ಗಿಲ್ & ಟೆಂಬಾಗೆ REAL ಟಾಸ್ಕ್ – TEST ಪಾಸಾದ್ರೆ ಟಾಪ್-2 ಫಿಕ್ಸ್
WTC ಅಂಕಪಟ್ಟಿ ಲೆಕ್ಕಾಚಾರ ಹೇಗಿದೆ?

ಬ್ಯಾಕ್ ಟು ಬ್ಯಾಕ್ ಸಿರೀಸ್.. ಬ್ಯಾಕ್ ಟು ಬ್ಯಾಕ್ ಮ್ಯಾಚಸ್.. ಅದ್ರಲ್ಲೂ ಕ್ಯಾಪ್ಟನ್ ಆಗಿ, ವೈಸ್ ಕ್ಯಾಪ್ಟನ್ ಆಗಿ ಬ್ಯಾಲೆನ್ಸ್ ಮಾಡೋದು ಶುಭ್‌ಮನ್ ಗಿಲ್ಗೆ ತುಂಬಾನೇ ಚಾಲೆಂಜಿಂಗ್ ಆಗಿದೆ. ಆಲ್ ಫಾರ್ಮೆಟ್ ಪ್ಲೇಯರ್ ಆಗಿರೋ ಗಿಲ್ ಈಗ ಸೌತ್ ಆಫ್ರಿಕಾ ಬೇಟೆಗೆ ಸನ್ನದ್ಧವಾಗ್ಬೇಕಿದೆ. ಟೆಸ್ಟ್ ತಂಡದ ನಾಯಕನಾಗಿ ಶುಭ್‌ಮನ್ ಗಿಲ್ ಮೂರನೇ ಚಾಲೆಂಜ್ಗೆ ಸಿದ್ಧವಾಗ್ಬೇಕಿದೆ. ಯಾಕಂದ್ರೆ ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಹಾಲಿ ಚಾಂಪಿಯನ್ಸ್. ಆಸ್ಟ್ರೇಲಿಯಾವನ್ನೇ ಬಗ್ಗು ಬಡಿದು ಗದೆಯನ್ನ ಎತ್ತಿ ಹಿಡಿದವ್ರು. ಇನ್ನು ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಸಮಬಲದೊಂದಿಗೆ ಕೊಲ್ಕತ್ತಾಗೆ ಕಾಲಿಟ್ಟಿರೋ ಬವುಮಾ ಪಡೆ ಭಾರತವನ್ನ ಕಟ್ಟಿಹಾಕೋ ಮೈಂಡ್ಸೆಟ್ನಲ್ಲೇ ಇದೆ. ಅಲ್ದೇ ಬವುಮಾ ನೋ ಲಾಸ್ ಕ್ಯಾಪ್ಟನ್ ಆಗಿ ಡಬ್ಲ್ಯೂಟಿಸಿ ಟ್ರೋಫಿ ಎತ್ತಿ ಹಿಡಿದಿರೋ ನಾಯಕ. ಆಲ್ರೆಡಿ ಎ ತಂಡಗಳ ನಡುವಿನ ಪಂದ್ಯದಲ್ಲೇ ಬಿಗ್ ವಾರ್ನಿಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಜೆಡಿಎಸ್ ಕೋರ್ ಕಮಿಟಿ ಸ್ಥಾನದಿಂದ ಜಿಟಿ ದೇವೇಗೌಡ ಔಟ್! – HDK ವಿರುದ್ಧ ಕಿಡಿ ಕಾರಿದ ಜಿಟಿಡಿ
ವರ್ಷದ ಕೊನೆಯ ಟೆಸ್ಟ್ ಸರಣಿ ಗೆಲ್ಲುತ್ತಾ ಭಾರತ?
ಶುಭ್‌ಮನ್ ಗಿಲ್ ನಾಯಕತ್ವದಲ್ಲಿ ಭಾರತ ಈ ವರ್ಷದ ಕೊನೆಯ ಟೆಸ್ಟ್ ಸರಣಿಯನ್ನ ಆಡ್ತಿದ್ದು ಗೆಲ್ಲೋ ಟಾರ್ಗೆಟ್ನಲ್ಲೇ ಕಣಕ್ಕಿಳಿಯಲಿದೆ. ಗಿಲ್ ನಾಯಕತ್ವದಲ್ಲಿ ಭಾರತ 2025- 27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಭಿಯಾನವನ್ನು ಪ್ರಾರಂಭಿಸಿತು. ಹಾಗೇ ಮೊದಲ ಬಾರಿಗೆ ನಾಯಕನಾಗಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯನ್ನು 2-2ರಿಂದ ಡ್ರಾ ಮಾಡಿಕೊಂಡಿತು. ಬಳಿಕ ಭಾರತ ತಂಡವು ತವರು ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 2-0 ಅಂತರದಿಂದ ಸೋಲಿಸಿತು. ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿ ಭಾರತದ ಈ ವರ್ಷದ ಕೊನೆಯ ಟೆಸ್ಟ್ ಸರಣಿಯಾಗಲಿದೆ. ಆ ಬಳಿಕ ಮುಂದಿನ 7 ತಿಂಗಳು ರೆಡ್ ಬಾಲ್ ಫಾರ್ಮೆಟ್ನಲ್ಲಿ ಯಾವುದೇ ಪಂದ್ಯಗಳಿಲ್ಲ.. ಮುಂದಿನ ವರ್ಷ ಜೂನ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದವರೆಗೆ ಗಿಲ್ ಪಡೆ ಯಾವುದೇ ರೆಡ್-ಬಾಲ್ ಪಂದ್ಯಗಳನ್ನು ಆಡುವುದಿಲ್ಲ.
ಭಾರತ ಎ ತಂಡದ ವಿರುದ್ಧ ವಿಶ್ವದಾಖಲೆ ಬರೆದ ಸೌತ್ ಆಫ್ರಿಕಾ!
ಭಾರತ ಮತ್ತು ಸೌತ್ ಆಫ್ರಿಕಾ ಎ ತಂಡಗಳ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿ ಮುಗಿದಿದೆ. ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಭಾರತ ಎ ತಂಡ 3 ವಿಕೆಟ್ಗಳ ಜಯ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಸೌತ್ ಆಫ್ರಿಕಾ ಎ ತಂಡ 5 ವಿಕೆಟ್ಗಳ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿಯನ್ನು 1-1 ಅಂತರದಿಂದ ಅಂತ್ಯಗೊಳಿಸಿದ್ದಾರೆ. ಅದ್ರಲ್ಲೂ ಈ ಸರಣಿಯಲ್ಲಿ ಸೌತ್ ಆಫ್ರಿಕಾ ವರ್ಲ್ಡ್ ರೆಕಾರ್ಡ್ ನಿರ್ಮಿಸಿದೆ. ಅದು ಕೂಡ ನಾಲ್ಕನೇ ಇನಿಂಗ್ಸ್ನಲ್ಲಿ 400+ ರನ್ ಬೆನ್ನಟ್ಟಿ ಗೆಲ್ಲೋ ಮೂಲಕ. ಅಂದರೆ ಎ ತಂಡಗಳ ನಡುವಣ ಪ್ರಥಮ ದರ್ಜೆ ಪಂದ್ಯದಲ್ಲಿ ಅತ್ಯಧಿಕ ರನ್ ಚೇಸ್ ಮಾಡಿ ಗೆದ್ದ ವಿಶ್ವ ದಾಖಲೆ ಸೌತ್ ಆಫ್ರಿಕಾ ಎ ತಂಡದ ಪಾಲಾಗಿದೆ. ಇದೇ ಕಾನ್ಫಿಡೆನ್ಸ್ನಲ್ಲೇ ಅಧಿಕೃತ ಪಂದ್ಯಗಳಲ್ಲೂ ಗೆಲ್ಲೋ ಮೈಂಡ್ಸೆಟ್ನಲ್ಲಿದ್ದಾರೆ. ಅದ್ರಲ್ಲೂ ಟೆಂಬಾ ಬವುಮಾ ಅಂತೂ ಕಳೆದ ತಿಂಗಳೇ ಭಾರತಕ್ಕೆ ಎಚ್ಚರಿಕೆ ಕೊಟ್ಟಿದ್ರು.
ನ್ಯೂಜಿಲೆಂಡ್ ನಂತೆ ಕ್ಲೀನ್ ಸ್ವೀಪ್ ಮಾಡ್ತೇವೆ ಎಂದಿದ್ದ ಬವುಮಾ!
ಕಳೆದ ಅಕ್ಟೋಬರ್ ತಿಂಗಳಲ್ಲಿ CEAT ಕ್ರಿಕೆಟ್ ರೇಟಿಂಗ್ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಮಾತ್ನಾಡಿದ್ದ ಟೆಂಬಾ ಬವುಮಾ ಭಾರತ ವಿರುದ್ಧದ ಟೆಸ್ಟ್ ಸರಣಿ ಬಗ್ಗೆ ಪ್ರಸ್ತಾಪಿಸಿದ್ರು. ಈ ವೇಳೆ ಭಾರತದ ಸ್ಪಿನ್ ಪಿಚ್ ಗಳಲ್ಲಿ ಭಾರತವನ್ನು ಸೋಲಿಸುವುದು ಸುಲಭವಲ್ಲ ಎಂದಿದ್ದ ಬವುಮಾ ನ್ಯೂಜಿಲೆಂಡ್ ರೀತಿಯಲ್ಲೇ ನಾವೂ ಭಾರತವನ್ನು ಸೋಲಿಸಬಲ್ಲೆವು. ಭಾರತದ ಸ್ಪಿನ್ ಪಿಚ್ ಗಳಲ್ಲಿ ಆಡಲು ನಾವು ಸಿದ್ಧ ಎಂದಿದ್ರು. ಕಳೆದ ವರ್ಷ ಸೆಪ್ಟೆಂಬರ್- ಅಕ್ಟೋಬರ್ ವೇಳೆ ಭಾರತ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್ ತಂಡ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತ್ತು. ಇದೀಗ ಅದೇ ಕೆಲಸವನ್ನ ನಾವೂ ಮಾಡ್ತೇವೆ ಅಂದಿದ್ರು. ಅದೂ ಅಲ್ದೇ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ರೇಸ್ ಅಂಕಪಟ್ಟಿಯಲ್ಲಿ ಟಾಪ್ 2ಗೆ ಬರೋಕೆ ಈ ಸರಣಿ ತುಂಬಾನೇ ಇಂಪಾರ್ಟೆಂಟ್ ಆಗುತ್ತೆ.
2025-27ರ ನಡುವಿನ WTC ಅಂಕಪಟ್ಟಿಯಲ್ಲಿ ಟಾಪ್-2 ಸ್ಥಾನ ಪಡೆಯಲು ಎರಡೂ ತಂಡಗಳಿಗೆ ಈ ಸರಣಿ ತುಂಬಾನೇ ಇಂಪಾರ್ಟೆಂಟ್ ಆಗುತ್ತೆ. ಭಾರತ 2-0 ಅಂತರದಿಂದ ಸರಣಿ ಗೆದ್ದರೆ ಶ್ರೀಲಂಕಾವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲಿದೆ. ದಕ್ಷಿಣ ಆಫ್ರಿಕಾ ಕೂಡ ಟಾಪ್ 2ಗೆ ಬರ್ಬೇಕು ಅಂದ್ರೆ ಎರಡೂ ಟೆಸ್ಟ್ ಪಂದ್ಯಗಳನ್ನ ಗೆಲ್ಬೇಕು. ಪ್ರಸ್ತುರ ಪಾಯಿಂಟ್ಸ್ ಪಟ್ಟಿಯಲ್ಲಿ 3ಕ್ಕೆ ಮೂರೂ ಮ್ಯಾಚ್ ಗೆದ್ದಿರೋ ಆಸ್ಟ್ರೇಲಿಯಾ ಫಸ್ಟ್ ಪ್ಲೇಸಲ್ಲಿದೆ. ಶ್ರೀಲಂಕಾ ಸೆಕೆಂಡ್ ಪ್ಲೇಸ್ನಲ್ಲಿದ್ದು ಭಾರತನೇ 3ನೇ ಸ್ಥಾನದಲ್ಲಿದೆ. ಌಂಡ್ ಸೌತ್ ಆಫ್ರಿಕಾ 5ನೇ ಸ್ಥಾನದಲ್ಲಿದೆ. ಸೋ ಎರಡೂ ತಂಡಗಳು ಆಲ್ರೆಡಿ ಮೊದಲ ಪಂದ್ಯ ನಡೆಯಲಿರೋ ಕೊಲ್ಕತ್ತಾ ಮೈದಾನ ತಲುಪಿಯಾಗಿದೆ.

ನೋಡಿರಿ

