ಭಾವುಕ ಕ್ಷಣಕ್ಕೆ ಸಾಕ್ಷಿಯಾದ ದೊಡ್ಮನೆ! – ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ರಾಶಿಕಾ, ಸೂರಜ್‌ ಫ್ಯಾಮಿಲಿ!

ಭಾವುಕ ಕ್ಷಣಕ್ಕೆ ಸಾಕ್ಷಿಯಾದ ದೊಡ್ಮನೆ! – ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ರಾಶಿಕಾ, ಸೂರಜ್‌ ಫ್ಯಾಮಿಲಿ!

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ರ ಫಿನಾಲೆಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿದೆ. ಸ್ಪರ್ಧಿಗಳ ಕಣ್ಣು ಟ್ರೋಫಿ ಮೇಲಿದೆ. ಇದೀಗ ದೊಡ್ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸುತ್ತಿದ್ದಾರೆ. ರಾಶಿಕಾ ಹಾಗೂ ಸೂರಜ್‌ ಮನೆಯವರು ಈಗ ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ.

ಇದನ್ನೂ ಓದಿ: ಮೈ ನಡುಗಿಸುವ ಚಳಿಯಲ್ಲೂ ಕೈ ಸುಡುತ್ತಿದೆ ಮಟನ್ ದರ! – ಹೊಸ ವರ್ಷದ ಹೊಸ್ತಿಲಲ್ಲ ಮಾಂಸಪ್ರಿಯರಿಗೆ ಶಾಕ್!‌

ದೊಡ್ಮನೆಗೆ ಮೊದಲು ರಾಶಿಕಾ ಸೋದರ ಎಂಟ್ರಿ ಕೊಟ್ಟಿದ್ದಾರೆ. ರಾಶಿಕಾ ಸಹೋದರ  ಹೆಲ್ಮೆಟ್ ಧರಿಸಿಕೊಂಡು ಮನೆಯೊಳಗೆ ಬಂದಿದ್ದಾರೆ. ಸ್ಪರ್ಧಿಗಳೆಲ್ಲರೂ ಹಿಡಿದು ಹೆಲ್ಮೆಟ್ ಕಳಚಿದಾಗ ಬಂದಂತಹ ವ್ಯಕ್ತಿ ರಾಶಿಕಾ ಸೋದರ ಅಂತ ಗೊತ್ತಾಗಿದೆ. ತದ ನಂತರ ರಾಶಿಕಾ ತಾಯಿ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಗಿಲ್ಲಿ ಅವರು ಐವರು ಪುರುಷ ಸ್ಪರ್ಧಿಗಳಲ್ಲಿ ನಿಮಗ್ಯಾರು ಇಷ್ಟ ಅಂತ ಕೇಳಿದ್ದಾರೆ. ಆಗ ರಾಶಿಕಾ ಅಮ್ಮ ಒಂದು ಮಾತು ಹೇಳ್ತಾರೆ. ನಮಗೆ ಇವರೇ ಅಂತ ಏನೂ ಇಲ್ಲ. ಎಲ್ಲರೂ ಇಷ್ಟ ಆಗುತ್ತಾರೆ ಎಂದಿದ್ದಾರೆ.

ಇನ್ನು ಮನೆಗೆ ಸೂರಜ್‌ ತಾಯಿ ಕೂಡ ಬಂದಿದ್ದಾರೆ. ಇನ್ನು ಸೂರಜ್‌ ತಾಯಿ ಅವರ ಲೆಟರ್‌ ಕೂಡ ಬಂದಿದೆ. ನೀನು ಇಲ್ಲದೇ ಅಡುಗೆ ಮಾಡಲು ಮನಸ್ಸು ಬರ್ತಿಲ್ಲ. ಏನಾದರೂ ಅಡುಗೆ ಮಾಡಿ ಕಳುಹಿಸಿಕೊಡು ಎಂದು ಬಾಕ್ಸ್‌ ಜೊತೆಗೆ ಲೆಟರ್‌ ಕೂಡ ಕಳುಹಿಸಿಕೊಟ್ಟಿದ್ದಾರೆ. ಇದಾದ ಬಳಿಕವೇ ತಾತಿಗೋಸ್ಕರ ಅಡುಗೆ ಮಾಡಿ ಬಾಕ್ಸ್‌ನಲ್ಲಿ ತುಂಬಿಸಿ ಕನ್ಫೆಷನ್ ರೂಮ್‌ನಲ್ಲಿರಿಸಲು ಹೋದಾಗ ತಾಯಿಯನ್ನ ನೋಡಿ ಭಾವುಕರಾಗುತ್ತಾರೆ ಸೂರಜ್‌. ಸದ್ಯ ಈ ವಾರ ಬಿಗ್‌ಬಾಸ್‌ ಮನೆ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಸ್ಪರ್ಧಿಗಳ ಜೊತೆಗೆ ಅವರ ಮನೆಯವರು ಕೂಡ ವೀಕ್ಷಕರಿಗೆ ಮನರಂಜನೆ ನೀಡಲಿದ್ದಾರೆ.

Shwetha M