ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ಸೇಡಿನ ಜ್ವಾಲೆ – ಏಕವಚನದಲ್ಲೇ ಕಿತ್ತಾಡಿಕೊಂಡು ರಂಪಾಟ

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಮತ್ತೊಮ್ಮೆ ಜಗಳ ಮಾಡಿಕೊಂಡಿದ್ದಾರೆ. ಅದು ಕೂಡಾ ಉಸ್ತುವಾರಿಗಳಾಗಿದ್ದ ಇವರಿಬ್ಬರು ಹಾವು ಮುಂಗುಸಿ ತರ ಕಿತ್ತಾಡಿಕೊಂಡಿದ್ದಾರೆ. ಉಸ್ತುವಾರಿಗಳ ಜಗಳ ನೋಡಿ ಟಾಸ್ಕ್‌ನಲ್ಲಿದ್ದ ಸ್ಪರ್ಧಿಗಳೇ ಸುಸ್ತಾಗಿ ಹೋಗಿದ್ದಾರೆ.
ಇದನ್ನೂ ಓದಿ:ರೂಲ್ಸ್ ಬ್ರೇಕ್ ಮಾಡಿದ ಅಶ್ವಿನಿಗೆ ಬಿಗ್‌ಬಾಸ್ ಶಿಕ್ಷೆ! – ಕಾಲು ಮೇಲೆ ಕಾಲು ಹಾಕಿ ಕುಳಿತ ಗಿಲ್ಲಿ ನಟ!
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಗುವಾಗ ಸ್ಪರ್ಧಿಗಳು ಕಿತ್ತಾಡಬೇಕು. ಆದರೆ, ಉಸ್ತುವಾರಿಗಳೇ ಜಗಳ ಮಾಡಿಕೊಂಡಿರುವ ಎಪಿಸೋಡ್ ಮಂಗಳವಾರ ರಾತ್ರಿ ಪ್ರಸಾರವಾಗಲಿದೆ. ಈ ವಾರದ ಹೊಸ ಟಾಸ್ಕ್ ನಲ್ಲಿ ಒಂದು ಕಡೆಗೆ ಅಶ್ವಿನಿ ಗೌಡ ಮತ್ತೊಂದು ಕಡೆಗೆ ಗಿಲ್ಲಿ ನಟ ಉಸ್ತುವಾರಿ ಮಾಡುತ್ತಿದ್ದಾರೆ. ವಾಟರ್ ಟಾಸ್ಕ್ ನಲ್ಲಿ ಉಳಿದ ಸ್ಪರ್ಧಿಗಳು ಆಡುತ್ತಿದ್ದಾರೆ. ನಾಲ್ವರು ಸ್ಪರ್ಧಿಗಳು ಡ್ರಮ್ ಹೆಗಲ್ಮೇಲೆ ಹೊತ್ತಿಕೊಂಡು ನಿಂತಿರುತ್ತಾರೆ. ಎದುರಾಳಿ ತಂಡದವರು ಆ ಡ್ರಮ್ ಕೆಳಗೆ ಇಳಿಸುವಂತೆ ಮಾಡಬೇಕು. ಇದಕ್ಕಾಗಿ ಸ್ಪರ್ಧಿಗಳು ಡ್ರಮ್‌ನಲ್ಲಿ ನೀರು ತುಂಬಲು ಪ್ರಯತ್ನಿಸುತ್ತಾರೆ. ಮೊದಲು ಡ್ರಮ್ ಇಳಿಸೋರು ಆಟ ಸೋಲುತ್ತಾರೆ.
ಈ ಡ್ರಮ್ ಟಾಸ್ಕ್‌ನಲ್ಲಿ ಜಗಳ ಶುರುವಾಗುವುದು ಕಾವ್ಯ ಅವರಿಂದಾಗಿ. ಈ ವಾಟರ್ ಗೇಮ್ ಅಲ್ಲಿ ಸ್ಪರ್ಧಿಗಳು ಎತ್ತಿ ಹಿಡಿದುಕೊಂಡ ಡ್ರಮ್ ಅನ್ನ ಕಾವ್ಯ ಎರಡೂ ಕೈಯಿಂದ ಹಿಡಿದು ಎಳೆಯುತ್ತಾರೆ. ಎಳೆದು ಬಕೆಟ್ ಅಲ್ಲಿರೋ ನೀರನ್ನ ಹಾಕೋಕೆ ಮುಂದಾಗುತ್ತಾರೆ. ಆಗಲೇ ರೊಚ್ಚಿಗೇಳುವ ಅಶ್ವಿನಿ ಗೌಡ ವಿರೋಧಿಸುತ್ತಾರೆ. ಕಾವ್ಯ ಮಾಡಿರೋದು ತಪ್ಪಿಲ್ಲ. ಅವಳು ಡ್ರಮ್ ಅನ್ನ ಸರಿಸಿದ್ದಾರೆ. ಅಭಿ ನೀನು ಯಾಕೆ ನೀರು ತುಂಬಿದ ಬಕೆಟ್ ಅನ್ನ ಒದ್ದಿರೋದು ಅಂತಲೇ ಕೇಳ್ತಾರೆ. ಇವರ ಮಾತಿನ ದಾಟಿ ಏಕವಚನಕ್ಕೂ ಹೋಗುತ್ತದೆ. ನಿನ್ನ ಯೋಗ್ಯತೆ ಅನ್ನುವ ಪದವನ್ನು ಅಶ್ವಿನಿ ಗೌಡ ಇಲ್ಲಿ ಬಳಕೆ ಮಾಡ್ತಾರೆ. ಯಾಕೆಮ್ಮ ಕೂಗಿ ಬಿಪಿ ಜಾಸ್ತಿ ಮಾಡಿಕೊಳ್ತೀ ಅಂತ ಗಿಲ್ಲಿ ನಟ ಹೇಳುತ್ತಾರೆ. ಅಮ್ಮ ಅಂದಿದಕ್ಕೋ ಏನೋ? ಅಶ್ವಿನಿ ಗೌಡ ಇನ್ನಷ್ಟು ಸಿಟ್ಟು ಮಾಡಿಕೊಳ್ಳುತ್ತಾರೆ.
ಅಂತೂ ಟಾಸ್ಕ್‌ಗಾಗಿ ಸ್ಪರ್ಧಿಗಳು ಜಗಳವಾಡುವುದು ಬಿಟ್ಟು ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಜಗಳ ಶುರುಮಾಡುತ್ತಾರೆ. ಇವರಿಬ್ಬರ ವೈಯಕ್ತಿಕ ನಿಂದನೆ, ಜಗಳ ನೋಡಿ ಸ್ಪರ್ಧಿಗಳೇ ತಲೆಕೆಡಿಸಿಕೊಳ್ಳುತ್ತಾರೆ.

ನೋಡಿರಿ

