ಗಿಲ್ಲಿಗೆ ₹1 ಕೋಟಿ ಸಂಭಾವನೆ? – ಪಳಾರ್‌ ಚಿತ್ರಕ್ಕೆ ಕಾವ್ಯನೇ ನಾಯಕಿ
ಬಿಗ್‌ಬಾಸ್‌ ಜೋಡಿ ಲಕ್‌ ಚೇಂಜ್!‌

ಗಿಲ್ಲಿಗೆ ₹1 ಕೋಟಿ ಸಂಭಾವನೆ? – ಪಳಾರ್‌ ಚಿತ್ರಕ್ಕೆ ಕಾವ್ಯನೇ ನಾಯಕಿಬಿಗ್‌ಬಾಸ್‌ ಜೋಡಿ ಲಕ್‌ ಚೇಂಜ್!‌

ಗಿಲ್ಲಿನಟ.. ಕಾಮಿಡಿ ಕಿಂಗ್‌ ಈಗ ಹೀರೋ ಆಗಿ ತೆರೆಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಪಳಾರ್‌ ಸಿನಿಮಾದ ಮೂಲಕ ಬೆಳ್ಳಿತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್‌ ಕೂಡ ಶುರುವಾಗಿದೆ. ಇದೀಗ ಗಿಲ್ಲಿ ಸಿನಿಮಾ ಹೊಸ ಹೊಸ ವಿಚಾರಗಳಿಂದ ಸದ್ದು ಮಾಡ್ತಿದೆ. ಒಂದ್ಕಡೆ ಗಿಲ್ಲಿಗೆ ಹೀರೋಯಿನ್‌ ಯಾರು ಅನ್ನೋ ಪ್ರಶ್ನೆ ಫ್ಯಾನ್ಸ್‌ಗೆ ಕಾಡ್ತಿದೆ. ಇದೀಗ ಕಾವ್ಯ ಶೈವ ಫ್ಯಾನ್‌ ಪೇಜ್‌ನಲ್ಲಿ ಮಾಡಿರುವ ಪೋಸ್ಟ್‌ ಭಾರಿ ಕುತೂಹಲ ಮೂಡಿಸಿದೆ. ಮತ್ತೊಂದ್ಕಡೆ ಗಿಲ್ಲಿ ಸಂಭಾವನೆ ಬಗ್ಗೆ ಕೂಡ ಟಾಕ್‌ ಶುರುವಾಗಿದೆ.

ಇದನ್ನೂ ಓದಿ: ಗೌತಮ್ ವಿರುದ್ಧ ಸೇಡುತೀರಿಸಿಕೊಳ್ಳಲು ಶಕುಂತಲಾ ಶಪಥ – ಕೇಡಿ ಜೇಡಿ ಜೊತೆ ಕೈ ಜೋಡಿಸಿದ ಶಕುಂತಲಾ

ಪಂಚಿಂಗ್ ಡೈಲಾಗ್ ಹೊಡೆಯೋ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಿಲ್ಲಿ ನಟ ಹಾಸ್ಯ ನಟನಾಗಿ ಗಮನ ಸೆಳೆದಿರೋದು ನಿಮ್ಗೆಲ್ಲಾ ಗೊತ್ತೇ ಇದೆ‌. ಬಿಗ್‌ಬಾಸ್‌ ಮನೆಗೆ ಹೋಗಿ ಬಂದ್ಮೇಲಂತೂ ಗಿಲ್ಲಿ ಜನಪ್ರೀಯತೆ ಮತ್ತಷ್ಟು ಹೆಚ್ಚಾಗಿದೆ. ಗಿಲ್ಲಿ ಈಗ ಮುಟ್ಟಿದ್ದೆಲ್ಲಾ ಚಿನ್ನ ಆಗಿದೆ. ಬಿಗ್‌ ಬಾಸ್‌ ಟ್ರೋಫಿ ಗೆದ್ದಾದ್ಮೇಲೆ ಒಂದಾದ ಮೇಲೊಂದು ಕಾರ್ಯಕ್ರಮಗಳಿಗೆ ಗೆಸ್ಟ್‌ ಆಗಿ ಹೋಗಿದ್ರು. ಇದೀಗ ಗಿಲ್ಲಿ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಅದೂ ಕೂಡ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದಾರೆ. ಪಳಾರ್‌ ಸಿನಿಮಾದಲ್ಲಿ ಗಿಲ್ಲಿ ನಾಯಕನ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ಇಷ್ಟು ದಿನ ಕಾಮಿಡಿ ನಟನಾಗಿ ನಟಿಸಿದ್ದ ಗಿಲ್ಲಿನಟ ಈಗ ಪಳಾರ್‌ ಸಿನಿಮಾದ ಮೂಲಕ ಹೀರೋ ಆಗಿ ತೆರೆಮೇಲೆ ಅಬ್ಬರಿಸಲು ರೆಡಿ ಆಗಿದ್ದಾರೆ. ಬಿಗ್ ಬಜೆಟ್ ಸಿನಿಮಾಗಳನ್ನ ನಿರ್ಮಿಸಿರುವ ಕೆವಿಎನ್‌ ಪ್ರೊಡಕ್ಷನ್ಸ್ ಸಂಸ್ಥೆ ಪಳಾರ್‌ ಚಿತ್ರವನ್ನ ತಯಾರಿಸುತ್ತಿದೆ. ಚಂದ್ರ ಮೋಹನ್ ಆ್ಯಕ್ಷನ್​ ಕಟ್​ ಹೇಳುತ್ತಿರುವ ಗಿಲ್ಲಿ ನಟನ ಚಿತ್ರದ ಮುಹೂರ್ತ ಇತ್ತೀಚೆಗೆ, ಬೆಂಗಳೂರಿನ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಸಮಾರಂಭಕ್ಕೆ ಸ್ಯಾಂಡಲ್​ವುಡ್​ ಗಣ್ಯರು ಸಾಕ್ಷಿಯಾಗಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ಕ್ಲ್ಯಾಪ್ ಮಾಡಿದ್ರೆ, ನಿರ್ಮಾಪಕ ರಮೇಶ್ ರೆಡ್ಡಿ ಕ್ಯಾಮರಾ ಚಾಲನೆ‌ ಮಾಡಿದ್ರು. ಈ ಮೂಲಕ ಅಪ್ಪಟ ಕನ್ನಡ ಪ್ರತಿಭೆಗೆ ಹಿರಿಯರ ಸಾಥ್ ಸಿಕ್ಕಿದೆ.  ಈಗಾಗಲೇ ಶೂಟಿಂಗ್‌ ಶುರುವಾಗಿದೆ. ಇದೀಗ ಗಿಲ್ಲಿಗೆ ಹೀರೋಯಿನ್‌ ಯಾರು ಅನ್ನೋ ಪ್ರಶ್ನೆ ಫ್ಯಾನ್ಸ್‌ನ ಕಾಡ್ತಿದೆ.

ಪಳಾರ್‌ ಸಿನಿಮಾದ ಹೀರೋಯಿನ್‌ ಯಾರು ಅನ್ನೋದನ್ನ ಚಿತ್ರ ತಂಡ ಇನ್ನೂ ರಿವೀಲ್‌ ಮಾಡಿಲ್ಲ. ಆದ್ರೆ ಸೋಶಿಯಲ್‌ ಮೀಡಿಯಾದಲ್ಲಿ ಗಿಲ್ಲಿಗೆ ಹಿರೋಯಿನ್‌ ಆಗಿ ನಟಿ ಕಾವ್ಯ ಶೈವ, ಶಾನ್ವಿ ಶ್ರೀವಾಸ್ತವ, ಪ್ರಿಯಾ ಆಚಾರ್ ಮುಂತಾದವರ ಹೆಸರುಗಳು ಕೇಳಿಬರುತ್ತಿವೆ. ಆದ್ರೆ ದಕಾವ್ಯ ಶೈವ ಹೆಸರಿನಲ್ಲಿರುವ ಫ್ಯಾನ್ ಪೇಜ್‌ವೊಂದು ಪೋಸ್ಟರ್‌ ವೊಂದನ್ನ ಶೇರ್ ಮಾಡಿದೆ. ಅದರಲ್ಲಿ ಪಳಾರ್ ಹೀರೋಯಿನ್ ಲೋಡಿಂಗ್.. ಕಮ್ಮಿಂಗ್ ಸೂನ್  ಎಂದು ಬರೆಯಲಾಗಿದೆ. ಹಾಗೇ, ಆದಷ್ಟು ಬೇಗ.. ನೀವೆಲ್ಲಾ ಕಾಯುತ್ತಿದ್ದ ನಾಯಕಿ.. ಶೀಘ್ರದಲ್ಲೇ ಎಂದು ಕ್ಯಾಪ್ಷನ್ ಕೊಟ್ಟು ಪೋಸ್ಟ್ ಮಾಡಲಾಗಿದೆ. ಇದೀಗ ಈ ಪೋಸ್ಟರ್‌ ನೋಡಿದ ಫ್ಯಾನ್ಸ್‌ ಗಿಲ್ಲಿಗೆ ಕಾವುನೇ ಹೀರೋಯಿನ್.‌ ಜೋಡಿಯನ್ನ ನೋಡೋದಕ್ಕೆ ಕಾಯುತ್ತಿದ್ದೇವೆ. ನಾವು ಬಿಗ್ ಬಾಸ್ ನೋಡಿದ್ದು ಗಿಲ್ಲಿ – ಕಾವ್ಯಗಾಗಿ. ಅವರಿಬ್ಬರು ಟಾಮ್ & ಜೆರಿ ತರಹ. ಸಿನಿಮಾದಲ್ಲೂ ಇವರಿಬ್ಬರು ಜೋಡಿಯಾದ್ರೆ ಇನ್ನು ಖುಷಿ ಅಂತ ಎಂದು ಫ್ಯಾನ್ಸ್ ಕಾಮೆಂಟ್ಸ್ ಮಾಡಿದ್ದಾರೆ. ಆದ್ರೆ ಈ ಬಗ್ಗೆ ಸಿನಿಮಾ ತಂಡ ಅಧಿಕೃತವಾಗಿ ಅನೌನ್ಸ್‌ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಪ್‌ಡೇಟ್‌ ಕೊಡುತ್ತಾ ಅಂತ ಕಾದುನೋಡ್ಬೇಕು.

ಇನ್ನು ಗಿಲ್ಲಿ ಸಂಭಾವನೆ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಬಿಗ್‌ಬಾಸ್‌ ಮುಗಿದ ಬಳಿಕ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸ್ತಿರುವ ಗಿಲ್ಲಿ ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಇದೀಗ ತಮ್ಮ ಮೊದಲ ಸಿನಿಮಾಗೆ ಒಂದು ಕೋಟಿ ರೂಪಾಯಿ ಸಂಭಾವನೆಯಾಗಿ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಈ ಬಗ್ಗೆ ಗಿಲ್ಲಿಯನ್ನ ಪ್ರಶ್ನೆ ಮಾಡಲಾಗಿದೆ. ಆದ್ರೆ ಗಿಲ್ಲಿ ಇದನ್ನ ಒಪ್ಪಿಕೊಂಡಿಲ್ಲ. ಒಟ್ಟಿನಲ್ಲಿ ಮಾತನಾಡಿದ್ದೇವೆ ಅಷ್ಟೇ.. ನಮಗೆ ಕೆವಿಎನ್‌ ದೊಡ್ಡ ಸ್ಟ್ರೆಂಥ್‌. ಇಂಡಿಯಾದಲ್ಲಿ ಕೆವಿಎನ್‌ ಸಂಸ್ಥೆ ಎಲ್ರಿಗೂ ಗೊತ್ತು. ಕೆವಿಎನ್‌ ಅವರು ಇಷ್ಟು ಸಪೋರ್ಟ್‌ ಮಾಡ್ತಾ ಇರೋದು ನನಗೆ ದೊಡ್ಡ ಪ್ಲಸ್‌ ಆಯ್ತು ಹೇಳಿದ್ದಾರೆ.

ಒಟ್ಟಾರೆ ಗಿಲ್ಲಿ ನಾಯಕನಾಗಿ ನಟಿಸುತ್ತಿರುವ ಪಳಾರ್‌ ಸಿನಿಮಾ ಭಾರಿ ಹೈಪ್‌ ಕ್ರಿಯೇಟ್‌ ಮಾಡಿದೆ. ಕಾಮಿಡಿ ನಟನಾಗಿ ಜನಪ್ರಿಯತೆ ಗಳಿಸಿರುವ ಗಿಲ್ಲಿಗೆ ಪಳಾರ್‌ ಸಿನಿಮಾ ಸಕ್ಸಸ್‌ ತಂದುಕೊಡುತ್ತಾ ಅಂತ ಕಾದು ನೋಡ್ಬೇಕು. ಈ ಬಗ್ಗೆ ನಿಮಗೆ ಏನ್‌ ಅನ್ಸುತ್ತೆ ಅಂತ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *