ಗಿಲ್ಲಿ ಕಾವ್ಯ ಕಣ್ಣಾಮುಚ್ಚಾಲೆ – ಕಾವು ಕಾವು ಅಂತ ಹುಡುಕಾಡಿದ ಗೆಳೆಯ!

ಗಿಲ್ಲಿ ಕಾವ್ಯ ಕಣ್ಣಾಮುಚ್ಚಾಲೆ – ಕಾವು ಕಾವು ಅಂತ ಹುಡುಕಾಡಿದ ಗೆಳೆಯ!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಕಾವ್ಯ- ಗಿಲ್ಲಿ ಭಾಂದವ್ಯ ವೀಕ್ಷಕರ ಮನಗೆದ್ದಿದೆ. ಆಟ ಬಂದಾಗ ಆಟ, ಸ್ನೇಹ ಅಂದಾಗ ಬಿಟ್ಟು ಕೊಡೋ ಮಾತೇ ಇಲ್ಲ. ಇದೀಗ ಇಬ್ಬರು ಒಬ್ಬರನ್ನೊಬ್ಬರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಅನ್ನೋದಿಕ್ಕೆ ಬಿಗ್‌ಬಾಸ್ ನೀಡಿದ್ದ ಟಾಸ್ಕ್‌ನಲ್ಲಿ ಈ ಜೋಡಿ ವೀಕ್ಷಕರ ಮನಗೆದ್ದಿದೆ. ಅಷ್ಟೇ ಅಲ್ಲ ಗಿಲ್ಲಿ ಜೊತೆ ಕಾವ್ಯ ಕಣ್ಣಾಮುಚ್ಚಾಲೆ ಆಡಿದ್ದು, ಕಾವು ಕಾಣದೇ ಗಿಲ್ಲಿ ಫುಲ್‌ ಟೆನ್ಷಮ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಗೆ ಹೋದಾತ ಹೆಣವಾದ! – ವೈದ್ಯ ಎಡವಟ್ಟಿಗೆ ಜೀವ ಕಳೆದುಕೊಂಡ ಯುವಕ!

ಹೌದು, ಬಿಗ್‌ಬಾಸ್ ನಿನ್ನೆಯ ಎಪಿಸೋಡ್‌ಗಾಗಿ ಅದೇಷ್ಟೋ ವೀಕ್ಷಕರು ಕಾಯ್ತಾ ಇದ್ರು. ಯಾಕಂದ್ರೆ ಈ ವಾರ ಮನೆಯಿಂದ ಸ್ಪರ್ಧಿಗಳಿಗೆ ಪತ್ರ ಬಂದಿದೆ. ಇದಕ್ಕೆ ವಿವಿಧ ಚಟುವಟಿಕೆ ನೀಡಲಾಗಿದೆ. ಕಾವ್ಯಾ ಹಾಗೂ ಗಿಲ್ಲಿಯನ್ನು ಪ್ರತ್ಯೇಕವಾಗಿ ಕರೆಯಲಾಯಿತು. ಈ ವೇಳೆ ಗಿಲ್ಲಿ ಎದುರು ಕಾವ್ಯಾ ಲೆಟರ್ ಹಾಗೂ ಕಾವ್ಯಾ ಎದುರು ಗಿಲ್ಲಿ ಲೆಟರ್ ಇಡಲಾಯಿತು. ಯಾರಾದರೂ ಒಬ್ಬರು ಮಾತ್ರ ಲೆಟರ್​ನ ಹೊರಗೆ ತರಬಹುದಿತ್ತು. ಒಂದೊಮ್ಮೆ ಅಪ್ಪಿ ತಪ್ಪಿ ಇಬ್ಬರೂ ಲೆಟರ್ ತಂದರೆ ಇಬ್ಬರೂ ಲೆಟರ್ ಕಳೆದುಕೊಂಡು ನಾಮಿನೇಷನ್​ನಲ್ಲಿ ಮುಂದುವರಿಯಬೇಕಿತ್ತು. ಗಿಲ್ಲಿ ಲೆಟರ್ ತಂದೇ ತರುತ್ತಾನೆ ಎಂಬ ಭರವಸೆಯಲ್ಲಿ ಕಾವ್ಯಾ ಅವರು ಯಾವುದೇ ಲೆಟರ್ ತರಲು ಹೋಗಿಲ್ಲ. ನೋಡಿದರೆ ಅದು ನಿಜವೇ ಆಗಿದೆ. ಗಿಲ್ಲಿ ಕಾವ್ಯಾ ಲೆಟರ್ ತಂದಿದ್ದರು. ಈ ಕಾರಣಕ್ಕೆ ಗಿಲ್ಲಿ ನಾಮಿನೇಟ್ ಆದರೆ, ಕಾವ್ಯಾ ನಾಮಿನೇಷನ್​ನಿಂದ ಬಚಾವ್ ಆದರು. ಇಬ್ಬರ ಅಂಡರ್​ಸ್ಟ್ಯಾಂಡಿಂಗ್ ನೋಡಿ ಅನೇಕರಿಗೆ ಅಚ್ಚರಿ ಆಗಿದೆ.

ಜೀವದ ಸ್ನೇಹಿತೆ ಕಾವ್ಯಾಗೋಸ್ಕರ ಗಿಲ್ಲಿ ದೊಡ್ಡ ತ್ಯಾಗ ಮಾಡಿದ್ದಾರೆ. ಮನೆಯಿಂದ ಬಂದ ಪತ್ರ ತಪ್ಪಿ ಹೋದ್ರೂ ಗಿಲ್ಲಿ ಒಂಚೂರು ಬೇಸರ ಮಾಡಿಕೊಂಡಿಲ್ಲ. ಕಾವ್ಯ ಮುಖದಲ್ಲಿ ಕಂಡ ಖುಷಿ ನೋಡಿ ಗಿಲ್ಲಿಯೂ ಖುಷಿಪಟ್ಟಿದ್ದಾರೆ. ಗಿಲ್ಲಿ ಮಾಡಿದ ಈ ತ್ಯಾಗಕ್ಕೆ ಕಾವ್ಯಾ ಅವರಿಂದ ಪ್ರೀತಿಯ ಅಪ್ಪುಗೆ ಸಿಕ್ಕಿದೆ. ಆಯ್ಕೆ ಆದ ಆರು ಮಂದಿ ಪೈಕಿ ಒಬ್ಬರು ಕ್ಯಾಪ್ಟನ್ ಆಗಿ ಆಯ್ಕೆ ಆಗಬೇಕಿದೆ. ಈ ವಾರ ಒಂದಷ್ಟು ಪ್ರೇಕ್ಷಕರನ್ನು ಕರೆಸಿ ವೋಟಿಂಗ್ ಮಾಡಿಸಲಾಗಿದೆ. ಈ ವೇಳೆ ಕಾವ್ಯಾಗೆ ಹೆಚ್ಚು ಮತ ಬಿದ್ದರೆ ಅವರು ಈ ವಾರದ ಕ್ಯಾಪ್ಟನ್ ಕೂಡ ಆಗಲಿದ್ದಾರೆ. ಇದು ನಿಜವಾದ ಅವರ ಫ್ಯಾನ್ಸ್ ಕೂಡ ಖುಷಿಪಡಲಿದ್ದಾರೆ. ಇದರ ಜೊತೆಗೆ ಗಿಲ್ಲಿ ತಮ್ಮ ಆಟದ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕಾದ ಅವಶ್ಯಕತೆ ಇದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಂದ್ಕಡೆ ಗಿಲ್ಲಿಯನ್ನ ಕಾವ್ಯ ಚೆನ್ನಾಗಿ ಆಟ ಆಡಿಸಿದ್ದಾರೆ. ಕಾವ್ಯ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದಾರೆ. ಬೆಳಗ್ಗೆಯಿಂದ ಕಾವ್ಯ ಮನೆಯಲ್ಲಿ ಕಾಣಿಸಿಕೊಂಡಿಲ್ಲ ಎಂದು ಮನೆಮಂದಿ ಕೂಡ ಹೇಳಿದ್ದಾರೆ. ಕಾವ್ಯ ಕಾಣದೇ ಗಿಲ್ಲಿ ಚಡಪಡಿಸಿದ್ದಾರೆ. ಮನೆಯ ಪ್ರತಿ ಮೂಲೆಯಲ್ಲೂ ಹುಡುಕಾಡಿದ್ದಾರೆ. ಕಡೆಗೆ ಕಾವ್ಯಳನ್ನ ಕಂಡ ಗಿಲ್ಲಿ ಖುಷಿಗೆ ಪಾರವೇ ಇರಲಿಲ್ಲ. ಒಟ್ಟಾರೆ ಇವರಿಬ್ಬರ ಪ್ಯೂರ್‌ ಫ್ರೆಂಡ್‌ಶಿಪ್‌ಗೆ ಇಡೀ ಕರುನಾಡೇ ಮನಸೋತಿದೆ. ಕೊನೆ ತನಕ ಜೊತೆಯಾಗಿರಿ.. ಎಂತಹ ಸನ್ನಿವೇಶ ಬಂದ್ರೂ ನಿಮ್ಮ ಸ್ನೇಹವನ್ನ ಬಿಟ್ಟುಕೊಡ್ಬೇಡಿ ಎಂದು ಫ್ಯಾನ್ಸ್‌ ಹೇಳ್ತಿದ್ದಾರೆ.

Shwetha M