ಅತ್ತೆ ಮಗನಿಗೆ ಜೈ..! – ಗಿಲ್ಲಿನೇ ಗೆಲ್ಲೋದು ಎಂದು ಅಶ್ವಿನಿಗೂ ಗೊತ್ತಾಯ್ತಾ?

ಗಿಲ್ಲಿ.. ಗಿಲ್ಲಿ.. ಗಿಲ್ಲಿ.. ಸದ್ಯ ಎಲ್ಲ ಕಡೆ ಗಿಲ್ಲಿಯದ್ದೇ ಹೆಸರು ಸದ್ದು ಮಾಡ್ತಿದೆ. ಬಿಗ್‌ಬಾಸ್ ಕನ್ನಡ ಸೀಸನ್ 12 ರ ಫಿನಾಲೆ ಹತ್ತಿರವಾಗ್ತಿದ್ದಂತೆ ಗಿಲ್ಲಿನಟ ಗೆಲ್ಲಬೇಕು ಅನ್ನೋ ಮಾತು ಕೇಳಿ ಬರ್ತಿದೆ. ಇದೀಗ ದೊಡ್ಮನೆ ಮಂದಿಗೂ ಗಿಲ್ಲಿನೇ ಗೆಲ್ಲೋದು ಅನ್ನೋದು ಅಲ್‌ಮೋಸ್ಟ್ ಕನ್ಫರ್ಮ್ ಆಗಿದೆ. ಇದೀಗ ಅಶ್ವಿನಿ ಫ್ಯಾನ್ಸ್ ಮುಂದೆ ಅತ್ತೆ ಮಗನಿಗೆ ಜೈ ಅಂತ ಹೇಳಿದ್ದಾರೆ.
ಇದನ್ನೂ ಓದಿ: ಜನವರಿ 27ರಿಂದ ಮೂರು ದಿನ ವಿಶೇಷ ಅಧಿವೇಶನ – ಕೇಂದ್ರದ ವಿರುದ್ಧ ತಿರುಗಿ ಬೀಳುವುದ್ದಕ್ಕೆ ತಯಾರಿ
ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಶನಿವಾರ ಹಾಗೂ ಭಾನುವಾರ ನಡೆಯಲಿದೆ. ಅಶ್ವಿನಿ ಗೌಡ ಹಾಗೂ ಗಿಲ್ಲಿನಟನ ಮಧ್ಯೆ ಟಫ್ ಫೈಟ್ ಇದೆ. ಅಶ್ವಿನಿಯನ್ನ ಗೆಲ್ಲಿಸೋ ಪ್ರಯತ್ನ ನಡೆತಯುತ್ತಿದೆ ಎಂಬ ಮಾತು ಕೂಡ ಕೇಳಿ ಬರ್ತಿದೆ. ಮತ್ತೊಂದ್ಕಡೆ ಗಿಲ್ಲಿನೇ ಗೆಲ್ಲ ಬೇಕು. ಬಡವರ ಮಗನನ್ನ ಗೆಲ್ಲಿಸಿ, ಗಿಲ್ಲಿ ಗೆಲ್ಲದಿದ್ರೆ ಬಿಗ್‌ಬಾಸ್ ಮನೆಗೆ ಕಲ್ಲು ಹೊಡೆಯುತ್ತೇವೆ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದಾರೆ ಗಿಲ್ಲಿ ಫ್ಯಾನ್ಸ್. ಇವೆಲ್ಲದ್ರ ಮಧ್ಯೆ ಅಶ್ವಿನಿ ಗೌಡ ಅತ್ತೆ ಮಗನಿಗೆ ಜೈ ಅಂತ ಹೇಳಿದ್ದಾರೆ.
ಹೌದು. ಬಿಗ್‌ಬಾಸ್ ಮನೆಯಲ್ಲಿ ಈ ವಾರ ಸಾಮಾನ್ಯ ಜನರನ್ನು ಕರೆಸಲಾಗಿದೆ. ಸ್ಪರ್ಧಿಗಳು ತಮ್ಮನ್ನ ತಾವು ಸಮರ್ಥಿಸಿಕೊಂಡು ವೋಟ್ ಕೇಳಬೇಕಿದೆ. ಇದೀಗ ಅಶ್ವಿನಿ ಗೌಡ ಸ್ಟೇಜ್‌ಗೆ ಬರ್ತಿದ್ದಂತೆ ಗಿಲ್ಲಿ, ಗಿಲ್ಲಿ ಎಂದು ಎಲ್ಲರೂ ಕೂಗಿದ್ದಾರೆ. ಈ ವೇಳೆ ಅಶ್ವಿನಿ ಗೌಡ ಅತ್ತೆ ಮಗನಿಗೆ ಜೈ ಅಂತ ಹೇಳಿದ್ದಾರೆ. ಇದ್ರ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ಅಶ್ವಿನಿ ಗೌಡ ಗಿಲ್ಲಿಗೆ ಜೈ ಅಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಡವರ ಮಕ್ಕಳ ಹೆಸರು ಹೇಳಿಕೊಂಡು ದೊಡ್ಡವರು ಬೆಳೆಯುತ್ತಿದ್ದಾರೆ. ಆದಷ್ಟು ಗಿಲ್ಲಿಗೆ ವೋಟ್ ಮಾಡಿ. ಗಿಲ್ಲಿಯನ್ನು ಗೆಲ್ಲಿಸಿ ಎಂದು ಕಮೆಂಟ್ ಮಾಡ್ತಿದ್ದಾರೆ. ಇನ್ನು ಕೆಲವರು ಗಿಲ್ಲಿಯೇ ಗೆಲ್ಲೋದು ಎಂದು ಅಶ್ವಿನಿಗೂ ಗೊತ್ತಾಯ್ತಾ ಅಂತ ಪ್ರಶ್ನೆ ಮಾಡಿದ್ದಾರೆ.

ನೋಡಿರಿ

