ಗಿಲ್ ಶತಕವನ್ನು ಕಣ್ತುಂಬಿಕೊಂಡರೂ ತಂದೆಗೆ ಅಸಮಾಧಾನ – ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮೇಲೆ ಬೇಜಾರು

ಗಿಲ್ ಶತಕವನ್ನು ಕಣ್ತುಂಬಿಕೊಂಡರೂ ತಂದೆಗೆ ಅಸಮಾಧಾನ – ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮೇಲೆ ಬೇಜಾರು

ಶುಬ್ಮನ್ ಗಿಲ್ ತಂದೆ ಲಖ್ವಿಂದರ್ ಸಿಂಗ್ ಅವರು ಐದನೇ ಟೆಸ್ಟ್​​ ಪಂದ್ಯದಲ್ಲಿ ಮಗನ ಆಟವನ್ನು ಕಣ್ತುಂಬಿಕೊಂಡರು. ಸೆಂಚೂರಿ ಸ್ಟಾರ್ ಶುಬ್ಮನ್ ಗಿಲ್ ಮೊದಲ ಕೋಚ್ ಅವರ ತಂದೆಯೇ ಆಗಿದ್ದರು. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ 2ನೇ ಶತಕ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಾರೆ 4ನೇ ಶತಕ ಪೂರ್ಣಗೊಳಿಸಿದ ತನ್ನ ಮಗನ ಸಾಧನೆಗೆ ತುಂಬಾ ಖುಷಿಪಟ್ಟಿರುವ ತಂದೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಇದರ ಮಧ್ಯೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​ ಗೆ ಕೆಲವೊಂದು ಸಲಹೆ ಕೂಡಾ ನೀಡಿದ್ದಾರೆ.

ಇದನ್ನೂ ಓದಿ: ಎರಡನೇ ದಿನದಾಟದಲ್ಲಿ ಆಂಗ್ಲರು ಶೇಪ್ಔಟ್ – ಅಭಿಮಾನಿಗಳ ಮನಗೆದ್ದ ಕನ್ನಡಿಗ ಪಡಿಕ್ಕಲ್

ಧರ್ಮಶಾಲಾದಲ್ಲಿ ಮ್ಯಾಚ್​ ನೋಡೋಕೆ ಗಿಲ್ ತಂದೆ ಲಖ್ವಿಂದರ್ ಕೂಡ ಸ್ಟೇಡಿಯಂಗೆ ಆಗಮಿಸಿದ್ದರು. ಮಗನ ಸೆಂಚೂರಿ ನೋಡಿ ಎಂಜಾಯ್ ಕೂಡಾ ಮಾಡಿದ್ದರು. ಆದರೆ, ಶುಬ್ಮನ್ ಗಿಲ್ ಬ್ಯಾಟಿಂಗ್ ಆರ್ಡರ್ ಬಗ್ಗೆ ಲಖ್ವಿಂದರ್​ ತುಂಬಾನೇ ಅಸಮಾಧಾನ ವ್ಯಕ್ತಪಡಿಸಿದರು.

ಶುಬ್ಮನ್ ಗಿಲ್ ತಂದೆ ಲಖ್ವಿಂದರ್ ಅವರ ಪ್ರಕಾರ ಶುಬ್ಮನ್ ಗಿಲ್​ ಓಪನಿಂಗ್​ ಬ್ಯಾಟ್ಸ್​ಮನ್​​ ಆಗಿಯೇ ಕ್ರೀಸ್​ಗಿಳಿಬೇಕು. 3ನೇ ಆರ್ಡರ್​​ ಗಿಲ್​ಗೆ ಫಿಟ್ ಆಗೋದಿಲ್ವಂತೆ. ಟೀನೇಜ್‌ನಿಂದಲೂ ಅಂದರೆ, ಅಂಡರ್​-16, ಅಂಡರ್​-19ನಲ್ಲಿ ಆಡೋವಾಗ್ಲೂ ಶುಬ್ಮನ್ ಗಿಲ್ ಓಪನರ್ ಆಗಿದ್ರು. ಆದ್ರೀಗ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿತಾ ಇರೋದು ಗಿಲ್​ ಬ್ಯಾಟಿಂಗ್​ ಮೇಲೆ ಒಂದಷ್ಟು ನೆಗೆಟಿವ್​ ರೀತಿಯ ಎಫೆಕ್ಟ್ ಆಗಿದೆ. ಈ ಹಿಂದೆಲ್ಲಾ ಶುಬ್ಮನ್ ಗಿಲ್ ಕ್ರೀಸ್​ನಿಂದ ಸ್ಟೆಪ್ ಔಟ್​ ಆಗಿ ಆಡ್ತಿದ್ರು. ಅದ್ರಲ್ಲೂ ಸ್ಪಿನ್ನರ್ ಸ್ಟೆಪ್​ ಔಟ್ ಆಗಿ ಆಡೋಕೆ ಹೆಚ್ಚು ಫ್ರಿಫರ್ ಮಾಡ್ತಿದ್ರು. ಆದ್ರೆ 12 ಇನ್ನಿಂಗ್ಸ್​​ಗಳಲ್ಲಿ ಸ್ಕೋರ್ ಬಾರದೆ ಇದ್ದಾಗ ಶುಬ್ಮನ್ ಗಿಲ್ ಮೇಲೆ ಹೆಚ್ಚು ಪ್ರೆಷರ್ ಬಿಲ್ಡ್ ಆಯ್ತು. ಬಳಿಕ ಸ್ಟೆಪ್​ ಔಟ್ ಆಗಿ ಹೊಡಿಯೋಕೆ ಹಿಂದೇಟು ಹಾಕ್ತಿದ್ರು. ಶುಬ್ಮನ್ ಗಿಲ್​ ಇನ್ನೂ ಕೂಡ ಕಂಪ್ಲೀಟ್ ನ್ಯಾಚ್ಯುರಲ್ ಸ್ಟೈಲ್​ನಲ್ಲಿ ಆಡ್ತಿಲ್ಲ. ಗಿಲ್​ ಯಾವತ್ತಿಗೂ ಓಪನಿಂಗ್ ಸ್ಲಾಟ್​ಗೆ ಹೇಳಿ ಮಾಡಿಸಿದಂಥಾ ಪ್ಲೇಯರ್​. 3ನೇ ಕ್ರಮಾಂಕದವರೆಗೂ ಡ್ರೆಸ್ಸಿಂಗ್​ ರೂಮ್​​ನಲ್ಲಿ ಕುಳಿತುಕೊಳ್ಳುವ ಮೈಂಡ್​​ಸೆಟ್ ಶುಬ್ಮನ್ ಗಿಲ್​​ರದ್ದಲ್ಲ. ಚೇತೇಶ್ವರ್ ಪೂಜಾರಾ ಅವರಂತೆ ಡಿಫೆನ್ಸ್​ಗೆ ಗಿಲ್ ಹೆಚ್ಚು​ ಪ್ರಿಫರೆನ್ಸ್ ಕೊಡೋದಿಲ್ಲ. ಮೂರನೇ ಆರ್ಡರ್​ನಲ್ಲಿ ಬ್ಯಾಟಿಂಗ್ ಮಾಡೋದ್ರಿಂದ ಗಿಲ್​ ಮೇಲೆ ಪ್ರೆಷರ್ ಇನ್ನಷ್ಟು ಹೆಚ್ಚಾಗುತ್ತೆ. ನಾನಂತೂ ಶುಬ್ಮನ್ ಗಿಲ್​​ರನ್ನ ಒಬ್ಬ ಓಪನರ್, ಅಗ್ರೆಸ್ಸಿವ್ ಬ್ಯಾಟ್ಸ್​ಮನ್​ ಆಗಿಯೇ ಟ್ರೈನ್ ಮಾಡಿದ್ದೆ ಅಂತಾ ಗಿಲ್​ ತಂದೆ ಲಖ್ವಿಂದರ್ ಸ್ಟೇಟ್​​ಮೆಂಟ್ ಕೊಟ್ಟಿದ್ದಾರೆ.

ಶುಬ್ಮನ್​​ ಗಿಲ್​ ಫಸ್ಟ್ ಕೋಚ್ ಅವರ ತಂದೆಯೇ. ಹೀಗಾಗಿ ಗಿಲ್​ ತಂದೆ ಹೇಳಿರೋದನ್ನ ಕೂಡ ಕನ್ಸಿಡರ್​ ಮಾಡಲೇಬೇಕಾಗುತ್ತೆ. ಆದ್ರೆ ಈ ಮ್ಯಾಚ್​​ನಲ್ಲಿ ಶುಬ್ಮನ್ ಗಿಲ್​ ಇಂಗ್ಲೆಂಡ್​ ಫಾಸ್ಟ್​ ಮತ್ತು ಸ್ಪಿನ್ ಬೌಲರ್ಸ್​ಗೆ ಸ್ಟೆಪ್​ ಔಟ್ ಆಗಿ ಆಡಿದ್ರು. ಬಟ್ ಮಗ ಓಪನಿಂಗ್​ಗೆ ಸೂಟ್ ಆಗುವಂತಾ ಪ್ಲೇಯರ್​ ಆನ್ನೋದು ಅವರ ತಂದೆಯ ಅನಿಸಿಕೆ.

Sulekha