ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ಗಿಲ್ಲಿ! – ಇನ್ಮುಂದೆ ಸಿನಿಮಾ ನಿರ್ದೇಶನ ಮಾಡ್ತಾರೆ ಕಾಮಿಡಿ ಕಿಂಗ್!‌

ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ಗಿಲ್ಲಿ! – ಇನ್ಮುಂದೆ ಸಿನಿಮಾ ನಿರ್ದೇಶನ ಮಾಡ್ತಾರೆ ಕಾಮಿಡಿ ಕಿಂಗ್!‌

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಗಿಲ್ಲಿನಟ ಗೆದ್ದ ಮೇಲೆ ಫುಲ್‌ ಬ್ಯೂಸಿಯಾಗಿದ್ದಾರೆ. ಒಂದಾದ ಮೇಲೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಲೇ ಇದ್ದಾರೆ. ಗಿಲ್ಲಿ ಮುಂದೇನು ಮಾಡ್ತಾರೆ? ಸಿನಿಮಾದಲ್ಲಿ ನಟಿಸುತ್ತಾರಾ ಅಥವಾ ಡೈರೆಕ್ಷನ್‌ ಫೀಲ್ಡ್‌ ಗೆ ಇಳಿಯುತ್ತಿದ್ದಾರಾ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ರು. ಇದೀಗ ಗಿಲ್ಲಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: ತಾಂಡವ್‌ ಕ್ಷಮಿಸಿದ ಭಾಗ್ಯ.. ಕಟ್ಟಡದಿಂದ ಹಾರಿದ ಶ್ರೇಷ್ಠಾ ಬದುಕಲ್ಲ? – ಪ್ರಮುಖ ಪಾತ್ರವೇ ಎಂಡ್‌?

ಗಿಲ್ಲಿ ಬಿಗ್‌ಬಾಸ್‌ಗೆ ಹೋಗುವ ಮುನ್ನ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಆ ಸಿನಿಮಾಗಳು ಒಂದೊಂದಾಗೇ ರಿಲೀಸ್‌ ಆಗ್ತಿವೆ. ಸದ್ಯ ತಮ್ಮ ಮುಂದಿನ ಸಿನಿಮಾ ʻಸೂಪರ್‌ ಹಿಟ್‌ʼ ಪ್ರಮೋಷನದಲ್ಲಿ ಬ್ಯುಸಿ ಆಗಿದ್ದು, ಫೆ.27ರಂದು ಈ ಸಿನಿಮಾ ತೆರೆಕಾಣುತ್ತಿದೆ. ಇವೆಲ್ಲದ್ರ ಮಧ್ಯೆ ಗಿಲ್ಲಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಗಿಲ್ಲಿ ನಿರ್ದೇಶನದತ್ತ ಮುಖ ಮಾಡಿದ್ದಾರೆ.

ಗಿಲ್ಲಿ ಬರೀ ಕಾಮಿಡಿ, ನಟನೆ ಮೂಲಕ ಮಾತ್ರ ಗುರುತಿಸಿಕೊಂಡಿಲ್ಲ. ಒಳ್ಳೆಯ ಬರಹಗಾರ ಕೂಡ. ಸಿನಿಮಾಗಳಿಗೆ ಡೈಲಾಗ್‌ ಬರೆಯುವ ಗಿಲ್ಲಿ, ತಮ್ಮ ಕಾಮಿಡಿ ಸ್ಕಿಟ್‌ಗಳಿಗೆ ತಾವೇ ಸ್ಕ್ರಿಪ್ಟ್‌ ಬರೆದುಕೊಳ್ಳುತ್ತಾರೆ. ಹಾಗಾಗಿ, ಸಿನಿಮಾವೊಂದನ್ನು ನಿರ್ದೇಶನ ಮಾಡುವ ಬಗ್ಗೆಯೂ ಅವರು ಕನಸನ್ನ ಹೊಂದಿದ್ದಾರೆ. ಆ ಬಗ್ಗೆ ಅಪ್‌ಡೇಟ್‌ ಕೊಟ್ಟಿದ್ದಾರೆ. ಸದ್ಯ ನಾನು ನಿರ್ದೇಶನ ಮಾಡಲಿರುವ ಸಿನಿಮಾದ ಸ್ಕ್ರಿಪ್ಟ್‌ ವರ್ಕ್‌ ನಡೆಯುತ್ತಿದೆ. ನಟನೆಯನ್ನು ಬೇಗ ಮಾಡಬಹುದು. ಸ್ಕ್ರಿಪ್ಟ್‌ ಇರುತ್ತದೆ, ನಿರ್ದೇಶಕರು ಇರುತ್ತಾರೆ, ಅವರು ಹೇಳುತ್ತಾರೆ ನಾವು ನಟನೆ ಮಾಡಿಬಿಡಬಹುದು. ಎಲ್ಲಾ ಮಾಡಿ ಮುಗಿಸಿ, ಸಂಜೆ ಆರು ಗಂಟೆ ಆದಕೂಡಲೇ ಮನೆಗೆ ಹೋಗ್ತಾ ಇರಬಹುದು. ಆದರೆ ನಿರ್ದೇಶನ ಆ ರೀತಿ ಅಲ್ಲ ಎಂದು ಹೇಳಿದ್ದಾರೆ.

ಸ್ಕ್ರಿಪ್ಟ್‌ ಮೇಲೆ ಮೊದಲ ಹಾಳೆ ಮೇಲೆ ಓಂಕಾರ ಬರೆಯುವುದರಿಂದ ಶುರು ಮಾಡಿ, ಸಿನಿಮಾ ಶೂಟಿಂಗ್ ಮುಗಿಸಿ, ಅದನ್ನು ತೆರೆಮೇಲೆ ತರುವವರೆಗೂ ಆತನದ್ದೇ ಎಲ್ಲಾ ಕೆಲಸ, ಅವನದ್ದೇ ಜವಾಬ್ದಾರಿ. ನಿರ್ದೇಶನದ ಅನ್ನೋದು ತಮಾಷೆಯ ಮಾತಲ್ಲ. ನಿರ್ದೇಶಕ ಆಗಬೇಕೆಂದರೆ, ಮೊದಲು ಅದರ ಬಗ್ಗೆ ಜ್ಞಾನ ಇರಬೇಕು, ಅದರ ಬಗ್ಗೆ ತಿಳಿದುಕೊಳ್ಳಬೇಕು. ಅದಕ್ಕೇ ಆದಂತಹ ಸಮಯವನ್ನು ನೀಡಬೇಕು. ಹಾಗಾಗಿ, ಇವೆಲ್ಲಾ ಮುಗಿಸಿಕೊಂಡು, ಅದಕ್ಕೆಂದೇ ನಾನು ಕುಳಿತುಕೊಳ್ಳಬೇಕಿದೆ ಎಂದು ಗಿಲ್ಲಿ ನಟ ಹೇಳಿದ್ದಾರೆ.

ಒಂದು ಲೈನ್‌ ಇದೆ. ಅದರ ಮೇಲೆ ಸ್ಕ್ರೀನ್‌ಪ್ಲೇ ಎಲ್ಲಾ ಬರೆದು ರೆಡಿ ಮಾಡಬೇಕು. ನನ್ನು ಬಳಿ ಪೂರ್ತಿ ಸ್ಕ್ರಿಪ್ಟ್‌ ಇದ್ದರೆ ಮಾತ್ರ ನಾನು ಮಾತನಾಡಲು ಸಾಧ್ಯ. ಆಗತಾನೇ ನಾನು ನಿರ್ಮಾಪಕರಿಗೆ ಕಥೆ ಹೇಳಲು ಸಾಧ್ಯ. ಅದಕ್ಕಿಂತಲೂ ಮುಖ್ಯವಾಗಿ ನಾನು ರೆಡಿ ಆಗಬೇಕು ಎಂದು ಗಿಲ್ಲಿ ನಟ ಹೇಳಿಕೊಂಡಿದ್ದಾರೆ.

Shwetha M