ಗಿಲ್ಲಿ ಮೀಸೆ ಬೋಳಿಸಿದ್ದು ಹೊಟ್ಟೆಕಿಚ್ಚಿಗಾ? – ಗಿಲ್ಲಿನಟನ ಕಿಚ್ಚ ಸುದೀಪ್‌ ಹೊಗಳಿದ್ರೆ ಉರಿನಾ?

ಗಿಲ್ಲಿ ಮೀಸೆ ಬೋಳಿಸಿದ್ದು ಹೊಟ್ಟೆಕಿಚ್ಚಿಗಾ? – ಗಿಲ್ಲಿನಟನ ಕಿಚ್ಚ ಸುದೀಪ್‌ ಹೊಗಳಿದ್ರೆ ಉರಿನಾ?

ಬಿಗ್‌ ಬಾಸ್‌ ಮನೆಯಲ್ಲಿ ಸ್ಟ್ರಾಂಗ್‌ ಸ್ಪರ್ಧಿ ಎನಿಸಿಕೊಂಡಿದ್ದಾರೆ. ದೊಡ್ಮನೆಯಲ್ಲಿ ಆಟ ಆಡೋದ್ರ ಜೊತೆಗೆ ಸಾಕಷ್ಟು ಮನರಂಜನೆ ನೀಡ್ತಿದ್ದಾರೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಸೆಟ್‌ ಮಾಡಿದ್ದಾರೆ. ಗಿಲ್ಲಿ ನಟನ ಪಂಚಿಂಗ್‌ ಡೈಲಾಗ್ಸ್‌.. ಸ್ಪರ್ಧಿಗಳಿಗೆ ನೀಡ್ತಿರೋ ಕೌಂಟರ್‌ ವೀಕ್ಷಕರಿಗೆ ಸಖತ್‌ ಇಷ್ಟವಾಗ್ತಿದೆ. ಆದ್ರೆ ದೊಡ್ಮನೆಯಲ್ಲಿ ಸಹ ಸ್ಪರ್ಧಿಗಳು ಗಿಲ್ಲಿನಟನನ್ನೇ ಟಾರ್ಗೆಟ್‌ ಮಾಡಿದಂತೆ ಕಾಣ್ತಿದೆ. ಇದೀಗ ಗಿಲ್ಲಿನಟನ ಮೀಸೆಯನ್ನ ಅರ್ಧ ಬೋಳಿಸಿಬಿಟ್ಟಿದ್ದಾರೆ. ಇದೀಗ ಗಿಲ್ಲಿನಟ ಮೀಸೆ ತೆಗೆದಿದ್ದು ತಮಾಷೆಗಾ? ಹೊಟ್ಟೆಕಿಚ್ಚಿಗಾ ಅನ್ನೋ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ಆಸೀಸ್ ವಿರುದ್ಧ ಕಣಕ್ಕಿಳಿದ ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ – 3ನೇ ಪಂದ್ಯದಲ್ಲಾದರೂ ಪಾಠ ಕಲಿಯುತ್ತಾ ಭಾರತ?

ದೊಡ್ಮನೆಯಲ್ಲಿ ಗಿಲ್ಲಿನಟ ಹಾಗೂ ಕಾವ್ಯ ಶೈವ ಸೂಪರ್‌ ಜೋಡಿ ಎಸಿನಿಕೊಂಡಿದೆ. ಆರಂಭದಿಂದಲೂ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟುಕೊಡ್ತಿಲ್ಲ.. ಗಿಲ್ಲಿ ನಟನ ಪರ ಕಾವ್ಯ ಸ್ಟ್ಯಾಂಡ್‌ ತಗೊಂಡ್ರೆ, ಗಿಲ್ಲಿ ಕಾವ್ಯಗಾಗಿ ಏನ್‌ ಬೇಕಾದ್ರೂ ಮಾಡೋಕೆ ರೆಡಿ ಇದ್ದಾನೆ. ಮೊನ್ನೆಯಷ್ಟೇ ರಿಷಾ ಜೊತೆ ಕ್ಲೋಸ್‌ ಆಗಿದ್ದಕ್ಕೆ ಕಾವ್ಯ, ಗಿಲ್ಲಿ ಮೇಲೆ ಮುನಿಸಿಕೊಂಡಿದ್ರು. ಗಿಲ್ಲಿ, ಪ್ಲೀಸ್ ಕಾವು ಮಾತನಾಡು.. ಅಂತಾ ರಿಕ್ವೇಸ್ಟ್ ಮಾಡಿದ್ದು, ತನ್ನನ್ನು ಕ್ಷಮಿಸಿ, ಮಾತನಾಡು ಅಂತಾ ಕಾವ್ಯಗೆ ಗಿಲ್ಲಿ ಅಂಗಲಾಚಿದ್ದು ಇದೆ. ನಿನ್ನ ಜೊತೆ ಮಾತಾಡಬೇಕು ಅಂದ್ರೆ ನಾನೊಂದು ಹೇಳ್ತೀನಿ, ಅದನ್ನು ಮಾಡಿದ್ರೆ ಮಾತ್ರ ಮಾತಾಡ್ತೀನಿ ಎಂದು ಕಾವ್ಯ ಷರತ್ತು ಇಟ್ಟಿದ್ದಾರೆ. ಬಳಿಕ ಕಾವ್ಯ ಕ್ಲೀನ್‌ ಶೇವ್‌ ಮಾಡಲು ಹೇಳಿದ್ರು. ಆದ್ರೆ ಗಿಲ್ಲಿ ಕ್ಲೀನ್‌ ಶೇವ್ ಮಾಡದೇ, ಕೆಂಪೇಗೌಡ ಲುಕ್‌ ಮಾಡಿಕೊಂಡಿದ್ರು. ಆದ್ರೀಗ ಸಹ ಸ್ಪರ್ಧಿಗಳು ಗಿಲ್ಲಿ ಮೀಸೆನ ಬೋಳಿಸಿದ್ದಾರೆ. ಇದ್ರ ಪ್ರೋಮೋ ರಿಲೀಸ್‌ ಆಗಿದೆ.

ಪ್ರೋಮೋದಲ್ಲಿ ರಘು ಚೈನ್‌ ಕೊಡು ಎಂದು ಹೇಳುತ್ತಲೇ ಇದ್ದರು. ಆದರೆ ಗಿಲ್ಲಿ ನಟ ಮಾತ್ರ ಕೊಟ್ಟಿರಲಿಲ್ಲ. ಹುಡುಕ್ತೀನಿ ಎಂದು ಗಿಲ್ಲಿ ನಟ ಕಾರಣ ಕೊಡುತ್ತಿದ್ದರು. ಈಗ ಅವರಿಗೆ ಶಿಕ್ಷೆ ಸಿಕ್ಕಿದೆ. ಗಿಲ್ಲಿ ನಟ ಎಲ್ಲರೂ ಸೇರಿಕೊಂಡು ಬಾತ್‌ರೂಮ್‌ ಏರಿಯಾಕ್ಕೆ ಕರೆದುಕೊಂಡು ಬಂದಿದ್ದಾರೆ. ಗಿಲ್ಲಿ ನಟ ಬೇಡ ಎಂದರೂ ಕೂಡ ಅವರು ಕೇಳದೆ, ಶೇವ್‌ ಮಾಡಿದ್ದಾರೆ. ಆ ಬಳಿಕ ಅರ್ಧ ಮೀಸೆಯನ್ನು ಹಾಗೆ ಬಿಟ್ಟಿದ್ದಾರೆ. ಬಳಿಕ ಗಿಲ್ಲಿ ನಟ ಸೈಲೆಂಟ್‌ ಆಗಿ ಮಿರರ್‌ ಮುಂದೆ ನಿಂತಿದ್ದಾರೆ. ಇದೀಗ ಗಿಲ್ಲಿನಟನ ಮೀಸೆ ಬೋಳಿಸಿದ ಸ್ಪರ್ಧಿಗಳ ವಿರುದ್ದ ವೀಕ್ಷಕರು ಸಿಟ್ಟಾಗಿದ್ದಾರೆ. ಒಂದು ಹೆಣ್ಣಿನ ಮೇಲೆ ಕೈ ಹಾಕಿದ್ರೆ ಎಷ್ಟು ಕೋಪ ಬರುತ್ತದೆ, ಒಂದು ಗಂಡಸಿನ ಮೀಸೆ ಮೇಲೆ ಕೈ ಹಾಕಿದ್ರೆ ಕೋಪ ಬರೋದಿಲ್ವಾ? ಎಂದು ವೀಕ್ಷಕರು ಕಾಮೆಂಟ್‌ ಮಾಡುತ್ತಿದ್ದಾರೆ. ಮೊನ್ನೆ ಪ್ಯಾಂಟ್ ಹರಿದ್ರು.. ನಿನ್ನೆ ಪಂಚೆ ಎಳೆಯೋಕೆ ಬಂದ್ರು.. ಈಗ ನಾಲ್ಕೈದು ಜನರು ಸೇರ್ಕೊಂಡು ಮೀಸೆ ತೆಗೆಯೋದು! ಏನಿದು ಮನುಷ್ಯತ್ವವೇ? ನಾಲ್ಕೈದು ಜನ ಹಿಡ್ಕೊಂಡು ಕಿಡ್ನಿಯನ್ನು ತೆಗೆದು ಮಾರ್ತಿರೇನೋ ನೀವು? ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು, ಇದು ತಮಾಷೆಗೆ ಮೀಸೆ ಬೋಳಿಸಿದಂತೆ ಕಾಣ್ತಿಲ್ಲ.. ಹೊಟ್ಟೆ ಕಿಚ್ಚಿಗೆ ಹೀಗೆ ಮಾಡಿದ್ದಾರೆ.. ಕಿಚ್ಚ ಸುದೀಪ್‌ ಗಿಲ್ಲಿಯನ್ನ ಹೊಗಳಿದ್ರೆ ಬೇರೆಯವರಿಗೆ ಉರಿ..  ಇದು ತಪ್ಪು ಅಲ್ವಾ ಬಿಗ್ ಬಾಸ್? ಇದಕ್ಕೆ ಏನು ಹೇಳಲ್ವಾ? ಮೊನ್ನೆ ಪ್ಯಾಂಟ್ ಹರಿದು ಹಾಕಿದ್ರು. ಇದೆ ಕಥೆ ಬೇರೆಯವರಿಗೆ ಆಗಿದ್ರೆ ಸುಮ್ನೆ ಇರುತಿದ್ರ ಹೇಳಿ ಎಂದು ಹೇಳಿದ್ದಾರೆ.

Shwetha M