ಟ್ರಿಗರ್ ಮಾಡಿದ್ರೆ ಉಗುರಲ್ಲೇ ಹೊಡೆದು ಸಾಯಿಸ್ತೀನಿ! – ತನ್ನ ತಂಟೆಗೆ ಬಂದ ಧ್ರುವಂತ್‌ಗೆ ಗಿಲ್ಲಿ ವಾರ್ನ್‌!

ಟ್ರಿಗರ್ ಮಾಡಿದ್ರೆ ಉಗುರಲ್ಲೇ ಹೊಡೆದು ಸಾಯಿಸ್ತೀನಿ! – ತನ್ನ ತಂಟೆಗೆ ಬಂದ ಧ್ರುವಂತ್‌ಗೆ ಗಿಲ್ಲಿ ವಾರ್ನ್‌!

ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಹೊಸ ವರ್ಷ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಹೊಸ ವರ್ಷ ಆಚರಣೆ ಜೊತೆ, ಮನರಂಜನೆ ನೀಡಲು ಹಾಡು ರಚಿಸುವಂತೆ ಬಿಗ್‌ಬಾಸ್‌ ಸೂಚಿಸಿದ್ದಾರೆ. ಗಿಲ್ಲಿ ಸೀರಿಯಲ್‌ ಆಗಿ ಮನೆ ಬಗ್ಗೆ ಹಾಡು ಬರೆಯಲು ಶುರು ಮಾಡಿದ್ರೆ, ಇತ್ತ ಧ್ರುವಂತ್‌ ಗಿಲ್ಲಿಯನ್ನ ಕೆಣಕಿದ್ದಾರೆ. ಇದ್ರಿಂದ ಸಿಟ್ಟಾದ ಗಿಲ್ಲಿ ಟ್ರಿಗರ್ ಮಾಡಿದ್ರೆ ಉಗುರಲ್ಲೇ ಹೊಡೆದು ಸಾಯಿಸ್ತೀನಿ ಎಂದಿದ್ದಾರೆ.

ಇದನ್ನೂ ಓದಿ: ಕಡೆಗೂ ಗೊತ್ತಾಯ್ತು ಭೂಮಿಕಾಗೆ ಒಡಲ ರಹಸ್ಯ! – ಭಾಗ್ಯಮ್ಮ ರಾಕ್‌.. ಶಕುಂತಲಾ ಶಾಕ್!‌

ಬಿಗ್‌ಬಾಸ್‌ ಮನೆಯಲ್ಲಿ ಧ್ರುವಂತ್‌ ಒಂದೊಂದು ವಾರ ಒಂದೊಂದು ತರ ಇರ್ತಾರೆ. ಒಂದು ವಾರ ಒಬ್ಬ ಸ್ಪರ್ಧಿ ಜೊತೆ ಕ್ಲೋಸ್‌ ಆದ್ರೆ, ಮತ್ತೊಂದು ವಾರ ಅದೇ ಸ್ಪರ್ಧಿ ವಿರುದ್ಧ ತಿರುಗಿ ಬೀಳ್ತಾರೆ. ಕಳೆದ ವಾರ ಗಿಲ್ಲಿ ಜೊತೆ ಧ್ರುವಂತ್‌ ಫುಲ್‌ ಕ್ಲೋಸ್‌ ಆಗಿದ್ರು. ಆದ್ರೆ ಈ ವಾರ ಧ್ರುವಂತ್‌ ಗಿಲ್ಲಿ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ವಾರದ ಆರಂಭದಿಂದಲೂ ಗಿಲ್ಲಿ ನಟ ಮತ್ತು ಧ್ರುವಂತ್ ಹಾವು-ಮುಂಗೂಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಇದೀಗ ಗಿಲ್ಲಿ ಧ್ರುವಂತ್‌ ಮಾತಿಗೆ ಸಿಟ್ಟಾಗಿದ್ದು, ಟ್ರಿಗರ್ ಮಾಡಿದ್ರೆ ಉಗುರಲ್ಲೇ ಹೊಡೆದು ಸಾಯಿಸ್ತೀನಿ ಎಂದಿದ್ದಾರೆ.

ಬಿಗ್‌ಬಾಸ್ ಸೂಚನೆ ಬಳಿ ಹಾಡು ರಚನೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ರಘು ಜೊತೆ ಚರ್ಚಿಸಿ ಗಿಲ್ಲಿ ನಟ ಸಾಹಿತ್ಯ ಬರೆಯುತ್ತಿರುತ್ತಾರೆ. ಈ ವೇಳೆ ಅಲ್ಲಿಯೇ ಕುಳಿತಿದ್ದ ಧ್ರುವಂತ್, ಹಾಡಿನಲ್ಲಿ ತಮ್ಮ ಹೆಸರು ಸೇರಿಸದಂತೆ ಹೇಳುತ್ತಾರೆ. ಇದಕ್ಕೆ ಕೋಪಗೊಂಡ ಗಿಲ್ಲಿ ನಟ, ಸೇರಿಸುವೆ ಮತ್ತು ಮನೆಯಲ್ಲಿರುವ ಎಲ್ಲಾ ಸದಸ್ಯರ ಹೆಸರುಗಳನ್ನು ಸೇರಿಸುತ್ತೇವೆ ಎಂದು ಹೇಳುತ್ತಾರೆ. ನಿನ್ನ ಹಾಡಿನಲ್ಲೊ ನನ್ನ ಹೆಸರು ಬಂದ್ರೆ ಕಾಗದ ಹರಿದು ಹಾಕುವೆ ಅಂತ ಕೋಪ ವ್ಯಕ್ತಪಡಿಸುತ್ತಾರೆ. ಇದರಿಂದ ಕೋಪಗೊಂಡ ಗಿಲ್ಲಿ ನಟ, ಟ್ರಿಗರ್ ಮಾಡಿದ್ರೆ ಉಗುರಲ್ಲೇ ಹೊಡೆದು ಸಾಯಿಸ್ತೀನಿ ಎಂದು ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ.

ಬುಧವಾರದ ಸಂಚಿಕೆಯಲ್ಲಿಯೂ ಗಿಲ್ಲಿ ನಟನ ವಿರುದ್ಧ ಅಶ್ವಿನಿ ಗೌಡ ಅವರೊಂದಿಗೆ ಸೇರಿಕೊಂಡು ಧ್ರುವಂತ್ ವಾಕ್ಸಮರವೇ ನಡೆಸಿದ್ದರು. ಮನೆಯ ಸದಸ್ಯರು ತಿಳಿ ಹೇಳಿದರೂ ಮೂವರು ತಮ್ಮ ಮಾತುಗಳನ್ನು ನಿಲ್ಲಿಸಿರಲಿಲ್ಲ. ನಿಮ್ಮ ಹಾರಾಟ, ಕೂಗಾಟದಿಂದ ಗಾರ್ಡನ್ ಏರಿಯಾಗೆ ಬರೋದಕ್ಕೆ ಆಗ್ತಿಲ್ಲ ಎಂದು ಸ್ಪಂದನಾ ಬೇಸರ ಹೊರ ಹಾಕಿದ್ದರು.

ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಗಿಲ್ಲಿ ನಟ ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿದ್ದಾರೆ. ಮುಂದಿನ ವಾರ ಕ್ಯಾಪ್ಟನ್ ಆಗುವ ಸದಸ್ಯ ನೇರವಾಗಿ ಗ್ರ್ಯಾಂಡ್ ಫಿನಾಲೆಯ ಟಿಕೆಟ್ ಪಡೆದುಕೊಳ್ಳಲಿದ್ದಾರೆ. ಹಾಗಾಗಿ ಕ್ಯಾಪ್ಟನ್ಸಿ ಟಾಸ್ಕ್ ಯಾರು ಗೆಲ್ತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.

Shwetha M