ಗಿಲ್ಲಿ ಕ್ರೇಜ್‌ ಡೌನ್‌ ಮಾಡಿದ್ರಾ BIGGBOSS?‌ – ಸೈಡ್‌ ಲೈನ್‌ ಮಾಡಿದ್ದಕ್ಕೆ ಕಪ್‌ ಕೈತಪ್ಪುತ್ತಾ?  

ಗಿಲ್ಲಿ ಕ್ರೇಜ್‌ ಡೌನ್‌ ಮಾಡಿದ್ರಾ BIGGBOSS?‌ – ಸೈಡ್‌ ಲೈನ್‌ ಮಾಡಿದ್ದಕ್ಕೆ ಕಪ್‌ ಕೈತಪ್ಪುತ್ತಾ?  

ಗಿಲ್ಲಿ ನಟ.. ಪಂಚಿಂಗ್ ಡೈಲಾಗ್ಸ್..‌ ನಾನ್‌ ಸ್ಟಾಪ್‌ ಕಾಮಿಡಿ ಮಾಡೋ ಗಿಲ್ಲಿ ಎಲ್ಲರ ಫೇವರೆಟ್‌.  ಆರಂಭದಿಂದಲೂ ಬಿಗ್‌ಬಾಸ್‌ ಮನೆಯಲ್ಲಿ ಸಖತ್‌ ಹೈಲೈಟ್‌ ಆಗಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ಬಿಗ್‌ ಬಾಸ್‌ ನಿಂದ ಎಲಿಮಿನೇಟ್‌ ಆದವರು, ವೀಕ್ಷಕರು ಮಾತ್ರವಲ್ಲದೇ ಸ್ಟಾರ್ಸ್‌ ಕೂಡ ಗಿಲ್ಲಿನೇ ಗೆಲ್ಲೋದು ಅಂತ ಹೇಳ್ತಾ ಬಂದಿದ್ದಾರೆ. ಆದ್ರೀಗ ಗಿಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಸೈಡ್‌ಲೈನ್‌ ಆಗ್ತಿದ್ದಾರೆ. ಕಾಮಿಡಿ ಕಿಂಗ್ ‌ಬಿಗ್‌ಬಾಸ್‌ ಗೆಲ್ಲಲ್ಲ. ಟ್ರೋಫಿ ಗಿಲ್ಲಿಯಿಂದ ಕೈ ತಪ್ಪುತ್ತೆ ಎಂಬ ಮಾತು ಕೇಳಿಬಂದಿದೆ.

ಇದನ್ನೂ ಓದಿ:   ಡಿಕೆ ಶಿವಕುಮಾರ್​​ ಪ್ರಾರ್ಥನೆಗೆ ಅಸ್ತು ಎಂದ ಮಹಾಗಣಪತಿ! – ಡಿಕೆಶಿ ಸಿಎಂ ಪಟ್ಟ ಏರೋದು ಫಿಕ್ಸ್?‌

ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಹತ್ತಿರವಾಗ್ತಿದೆ. ಸ್ಪರ್ಧಿಗಳು ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ. ಅಲ್‌ಮೋಸ್ಟ್‌ ವೀಕ್ಷಕರು ಗಿಲ್ಲಿನೇ ಗೆಲ್ತಾರೆ.. ಗಿಲ್ಲಿನಾ ನಾವು ಗೆಲ್ಲಿಸ್ತೀವಿ ಅಂತ ಹೇಳ್ತಾ ಬಂದಿದ್ದಾರೆ. ಆದ್ರೀಗ ವೀಕ್ಷಕರ ಲೆಕ್ಕಾಚಾರ ಎಲ್ಲ ಉಲ್ಟಾ ಆಗ್ತಿದ್ಯಾ ಎಂಬ ಅನುಮಾನ ಕಾಡ್ತಿದೆ. ಇದೀಗ ಗಿಲ್ಲಿಗೆಲ್ಲಲ್ಲ ಬೇರೆಯವರು ಗೆಲ್ತಾರೆ ಎಂಬ ಮಾತು ಕೇಳಿಬಂದಿದೆ.

ಹೌದು.. ಬಿಗ್‌ ಬಾಸ್‌ ಮನೆಯಲ್ಲಿ ಕಳೆದ ಒಂದೆರಡು ವಾರಗಳಲ್ಲಿ ಗಿಲ್ಲಿ ನಟ ಯಾಕೋ ಸೈಲೆಂಟ್‌ ಮೂಡ್‌ನಲ್ಲಿದ್ದಂತೆ ಕಾಣ್ತಿದೆ. ಮೊದಲ ವಾರದಲ್ಲಿಷ್ಟು ಆಕ್ಟಿವ್‌ ಇದ್ದಂತೆ ಕಾಣ್ತಿಲ್ಲ ಎಂಬ ಮಾತು ಕೇಳಿಬಂದಿದೆ. ಸೋಶಿಯಲ್‌ ಮೀಡಿಯಾದಲ್ಲೂ ಈ ಬಗ್ಗೆ ಚರ್ಚೆ ನಡಿತಾ ಇದೆ. ಬಿಗ್‌ಬಾಸ್‌ ಮನೆಯಲ್ಲಿ ಬೇರೆ ಸ್ಪರ್ಧಿಯನ್ನ ಗೆಲ್ಲಿಸೋ ಪ್ರಯತ್ನ ನಡಿತಾ ಇದೆ. ಹೀಗಾಗಿ ಗಿಲ್ಲಿಯನ್ನ ಸೈಡ್‌ಲೈನ್‌ ಮಾಡಲಾಗ್ತಿದೆ. ಮೊದಲೆಲ್ಲಾಎಲ್ಲಾ ಸಂಚಿಕೆಯಲ್ಲೂ ಗಿಲ್ಲಿಯೇ ಹೈಲೈಟ್‌ ಆಗಿರ್ತಿದ್ರು. ಲೈವ್‌ ನಲ್ಲೂ ಗಿಲ್ಲಿಯನ್ನೇ ಹೆಚ್ಚಾಗಿ ತೋರಿಸಲಾಗ್ತಿತ್ತು. ಗಿಲ್ಲಿ ಕಾಮಿಡಿ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲೂ ಟ್ರೆಂಡ್‌ ಆಗಿರ್ತಿತ್ತು.  ಆದ್ರೀಗ ಗಿಲ್ಲಿ ಅಷ್ಟೊಂದಾಗಿ ಕಾಣಿಸಿಕೊಳ್ತಿಲ್ಲ. ಗಿಲ್ಲಿ ಕ್ರೇಜ್‌ ಕಡಿಮೆಯಾಯ್ತಾ ಅಥವಾ ಬಿಗ್‌ಬಾಸ್‌ ಬೇಕಂತಲೇ ಗಿಲ್ಲಿಯನ್ನ ಸೈಡ್‌ಲೈನ್‌ ಮಾಡ್ತಿದ್ದಾರಾ ಎಂಬ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ. ಇದೀಗ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ರ ಸ್ಪರ್ಧಿ ವಿನಯ್‌ ಗೌಡ ಕೂಡ ಶಾಕಿಂಗ್‌ ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೆ.

ವಿನಯ್‌ ಗೌಡ ಬಿಗ್‌ ಬಾಸ್‌ ಸ್ಪರ್ಧಿಗಳು ನೇಮಿಸಿಕೊಳ್ಳುವ PROಗಳು ಮತ್ತು ಅವರ ಸ್ಟ್ರಾಟೆಜಿಗಳ ಬಗ್ಗೆ ಮಾತನಾಡಿದ್ದಾರೆ. ಒಬ್ಬರನ್ನು ಹೈಲೈಟ್ ಮಾಡುವುದಕ್ಕಾಗಿ, ಮತ್ತೊಬ್ಬರ ಬಗ್ಗೆ ನೆಗೆಟಿವ್‌ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಎಲ್ಲಿ ನೋಡಿದರೂ ಗಿಲ್ಲಿ ಗಿಲ್ಲಿ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಅದನ್ನೇ ಕೆಲವರು ಓವರ್‌ ಹೈಪ್ ಮಾಡಿ, ಅದು ಗಿಲ್ಲಿಗೆ ನೆಗೆಟಿವ್‌ ಆಗೋ ಥರ ಮಾಡ್ತಾ ಇದ್ದಾರೆ. ಇದು ನಡೆಯಬಾರದು. ಇದನ್ನೆಲ್ಲಾ ಅವ್ರ ಫ್ಯಾಮಿಲಿಯವರು ನೋಡಿದಾಗ, ಅವರಿಗೆ ಆಗುವ ನೋವು, ತೊಂದರೆಗಳ ಬಗ್ಗೆ ಪಿಆರ್‌ ಏಜೆಂಟ್ಸ್‌ ಗಮನಿಸಬೇಕು. ನಾವು ಏನು ಡ್ಯಾಮೇಜ್‌ ಮಾಡ್ತಿದ್ದೇವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ವಿನಯ್‌ ಹೇಳಿದ್ದಾರೆ.

ಮತ್ತೊಂದ್ಕಡೆ ಗಿಲ್ಲಿ ಬಿಗ್‌ಬಾಸ್‌ ವಿನ್‌ ಆಗಲ್ಲ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಪ್ರಶಾಂತ್ ಕಿಣಿ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿಕೊಂಡಿದ್ದಾರೆ. ಗಿಲ್ಲಿ ಫಿನಾಲೆ ತಲುಪುತ್ತಾರೆ ಎಂದು ಅವರು ಅಕ್ಟೋಬರ್​ನಲ್ಲಿ ಭವಿಷ್ಯ ನುಡಿದಿದ್ದರು. ಆದ್ರೀಗ ಅದೇ ಟ್ವೀಟ್​ನ ರೀ ಟ್ವೀಟ್ ಮಾಡಿಕೊಂಡು, ಗಿಲ್ಲಿ ಅವರು ಬಿಗ್ ಬಾಸ್ ವಿನ್ ಆಗಲ್ಲ. ಟಾಪ್‌ 3 ಸ್ಪರ್ಧಿಗಳಾಗಿ ಗಿಲ್ಲಿ ನಟ, ಕಾವ್ಯ ಶೈವ, ರಕ್ಷಿತಾ ಶೆಟ್ಟಿ ಹೊರಹೊಮ್ಮಲಿದ್ದಾರೆ. ಈ ಬಾರಿ ಬಿಗ್‌ಬಾಸ್‌ ಗೆಲ್ಲೋದು ಮಹಿಳಾ ಸ್ಪರ್ಧಿ ಎಂದು ಹೇಳಿದ್ದಾರೆ. ಇದು ಗಿಲ್ಲಿ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ಏನೇ ಆಗ್ಲಿ ಗಿಲ್ಲಿಯನ್ನ ನಾವು ಗೆಲ್ಲಿಸ್ತೇವೆ ಎಂದು ಹೇಳಿದ್ದಾರೆ. ಗಿಲ್ಲಿ ಹೆಸರಿನಲ್ಲಿ ಪ್ರಚಾರ ತೆಗೆದುಕೊಳ್ಳಲು ಇದೊಂದು ಗಿಮಿಕ್ ಅಷ್ಟೇ ಅಂದಿದ್ದಾರೆ.

Shwetha M