ಬ್ಯಾಚುಲರ್ಸ್‌ಗೆ ಗಿಲ್ಲಿನಟ ಕ್ಯಾಪ್ಟನ್.. ಗಗನಾ ರೋಸ್ ಕೊಟ್ರೆ ಗಿಲ್ಲಿಗೆ ಉರಿ!
ಶೋನಲ್ಲಿ ಗಗನಾ ಗಿಲ್ಲಿಯದ್ದೇ ಹವಾ!

ಜೀ ಕನ್ನಡ ವಾಹಿನಿಯಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಆರಂಭವಾಗಿದೆ. ಹತ್ತು ಬ್ಯಾಚುಲರ್ಸ್ ಗೆ 10 ಸುಂದರಿಯರು ಮೆಂಟರ್ಸ್ ಆಗಿದ್ದಾರೆ. ಮೊದಲ ಸಂಚಿಕೆಯಲ್ಲಿ ಸಿಕ್ಕಾಪಟ್ಟೆ ಹೈಲೈಟ್ ಆಗಿರೋದು ಅಂದ್ರೆ ಗಿಲ್ಲಿ ಮತ್ತು ಗಗನಾ.. ಡಿಕೆಡಿ ಬಳಿಕ ಗಿಲ್ಲಿ, ಗಗನಾ ಜೋಡಿ ಭರ್ಜರಿ ಬ್ಯಾಚುಲರ್ಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಂಚಿಕೆಯಲ್ಲಿ ಗಿಲ್ಲಿ ಪ್ರಾಪರ್ಟಿ ಕಾಮಿಡಿ ಮೂಲಕ ಮೋಡಿ ಮಾಡಿದ್ರೆ, ಗಗನಾ ತನ್ನ ಹುಡುಗ ಹೆಂಗಿರ್ಬೇಕು ಅಂತಾ ಹೇಳಿದ್ದಾರೆ. ಗಗನಾ ಮಾತು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಉ*ಗ್ರರ ಕಣ್ಣು! ವಿದೇಶಿಗರ ಕಿಡ್ನ್ಯಾಪ್, ಸುಲಿಗೆ!!
ಗಿಲ್ಲಿ ಗಗನಾ.. ಸದ್ಯ ರಿಯಾಲಿಟಿ ಶೋಗಳಲ್ಲಿ ಮಾತ್ರವಲ್ಲ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರದ್ದೇ ಹವಾ.. ಗಗನಾ ಪಂಚ್ ಡೈಲಾಗ್ಸ್ ಹೊಡೆಯೋದ್ರಲ್ಲಿ ಎಕ್ಸಪರ್ಟ್ ಆದ್ರೆ, ಗಿಲ್ಲಿ ಕಾಮಿಡಿ ಜೊತೆಗೆ ಗಗನಾ ಕಾಲೆಳೆಯೋದ್ರಲ್ಲಿ ಎಕ್ಸಪರ್ಟ್.. ಡಿಕೆಡಿ ಶೋ ಮುಗಿದ್ಮೇಲೆ ಈ ಜೋಡಿಯನ್ನ ವೀಕ್ಷಕರು ಮಿಸ್ ಮಾಡಿಕೊಂಡಿದ್ರು.. ಇದೀಗ ಇವರಿಬ್ರು ಭರ್ಜರಿ ಬ್ಯಾಚುಲರ್ಸ್ ಗೆ ಜಬರ್‌ದಸ್ತ್ ಎಂಟ್ರಿ ಕೊಟ್ಟಿದ್ದಾರೆ. ಗಿಲ್ಲಿ ಕಾಮಿಡಿಗೆ ಬಿದ್ದು ಬಿದ್ದು ನಕ್ರೇ.. ಗಗನಾ ಮಾತು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ಹೌದು ಗಿಲ್ಲಿ ಇದ್ದಲ್ಲಿ ಗಗನಾ ಇರ್ಲೇ ಬೇಕು.. ಗಗನಾ ಇದ್ದಲ್ಲಿ ಗಿಲ್ಲಿ ಬಂದೇ ಬರ್ತಾರೆ.. ಇದೀಗ ಭರ್ಜರಿ ಬ್ಯಾಚುಲರ್ಸ್ ಶೋನಲ್ಲೂ ಇವರಿಬ್ಬರೇ ಹೈಲೈಟ್ ಆಗಿದ್ದಾರೆ. ಶೋ ಗೆ ಎಂಟ್ರಿ ಕೊಡ್ತಿದ್ದಂತೆ ಗಗನಾಗೆ ನೀವು ಮದುವೆ ಆಗೋ ಡ್ರಿಮ್ ಬಾಯ್ ಹೇಗರಬೇಕು ಎಂದು ನಿರಂಜನ್ ದೇಶಪಾಂಡೆ ಕೇಳಿದ್ದಾರೆ. ಆಗ ಗಗನಾ, ನಾವು ಹೇಳಿದ ಮಾತ್ರಕ್ಕೆ ಹಾಗೇ ಸಿಗ್ತಾರೆ ಅಂತ ಹೇಳೋದಕ್ಕೆ ಆಗೋದಿಲ್ಲ. ಸಿಕ್ಕವರನ್ನ ಹೊಡೆದು ಸರಿ ಮಾಡಬೇಕು ಅನ್ನೋ ರೂಲ್ಸ್ ಅನ್ನು ಫಾಲೋ ಮಾಡ್ತಿದ್ದೀನಿ.. ಮದುವೆ ಆಗೋ ಹುಡುಗ ರವಿ ಸರ್ ತರ ಇರಬೇಕು. ಹುಡುಗಿಯನ್ನು ಅಷ್ಟು ಚೆನ್ನಾಗಿ ಹೊಗಳುತ್ತಾರೆ. ಹುಡುಗಿಯನ್ನು ಚೆನ್ನಾಗಿ ವರ್ಣಿಸೋ ಹುಡುಗ ಸಿಕ್ಕರೆ ಲೈಫ್ ಲಾಂಗ್ ಆರಾಮ್ ಆಗಿ ಇರ್ತಿನಿ ಎಂದು ಗಗನಾ ಹೇಳಿದ್ದಾರೆ. ಆಗ ರಚಿತಾ ರಾಮ್, ಹಾಗಾದ್ರೆ ನಿಮಗೆ ದಿನ ಹಾಡು ಹಾಡಬೇಕು, ದಿನ ರೊಮ್ಯಾನ್ಸ್ ಮಾಡಬೇಕಾ ಅಂತ ಕೇಳಿದ್ದಾರೆ. ಆಗ ಹೌದು, ದಿನ ಹಾಡು ರೊಮ್ಯಾನ್ಸ್ ಇದ್ದರೇ ಅದಕ್ಕಿಂತ ಜಾಸ್ತಿ ಇನ್ನೇನು ಬೇಕು ಅಂತ ಗಗನಾ ಹೇಳಿದ್ದಾರೆ. ಗಗನಾ ಮಾತು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ಇನ್ನು ಗಿಲ್ಲಿ ಕೂಡ ಸೈಕಲ್ ನಲ್ಲಿ ಎಂಟ್ರಿಕೊಟ್ಟಿದ್ದಾರೆ. ಗಿಲ್ಲಿ ಬರೋದನ್ನ ನೋಡಿ ಗಗನಾ ನಕ್ಕಿದ್ದಾರೆ.. ಗಿಲ್ಲಿ ಬಂದಿರೋದನ್ನ ನೋಡಿ ರವಿಚಂದ್ರನ್, ಇವನು ಸ್ಟುಡಿಯೋ ಬಿಟ್ಟು ಹೋಗೇ ಇಲ್ವಾ ಅಂತಾ ಕೇಳಿದ್ದಾರೆ. ಆಗ ನಿರಂಜನ್ ನನ್ಗೂ ಅದೇ ಡೌಟ್.. ಬ್ಯಾಚುಲ್ 1 ನಿಂದಲೂ ಇದ್ದಾನೆ ಎಂದಿದ್ದಾರೆ. ಆಗ ಗಿಲ್ಲಿ ನನಗೆ ಸೀಸನ್ ಇಂಪಾರ್ಟೆಂಟ್ ಅಲ್ಲ.. ಯಾಕ್ ಬಂದಿದ್ದೀನಿ ಅನ್ನೋ ರೀಸನ್ ಇಂಪಾರ್ಟೆಂಟ್.. ಅಖಿಲಾ ಕರ್ನಾಟಕ ಬ್ಯಾಚುಲರ್ಸ್ ತಂಡ ನಾಯಕನಾಗಿ ಇವರೆಲ್ಲರಿಗೂ ಮೆಂಟರ್ ಆಗಿ ಬಂದಿದ್ದೀನಿ.. ಇವರಿಗೆಲ್ಲಾ ನಾನೇ ಲೀಡರ್ ಅಂತಾ ಹೇಳಿದ್ದಾರೆ. ಇನ್ನು ತನಗೆ ಹುಡುಗಿ ಯಾಕೆ ಇಲ್ಲ.. ಪ್ರೀತಿ ಬಗ್ಗೆನೂ ಫಿಲಾಸಫಿ ಹೇಳಿದ್ದಾರೆ. ಹುಡುಗಿ ಪ್ರೀತಿ ಮಾಡಿದ್ರೆ ಯಾರಿಗೂ ಗೊತ್ತಿರಲ್ಲ.. ಆದ್ರೆ ಹುಡುಗ ಪ್ರೀತಿ ಮಾಡಿದ್ರೆ ಲವ್ ಮಾಡ್ತರೋ ಹುಡುಗಿ ಬಿಟ್ಟು ಇಡೀ ಊರಿಗೆ ಗೊತ್ತಿರುತ್ತೆ. ಅದೇ ನಮ್ಮ ಪ್ರಾಬ್ಲಂ ಅಂತಾ ಹೇಳಿದ್ದಾರೆ. ಇಲ್ಲಿ ಮಾತು ಕೇಳಿದ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.. ಅಷ್ಟೇ ಅಲ್ಲ ಸ್ಟೇಜ್ ನಲ್ಲಿ ಗಿಲ್ಲಿ ಪ್ರಾಪರ್ಟಿ ಕಾಮಿಡಿ ಮಾಡಿ ಎಲ್ಲರನ್ನ ನಗಿಸಿದ್ದಾರೆ. ಇನ್ನು ಗಗನಾ ಹುಡುಗರಿಗೆ ರೋಸ್ ಕೊಡ್ತಿದ್ದಂತೆ ಗಿಲ್ಲಿ ಉರ್ಕೊಂಡಿದ್ದಾರೆ.
ಇದೀಗ ಶೋ ನೋಡಿದ ವೀಕ್ಷಕರು ಮಾತ್ರ ನಾನಾ ಕಾಮೆಂಟ್ ಮಾಡ್ತಿದ್ದಾರೆ. ನಮ್ಮ ಗಿಲ್ಲಿ ನಟ ಬಂದಾಯ್ತು.. ಟಿ ಆರ್ ಪಿ ನಂಬರ್ ಒನ್ ಬರುತ್ತೆ.. ಗಿಲ್ಲಿ ಏನೇ ಮಾಡ್ಲಿ.. ನಾವು ನಗ್ತೀವಿ.. ಅಷ್ಟು ಸಾಕು.. ಟಿಆರ್ ಪಿ ಗೋಸ್ಕರ ನೀವು ಏನಾದ್ರೂ ಮಾಡ್ಕೊಳಿ ಅಂತಾ ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಟಿಆರ್‌ಪಿಗಾಗಿ ಗಿಲ್ಲಿ ಗಗನಾರನ್ನ ಶೋಗೆ ಕರೆಸಿದ್ದಾರೆ.. ಅವರನ್ನ ಫಸ್ಟ್ ಶೋನಿಂದ ಹೊರ ಹಾಕಿ.. ಹೊಸ ಪ್ರತಿಭೆಗಳಿಗೆ ಯಾಕೆ ಅವಕಾಶ ಕೊಡ್ಬಾರ್ದು.. ಇವರಂತೆ ಬೇರೆಯವರು ಬೆಳೆಯಲಿ ಅಂತಾ ಕಾಮೆಂಟ್ ಮಾಡಿದ್ದಾರೆ.