ಗಿಲ್ಲಿ ರಾಜಾಹುಲಿ.. ಅಶ್ವಿನಿ ವಾಚ್‌ಮ್ಯಾನ್.. ಜಂಟಿಗಳಿಗೆ ಬಿಗ್‌ ಬಾಸ್‌ ಅನ್ಯಾಯ? -ಸ್ಪರ್ಧಿಗಳ ರಂಪಾಟ.. ಟಾಸ್ಕ್‌ ರದ್ದು!‌

ಗಿಲ್ಲಿ ರಾಜಾಹುಲಿ.. ಅಶ್ವಿನಿ ವಾಚ್‌ಮ್ಯಾನ್.. ಜಂಟಿಗಳಿಗೆ ಬಿಗ್‌ ಬಾಸ್‌ ಅನ್ಯಾಯ? -ಸ್ಪರ್ಧಿಗಳ ರಂಪಾಟ.. ಟಾಸ್ಕ್‌ ರದ್ದು!‌

ಬಿಗ್‌ ಬಾಸ್‌ ಮನೆಯ ಆಟ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಂಡಿದೆ.. ಶೋ ಆರಂಭವಾಗಿ ಒಂದು ವಾರ ಕೂಡ ಆಗಿಲ್ಲ.. ಸ್ಪರ್ಧಿಗಳ ಮಧ್ಯೆ ಮನಸ್ತಾಪ ಜಾಸ್ತಿಯಾಗ್ತಿದೆ. ಟಾಸ್ಕ್‌ ಮನೆ ಕೆಲಸ ವಿಚಾರಕ್ಕೆ ಫೈಟ್‌ ಶುರುವಾಗಿದೆ.. ಮತ್ತೊಂದ್ಕಡೆ ಗಿಲ್ಲಿ ಕಾವ್ಯ ಒಂಟಿಗಳಿಗೆ ಸರಿಯಾಗೇ ಚಮಕ್‌ ಕೊಡ್ತಾ ಇದ್ದಾರೆ. , ಗಿಲ್ಲಿ ನಟನ ಎಲ್ಲಿ ಹೋದ್ರೂ ಅಶ್ವಿನಿ ವಾಚ್‌ಮ್ಯಾನ್‌ ತರ ಹಿಂದೇನೆ ಸುತ್ತಾತಾ ಇದ್ದಾರೆ.. ಗಿಲ್ಲಿ ಕೂಡ ಯಶ್‌ ಡೈಲಾಗ್‌ ಹೊಡೆದು ಅಶ್ವಿನಿನ ಸರಿಯಾಗೇ ಕಾಲೆಳೆದಿದ್ದಾರೆ.. ಆದ್ರೀಗ ಟಾಸ್ಕ್‌ ವಿಚಾರವಾಗಿ ಮನೆ ರಣರಂಗ ಆಗಿದೆ. ಉಸ್ತುವಾರಿಗಳು ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಇದ್ದಿದ್ರಿಂದಾಗಿ ಟಾಸ್ಕ್‌ ರದ್ದಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡ್ತಿಲ್ಲ.. ಡಿಕೆಶಿ ಹಠ ಬಿಡ್ತಿಲ್ಲ! – ಸರ್ಕಾರ ಪತನ ನಿಶ್ಚಿತ ಎಂದ ಆರ್‌.ಅಶೋಕ್!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶುರುವಾಗಿ ಒಂದು ವಾರ ಕೂಡ ಆಗಿಲ್ಲ. ಆದ್ರೂ ಮೊದಲ ವಾರವೇ ಈ ಸೀಸನ್‌ ನಲ್ಲಿ ಸಾಕಷ್ಟು ಟ್ವಿಸ್ಟ್‌ ನೀಡಲಾಗಿದೆ. ದೊಡ್ಮನೆಯಲ್ಲಿ ಕೆಲ ಸ್ಪರ್ಧಿಗಳು ಮೊದಲ ದಿನದಿಂದಲೇ ಆಟ ಶುರುಮಾಡ್ಕೊಂಡಿದ್ರೆ, ಇನ್ನೂ ಕೆಲವರು ಎಲ್ಲೂ ಕಾಣಿಸಿಕೊಳ್ತಿಲ್ಲ. ಆದ್ರೆ ಹಳ್ಳಿಯಿಂದ ಬಂದ ಮಲ್ಲಮ್ಮ ಚೆನ್ನಾಗಿ ಆಡ್ತಿದ್ದಾರೆ. ಕೊಡೊ ಟಾಸ್ಕ್‌ ಗಳನ್ನ ‌ ಕಂಪ್ಲೀಟ್‌ ಮಾಡ್ತಿದ್ದಾರೆ. ಆದ್ರೂ ಕೂಡ ಸೆಲೆಬ್ರಿಟಿಗಳ ಮಧ್ಯೆ ಇರೋದ್ರಿಂದ ಮಲ್ಲಮ್ಮಗೆ ತಾನೂ ಏನು ಮಾಡ್ತಿಲ್ಲ ಅಂತಾ ಫೀಲ್‌ ಶುರುವಾಗಿದೆ. ಹೀಗಾಗಿ ಮಲ್ಲಮ್ಮ ದೊಡ್ಮನೆಯಲ್ಲಿ ಕಣ್ಣೀರು ಹಾಕಿದ್ರು. ಆಗ ಮಲ್ಲಮ್ಮರನ್ನ ಮಂಜುಭಾಷಿಣಿ ಸಮಾಧಾನ ಮಾಡಿದ್ದಾರೆ. ಇನ್ನು ನಿನ್ನೆಯ ಎಪಿಸೋಡ್‌ ನಲ್ಲಿ ಸ್ಪರ್ಧಿಗಳ ಜಗಳ ವೀಕ್ಷಕರಿಗೆ ಸ್ಪಲ್ಪ ಕಿರಿಕಿರಿ ಅನ್ನಿಸಿದ್ರೂ, ಗಿಲ್ಲಿ ಕ್ವಾಟ್ಲೆ ಮಾತ್ರ ವೀಕ್ಷಕರಿಗೆ ಸಖತ್‌ ಇಷ್ಟವಾಗಿದೆ.. ಸಿಂಕ್‌ ಕ್ಲೀನ್‌ ಮಾಡೋ ವಿಚಾರವಾಗಿ ಒಂಟಿಗಳು ಜಂಟಿಗಳನ್ನ ಕರೆದು ಕ್ಲಾಸ್‌ ತೆಗೆದುಕೊಂಡಿದ್ರು. ಈ ವೇಳೆ ಕಾವ್ಯ ಅಶ್ವಿನಿಯವರನ್ನ ನೋಡಿಲ್ಲ.. ಬೇರೆಲ್ಲೊ ನೋಡ್ತಿದ್ದಾರೆ ಅಂತಾ ಅಶ್ವಿನಿ ಸಿಕ್ಕಿದ್ದೇ ಚಾನ್ಸ್‌ ಅಂತ ಜಗಳವಾಡಿದ್ರು.. ಬಳಿಕ ಅಶ್ವಿನಿ ಗಿಲ್ಲಿ, ಕಾವ್ಯಗೆ ಕಿಚನ್‌ ಕ್ಲೀನ್‌ ಮಾಡೋ ಬದಲು..  ಟಾಯ್ಲೆಟ್‌ ಕ್ಲೀನ್‌ ಮಾಡೋ ಜವಾಬ್ದಾರಿಯನ್ನ ನೀಡಿದ್ರು.. ಈ ಬೆನ್ನಲ್ಲೇ ಕಾವ್ಯ ಅಶ್ವಿನಿ ವಿರುದ್ಧ ರಿವೀಂಜ್‌ ತೀರಿಸಿಕೊಂಡಿದ್ದಾರೆ.. ಎಲ್ಲರಿಗೂ ಟೀ ಮಾಡ್ಕೊಂಡು ಬನ್ನಿ ಅಂದಾಗ, ಟಾಯ್ಲೆಟ್‌ ವಾಶ್‌ ಮಾಡ್ಕೊಂಡು ಬಂದಿದ್ದೀವಿ.. ಅದೆ ಕೈಯಲ್ಲಿ ಟೀ ಮಾಡ್ತಾ ಅಂತಾ ಕೇಳ್ತಿದ್ದಾರೆ. ಬಳಿಕ ಕಾವ್ಯ ಅಶ್ವಿನಿಗೆ ಸಾಲ್ಟ್‌ ಟೀ ಮಾಡಿ ಕೊಟ್ಟಿದ್ದಾರೆ.. ಪ್ರತಿಸಲ ಗಿಲ್ಲಿ ಮಾಡಿದ ತಪ್ಪಿನಿಂದ ಕಾವ್ಯಗೆ ಶಿಕ್ಷೆ ಸಿಗ್ತಿತ್ತು. ಈ ಸಲ ಮಾತ್ರ ಕಾವ್ಯಳಿಂದಾಗಿ ಗಿಲ್ಲಿಗೆ ಒಂಟಿಗಳು  ಶಿಕ್ಷೆ ನೀಡಿದ್ರು.. ಇನ್ನು ಗಿಲ್ಲಿ ಯಶ್‌ ನಟನೆಯ ರಾಜಾಹುಲಿ ಸಿನಿಮಾದ ಡೈಲಾಗ್‌ ಹೊಡೆದು ಅಶ್ವಿನಿಗೆ ಕಣ್ಣು ಹೊಡೆದಿದ್ದಾರೆ.

ಅಶ್ವಿನಿ ಗೌಡ ಎಷ್ಟು ಕೆಲಸ ಕೊಡ್ತಾರೋ ಅಷ್ಟು ಗಿಲ್ಲಿ ಉರಿಸುತ್ತಿದ್ದಾರೆ. ಅಶ್ವಿನಿ ಹೇಳಿದ್ದಕ್ಕೆ ಗಿಲ್ಲಿ ಉಲ್ಟಾ ಮಾಡುತ್ತಿದ್ದಾರೆ. ಗಿಲ್ಲಿ ರಾಜಾಹುಲಿ ಸಿನಿಮಾದ ಯಶ್‌ ಡೈಲಾಗ್‌ ಹೊಡಿದಿದ್ದಾರೆ. ಇದ್ರಲ್ಲಿ ಅಶ್ವಿನಿ ಅತ್ತೆ ಮಗಳ ಪಾರ್ಟ್‌ ಮಾಡಿದ್ರು.. ಈ ಸಿನಿಮಾದಲ್ಲಿ ಯಶ್‌ ಅವರು ನನ್ನ ಅತ್ತೆ ಮಗಳಿಗೆ ಯಾವಾಗಲೂ ಕಣ್ಣು ಹೊಡೆಯುತ್ತೀನಿ, ನಮ್ಮನ್ಯಾರು ಕೇಳೋರು? ಎಂದು ಡೈಲಾಗ್‌ ಹೊಡೆದಿದ್ದರು.  ಆ ಡೈಲಾಗ್‌ನ ಗಿಲ್ಲಿ ಹೇಳಿ ಕಣ್ಣು ಹೊಡೆದಿದ್ದಾರೆ. ಗಿಲ್ಲಿ ಆಕ್ಟಿಂಗ್‌ ನೋಡಿ ಅಶ್ವಿನಿಗೆ ನಗು ಬಂದ್ರೂ ಸಿಟ್ಟು ಬಂದವರಂತೆ ನಟಿಸಿದ್ದಾರೆ..

ಇನ್ನು ಟಾಸ್ಕ್‌ ವಿಚಾರವಾಗಿ ಬಿಗ್‌ ಬಾಸ್‌ ಮನೆ ರಣರಂಗವಾಗಿದೆ. ಮೂರನೇ ವಾರದಲ್ಲಿ ನಡೆಯುವ ಫಿನಾಲೆಗೆ ಫೈನಲಿಸ್ಟ್ ಆಯ್ಕೆ ಮಾಡಲು ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ಗೆ ಅಶ್ವಿನಿ ಗೌಡ, ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಅವರು ಉಸ್ತುವಾರಿ ಆಗಿದ್ದರು. ಉಸ್ತುವಾರಿ ಮಾಡುವಾಗ ನಡೆದ ತಪ್ಪಿನಿಂದ ಇಡೀ ಮನೆ ಅಲ್ಲೋಲ ಕಲ್ಲೋಲ ಆಗಿದೆ. ಟಾಸ್ಕ್ ನಡೆಯುವ ವೇಳೆ ಉಸ್ತುವಾರಿಗಳು ತೆಗೆದುಕೊಂಡ ನಿರ್ಧಾರದ ಬಗ್ಗೆ ಪ್ರಶ್ನೆ ಮೂಡಿದೆ. ಈ ಬಗ್ಗೆ ಬಿಗ್ ಬಾಸ್ ಕೂಡ ಪ್ರಶ್ನೆ ಮಾಡಿದರು. ಆ ಬಳಿಕ ಉಸ್ತುವಾರಿಗಳು ಗೊಂದಲಕ್ಕೆ ಸಿಲುಕಿದರು.. ಮುಂದೇನು ಮಾಡಬೇಕು ಎಂಬುದು ತಿಳಿಯದೇ ಎಲ್ಲರೂ ಕಂಗಾಲಾದರು. ಆಗ ಧನುಷ್ ಹಾಗೂ ಸುಧಿ ಮಧ್ಯೆ ಕಿರಿಕ್ ಆಗಿದೆ. ಸುಧಿ ಆಟ ಮುಂದುವರಿಸ್ಬೇಕು ಅಂತ ಹೇಳಿದ್ರೆ, ಧನುಷ್‌ ನನಗೂ ಮತ್ತೆ ಆಟ ಆಡಲು ಅವಕಾಶ ಕೊಡ್ಬೇಕು ಅಂತಾ  ವಾದಿಸಿದ್ದಾರೆ. ಇದ್ರಿಂದಾಗಿ ಉಸ್ತುವಾರಿಗಳಿಗೆ ನಿರ್ಧಾರ ತೆಗೆದುಕೊಳ್ಳೋದು ಕಷ್ಟವಾಯ್ತು.. ಹೀಗಾಗಿ ಬಿಗ್‌ ಬಾಸ್‌ ಈ ಆಟವನ್ನೇ ರದ್ದು ಮಾಡಿದ್ರು..

ಇನ್ನು ಬಿಗ್‌ ಬಾಸ್‌ ಮನೆಯಲ್ಲಿನ ಕೆಲ ರೂಲ್ಸ್‌ ವೀಕ್ಷಕರಿಗೆ ಇಷ್ಟವಾಗ್ತಿಲ್ಲ.ಈ ಬಗ್ಗೆ ಅಸಮಧಾನ ಹೊರ ಹಾಕ್ತಿದ್ದಾರೆ. ಒಂಟಿಗಳ ಕಣ್ಣಿಗೆ ಬೆಣ್ಣೆ, ಜಂಟಿಗಲ ಕಣ್ಣಿಗೆ ಸುಣ್ಣವಾ ಎಂದು ಪ್ರಶ್ನೆ ಮಾಡ್ತಿದ್ದಾರೆ. ಯಾಕಂದ್ರೆ ಬಿಗ್‌ ಬಾಸ್‌ ಮನೆಯಲ್ಲಿ ಟಾಸ್ಕ್‌ ನೀಡುವಾಗ ಒಂಟಿಗಳಿಗೆ ಒಂದು ರೂಲ್ಸ್‌ ಇರುತ್ತೆ ಜಂಟಿಗಳಿಗೆ ಒಂದು ರೂಲ್ಸ್‌ ಇರುತ್ತೆ. ಒಂಟಿಗಳು ಒಂಟಿಯಾಗಿ ಟಾಸ್ಕ್‌ ಕಂಪ್ಲೀಟ್‌ ಮಾಡಿದ್ರೆ, ಜಂಟಿಗಳು ಇಬ್ಬರು ಸ್ಪರ್ಧಿಗಳು ಒಟ್ಟಿಗೆ ಟಾಸ್ಕ್‌ ಮಾಡಬೇಕು. ಇದ್ರಿಂದಾಗಿ ಈ ಟಾಸ್ಕ್‌ ನಲ್ಲಿ ಜಂಟಿಗಳು ಒಮ್ಮೆಯೂ ವಿನ್‌ ಆಗಿಲ್ಲ. ಮತ್ತೊಂದ್ಕಡೆ ಜಂಟಿಗಳನ್ನ ಸೋಲಿಸಲು ಚಂದ್ರ ಫ್ರಭ ಹಾಗೂ ಸತೀಶ್‌ ಜೊತೆ ಬಿಗ್‌ ಬಾಸ್‌ ಡೀಲ್‌ ಮಾಡಿಕೊಂಡಿದ್ರು. ಟೀಮ್‌ ಸೋತ್ರೆ ನೀವು ಫೈನಲ್‌ ಗೆ ಹೋಗ್ತೀರಿ ಎಂದು ಹೇಳಿದ್ರು. ಇದು ಕೂಡ ವೀಕ್ಷಕರಿಗೆ ಅಸಮಧಾನ ತರಿಸಿದೆ. ಯಾರು ಗೆಲ್ಬೇಕು.. ಯಾರು ಸೋಲ್ಬೇಕು ಅಂತ ಮೊದಲೇ ಡಿಸೈಡ್‌ ಆಗಿದ್ರೆ ಈ ಆಟ ಯಾಕೆ ಬೇಕು ಅಂತ ಪ್ರಶ್ನೆ ಮಾಡ್ತಿದ್ದಾರೆ.

Shwetha M