ಬಿಗ್‌ಬಾಸ್ ಗೆದ್ದ ಮೇಲೆ ಶಿವಣ್ಣನ ಆಶೀರ್ವಾದ – ಗಿಲ್ಲಿ ನಟನ ಹರಸಿ ಹಾರೈಸಿದ ಶಿವರಾಜ್ ಕುಮಾರ್

ಬಿಗ್‌ಬಾಸ್ ವಿನ್ನರ್ ಪಟ್ಟ ಗೆದ್ದು ಗಿಲ್ಲಿ ನಟ ಮಂಡ್ಯದಲ್ಲಿ ವಿಜಯಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ತನ್ನೂರಿನ ಜನತೆಯ ಸಂಭ್ರಮದಲ್ಲಿ ಭಾಗಿಯಾಗಿದ್ದರು. ತಮ್ಮೂರಿನ ವಿಜಯ ಯಾತ್ರೆಯ ಬಳಿಕ, ನೇರ ಬೆಂಗಳೂರಿಗೆ ಬಂದಿರುವ ಗಿಲ್ಲಿ ನಟ, ನೆಚ್ಚಿನ ನಟ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು.
ಇದನ್ನೂ ಓದಿ:ಬಿಗ್‌ಬಾಸ್ ಕಪ್ ಗೆದ್ದ ಗಿಲ್ಲಿಗೆ ಹುಟ್ಟೂರಲ್ಲಿ ಭವ್ಯ ಸ್ವಾಗತ! – ಮಳವಳ್ಳಿಯಲ್ಲಿ ಭರ್ಜರಿ ರೋಡ್ ಶೋ!
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ ಶಿವಣ್ಣನ ಭೇಟಿಯಾಗಿ ಆಶೀರ್ವಾದ ಪಡೆದರು. ತಮ್ಮ ಊರಿನಲ್ಲಿ ನಡೆಸಿದ ವಿಜಯ ಯಾತ್ರೆಯ ಬಳಿಕ, ನೇರ ಬೆಂಗಳೂರಿಗೆ ಬಂದಿರುವ ಗಿಲ್ಲಿ ನಟ ನೆಚ್ಚಿನ ನಟ ಶಿವರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಗಿಲ್ಲಿ ನಟ ಮಾಡುವ ಕಾಮಿಡಿಯನ್ನು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು ತುಂಬಾ ಎಂಜಾಯ್ ಮಾಡುತ್ತಾರೆ. ಹೀಗಾಗಿ ಗಿಲ್ಲಿಯೆಂದರೆ, ಶಿವಣ್ಣನಿಗೆ ತುಂಬಾ ಪ್ರೀತಿ. ಈ ಹಿಂದೆ ಕೂಡಾ ಮಾತನಾಡಿದ ಶಿವಣ್ಣ, ಈ ಬಾರಿ ಬಿಗ್ ಬಾಸ್ ಗೆಲ್ಲೋದು ಗಿಲ್ಲೀನೇ ಎಂದು ಹೇಳಿದ್ದರು. ಇದೀಗ ಊರಿನಿಂದ ಮರಳಿರುವ ಗಿಲ್ಲಿ ನಟ ಬೆಂಗಳೂರಿಗೆ ತೆರಳಿ ನಾಗಾವರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಶಿವಣ್ಣ ಮನೆಗೆ ತೆರಳಿದರು. ಶಿವಣ್ಣ ಹಾಗೂ ಗೀತಕ್ಕಾ ಜೊತೆ ಕುಳಿತು ಮಾತನಾಡಿ, ಅವರ ಆಶೀರ್ವಾದ ಪಡೆದಿದ್ದಾರೆ. ಕೇಕ್ ಕತ್ತರಿಸಿ, ಶಿವಣ್ಣನಿಗೆ ತಿನ್ನಿಸಿದ ಗಿಲ್ಲಿ, ಸ್ವಲ್ಪ ಸಮಯ ಇದ್ದು, ಶಿವಣ್ಣ- ಗೀತಕ್ಕಾ ಆಶೀರ್ವಾದ ಪಡೆದು ಅಲ್ಲಿಂದ ಹೊರಟಿದ್ದಾರೆ.
ಇನ್ನು ಗಿಲ್ಲಿ ನಟ ಶಿವಣ್ಣನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಬಿಗ್‌ಬಾಸ್ ಗೆದ್ದ ಮೇಲೆ ಗಿಲ್ಲಿಯ ಅದೃಷ್ಟ ಮತ್ತೊಂದು ಲೆವೆಲ್‌ಗೆ ಏರಿದೆ. ಸಿನಿಮಾದಲ್ಲಿ ಆಫರ್ ಗಳು ಬರುತ್ತಿವೆ.

ನೋಡಿರಿ

