ಏಯ್..‌ ಬೆನ್ನುಮೂಳೆ ಇಲ್ಲದವನೇ.. ಬಾರೋ ಅಖಾಡಕ್ಕೆ! – ಗಿಲ್ಲಿ ಮುಂದೆ ತೊಡೆ ತಟ್ಟಿ ಸವಾಲೆಸೆದ ಅಶ್ವಿನಿ

ಏಯ್..‌ ಬೆನ್ನುಮೂಳೆ ಇಲ್ಲದವನೇ.. ಬಾರೋ ಅಖಾಡಕ್ಕೆ! – ಗಿಲ್ಲಿ ಮುಂದೆ ತೊಡೆ ತಟ್ಟಿ ಸವಾಲೆಸೆದ ಅಶ್ವಿನಿ

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿನಟನ ಉಸ್ತುವಾರಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಗಿಲ್ಲಿನಟ ಪಕ್ಷಪಾತ ಧೋರಣೆ ನಡೆಸುತ್ತಿದ್ದಾರೆ. ಕಾವ್ಯಳನ್ನ ಉಳಿಸಲು ನಾನಾ ತಂತ್ರ ಮಾಡುತ್ತಿರೋದು ಸ್ಪರ್ಧಿಗಳ ಅಸಮಧಾನಕ್ಕೆ ಕಾರಣವಾಗಿದೆ. ಇದೀಗ ಗಿಲ್ಲಿ ಅಶ್ವಿನಿ, ಧ್ರುವಂತ್‌ ಬಗ್ಗೆ ವ್ಯಂಗ್ಯವಾಡಿದ್ದಾರೆ. ಈ ಬೆನ್ನಲ್ಲೇ ಗಿಲ್ಲಿ ನಟನಿಗೆ ಧ್ರುವಂತ್ ಮತ್ತು ಅಶ್ವಿನಿ ಗೌಡ ಸರಿಯಾಗಿ ತಿರುಗೇಟು ನೀಡಿದ್ದಾರೆ. ಅಶ್ವಿನಿ ಅಖಾಡಕ್ಕೆ ಬರುವಂತೆ ತೊಡೆ ತಟ್ಟಿ ಸವಾಲು ಹಾಕಿದ್ದಾರೆ.ʼ

ಇದನ್ನೂ ಓದಿ: ಎರಡು ರೈಲುಗಳ ಮಧ್ಯೆ ಅಪಘಾತ – 60ಕ್ಕೂ ಅಧಿಕ ಮಂದಿಗೆ ಗಾಯ

ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ಗಿಲ್ಲಿನಟ ಫೇವರಿಸಂ ಆಟ ಆಡುತ್ತಿರುವುದಕ್ಕೆ  ಮನೆಯಲ್ಲಿರುವ ಸ್ಪರ್ಧಿಗಳಿಗೆ ಮಾತ್ರವಲ್ಲ ವೀಕ್ಷಕರು ಕೂಡ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಕ್ಯಾಪ್ಟನ್ ಗಿಲ್ಲಿ ನಟ ಆಟದ ವೈಖರಿ ಮತ್ತು ವರ್ತನೆ ಬಗ್ಗೆ ಧ್ರುವಂತ್ ಮತ್ತು ಅಶ್ವಿನಿ ಗೌಡ ಸುದೀರ್ಘವಾಗಿ ವಿಶ್ಲೇಷಣೆ ಮಾಡುತ್ತಾ ಚರ್ಚೆ ನಡೆಸಿದ್ದಾರೆ. ಈ ವೇಳೆ ಗಿಲ್ಲಿನಟ ಅವರಿಬ್ಬರಿಗೆ ಟಾಂಗ್‌ ಕೊಟ್ಟಿದ್ದಾರೆ.

ಗಾರ್ಡನ್ ಏರಿಯಾದಲ್ಲಿ ಧ್ರುವಂತ್ ಮತ್ತು ಅಶ್ವಿನಿ ಗೌಡ ಮಾತನಾಡುತ್ತಿರುತ್ತಾರೆ. ದೂರದಲ್ಲಿ ಕುಳಿತಿದ್ದ ಗಿಲ್ಲಿ ನಟ ಇಬ್ಬರನ್ನು ವ್ಯಂಗ್ಯ ಮಾಡುತ್ತಾರೆ. ಇದರಿಂದ ಇಬ್ಬರು ಕೋಪಗೊಳ್ಳುತ್ತಾರೆ. ಈ ವೇಳೆ ಕೋಪಗೊಂಡ ಧ್ರುವಂತ್, ನಿನ್ನ ಸೊಂಟದಲ್ಲಿ ನಿಂತ್ಕೊಂಡು ಸ್ನಾನ, ಹಲ್ಲುಜ್ಜುಕೊಂಡು ಬಾ ನೀನು ಎಂದು ಗಿಲ್ಲಿಗೆ ಸವಾಲು ಹಾಕುತ್ತಾರೆ. ನಿನ್ನಿಂದ ಇಷ್ಟೇ ಮಾಡಲು ಸಾಧ್ಯ. ಮಿಸ್ಟರ್ ನಟರಾಜ್ ಅರ್ಧ ಅರ್ಧ ಗಂಟೆಗೆ ಕೊಡುತ್ತಿರುತ್ತೇನೆ ಕೇಳಿಸಿಕೊಳ್ಳಿ ಎಂದು ಸವಾಲು ಹಾಕುತ್ತಾರೆ.

ತಮ್ಮನ್ನು ಕೆಣಕಿದ್ದಕ್ಕೆ ಕೆರಳಿ ಕೆಂಡವಾದ ಅಶ್ವಿನಿ ಗೌಡ, ಏಯ್ ಬೆನ್ನುಮೂಳೆ ಇಲ್ಲದವನೇ ಅಂತ ಹೇಳುತ್ತಲೇ ವಾಗ್ದಾಳಿ ಮಾಡಲು ಆರಂಭಿಸುತ್ತಾರೆ. ನನ್ನನ್ನು ಕೆಣಕಬೇಡ ಅಂತ ಸಾವಿರ ಸಲ ಹೇಳಿದ್ದೇನೆ. ನಿನ್ನ ಟೈಮ್ ಸ್ಟಾರ್ಟ್ ಆಗಿದೆ ಎಂದು ಚಿಟಿಕೆ ಹೊಡೆದು ಗಿಲ್ಲಿಗೆ ಹೇಳುತ್ತಾರೆ. ಇದೇ ವೇಳೆ ಬಾರೋ ಅಖಾಡಕ್ಕೆ ಎಂದು ತೊಡೆ ತಟ್ಟಿ ಅಶ್ವಿನಿ ಗೌಡ ಸವಾಲು ಹಾಕಿದ್ದಾರೆ. ಇದೀಗ ಇವರಿಬ್ಬರ ಕಿತ್ತಾಟ ಎಲ್ಲಿಗೆ ಮುಟ್ಟುತ್ತೆ ಅಂತ ಕಾದುನೋಡ್ಬೇಕು.

Shwetha M