ಚಿನ್ನದ ಸರ ಹಾಕಿಕೊಂಡು ಮಿರ ಮಿರ ಮಿಂಚಿದ ಗಿಲ್ಲಿ – ನಂಗೇ ಅನ್ಕೊಂಡೆ ವಾಪಸ್ ಕೇಳಿದಾಗ ಶಾಕ್ ಆಯ್ತು ಅಂದ ಬಿಗ್ಬಾಸ್ ವಿನ್ನರ್

ಬಿಗ್ ಬಾಸ್ ಕನ್ನಡ 12 ವಿನ್ನರ್ ಗಿಲ್ಲಿ, ಸಾಯಿ ಗೋಲ್ಡ್ ಪ್ಯಾಲೇಸ್ ಶರವಣರ ಚಿನ್ನದ ಅಂಗಡಿ ಉದ್ಘಾಟನೆಗೆ ಹೋಗಿದ್ದು ನೀವೆಲ್ಲಾ ನೋಡಿದ್ದೀರಾ. ಅಲ್ಲಿ ಗಿಲ್ಲಿ ಅವರಿಗೆ ಚಿನ್ನದ ಸರ, ಉಂಗುರಗಳನ್ನು ತೊಡಿಸಲಾಗಿತ್ತು. ಇಷ್ಟು ಚಿನ್ನ ನೋಡಿ ಗಿಲ್ಲಿ ಯಪ್ಪೋ.. ಇಷ್ಟೆಲ್ಲಾ ಚಿನ್ನ ನನಗೆ ಎಂದು ಭಾವಿಸಿದ್ದರು. ನಂತರ ವಾಪಸ್ ಕೊಡ್ಬೇಕು ಅಂತಾ ಹೇಳಿದಾಗ ಹೆಂಗೆ ಅಚ್ಚರಿಯಾಯ್ತು ಅನ್ನೋದನ್ನು ವಿವರಿಸಿದ್ದಾರೆ.
ಇದನ್ನೂ ಓದಿ:ಗಿಲ್ಲಿ ಕಾಮಿಡಿಗೆ ಸಿಎಂ ಫಿದಾ! – ಬಿಗ್‌ಬಾಸ್ ವಿನ್ನರ್‌ಗೆ ಸಿಎಂ ಸಿದ್ದರಾಮಯ್ಯ ಆಶೀರ್ವಾದ!
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ ಸಂದರ್ಶನವೊಂದರಲ್ಲಿ ಒಂದೊಂದೇ ಸ್ವಾರಸ್ಯಕರ ವಿಚಾರವನ್ನು ಹೇಳುತ್ತಿದ್ದಾರೆ. ಗಿಲ್ಲಿ ನಟ ಶುಕ್ರವಾರ ಟಿ.ಎ ಶರವಣ ಅವರ ಸಾಯಿ ಗೋಲ್ಡ್ ಪ್ಯಾಲೇಸ್ ಶಾಖೆಯೊಂದರ ಉದ್ಘಾಟನೆಗೆ ತೆರಳಿದ್ದರು. ಈ ವೇಳೆ ಅವರಿಗೆ ಚಿನ್ನದ ಉಂಗುರಗಳು, ಹಾಗೂ ದಪ್ಪ ಗಾತ್ರದ ಚಿನ್ನದ ಸರಗಳನ್ನು ಹಾಕಲಾಗಿತ್ತು. ಚಿನ್ನ ನೋಡಿದ ಗಿಲ್ಲಿನಟ ತಮ್ಮದೇ ಎಂದುಕೊಂಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಗಿಲ್ಲಿ ಸಾಮಾನ್ಯ ಜೀವನ ನಡೆಸುತ್ತಾ ಬಂದವರು. ಅವರು ಇಷ್ಟೊಂದು ಚಿನ್ನವನ್ನು ನೋಡಿಯೂ ಇರಲಿಲ್ಲ. ಹಾಗಿರುವಾಗ ದಪ್ಪನೆಯ ಚಿನ್ನದ ಹಾರಗಳೆಲ್ಲ ಇವರ ಕುತ್ತಿಗೆಯಲ್ಲಿದ್ದವು. ಶರವಣ ಅವರು ಒಂದೊಂದೇ ಚೈನ್ ಹಾಗೂ ಉಂಗುರು ತೆಗೆದು ಗಿಲ್ಲಿಗೆ ತೊಡಿಸಿದ್ದರು. ಇದನ್ನು ನೋಡಿ ಗಿಲ್ಲಿ ಶಾಕ್ ಆಗಿದ್ದರು. ಅಷ್ಟೇ ಅಲ್ಲ, ಶರವಣಗೂ ಶಾಕ್ ಕೊಟ್ಟಿದ್ದರು. ಈ ಚಿನ್ನ ನನಗೆ ಅಲ್ಲವೇ ಎಂದು ಪ್ರಶ್ನಿಸಿದ್ದರು ಗಿಲ್ಲಿ. ಈ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ. ಗಿಲ್ಲಿ ಕೈಗೆ ಹಾಕುತ್ತಾ ಇದ್ದಿದ್ದು ಉಂಗುರುವಂತೆ. ಅಷ್ಟೊಂದು ಚಿನ್ನವನ್ನು ಅವರು ಹಾಕಿಯೇ ಇರಲಿಲ್ಲವಂತೆ. ಶರವಣ ಅವರು ಚಿನ್ನ ಹಾಕಿದ್ದು ನೋಡಿ ಅದು ತಮಗೇ ಇರಬಹುದು ಎಂದು ಅವರು ಭಾವಿಸಿದ್ದರಂತೆ. ಏನಿದು ಕೇಳ್ತಾನೆ ಇಲ್ವಲ್ಲ. ಬಹುಶಃ ನನಗೆ ಇರಬಹುದು ಎಂದುಕೊಂಡು, ಚೈನ್ನ ಶರ್ಟ್ ಒಳಗೆ ಹಾಕಿಕೊಂಡೆ ಎಂದಿದ್ದಾರೆ ಗಿಲ್ಲಿ. ಜೊತೆಗೆ ಕೈ ತುಂಬಾ ಉಂಗುರ.. ಅಬ್ಬಬ್ಬಾ ಇದೆಲ್ಲಾ ನಂದೆ ಅಂತಾ ಅನ್ಕೊಂಡಿದ್ದೆ. ಆ ಬಳಿಕ ಅಸಲಿ ವಿಷಯ ಗೊತ್ತಾಗಿದೆ. ಅವರು ಚಿನ್ನವನ್ನು ಹಿಂದಿರುಗಿಸಿದ್ದಾರೆ. ಈ ಮೊದಲಿನಿಂದಲೂ ಅವರು ಶಾಪ್ ಉದ್ಘಾಟನೆಗೆ ಬರೋ ಅತಿಥಿಗಳಿಗೆ ಈ ರೀತಿ ಉಂಗುರ ಹಾಕುತ್ತಾರೆ. ಆಮೇಲೆ ವಾಪಸ್ ಪಡೆಯುತ್ತಾರೆ.

ನೋಡಿರಿ

