ಮೋಸದಿಂದ ಕ್ಯಾಪ್ಟನ್ಸಿ ಟಾಸ್ಕ್ ಗೆದ್ರಾ ಗಿಲ್ಲಿ? – ಬಯಲಾಯ್ತು ಕಾಮಿಡಿ ಕಿಂಗ್ ಗಿಮಿಕ್?

ಬಿಗ್ ಬಾಸ್ ಕನ್ನಡ ಸೀಸನ್ 12 ರೋಚಕ ಘಟ್ಟ ತಲುಪಿದೆ. ಸ್ಪರ್ಧಿಗಳ ಮಧ್ಯೆ ಟಫ್ ಫೈಟ್ ಏರ್ಪಟ್ಟಿದೆ. ಮುಂದಿನ ವಾರದ ಕ್ಯಾಪ್ಟನ್ ಆಯ್ಕೆಗಾಗಿ ಬಿಗ್‌ಬಾಸ್ ಟಾಸ್ಕ್ ನೀಡಿದ್ದಾರೆ. ಸ್ಪರ್ಧಿಗಳು ಟಾಸ್ಕ್‌ನಲ್ಲಿ ಗೆಲ್ಲೋದಿಕ್ಕಿಂತ ಸೋಲಿಸೋದ್ರಲ್ಲೇ ಬ್ಯೂಸಿಯಾಗಿದ್ದಾರೆ. ಆದ್ರೀಗ ಗಿಲ್ಲಿನಟ ಮೋಸ ಮಾಡಿ ಟಾಸ್ಕ್ ವಿನ್ ಆದ್ರಾ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿದೆ. ಇದಕ್ಕೆ ಕಾರಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ!
ಇದನ್ನೂ ಓದಿ: ಜೈಲಿನಲ್ಲಿರುವ ದಾಸನಿಗೆ ಶಾಕ್ ಕೊಟ್ಟ ಕೋರ್ಟ್! – ದರ್ಶನ್ ಮನೆಯಲ್ಲಿ ಸಿಕ್ಕಿದ್ದ 83 ಲಕ್ಷ ಆದಾಯ ತೆರಿಗೆ ಇಲಾಖೆಗೆ!
ದೊಡ್ಮನೆಯಲ್ಲಿ ಬಿಗ್‌ಬಾಸ್ ಕ್ಯಾಪ್ಟನ್ ಆಯ್ಕೆಗಾಗಿ ಟಾಸ್ಕ್‌ವೊಂದನ್ನ ನೀಡಿದ್ದಾರೆ. ಮನೆಯಲ್ಲಿ ರಚನೆಯಾಗಿರುವ ಜೋಡಿಗಳಿಗೆ ಬಿಗ್‌ಬಾಸ್ ಬಾಲ್ ಟಾಸ್ಕ್ ನೀಡಿದ್ದಾರೆ. ಅತಿಹೆಚ್ಚು ಬಾಲ್ ಸಂಗ್ರಹಿಸುವ ಜೋಡಿ ಈ ಆಟವನ್ನು ಗೆಲ್ಲುತ್ತದೆ. ಹಾಗಾಗಿ ಜೋಡಿಗಳು ಹೇಗಾದ್ರು ಮಾಡಿ ಆಟ ಗೆಲ್ಲಬೇಕೆಂದು ಪಣ ತೊಟ್ಟು ಕಣಕ್ಕಿಳಿದಿದ್ದಾರೆ. ಆದ್ರೆ ಈ ಟಾಸ್ಕ್ ಅನ್ನ ರಾಶಿಕಾ-ಸೂರಜ್, ಗಿಲ್ಲಿ ಕಾವ್ಯ ಜೋಡಿ ತೀರಾ ಪರ್ಸನಲ್ ಆಗಿ ತೆಗೆದುಕೊಂಡಂತೆ ಕಾಣ್ತಿದೆ.
ನಿನ್ನೆಯ ಎಲಿಸೋಡ್‌ನಲ್ಲಿ ರಾಶಿಕಾ, ಗಿಲ್ಲಿ ಹಾಗೂ ಕಾವ್ಯ ಫ್ರೆಂಡ್‌ಶಿಪ್ ಬಗ್ಗೆ ಮಾತನಾಡಿದ್ರು. ಈ ಬೆನ್ನಲ್ಲೇ ಗಿಲ್ಲಿ-ಕಾವ್ಯ ಇಬ್ಬರು ಸೇರಿಕೊಂಡು ರಾಶಿಕಾಳನ್ನ ರೋಸ್ಟ್ ಮಾಡಿದ್ರು. ಇಷ್ಟಕ್ಕೆ ಸುಮ್ಮನಾಗದ ರಾಶಿಕಾ ಕಾವ್ಯ ಗಿಲ್ಲಿ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಏನಾದ್ರೂ ಮಾಡಿ, ಕಾವ್ಯ – ಗಿಲ್ಲಿ ಸೋಲಿಸಿ ಹೊರಗೆ ಕಳಿಸ್ಬೇಕು ಅಂತ ಸೂರಜ್ ಬಳಿ ರಾಶಿಕಾ ಹೇಳಿದ್ದಾರೆ. ಇತ್ತ ಗಿಲ್ಲಿ ಯಾರೇ ವಿನ್ ಆದ್ರೂ ಮೊದಲು ನಮ್ಮನ್ನು ಆಟದಿಂದ ಹೊರಗಿಡುತ್ತಾರೆ. ಹಾಗಾಗಿ ನಾವು ಆಟ ಗೆಲ್ಲಬೇಕು ಎಂದು ಕಾವ್ಯಾಗೆ ಹೇಳಿದ್ದಾರೆ. ಇದೀಗ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಗೆಲ್ಲಲು ಗಿಲ್ಲಿ ಮೋಸದಾಟ ಆಡಿದ್ರಾ ಅನ್ನೋ ಅನುಮಾನ ಎಲ್ಲರನ್ನ ಕಾಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಿಸಿದ ಒಂದು ವಿಡಿಯೋ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ಜೋಡಿ ಸ್ಪರ್ಧಿಗಳ ಒಂದೊಂದು ಕಾಲು ಸೇರಿಸಿ ಕಟ್ಟಲಾಗಿರುತ್ತದೆ. ಬಾಕ್ಸ್‌ನಲ್ಲಿರುವ ಚೆಂಡುಗಳನ್ನು ಸಂಗ್ರಹಿಸುವ ಟಾಸ್ಕ್ ಇದಾಗಿತ್ತು. ಕಾಲು ಕಟ್ಟಿದ್ದರಿಂದ ಕುಂಟುತ್ತಲೇ ಸ್ಪರ್ಧಿಗಲು ಬಾಲ್ ಸಂಗ್ರಹ ಮಾಡುತ್ತಿದ್ದರು. ಬಾಲ್ ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಗಿಲ್ಲಿ ನಟ ಕೆಳಗೆ ಬಿದ್ದಿದ್ದಾರೆ. ಬಿದ್ದ ಕೂಡಲೇ ಗಿಲ್ಲಿ ತನ್ನ ಮುಂದೆ ಇದ್ದ ರಾಶಿಕಾ ಕಾಲು ಎಳೆದು ಬೀಳಿಸಿದ್ದಾರೆ. ಈ ವೇಳೆ ಕಾವ್ಯ, ಗಿಲ್ಲಿ ಈ ರೀತಿಯೆಲ್ಲಾ ಮಾಡಬಾರದು ಎಂದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಗಿಲ್ಲಿ ಮೋಸದಾಟ ಆಡ್ತಿದ್ದಾರೆ ಎಂದು ಹೇಳಿದ್ದಾರೆ.
ವೈರಲ್ ಆಗಿರುವ ಮತ್ತೊಂದು ಕ್ಲಿಪ್‌ನಲ್ಲಿ, ಅಶ್ವಿನಿ ಗೌಡ ಮತ್ತು ರಘು ಮುಂದೆ ರಾಶಿಕಾಳನ್ನು ಗಿಲ್ಲಿ ಬೀಳಿಸಿದ. ಇದರಿಂದ ರಾಶಿಕಾ ಮೂಗಿಗೆ ಗಾಯವಾಯ್ತು ಎಂದು ಸೂರಜ್ ಹೇಳುತ್ತಾರೆ. ಗಿಲ್ಲಿ ಯಾಕೆ ಹೀಗೆ ಮಾಡ್ತಾನೆ ಎಂದು ಅಶ್ವಿನಿ ಗೌಡ ಬೇಸರ ವ್ಯಕ್ತಪಡಿಸುತ್ತಾರೆ. ಮತ್ತೊಂದು ಕ್ಲಿಪ್‌ನಲ್ಲಿ ಗಿಲ್ಲಿಯೇ ರಾಶಿಕಾಳ ಕಾಲೆಳೆದ ಎಂದು ರಜತ್ ಸಹ ಹೇಳುತ್ತಾರೆ. ಕಾಲೆಳೆದಿಲ್ಲ, ಕಾಲು ಹಿಡಿಯೋಕೆ ಬಂದೆ ಎಂದು ಗಿಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದೀಗ ಈ ಟಾಸ್ಕ್‌ನಲ್ಲಿ ಮಾಳು- ರಕ್ಷಿತಾ, ಗಿಲ್ಲಿ ಕಾವ್ಯ ಜೋಡಿ ವಿನ್ ಆಗಿದೆ ಎಂದು ಹೇಳಲಾಗ್ತಿದೆ. ಇಂದಿನ ಎಪಿಸೋಡ್‌ನಲ್ಲಿ ಟಾಸ್ಕ್ ವೇಳೆ ಏನೆಲ್ಲಾ ಆಯ್ತು ಅನ್ನೋದು ಗೊತ್ತಾಗಲಿದೆ.

ನೋಡಿರಿ

