ಕಾವು ಜೊತೆ ಗಿಲ್ಲಿಗೆ ಕಂಕಣಭಾಗ್ಯ – ಅಮ್ಮನಿಂದಲೂ ಸಿಕ್ಕಿತು ಗ್ರೀನ್ ಸಿಗ್ನಲ್
ಲವ್ ಬಗ್ಗೆ ಬಾಯಿಬಿಟ್ಟ ಮಾತಿನ ಮಲ್ಲ!

ಗಿಲ್ಲಿ ಗಿಲ್ಲಿ ಗಿಲ್ಲಿ.. ಈಗ ಎಲ್ಲಿ ನೋಡಿದ್ರೂ ಗಿಲ್ಲಿಯದ್ದೇ ಸದ್ದು, ಸುದ್ದಿ, ಎಲ್ಲವೂ.. ಕರ್ನಾಟಕದ ಜನರ ಮನಸ್ಸು ಕದ್ದು ಬಿಗ್ ಬಾಸ್ ಸೀಸನ್ 12 ಕಪ್ ಗೆದ್ದಿರೋ ಮಾತಿನ ಮಲ್ಲನನ್ನ ರಾಜ್ಯದುದ್ದಗಲಕ್ಕೂ ಹೊತ್ತು ಮೆರೆಸ್ತಿದ್ದಾರೆ. ಮಂಡ್ಯದಲ್ಲಿ ವಿಜಯೋತ್ಸನದ ಯಾತ್ರೆ ನಡೀತಿದೆ. ಅಭಿಮಾನಿಗಳ ಅಭಿಮಾನ ಕಂಡು ಸ್ವತಃ ಗಿಲ್ಲಿ ನಟನೇ ಸ್ಟನ್ ಆಗಿದ್ದಾರೆ. ದೊಡ್ಮನೆಯಿಂದ ಹೊರಬಂದಿರೋ ಗಿಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮನಬಿಚ್ಚಿದ್ದಾರೆ. ಕಾವ್ಯ ಜೊತೆಗಿನ ಮದುವೆ ಪ್ರಸ್ತಾಪದ ಬಗ್ಗೆಯೂ ಮಾತನಾಡಿದ್ದಾರೆ. ಗಿಲ್ಲಿ ತಾಯಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಕಿಂಗ್ ಕೊಹ್ಲಿ ಏಕಾಂಗಿ ಹೋರಾಟ ವ್ಯರ್ಥ! – ಭಾರತದ ನೆಲದಲ್ಲಿ ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್!
11 ಸೀಸನ್ಗಳ ಬಿಗ್ಬಾಸ್ದೇ ಒಂದು ಲೆಕ್ಕ.. 12ನೇ ಸೀಸನ್ ಬಿಗ್ಬಾಸ್ದೇ ಇನ್ನೊಂದು ಲೆಕ್ಕ. ಕರ್ನಾಟಕ ಅಷ್ಟೇ ಅಲ್ಲದೇ ದೇಶ, ವಿದೇಶಗಳಲ್ಲೂ ಹವಾ ಎಬ್ಬಿಸಿದ್ದ ಗಿಲ್ಲಿ ಟೈಟಲ್ ವಿನ್ನರ್ ಆಗಿದ್ದಾರೆ. 112 ದಿನಗಳ ಜರ್ನಿಯಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಇಳಿ ವಯಸ್ಸಿನವರೂ ಕೂಡ ಗಿಲ್ಲಿ ಮಾತಿಗೆ ಮನಸಾರೆ ನಕ್ಕು ಈಗ ಗೆಲುವಿನ ಉಡುಗೊರೆ ಕೊಟ್ಟಿದ್ದಾರೆ. ಸಂಭ್ರಮದ ಅಲೆಯಲ್ಲಿ ತೇಲುತ್ತಿರೋ ಗಿಲ್ಲಿ ಮದುವೆ ಬಗ್ಗೆಯೂ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಯಾವಾಗ್ಲೂ ಕಾವ್ಯನ ರೇಗಿಸಿಕೊಂಡೇ ಇರ್ತಿದ್ರು. ಚಾನ್ಸ್ ಸಿಕ್ಕಾಗ್ಲೇಲ್ಲಾ ತನ್ನ ಕ್ರಶ್ ಅನ್ನೋ ಥರನೇ ಟ್ರೀಟ್ ಮಾಡ್ತಿದ್ರು. ಈಗ ದೊಡ್ಮನೆಯಿಂದ ಆಚೆ ಬಂದ್ಮೇಲೆ ರಿಯಾಲಿಟಿ ಶೋ ಜೋಡಿ ರಿಯಲ್ಲಾಗೇ ಒಂದಾಗ್ಲಿ ಅಂತಾ ಒಂದಷ್ಟು ಫ್ಯಾನ್ಸ್ ಕೂಡ ವಿಶ್ ಮಾಡ್ತಿದ್ದಾರೆ. ಇದ್ರ ಬಗ್ಗೆ ಸ್ವತಃ ಗಿಲ್ಲಿಯೇ ಮಾತನಾಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಕಾವ್ಯ ಮತ್ತು ಗಿಲ್ಲಿ ನಡುವೆ ಒಂದೊಳ್ಳೆ ಬಾಂಡಿಂಗ್ ಇತ್ತು. ಸ್ನೇಹಕ್ಕೂ ಮೀರಿದ ಸಂಬಂಧ ಅನ್ನೋ ಥರ ಕಾಣ್ತಿತ್ತು. ಗಿಲ್ಲಿಯಂತೂ ಲವ್ವಲ್ಲಿ ಬಿದ್ದಿದ್ದಾರೆ ಅನ್ನೋ ಥರನೇ ಕಾವ್ಯನ್ನ ಟ್ರೀಟ್ ಮಾಡ್ತಿದ್ರು. ಅವ್ರ ಫ್ಯಾಮಿಲಿಯವ್ರು ಬಂದು ಬ್ರೇಸ್ಲೆಟ್ ಕೊಟ್ಟಾಗ್ಲೂ ನಮ್ಮಲ್ಲಿ ಮದುವೆಗೆ ಹೆಣ್ಣಿನ ಕಡೆಯವ್ರು ಹಾಕೋದು ಅಣ್ಣ ಅಂತಾ ಸುದೀಪ್ ಸರ್ ಹತ್ರನೇ ತಮ್ಮ ಮನದಾಸೆ ಬಿಚ್ಚಿಟ್ಟಿದ್ರು. ಌಂಡ್ ಕಾವ್ಯ ನನ್ನ ರೇಗಿಸಿದ್ರೆ ಬ್ಲಾಕ್ ಮಾಡ್ತೀನಿ ಅಂದಿದ್ದಕ್ಕೆ ಆಯ್ತು ಮಾಡು ನೋಡೋಣ ಅನ್ನೋ ಥರ ಗಿಲ್ಲಿ ಸವಾಲ್ ಹಾಕಿದ್ರು. ಗಿಲ್ಲಿಯಿಂದ ಕಾವ್ಯ ಗಿಲ್ಲಿಯಿಂದ ಕಾವ್ಯ ಅಂತಾ ಇಡೀ ಮನೆಮಂದಿಯೇ ಅನ್ನುವಷ್ಟ್ರರ ಮಟ್ಟಿಗೆ ಇಬ್ಬರು ಕ್ಲೋಸ್ ಇದ್ರು. ಇವ್ರಿಬ್ಬರ ಪ್ಯೂರ್ ಬಾಂಡ್ ನೋಡಿಯೇ ರಿಯಲ್ಲಾಗೇ ಮದುವೆಯಾಗ್ಲಿ ಅಂತಾ ಅಭಿಮಾನಿಗಳು ಹೇಳ್ತಿದ್ದಾರೆ. ಅಭಿಮಾನಿಗಳ ಈ ಆಸೆ ಬಗ್ಗೆ ಗಿಲ್ಲಿ ಕೂಡ ಮಾತನಾಡಿದ್ದಾರೆ. ಮದುವೆ ಬಗ್ಗೆ ಹೇಗೆ ಹೇಳೋದು. ಕಂಕಣಬಲ ಕೂಡಿ ಬರಬೇಕು ಅಷ್ಟೇ. ಕಾವ್ಯ ಶೈವ ಅವರು ನನ್ನ ಸ್ನೇಹಿತರು. ಕಾವ್ಯ ನನ್ನ ಸ್ನೇಹಿತರಾಗಿ ಇರುತ್ತಾರೆ ಎಂದಿದ್ದಾರೆ. ಸೋ ಅಲ್ಲಿಗೆ ಎಲ್ಲವೂ ಕೂಡಿ ಬಂದ್ರೆ ಮದುವೆ ಇಲ್ಲದಿದ್ರೆ ಫ್ರೆಂಡ್ಶಿಪ್ ಹಾಗೇ ಕಂಟಿನ್ಯೂ ಆಗುತ್ತೆ ಅನ್ನೋ ರೀತಿಯಲ್ಲಿ ಮಾತನಾಡಿದ್ದಾರೆ. ಈ ಬಗ್ಗೆ ಗಿಲ್ಲಿ ಅವರ ತಾಯಿ ರಿಯಾಕ್ಟ್ ಮಾಡಿದ್ದಾರೆ. ನನ್ನ ಮಗ ಯಾವ ಹುಡುಗಿಯನ್ನ ಇಷ್ಟ ಪಡ್ತಾನೋ ಅದೇ ಹುಡುಗಿ ಜೊತೆ ಮದುವೆ ಮಾಡಿಕೊಡ್ತೇನೆ. ನನಗೆ ಈ ಹುಡ್ಗಿ ಇಷ್ಟ ಅಂದ್ರೆ ಅದೇ ಹುಡುಗಿಯೇ ನಮ್ಮನೆ ಸೊಸೆ ಅಂತಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸೋ ಅಲ್ಲಿಗೆ ಗಿಲ್ಲಿ-ಕಾವ್ಯ ಒಬ್ಬರನೊಬ್ಬರು ಒಪ್ಪಿಕೊಂಡ್ರೆ ಗಿಲ್ಲಿ ಮನೆಯಲ್ಲಿ ಮದುವೆಗೆ ಯಾವ ಪ್ರಾಬ್ಲಂ ಕೂಡ ಇರೋದಿಲ್ಲ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಯಾವಾಗ್ಲೂ ಗಿಲ್ಲಿ ರೇಗಿಸ್ತಾನೆ ಅಂತಾ ಸಿಟ್ಟು ಮಾಡಿಕೊಳ್ತಿದ್ರು. ರೇಗಿಸ್ಬೇಡ ಗಿಲ್ಲಿ ಅಂತಾ ಯಾವಾಗ್ಲೂ ಹೇಳ್ತಿದ್ರು. ಬಟ್ ಗಿಲ್ಲಿ ಮಾತ್ರಾ ಲಾಸ್ಟ್ ಮೂಮೆಂಟ್ವರೆಗೂ ಅದನ್ನ ಬಿಟ್ಟಿರಲಿಲ್ಲ. ಌಂಡ್ ಫಿನಾಲೆಗೆ ಇನ್ನೆರಡು ದಿನ ಇದೆ ಅನ್ನುವಾಗ್ಲೂ ಸಾರಿ ಕೇಳೋ ಟೈಮಲ್ಲಿ ಬೆಂಕಿಗೆ ಪೇಪರ್ ಹಾಕುವಾಗ ಕಾವ್ಯ ಕೈಹಿಡಿದು ಸಪ್ತಪದಿ ಸಪ್ತಪದಿ ಅಂತಾ ಕಾಲೆಳೆದಿದ್ರು. ಆದ್ರೆ ಬಿಗ್ಬಾಸ್ ಮನೆಯ ಹೊರಗೆ ಗಿಲ್ಲಿಗೆ ಇರೋ ಕ್ರೇಜ್, ಫ್ಯಾನ್ಸ್, ಸೆಲೆಬ್ರೇಷನ್, ಎಲ್ಲಾ ನೋಡಿ ಕಾವ್ಯನೇ ಈಗ ಕನ್ಫ್ಯೂಸ್ ಆಗ್ಬಿಟ್ಟಿದ್ದಾರೆ. ಇನ್ಮೇಲೆ ಗಿಲ್ಲಿನ ಬ್ಲಾಕ್ ಮಾಡೋದಲ್ಲ.. ಕಾವ್ಯನೇ ಗಿಲ್ಲಿ ಫ್ರೆಂಡ್ಶಿಪ್ನ ಉಳಿಸಿಕೊಳ್ಬೇಕಿದೆ. ಯಾಕಂದ್ರೆ ಆ ಮಟ್ಟಿಗೆ ಕರ್ನಾಟಕದಲ್ಲಿ ಗಿಲ್ಲಿ ಅನ್ನೋ ಬ್ರ್ಯಾಂಡ್ ಸೃಷ್ಟಿಯಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಸಾಕಷ್ಟು ರಾಜಕಾರಣಿಗಳು, ಸೆಲೆಬ್ರಿಟಿಗಳೂ ಕೂಡ ಗಿಲ್ಲಿ ಗೆದ್ದಿದ್ದಕ್ಕೆ ವಿಶ್ ಮಾಡಿದ್ದಾರೆ. ಮಂಡ್ಯದ ತುಂಬೆಲ್ಲಾ ಮೆರವಣಿಗೆ ಸಾಗ್ತಿದೆ. ಇಡೀ ಕರುನಾಡೇ ಖುಷಿಯಾಗಿದೆ. ಕನ್ನಡಿಗರ ಮನೆ, ಮನಗಳ ಜೊತೆಗೆ ಬಿಗ್ಬಾಸ್ ಗೆದ್ದಿರೋ ಗಿಲ್ಲಿಗೆ ಇನ್ನೇನಿದ್ರೂ ಈ ಪ್ರೀತಿಯನ್ನ ಉಳಿಸಿ ಬೆಳೆಸಿಕೊಂಡು ಹೋಗೋದೇ ದೊಡ್ಡ ಜವಾಬ್ದಾರಿ.

ನೋಡಿರಿ

