ಬಾಯಿ ಇದೆ ಅಂತ ಬಾಯಿಗೆ ಬಂದ ಹಾಗೆ ಮಾತಾಡ್ತಿಯಾ? – ಮತ್ತೆ ಕಿತ್ತಾಡಿಕೊಂಡ ರಘು- ಗಿಲ್ಲಿ!

ಬಾಯಿ ಇದೆ ಅಂತ ಬಾಯಿಗೆ ಬಂದ ಹಾಗೆ ಮಾತಾಡ್ತಿಯಾ? – ಮತ್ತೆ ಕಿತ್ತಾಡಿಕೊಂಡ ರಘು- ಗಿಲ್ಲಿ!

ಬಿಗ್‌ಬಾಸ್‌ ಮನೆಯ ಮೋಟು, ಪಟ್ಲು ಗಿಲ್ಲಿ-ರಘು. ಇವರಿಬ್ಬರು ಯಾವಾಗ ಕ್ಲೋಸ್‌ ಆಗಿರ್ತಾರೆ, ಯಾವಾಗ ಜಗಳ ಮಾಡ್ತಾರೆ ಅಂತ ಹೇಳೋದು ಕಷ್ಟ. ರಘು, ಗಿಲ್ಲಿ ತಮಾಷೆಯನ್ನ ಕೆಲವೊಮ್ಮೆ ಫನ್ನಿಯಾಗಿ ತೆಗೆದುಕೊಂಡ್ರೆ, ಇನ್ನೂ ಕೆಲವೊಮ್ಮೆ ಸೀರಿಯಸ್‌ ಆಗಿ ತೆಗೆದುಕೊಳ್ತಾರೆ. ಇದೀಗ ಮತ್ತೆ ರಘು, ಗಿಲ್ಲಿ ಮೇಲೆ ಸಿಟ್ಟಾಗಿದ್ದಾರೆ. ಬಾಯಿ ಇದೆ ಅಂತ ಬಾಯಿಗೆ ಬಂದ ಹಾಗೆ ಮಾತಾಡ್ತಿಯಾ ಎಂದು ಗಿಲ್ಲಿ ಮೇಲೆ ಕೂಗಾಡಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ಓಡಾಡುವ ಮಕ್ಕಳೇ ಇವನ ಟಾರ್ಗೆಟ್! – ಆಟವಾಡುತ್ತಿದ್ದ ಬಾಲಕನನ್ನ ಕಾಲಿನಿಂದ ಒದ್ದ ಸೈಕೋ!

ಬಿಗ್​ಬಾಸ್​ ಮನೆಯಲ್ಲಿ ರಘು ಮತ್ತು ಗಿಲ್ಲಿ ಜೋಡಿ ವೀಕ್ಷಕರಿಗೆ ಇಷ್ಟ. ಆದ್ರೆ ಇತ್ತೀಚೆಗೆ ರಘು, ಗಿಲ್ಲಿ ಮೇಲೆ ಆಗಾಗಾ ಸಿಟ್ಟು ಮಾಡಿಕೊಳ್ಳುತ್ತಿದ್ದಾರೆ. ಕಾಮಿಡಿ ಮೂಲಕ ಬೇರೆಯವರನ್ನ ತುಳಿಯುತ್ತಾನೆ ಎಂದು ಹೇಳುತ್ತಿರುತ್ತಾರೆ. ರಘು, ಗಿಲ್ಲಿಯನ್ನ ದೂರ ಮಾಡಲು ಪ್ರಯತ್ನಿಸಿದ್ರೂ ಗಿಲ್ಲಿ ಮಾತ್ರ ಒಟ್ಟಿಗೆ ಇರ್ತಾರೆ. ಮೊನ್ನೆಯಷ್ಟೇ ರಘು ಬಳಿ ಗಿಲ್ಲಿ ಚಪಾತಿ ಕೇಳಿದಾಗ ಕೊಟ್ಟಿರಲಿಲ್ಲ. ರಘು ಹೀಗೆ ವರ್ತಿಸಿದ್ದು, ಗಿಲ್ಲಿಗೆ ಬೇಜಾರಾಗಿತ್ತು. ಇದೀಗ ಮತ್ತೆ ಊಟದ ವಿಚಾರಕ್ಕೆ ಮತ್ತೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ರಘು ಅಡುಗೆ ಮಾಡುತ್ತಿರುವ ಸಂದರ್ಭದಲ್ಲಿ, ಗಿಲ್ಲಿ ನಟ ಆಯ್ತಾ ಎಂದು ಕೇಳಿದ್ದಾರೆ. ಅದಕ್ಕೆ ಸ್ವಲ್ಪ ತಡಿ ಎಂದು ರಘು ಹೇಳಿದ್ದಾರೆ.

ರಘು ಅಡುಗೆ ಮಾಡುತ್ತಿರುವಾಗ ಗಿಲ್ಲಿ ಸುಖಾಸುಮ್ಮನೆ ರೇಗಿಸುವುದಕ್ಕಾಗಿಯೇ ಆಯ್ತಣ್ಣ ಎಂದು ಕೇಳಿದ್ದಾರೆ. ಆಗ ರಘು ಸ್ವಲ್ಪ ಗರಂ ಆದರು. ಆದರೂ ಸುಮ್ಮನೇ ಬಿಡದ ಗಿಲ್ಲಿ ನಟ ಮತ್ತೊಮ್ಮೆ ಅದೇ ಕೇಳಿದಾಗ, ರಘು ಬಿಪಿ ಹೆಚ್ಚಾಯ್ತು. ತಗೋ ತಿನ್ನು ಎಂದು ಹೇಳಿದ್ರು. ಅದಕ್ಕೆ ಗಿಲ್ಲಿ ನಟ ನಾನೇನು ಕೇಳಿದೆ, ಆಯ್ತಾ ಅಂತ ಅಷ್ಟೇ ಕೇಳಿದೆ, ಸಿಟ್ಟು ಯಾಕೆ ಆಗ್ತಿಯಾ ಎಂದು ಕೇಳಿದಾಗ ಮೊದಲೇ ಏರಿಕೊಂಡಿದ್ದ ರಘು ಮತ್ತಷ್ಟು ರೇಗಾಡಿದರು. ಅವನನ್ನು ಆಚೆ ಕರೆದುಕೊಂಡು ಹೋಗು ಎಂದು ಅಲ್ಲಿಯೇ ಇದ್ದ ರಜತ್​ಗೆ ಹೇಳಿದ್ರು. ಆಗಲೂ ಸುಮ್ಮನೇ ಇರದ ಗಿಲ್ಲಿ, ಎಷ್ಟು ಹೊತ್ತು ಆಗತ್ತೆ ಹೇಳು ಎಂದಾಗ ರಘು ಬ್ಲಾಸ್ಟ್​ ಆಗಿ ಹೋದ್ರು.

ಹತ್ತಿರ ಬಂದ ರಘು ಒಂದು ಸಲ ಓಕೆ, ಎರಡು ಸಲ ಓಕೆ ಅತಿಯಾಗಿ ಮಾತಾಡ್ಬೇಡ ಎಂದು ರೇಗಿದರು. ಅದಕ್ಕೆ ಗಿಲ್ಲಿ ನಟ ನಾನೇನು ಮಾಡಿದೆ ಎಂದು ಕೇಳಿದ್ರು. ಬಾಯಿ ಇದೆ ಅಂತ ಬಾಯಿಗೆ ಬಂದ ಹಾಗೆ ಮಾತಾಡ್ತಿಯಾ ಎಂದು ಸಿಕ್ಕಾಪಟ್ಟೆ ಗರಂ ಆದ್ರು ರಘು. ಅವರು ಇಷ್ಟು ಹೇಳಿದ್ರೂ, ಗಿಲ್ಲಿ ಎಷ್ಟು ಹೊತ್ತು ಆಗ್ತದಣ್ಣ ಎಂದು ಕೇಳಿದಾಗ ಅರೆಕ್ಷಣ ರಘು ಸೈಲೆಂಟ್​ ಆದ್ರು. ಆಗ ಗಿಲ್ಲಿ ರಜತ್​ ಕಡೆ ತಿರುಗಿದಾಗ ರಜತ್​ ವ್ಯಂಗ್ಯವಾಗಿ ನೋಟ ಬೀರಿದರು.

Shwetha M