ಅಶ್ವಿನಿ ಗೌಡ ಮತ್ತು ಗಿಲ್ಲಿ ಬೊಂಬಾಟ್ ಜೋಡಿ – ಅಶ್ವಿನಿ ಮೇಡಂ ಜುಟ್ಟು ಗಿಲ್ಲಿ ಕೈಯಲ್ಲಿ..!

ಅಶ್ವಿನಿ ಗೌಡ ಮತ್ತು ಗಿಲ್ಲಿ ಬೊಂಬಾಟ್ ಜೋಡಿ – ಅಶ್ವಿನಿ ಮೇಡಂ ಜುಟ್ಟು ಗಿಲ್ಲಿ ಕೈಯಲ್ಲಿ..!

ಬಿಗ್‌ಬಾಸ್ ಮನೆ ಈಗ ವಿಲನ್ ಕಂಟ್ರೋಲ್‌ನಲ್ಲಿದೆ. ಇದರ ಮಧ್ಯೆ ಬಿಗ್ ಟ್ವಿಸ್ಟ್ ಏನಪ್ಪಾ ಅಂದರೆ, ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಜೋಡಿಯಾಗಿದ್ದಾರೆ. ಕದ್ದು ಮುಚ್ಚಿ ಟಾಸ್ಕ್ ಮಾಡುತ್ತಿದ್ದಾರೆ. ಈ ರಹಸ್ಯ ಬಯಲಿಗೆಳೆಯಲು ಚೈತ್ರಾ ಕುಂದಾಪುರ ಶತಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಗಿಲ್ಲಿ ಮತ್ತು ಅಶ್ವಿನಿ ಆಟದ ಮುಂದೆ ಇಡೀ ಮನೆ ಮಂದಿ ಗೊಂದಲಕ್ಕೀಡಾಗಿದ್ದಾರೆ.

ಇದನ್ನೂ ಓದಿ:ಗಿಲ್ಲಿ ಚುಚ್ಚು ಮಾತಿಗೆ ಕಣ್ಣೀರಿಟ್ಟ ಕಾವ್ಯ – ವಿಲನ್‌ ಕೊಟ್ಟ ಟಾಸ್ಕ್‌ನಲ್ಲಿ ಗಿಲ್ಲಿ ಗೆದ್ರಾ?

ಅಶ್ವಿನಿ ಗೌಡ ಅವರನ್ನು ಗಿಲ್ಲಿ ನಟ ಅರ್ಥ ಮಾಡಿಕೊಂಡಷ್ಟು ಯಾರೂ ಮಾಡಿಕೊಂಡಿಲ್ಲ ಅನ್ಸುತ್ತೆ. ಅಶ್ವಿನಿ ಗೌಡ ಜೊತೆಯಲ್ಲಿದ್ದೇ ಗಿಲ್ಲಿ ನಟ ಸಿಕ್ಕಾಪಟ್ಟೆ ಆಟ ಆಡುತ್ತಾರೆ. ಗಿಲ್ಲಿನ ನಂಬಬೇಕೋ.. ಬೇಡವೋ ಎಂಬ ಗೊಂದಲದಲ್ಲೇ ಅಶ್ವಿನಿ ಗೌಡ ವಿಲನ್ ಕೊಟ್ಟ ಟಾಸ್ಕ್ ಮಾಡುತ್ತಿದ್ದಾರೆ. ಮನೆ ವಿಲನ್ ಕಂಟ್ರೋಲ್‌ನಲ್ಲಿದ್ದರು, ಈ ಬೊಂಬಾಟ್ ಜೋಡಿಯ ಆಟವೇ ವೀಕ್ಷಕರಿಗೆ ಮಜಾ ಕೊಡುತ್ತಿದೆ.

ಇನ್ನು ಗಿಲ್ಲಿ ನಟನ ಬಳಿ ರಜತ್ ಆಗಾಗ ಸ್ಪರ್ಧಿಗಳ ಬಗ್ಗೆ ಮಾಹಿತಿ ಕೇಳುತ್ತಿರುತ್ತಾರೆ. ಇದೀಗ ಅಶ್ವಿನಿ ಗೌಡ ಬಗ್ಗೆ ರಜತ್ ಗಿಲ್ಲಿ ಬಳಿ ಮಾತನಾಡಿದ್ದಾರೆ. ಆಗ ಗಿಲ್ಲಿ ನಟ ಅಶ್ವಿನಿ ಗೌಡ ಬಗ್ಗೆ ತಾನು ಅರ್ಥ ಮಾಡಿಕೊಂಡ ರೀತಿಯನ್ನು ವಿವರಿಸುತ್ತಾರೆ. ಅಶ್ವಿನಿ ಗೌಡ ನಿನ್ನ ಆ ರೀತಿ ಜಗಳ ಆಡಿದರು. ಈಗ ಅವರು ಇಷ್ಟು ಶಾಂತವಾಗಿರುವುದು ಏಕೆ ಎಂದು ರಜತ್ ಗಿಲ್ಲಿ ಬಳಿ ಕೇಳುತ್ತಾರೆ. ಆಗ ಗಿಲ್ಲಿ, ಅವರಿಗೆ ಮೂಡ್​ಸ್ವಿಂಗ್. ಒಮ್ಮೊಮ್ಮೆ ಪಾಪ ಎನಿಸಿಬಿಡುತ್ತದೆ. ಒಮ್ಮೊಮ್ಮೆ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂದು ಗಿಲ್ಲಿ ಹೇಳುತ್ತಾರೆ. ಅವರು ಒಮ್ಮೊಮ್ಮೆ ಶಾಂತವಾಗಿ ಮಾತನಾಡುತ್ತಾರೆ. ಗಿಲ್ಲಿ ನಾನು ಅದನ್ನು ಮಾಡಲಾ, ಇದನ್ನು ಮಾಡಲಾ ಎಂದು ಚೆನ್ನಾಗಿ ಕೇಳುತ್ತಾರೆ. ಅವರಲ್ಲಿ ಮತ್ತೊಂದು ವಿಷಯ ಇದೆ. ಹಿಡಿತಕ್ಕೆ ಸಿಗುತ್ತಾರೆ ಎಂದು ಕಂಡರೆ ಅರೆದೇಬಿಡ್ತಾರೆ. ದಕ್ಕಲ್ಲ ಎಂದು ಅನಿಸಿದರೆ ಸೈಲೆಂಟ್ ಆಗಿ ಬಿಡ್ತಾರೆ ಎಂದು ಅಶ್ವಿನಿ ಗೌಡ ಅವರ ಬಗ್ಗೆ ಗಿಲ್ಲಿ ವಿವರಿಸುತ್ತಾರೆ.

Sulekha