ದರ್ಶನ್‌ ಡೆವಿಲ್‌ ಚಿತ್ರದಲ್ಲಿ ಗಿಲ್ಲಿನಟ!  ಡೆವಿಲ್​​ನಲ್ಲಿ ಕಾಮಿಡಿ ಕಿಂಗ್‌ಗೆ ಖಡಕ್ ರೋಲ್!

ದರ್ಶನ್‌ ಡೆವಿಲ್‌ ಚಿತ್ರದಲ್ಲಿ ಗಿಲ್ಲಿನಟ!  ಡೆವಿಲ್​​ನಲ್ಲಿ ಕಾಮಿಡಿ ಕಿಂಗ್‌ಗೆ ಖಡಕ್ ರೋಲ್!

ಗಿಲ್ಲಿನಟ ಹವಾ ಜೋರಾಗಿದೆ. ಬಿಗ್‌ ಬಾಸ್‌ಗೆ ಬಂದ್ಮೇಲಂತೂ ಕಾಮಿಡಿ ಸ್ಟಾರ್‌ ಖ್ಯಾತಿ ಹೆಚ್ಚಾಗಿದೆ. ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ಜಬರ್‌ದಸ್ತ್‌ ಆಟ ಆಡ್ತಿದ್ದು, ಸಾವಿರಾರು ಫ್ಯಾನ್ಸ್‌ ಹುಟ್ಟಿಕೊಂಡಿದ್ದಾರೆ. ಗಿಲ್ಲಿನಟ ಆಟಕ್ಕೆ ಫ್ಯಾನ್ಸ್‌ ಭೇಷ್‌ ಅಂತಿದ್ದಾರೆ. ಇದೀಗ ಗಿಲ್ಲಿನಟ ಫ್ಯಾನ್ಸ್ ಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಡೆವಿಲ್‌ ಸಿನಿಮಾದಲ್ಲಿ ಗಿಲ್ಲಿ ನಟಿಸುತ್ತಿದ್ದು, ಗಿಲ್ಲಿ ಲುಕ್‌ ರಿವೀಲ್‌ ಆಗಿದೆ.

ಇದನ್ನೂ ಓದಿ: ಶವ ಹೂತಿಟ್ಟ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌! – ಎಸ್‍ಐಟಿ ಮುಖ್ಯಸ್ಥರಿಗೆ ಮತ್ತೊಂದು ಪತ್ರ!

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಗಿಲ್ಲಿ ಉತ್ತಮ ಆಟ ಆಡುತ್ತಿರುವಾಗಲೇ ಹೊರಗೆ ಒಂದು ವಿಶೇಷ ವಿಚಾರ ರಿವೀಲ್ ಆಗಿದೆ. ಗಿಲ್ಲಿನಟ ದರ್ಶನ್ ನಟನೆಯ ಡೆವಿಲ್ ಸಿನಿಮಾದಲ್ಲಿ ನಟಿಸಿರುವ ಬಗ್ಗೆ ಅಪ್​​ಡೇಟ್ ನೀಡಲಾಗಿದೆ. ಜೊತೆಗೆ ಪೋಸ್ಟರ್ ಕೂಡ ಬಿಡುಗಡೆ ಆಗಿದೆ.  ಗಿಲ್ಲಿ ಪ್ರಮುಖ ಪಾತ್ರವನ್ನು ಮಾಡುತ್ತಿದ್ದಾರೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ. ಶರ್ಟ್ ಹಾಕಿ, ಅದಕ್ಕೆ ಟೈ ಹಾಕಿ ಗಿಲ್ಲಿ ಸೀರಿಯಸ್‌ ಲುಕ್‌ ಕೊಟ್ಟಿದ್ದಾರೆ.

ನಟ ದರ್ಶನ್‌ ಜೈಲು ಸೇರಿರುವ ಹಿನ್ನೆಲೆ ಸಿನಿಮಾ ಬಿಡುಗಡೆ ರಿಲೀಸ್ ದಿನಾಂಕ ಮುಂದಕ್ಕೆ ಹೊಗಲಿದೆ ಎಂಬ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ, ಇದನ್ನು ನಂಬಂದಂತೆ ದರ್ಶನ್ ಫ್ಯಾನ್ಸ್ ಕೋರಿಕೊಂಡಿದ್ದರು. ಈಗ ರಿಲೀಸ್ ಆಗಿರೋ ಪೋಸ್ಟರ್​ನಲ್ಲಿ ಡಿಸೆಂಬರ್ 12ರಂದೇ ಸಿನಿಮಾ ಬಿಡುಗಡೆ ಕಾಣಲಿದೆ ಎಂಬ ಸ್ಪಷ್ಟವಾಗುತ್ತಿದೆ.

ದರ್ಶನ್, ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ದಿ ಡೆವಿಲ್ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡಿದ್ದಾರೆ. ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈಗಾಗಲೇ ಟೀಸರ್ ಗಮನ ಸೆಳೆದಿದೆ. ಅಲ್ಲದೇ, ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಹಾಡು ಕೂಡ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ಈ ಚಿತ್ರಕ್ಕೆ ಮಿಲನಾ ಪ್ರಕಾಶ್ ನಿರ್ದೇಶನ ಇದೆ.

Shwetha M