ರೆ, ಕಳೆದ ಎರಡು ವರ್ಷಗಳಲ್ಲಿ ಗಿರ್​ ಅರಣ್ಯದಲ್ಲಿ 240 ಸಿಂಹಗಳು ಸಾವನ್ನಪ್ಪಿವೆ. ಅಂದರೆ, ಗಿರ್​ನಲ್ಲಿರುವ ಶೇಕಡಾ 36ರಷ್ಟು ಸಿಂಹಗಳು ಮೃತಪಟ್ಟಿವೆ. ಗುಜರಾತ್​​ನಲ್ಲಿ ಸದ್ಯ 650ಕ್ಕೂ ಅಧಿಕ ಸಿಂಹಗಳಿವೆ. ಏಷ್ಯಾದಲ್ಲಿ ಅತೀ ಹೆಚ್ಚು ಸಿಂಹಗಳನ್ನ ಹೊಂದಿರುವ ರಾಷ್ಟ್ರ ಅಂದ್ರೆ ಅದು ಭಾರತ ಮಾತ್ರ. ಅದ್ರಲ್ಲೂ ಗುಜರಾತ್​​ನಲ್ಲಿ ಮಾತ್ರ ಏಷ್ಯಾ ತಳಿಯ ಸಿಂಹಗಳು ವಾಸಿಸುತ್ತಿವೆ. ಇನ್ನು ಸಿಂಹಗಳ ಸಾವಿಗೆ ನಿಖರ ಕಾರಣ ಏನು ಅನ್ನೋದು ಇನ್ನೂ ಕೂಡ ತಿಳಿದು ಬಂದಿಲ್ಲ. ಕೇವಲ ಸಿಂಹಗಳಷ್ಟೇ ಅಲ್ಲ, ಕಳೆದ 2 ವರ್ಷಗಳಲ್ಲಿ ಗುಜರಾತ್​​ನಲ್ಲಿ 370 ಚಿರತೆಗಳು ಕೂಡ ಸಾವನ್ನಪ್ಪಿದ್ದು, ತೀವ್ರ ಕಳವಳಕಾರಿ ಬೆಳವಣಿಗೆ.

ಇದನ್ನೂ ಓದಿ:  6 ವರ್ಷದ ಬಾಲಕಿ ಮೇಲೆ ಪಿಟ್ ಬುಲ್ ದಾಳಿ – ಮುಖದ ಮೇಲೆ 1,000 ಹೊಲಿಗೆ!

ಪ್ರಾಣಿಗಳ ಸಂರಕ್ಷಣೆಯಲ್ಲಿ ಗುಜರಾತ್​ ಮಾಡೆಲ್ ಸಂಪೂರ್ಣ ಫೇಲ್ ಆಗಿದೆ ಅನ್ನೋದು ಇಲ್ಲೇ ಸಾಬೀತಾಗಿದೆ. ಕೇವಲ ಅಭಿವೃದ್ಧಿ ಕೆಲಸಗಳಿಗಷ್ಟೇ ಅಲ್ಲ, ಪ್ರಾಕೃತಿಕ ಸಂಪತ್ತು ಉಳಿಸುವಲ್ಲಿಯೂ ಒಂದು ಮಾದರಿ ಮಾಡೆಲ್ ಜಾರಿಗೊಳಿಸಬೇಕಾದ ಅನಿವಾರ್ಯತೆ ಇದೆ. ಅಂಕಿ ಅಂಶಗಳ ಪ್ರಕಾರ, 2021ರಲ್ಲಿ 124 ಸಿಂಹಗಳು ಮೃತಪಟ್ಟಿದ್ದು, 2022ರಲ್ಲಿ 116 ಸಿಂಹಗಳು ಮೃತಪಟ್ಟಿದ್ದವು. ಅವುಗಳಲ್ಲಿ ಒಟ್ಟು 214 ಸಿಂಹಗಳು ಸ್ವಾಭಾವಿಕ ಕಾರಣಗಳಿಂದ ಪ್ರಾಣ ಕಳೆದುಕೊಂಡಿದ್ದರೆ, 26 ಸಿಂಹಗಳು ಅಸ್ವಾಭಾವಿಕವಾಗಿ ಸಾವನ್ನಪ್ಪಿವೆ. ಸಿಂಹಗಳ ಅಸ್ವಾಭಾವಿಕ ಕಾರಣಗಳಿಂದ ಮೃತಪಡುತ್ತಿರುವುದು ಗುಜರಾತ್ ಸರ್ಕಾರಕ್ಕೂ ಸವಾಲಾಗಿದೆ. ಹೀಗಾಗಿ ಸರ್ಕಾರ ಸಿಂಹಗಳ ಅಸ್ವಾಭಾವಿಕ ಮರಣವನ್ನು ತಡೆಗಟ್ಟಲು ಹೆಚ್ಚಿನ ಸಂಖ್ಯೆಯಲ್ಲಿ ಪಶುವೈದ್ಯರನ್ನು ನೇಮಿಸಿದೆ. ಜೊತೆಗೆ ಅಂಬ್ಯುಲೆನ್ಸ್ ಸೌಲಭ್ಯವನ್ನು ಹೆಚ್ಚಿಸುವ ಸಲುವಾಗಿಯೂ ಕ್ರಮ ಕೈಗೊಂಡಿದೆ.

suddiyaana