ಈ ಮೆಟ್ರೋ ನಿಲ್ದಾಣದಲ್ಲಿ ಬೆಕ್ಕೇ ಸ್ಟೇಷನ್ ಮಾಸ್ಟರ್! – ಮಿಯಾಂವ್ ಮಿಕಾನ್ ಬಗ್ಗೆ ಗೊತ್ತಾ?

ಈ ಮೆಟ್ರೋ ನಿಲ್ದಾಣದಲ್ಲಿ ಬೆಕ್ಕೇ ಸ್ಟೇಷನ್ ಮಾಸ್ಟರ್! – ಮಿಯಾಂವ್ ಮಿಕಾನ್ ಬಗ್ಗೆ ಗೊತ್ತಾ?

ಸೇನೆಗಳಲ್ಲಿ, ಪೊಲೀಸ್‌ ಇಲಾಖೆಯಲ್ಲಿ ಶ್ವಾನಗಳು ಸೇವೆ ಸಲ್ಲಿಸುತ್ತಿರುವುದನ್ನು ನಾವು ಕೇಳಿದ್ದೇವೆ. ಸೇನೆಯಲ್ಲಿ ಕಾರ್ಯ ನಿರ್ವಹಿಸಲು ಅವುಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಇನ್ನೂ ಮನೆಯಲ್ಲಿ ಇಲಿಗಳ ಉಪಟಳ ಜಾಸ್ತಿ ಇದ್ರೆ ಕೆಲವರು ತಮ್ಮ ಮನೆಗಳಲ್ಲಿ ಬೆಕ್ಕುಗಳನ್ನು ಸಾಕುವುದನ್ನು ನೋಡಿರುತ್ತೇವೆ. ಎಂದಾದರರೂ ಬೆಕ್ಕುಗಳನ್ನು ಕೆಲಸಕ್ಕೆ ನಿಯೋಜಿಸಿದ್ದನ್ನು ಕೇಳಿದ್ದೀರಾ? ಇದೀಗ ಬೆಕ್ಕೊಂದನ್ನು ಮೆಟ್ರೋದಲ್ಲಿ ಸ್ಟೇಷನ್ ಮಾಸ್ಟರ್ ಮಾಡಲಾಗಿದೆ.

ಹೌದು, ತೈವಾನ್ ನಲ್ಲಿ  ಮಿಕಾನ್ ಎಂಬ ಬೆಕ್ಕನ್ನು ಮೆಟ್ರೋ ಸ್ಟೇಷನ್ ಮಾಸ್ಟರ್ ಮಾಡಲಾಗಿದೆ. ಈ ಬೆಕ್ಕು ಸೋಶಿಯಲ್ ಮೀಡಿಯಾದಲ್ಲಿ 59 ಸಾವಿರಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದು, ಸೆಲೆಬ್ರಿಟಿಯಾಗಿ ಗುರುತಿಸಿಕೊಂಡಿದೆ. ಹೀಗಾಗಿ ಬೆಕ್ಕಿಗೆ ಗೌರವ ಸೂಚಿಸಲೆಂದು ಸ್ಟೇಷನ್ ಮಾಸ್ಟರ್ ಪಟ್ಟ ಕಟ್ಟಲಾಗಿದೆ. ಇದು ಪ್ರಾಣಿಪ್ರಿಯರ ಸಂತಸವನ್ನು ಇಮ್ಮಡಿಗೊಳಿಸಿದೆ.

ಇದನ್ನೂ ಓದಿ: ಅಯ್ಯಯ್ಯೋ ಹೆಂಗಪ್ಪಾ ಬಿಡಿಸಿಕೊಳ್ಳೋದು – ಏಡಿ ಜೊತೆ ಆಡಲು ಹೋದವನ ಮೂಗಿಗೆ ಆಪತ್ತು!

ತೈವಾನ್ ನ್ಯೂಸ್ ವೆಬ್‌ಸೈಟ್ ಪ್ರಕಾರ,  ತೈವಾನ್‌ನ ಕಾಹ್ಸಿಯುಂಗ್‌ ಮಾಸ್ ರಾಪಿಡ್ ಟ್ರಾನ್ಸಿಟ್, 37 ನಿಲ್ದಾಣಗಳೊಂದಿಗೆ ಕಾಹ್ಸಿಯುಂಗ್‌ನ ಮೆಟ್ರೋಪಾಲಿಟನ್ ಪ್ರದೇಶವನ್ನು ಒಳಗೊಳ್ಳುವ ಮೆಟ್ರೋ ನೆಟ್‌ವರ್ಕ್ ಆಗಿದ್ದು, ಏಪ್ರಿಲ್ 4 ರಂದು ಇದು ತನ್ನ 15 ನೇ ವಾರ್ಷಿಕೋತ್ಸವವನ್ನು ಆಚರಿಸಿದೆ. ಮೆಟ್ರೋ ಮಾರ್ಗದ ಈ 15 ನೇ ವಾರ್ಷಿಕೋತ್ಸವ ದಿನದಂದೇ ಅಲ್ಲಿ ಮಕ್ಕಳ ದಿನಾಚರಣೆ ಬಂದಿದ್ದು, ಆ ಸಂದರ್ಭವನ್ನು ವಿಶೇಷವಾಗಿ ಗುರುತಿಸಲು ಮಿಕಾನ್ ಎಂಬ ಬೆಕ್ಕಿಗೆ ಸ್ಟೇಷನ್ ಮಾಸ್ಟರ್  ಹುದ್ದೆ ನೀಡಿ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಮತ್ತೊಂದು ಗಮನಾರ್ಹ ಅಂಶವೆಂದರೆ ಈ ಮಿಕಾನ್ ಹೆಸರಿನ ಈ ಬೆಕ್ಕು, ಮೆಟ್ರೋ ನಿಲ್ದಾಣದ ಪ್ರದೇಶದಲ್ಲಿ ಬಹಳ ಸಮಯದಿಂದ ಸುತ್ತಾಡುತ್ತಿರುತ್ತಿದ್ದು, ಇಲ್ಲಿನ ಪ್ರಯಾಣಿಕರಿಗೆ ಹಾಗೂ ರೈಲ್ವೆ ಅಧಿಕಾರಿಗಳಿಗೆ ಚಿರಪರಿಚಿತವಾಗಿದೆ.  ಜೊತೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಈ ಬೆಕ್ಕು ಹವಾ ಸೃಷ್ಟಿಸಿದೆ.

ಇನ್ ಸ್ಟಾಗ್ರಾಂ ನಲ್ಲಿ krtcmikan ಅಂತಾ ಪೇಜ್ ಮಾಡಿದ್ದು, ಮಿಕಾನ್ ನ  ದಿನ ನಿತ್ಯದ ಹಲವು ಚಟುವಟಿಕೆಗಳ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡಲಾಗುತ್ತಿರುತ್ತದೆ. ಮಿಕಾನ್ ಅನ್ನು ಹೆಚ್ಚಾಗಿ ಸಿಯಾಟೌ ಶುಗರ್ ರಿಫೈನರಿ ಮೆಟ್ರೋ ನಿಲ್ದಾಣದಲ್ಲಿ ಕಾಣಸಿಗುತ್ತದೆ. ಇತ್ತ ಬೆಕ್ಕನ್ನು ಸ್ಟೇಷನ್‌ ಮಾಸ್ಟರ್ ಮಾಡಿರುವುದಕ್ಕೆ ಪ್ರಾಣಿ ಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.   ಅನೇಕರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಸ್ಟೇಷನ್ ಮಾಸ್ಟರ್ ಆದ ಬಳಿಕ ಈ ಬೆಕ್ಕಿಗೆ  ಆರಾಮದಾಯಕವಾಗಿ ಬದುಕುವಷ್ಟು ವೇತನ ಪೂರೈಸಲಾಗುತ್ತದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ.  ಮತ್ತೆ ಕೆಲವರು ಈ ಬೆಕ್ಕನ್ನು ನೋಡಿದರೆ ಬೆಕ್ಕು ತನ್ನ ರೆಸ್ಯೂಮ್  (CV) ನಲ್ಲಿ ಸುಳ್ಳು ಹೇಳಿದಂತೆ ಕಾಣುತ್ತಿದೆ ಎಂದು ಅಂತಾ ಮಾಡಿದ್ದಾರೆ.

ರೈಲು ನಿಲ್ದಾಣದಲ್ಲಿ ಬೆಕ್ಕು ಉದ್ಯೋಗಕ್ಕೆ ಸೇರಿದಂತಹ  ಪ್ರಕರಣ ಇದೇ ಮೊದಲೇನಲ್ಲ. 2021ರಲ್ಲಿ 6 ವರ್ಷದ  ಮುದ್ದಾದ ಮೊಗ್ಗಿ ಹೆಸರಿನ ಬೆಕ್ಕನ್ನು  ವೆಸ್ಟ್ ಮಿಡ್‌ಲ್ಯಾಂಡ್ಸ್‌ನಲ್ಲಿರುವ ಸ್ಟೋರ್‌ಬ್ರಿಡ್ಜ್ ಜಂಕ್ಷನ್ ರೈಲು ನಿಲ್ದಾಣದಲ್ಲಿ ಇಲಿಗಳನ್ನು ಹಿಡಿಯುವುದಕ್ಕಾಗಿ ಮೌಸ್ ಕ್ಯಾಚರ್ ಹುದ್ದೆ ನೀಡಿ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಅದಕ್ಕೂ ಮೊದಲು, ಜಪಾನ್‌ನ ವಕಯಾಮಾ ಪ್ರಿಫೆಕ್ಚರ್‌ನ ಕಿನೋಕಾವಾದಲ್ಲಿನ ಕಿಶಿಗಾವಾ ಲೈನ್‌ನಲ್ಲಿರುವ ಕಿಶಿ ನಿಲ್ದಾಣದಲ್ಲಿ ಸ್ಟೇಷನ್ ಮಾಸ್ಟರ್ ಮತ್ತು ಆಪರೇಟಿಂಗ್ ಆಫೀಸರ್ ಆಗಿ ಕೆಲಸ ಮಾಡಿ ಹೆಣ್ಣು ಬೆಕ್ಕು  ಕ್ಯಾಲಿಕೋ ಬೆಕ್ಕು ಖ್ಯಾತಿ ಗಳಿಸಿತ್ತು.

suddiyaana