ಅತಿಥಿಗಳ ಆರ್ಭಟಕ್ಕೆ ನೊಂದ ಗಿಲ್ಲಿ – ನಿನ್ನ ಜೊತೆ ನಾನಿದ್ದೀನಿ ಎಂದು ಮಾತು ಕೊಟ್ಟ ಅಶ್ವಿನಿ ಗೌಡ
ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ-ಅಶ್ವಿನಿ ಗೌಡ ನಡುವೆ ಚಿಗುರಿದ ಸ್ನೇಹ

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಯನ್ನ ಕಂಡರೆ ಅಶ್ವಿನಿ ಗೌಡ ಉರಿದು ಬೀಳುತ್ತಿದ್ದರು. ಅಶ್ವಿನಿ ಅವರಿಗೆ ಗಿಲ್ಲಿ ಕಾಟ ಕೊಡುತ್ತಲೇ ಇದ್ದ. ಇದೀಗ ಇಬ್ಬರ ಜಗಳ ಮೂರನೆಯವರಿಗೆ ಲಾಭ ಆಗುತ್ತಾ ಅನ್ನೋ ಅನುಮಾನವಿತ್ತು. ಆದರೆ, ದೊಡ್ಮನೆಯಲ್ಲಿ ಗಿಲ್ಲಿ ಮತ್ತು ಅಶ್ವಿನಿ ಒಂದಾಗುತ್ತಿದ್ದಾರೆ. ಗಿಲ್ಲಿ ನೋವಲ್ಲಿ ಇರುವುದು ಅಶ್ವಿನಿಗೂ ಬೇಸರ ತಂದಿದೆ. ನಿನ್ನ ಜೊತೆ ನಾನಿದ್ದೇನೆ ಎಂಬ ಮಾತು ಅಶ್ವಿನಿ ಗೌಡ ಹೇಳಿದ್ದು, ವೀಕ್ಷಕರು ಫುಲ್ ಶಾಕ್ ಆಗಿದ್ದಾರೆ.
ಇದನ್ನೂ ಓದಿ:ರೋಸ್ಟ್ ಮಾಡಿ ಅಂದವರೇ ಗಿಲ್ಲಿಯಿಂದ ಟೋಸ್ಟ್ – ಗಿಲ್ಲಿ ಮಾತಿಗೆ ರೊಚ್ಚಿಗೆದ್ದ ಉಗ್ರಂ ಮಂಜು, ರಜತ್
ಬಿಗ್ಬಾಸ್ ಮನೆಯಲ್ಲಿ ಅತಿಥಿಗಳ ಆರ್ಭಟಕ್ಕೆ ಗಿಲ್ಲಿ ಬೇಸತ್ತಿದ್ದಾರೆ. ಬಿಗ್ಬಾಸ್ ಕೂಡಾ ಗಿಲ್ಲಿಗೆ ವಾರ್ನಿಂಗ್ ಮಾಡಿದ್ದರಿಂದ ಗಿಲ್ಲಿ ಮನಸು ಮತ್ತಷ್ಟು ನೊಂದಿದೆ. ಈ ಸಮಯದಲ್ಲಿ ಗಿಲ್ಲಿ ಜೊತೆ ನಿಂತಿದ್ದಾರೆ ಅಶ್ವಿನಿ ಗೌಡ. ಸದಾ ಕಿತ್ತಾಡುತ್ತಿದ್ದ ಗಿಲ್ಲಿ ಮತ್ತು ಅಶ್ವಿನಿ ಗೌಡ ಒಂದಾಗಿದ್ದಾರೆ. ದಿಢೀರ್ ಬೆಳವಣಿಗೆಗೆ ಸ್ವತಃ ವೀಕ್ಷಕರೇ ಶಾಕ್ ಆಗಿದ್ದಾರೆ. ಜೊತೆಗೆ ಖುಷಿ ಪಟ್ಟಿದ್ದಾರೆ. ಗಿಲ್ಲಿಯನ್ನು ಅಶ್ವಿನಿ ಸಮಾಧಾನಪಡಿಸಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಈ ಗೆಳೆತನ ಮುಂದುವರಿಯಲಿ ಎಂಬುದು ವೀಕ್ಷಕರ ಆಶಯವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಅತಿಥಿಗಳು ಬಂದಿದ್ದಾರೆ. ಕಳೆದ ಸೀಸನ್ ಸ್ಪರ್ಧಿಗಳಾದ ಮಂಜು, ತ್ರಿವಿಕ್ರಮ್, ರಜತ್, ಮೋಕ್ಷಿತಾ, ಚೈತ್ರಾ ಅತಿಥಿಗಳಾಗಿ ಬಂದಿದ್ದಾರೆ. ಬಂದವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ಬಿಗ್ ಬಾಸ್ ಆದೇಶ ಆಗಿತ್ತು. ಆದರೆ, ಅದನ್ನು ಗಿಲ್ಲಿ ಮೀರಿದ್ದಾರೆ. ಎಲ್ಲರೂ ಅವರನ್ನು ಚೆನ್ನಾಗಿ ನೋಡಿಕೊಂಡರೆ ಗಿಲ್ಲಿ ಮಾತ್ರ ಅವರಿಗೆ ಟಾರ್ಚರ್ ಕೊಟ್ಟಿದ್ದಾರೆ. ಇದರಿಂದ ಸಿಟ್ಟಾದ ಅತಿಥಿಗಳು ಕೂಗಾಡಿದ್ದಾರೆ. ಬಿಗ್ಬಾಸ್ ಕೂಡಾ ಗಿಲ್ಲಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಇದರಿಂದ ಗಿಲ್ಲಿ ಬೇಸರಗೊಂಡಿದ್ದಾರೆ. ಸೈಲೆಂಟ್ ಆಗಿದ್ದಾರೆ. ಇದನ್ನು ನೋಡಿದ ಅಶ್ವಿನಿ ಗೌಡ ಗಿಲ್ಲಿಗೆ ಸಮಾಧಾನ ಮಾಡಿದ್ದಾರೆ. ಹಿಂಸೆ ಆದರೆ ನನ್ನ ಕರೆದುಬಿಡು. ನಾನು ನಿನ್ನ ಜೊತೆ ಬರುತ್ತೇನೆ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಜೊತೆಯಲ್ಲೇ ಇಬ್ಬರೂ ಕುಳಿತು ಮಾತಾಡಿದ್ದಾರೆ. ಇದನ್ನ ನೋಡಿದ ವೀಕ್ಷಕರು ಚಿರಕಾಲ ಇರಲಿ ಈ ಸ್ನೇಹ ಎಂದು ಹಾರೈಸಿದ್ದಾರೆ.

ನೋಡಿರಿ

