ಸೋಲಬಹುದು.. ಸತ್ತಿಲ್ಲ – ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಬೇಜಾರಾಗಿದ್ದು ಯಾಕೆ?
ಗಿಲ್ಲಿ ಗೆಲ್ಲಬೇಕು.. ಅಭಿಮಾನಿಗಳ ನಿರೀಕ್ಷೆಗೆ ಸಿಗುತ್ತಾ ಫಲ?

ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋನ ಗ್ರಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಇಡೀ ಶೋನ ಹೆಗಲ ಮೇಲೆ ಹೊತ್ತು ಸಾಗಿದ್ದು ಗಿಲ್ಲಿನಟ. ಯಾವುದೇ ಪ್ರೋಮೋ ಇರಲಿ, ಒಂದೂವರೆ ಗಂಟೆ ಶೋ ಪ್ರಸಾರವಿರಲಿ, ಗಿಲ್ಲಿ ನಟ ಮಾತಾಡಿದರೆ ಮಾತ್ರ ವೀಕ್ಷಕರಿಗೆ ಬೋರ್ ಆಗುವುದಿಲ್ಲ. ಹೀಗಿದ್ದರೂ ಕೂಡಾ ಗಿಲ್ಲಿ ನಟನ ಸೈಡ್‌ಲೈನ್ ಮಾಡಲಾಗುತ್ತಿದೆಯಾ?, ಫಿನಾಲೆಗೆ ಹತ್ತಿರ ಬರುತ್ತಿದ್ದಂತೆ ಬೇಕಂತಾನೇ ಗಿಲ್ಲಿ ನಟನ ಬಿಟ್ಟು ಬೇರೆಯವರನ್ನು ಮೆರೆಸುತ್ತಿದ್ದಾರಾ ಎಂಬ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ.
ಇದನ್ನೂ ಓದಿ:ಮಲ್ಲಮ್ಮ ಯಾಕೋ ಮೊದಲಿನಂತಿಲ್ಲ! – ಮಲ್ಲಮ್ಮ ಮೇಲೂ ಅಸಮಧಾನ ಹೊರ ಹಾಕಿದ ಧ್ರುವಂತ್!
ನೀವೆಲ್ಲಾ ಬಿಗ್‌ಬಾಸ್ ವೀಕ್ಷಕರೇ ಇರಬಹುದು. ನಿಮಗೆ ಬಿಗ್‌ಬಾಸ್‌ನಲ್ಲಿ ಗಿಲ್ಲಿನಟನ ಎಪಿಸೋಡ್ ಇಲ್ಲದೇ ಇದ್ದರೆ ರಿಯಾಲಿಟಿ ಶೋ ಕಳೆಗಟ್ಟಿದೆಯಾ?. ಹೀಗೊಂದು ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಂದಿದೆ. ಹೌದು. ಕಲರ್ಸ್ ಕನ್ನಡ ತನ್ನ ಪ್ರೋಮೋದಲ್ಲಿ ಗಿಲ್ಲಿ ನಟನಿಲ್ಲದೇ ಪ್ರೋಮೋ ಬಿಟ್ಟಿದ್ದೇ ಇಲ್ಲ. ಇನ್ನು ಶೋ ಎಪಿಸೋಡ್‌ನಲ್ಲೂ ಅಷ್ಟೇ. ಗಿಲ್ಲಿನಟನ ಕಾಮಿಡಿ ಮಾತ್ರ ಖುಷಿ ಕೊಡುತ್ತೆ. ಇಲ್ಲಾಂದ್ರೆ, ಒಬ್ಬರ ಮೇಲೆ ಒಬ್ಬರು ಉರಿ ಪಟ್ಟುಕೊಳ್ಳುವುದು, ಜಗಳವಾಡುವುದು. ಈ ಜಗಳದಲ್ಲಿ ಅನೇಕ ಬಾರಿ ಅವಹೇಳನವೇ ಹೆಚ್ಚು. ಆದರೂ ಕೂಡಾ ಇಡೀ ಸೀಸನ್ ನ ಆಟ ಅಂದಾಗ ಕೇವಲ ದೈಹಿಕ ಸಾಮರ್ಥ್ಯವೇ ಮಾತ್ರ ಆಗುವುದಾದರೆ, ಅದಕ್ಕಂತಾನೇ ಬೇರೆ ಬೇರೆ ರಿಯಾಲಿಟಿ ಶೋಗಳಿಲ್ವಾ?. ಇದು ವೈಯಕ್ತಿಕ ಆಟ. ಇದು ವ್ಯಕ್ತಿಯೊಬ್ಬರು ವೀಕ್ಷಕರ ಮನಸಿಗೆ ಇಷ್ಟವಾಗುವ ಆಟ. ಆದರೆ, ಇಷ್ಟು ದಿನ ಚಾನೆಲ್‌ಗೂ, ರೇಟಿಂಗ್‌ಗೂ ಗಿಲ್ಲಿ ನಟನೇ ಬೇಕಿತ್ತು. ಇದೀಗ ಫಿನಾಲೆ ಹತ್ತಿರ ಬರುವಾಗ ಗಿಲ್ಲಿ ನಟನ ಬಗ್ಗೆ ಚಕಾರ ಎತ್ತಲು ಕೂಡಾ ಸ್ವತಃ ಕಿಚ್ಚ ಸುದೀಪ್ ಕೂಡಾ ಹಿಂದೆ ಮುಂದೆ ನೋಡುತ್ತಿದ್ದಾರೆ.
ಆರಂಭದ ಮೂರು ವಾರಗಳಲ್ಲಿ ದೊಡ್ಮನೆಯಲ್ಲಿದ್ದವರಲ್ಲಿ ಗಿಲ್ಲಿ ನಟ ಬೆಸ್ಟ್, ಟ್ರೋಫಿ ಗೆಲ್ಲುವ ಸಾಧ್ಯತೆ ಇದೆ ಎಂಬ ಡೌಟ್ ಬಂದಿತ್ತು. ಇತ್ತೀಚೆಗಂತೂ ಗಿಲ್ಲಿ ನಟ ಅವರು ಒನ್ ಮ್ಯಾನ್ ಶೋ ಎನ್ನೋ ಥರ ಬಿಗ್ ಬಾಸ್ ಮನೆಯಲ್ಲಿದ್ದರು. ಗಿಲ್ಲಿ ನಟ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಅವರು ಫಿನಾಲೆ ವೀಕ್ ತಲುಪಿದ್ದಾರೆ. ವೀಕೆಂಡ್‌ನಲ್ಲಿ ಗಿಲ್ಲಿ ನಟ ಎವಿಕ್ಷನ್ ಭಾಷಣ ನೀಡಿದ್ದಾರೆ. ‘ಎವಿಕ್ಷನ್ ಆದ್ರೆ ಹೇಗೆ ಮಾತಾಡ್ತೀರಾ’ ಎಂದು ಸುದೀಪ್ ಕೇಳಿದರು. ಗಿಲ್ಲಿ ಅದ್ಭುತವಾಗಿ ಮಾತನಾಡಿದರು. ‘ಸೋಲಬಹುದು, ಸತ್ತಿಲ್ಲ’ ಎಂಬ ಸುದೀಪ್ ಮಾತನ್ನು ನೆನಪಿಸಿಕೊಂಡರು.
ಗಿಲ್ಲಿ ನಟ ಅವರು ಬಿಗ್‌ಬಾಸ್ ಮನೆಯಲ್ಲಿ ಒನ್ ಮ್ಯಾನ್ ಶೋ ಅನ್ನೋದ್ರಲ್ಲಿ ನೋ ಡೌಟ್. ಬಹುತೇಕರು ಗಿಲ್ಲಿ ನಟ ಅವರೇ ಬಿಗ್ ಬಾಸ್ ಗೆಲ್ಲಬಹುದು ಎನ್ನುತ್ತಿದ್ದಾರೆ. ಈ ಬಗ್ಗೆ ಹೆಚ್ಚು ನಿರೀಕ್ಷೆಗಳಿವೆ. ಇದರ ಮಧ್ಯೆಯೇ, ಗಿಲ್ಲಿ ನಟನ ಜನಪ್ರಿಯತೆ, ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಮತ್ತು ಸಿನಿಮಾಗಳಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ಗಿಲ್ಲಿ ನಟ ಅವರು ಬಿಗ್ ಬಾಸ್ ಟ್ರೋಫಿ ಪಡೆಯುತ್ತಾರೋ ಇಲ್ಲವೋ ಅಥವಾ ಶೋ ಗೆಲ್ಲಲಿ, ಬಿಡಲಿ, ಆದರೆ ಒಂದು ಕಡೆ ಜನರ ಮನಸ್ಸನ್ನು ಗೆದ್ದಿದ್ದಾರೆ. ಆದರೆ, ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ, ಗಿಲ್ಲಿ ನಟನೇ ಬಿಗ್‌ಬಾಸ್ ಗೆಲ್ಲಬೇಕು ಅನ್ನೋ ನಿರೀಕ್ಷೆಯಂತೂ ಹೆಚ್ಚಾಗಿದೆ.

ನೋಡಿರಿ

