ಗೆಲ್ಲೋ ಪಂದ್ಯ ಕೈಚೆಲ್ಲಿದ ಗಿಲ್ – 30 ರನ್ಸ್ ಗಾಗಿ ಬೌಲರ್ಸ್ ಗೆ ಬೆಂಚ್
ಪ್ಲೇಯಿಂಗ್ 11 ನಲ್ಲೇ ಸೋತ ಭಾರತ!

ಭಾರತ ವಿರುದ್ಧದ ಟೆಸ್ಟ್ ಸರಣಿಯುದ್ದಕ್ಕೂ ಆಲ್ರೌಂಡ್ ಪ್ರದರ್ಶನ ನೀಡ್ತಿರೋ ಆಂಗ್ಲರು ಸರಣಿ ಕೈವಶ ಮಾಡಿಕೊಳ್ಳೋಕೆ ಇನ್ನೊಂದೇ ಹೆಜ್ಜೆ ದೂರದಲ್ಲಿದ್ದಾರೆ. ಭಾರತ ನಾಲ್ಕನೇ ಪಂದ್ಯವನ್ನ ಗೆಲ್ಲೋದಿರಲಿ ಜಸ್ಟ್ ಡ್ರಾ ಮಾಡ್ಕೊಂಡ್ರೂ ದೊಡ್ಡ ಸಾಧನೆನೇ ಸರಿ. 10 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಬೌಲಿಂಗ್ ಪ್ರದರ್ಶನ ಮಾಡಿರೋ ಟೀಂ ಇಂಡಿಯಾ ಬೌಲರ್ಸ್ ಇಂಗ್ಲೆಂಡ್ ತಂಡವನ್ನ ಗೆಲುವಿನ ದಡಕ್ಕೆ ಕರೆದೊಯ್ದು ನಿಲ್ಲಿಸಿದ್ದಾರೆ. ತನ್ನದೇ ತಪ್ಪಿಂದ ಮೊದಲ ಹಾಗೂ ಮೂರನೇ ಮ್ಯಾಚ್ ಸೋತಿದ್ದ ಭಾರತ ಈಗ ನಾಲ್ಕನೇ ಪಂದ್ಯವನ್ನೂ ತನ್ನದೇ ತಪ್ಪು ನಿರ್ಧಾರಗಳಿಂದ ಸೋಲೋ ಹಂತಕ್ಕೆ ಬಂದಿದ್ದಾರೆ.
ಇದನ್ನೂ ಓದಿ : ಇಂಗ್ಲೆಂಡ್ ಪರ ಬ್ಯಾಟರ್ ಗಳ ಭರ್ಜರಿ ಪ್ರದರ್ಶನ -10 ವರ್ಷಗಳ ಬಳಿಕ ಭಾರತ ಕೆಟ್ಟ ದಾಖಲೆ
ಯೆಸ್. ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದಲ್ಲಿ ಸಾಲು ಸಾಲು ಪ್ಲೇಯರ್ಸ್ ಗಾಯಗೊಂಡಿದ್ರು. ಫೈನಲ್ಲಾಗಿ ಯಾರನ್ನೆಲ್ಲಾ ಕಣಕ್ಕಿಳಿಸಬೇಕು ಅನ್ನೋದೇ ದೊಡ್ಡ ಚರ್ಚೆಯಾಗಿತ್ತು. ಅಳೆದು ತೂಗಿ ಕೊನೆಗೂ 11 ಆಟಗಾರರನ್ನ ಕಣಕ್ಕಿಳಿಸಿದ್ರು. ಆಕಾಶ್ ದೀಪ್ ಮತ್ತು ಅರ್ಷದೀಪ್ ಗಾಯಗೊಂಡಿದ್ರಿಂದ ಅನ್ಶುಲ್ ಕಾಂಬೋಜ್ಗೆ ಚಾನ್ಸ್ ಕೊಟ್ಟಿದ್ರು. ಅತ್ತ ಕರುಣ್ ನಾಯರ್ ಕಡೆಯಿಂದ ಬಿಗ್ ಇನ್ನಿಂಗ್ಸ್ ಬರ್ಲಿಲ್ಲ ಅಂತಾ ಸಾಯಿ ಸುದರ್ಶನ್ಗೆ ಮತ್ತೊಂದು ಅವಕಾಶ ಕೊಟ್ರು. ನಿತೀಶ್ ಕುಮಾರ್ ರೆಡ್ಡಿ ಬದ್ಲಿಗೆ ಶಾರ್ದೂಲ್ ಠಾಕೂರ್ ಮತ್ತೆ ಟೀ ಸೇರ್ಕೊಂಡ್ರು. ಬಟ್ ಇಲ್ಲಿ ಸಾಯಿ ಸುದರ್ಶನ್ ಕಡೆಯಿಂದ ಬೆಟರ್ ಪರ್ಫಾಮೆನ್ಸ್ ಬಂತು ಅನ್ನೋದನ್ನ ಬಿಟ್ರೆ ಉಳಿದವರ್ಯಾರು ಇಂಪ್ಯಾಕ್ಟ್ ಮಾಡಲಿಲ್ಲ.
ಌಕ್ಚುಲಿ ಇಲ್ಲಿ ಟೀಂ ಇಂಡಿಯಾ ಮಾಡ್ಕೊಂಡ ಮತ್ತೊಂದು ಮಿಸ್ಟೇಕ್ ಅಂದ್ರೆ ಜಸ್ಟ್ ಬ್ಯಾಟಿಂಗ್ಗೇ ಒತ್ತು ಕೊಟ್ಟಿದ್ದು. ಮಿಡಲ್ ಆರ್ಡರ್ನಲ್ಲಿ 30 ರನ್ಸ್ ಎಕ್ಸ್ಟ್ರಾ ಬಂದ್ರೆ ಸ್ಕೋರ್ ಜಾಸ್ತಿ ಆಗುತ್ತೆ ಅನ್ನೋದನ್ನ ನೋಡಿದ್ರೋ ಹೊರತು ಅದೇ ಬೌಲಿಂಗ್ನಲ್ಲಿ ಮೂರು ವಿಕೆಟ್ ಕೀಳೋ ಸಾಮರ್ಥ್ಯ ಇರೋ ಬೌಲರ್ಗೆ ಚಾನ್ಸ್ ಕೊಡ್ಬೇಕು ಅನ್ಕೊಳ್ತಿಲ್ಲ. ಈಗ ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ನೋಡಿ.. ಬ್ಯಾಟಿಂಗ್ಗೂ ಸೈ ಬೌಲಿಂಗ್ಗೂ ಜೈ. ಬಟ್ ನಮ್ಮಲ್ಲಿ ಬ್ಯಾಟಿಂಗ್ ಇದ್ರೆ ಫೀಲ್ಡಿಂಗ್ ಇಲ್ಲ ಫೀಲ್ಡಿಂಗ್ ಇದ್ರೆ ಬ್ಯಾಟಿಂಗ್ ಬರಲ್ಲ. ಇಲ್ಲಿ ರನ್ಸ್ಗೆ ಮಹತ್ವ ಕೊಡೋ ಬದ್ಲು ವಿಕೆಟ್ ತೆಗೆಯೋ ಬೌಲರ್ನ ಕಣಕ್ಕಿಳಿಸಿದ್ರೆ ಸ್ವಲ್ಪನಾದ್ರೂ ಕಂಟ್ರೋಲ್ ಮಾಡಬಹುದಿತ್ತೋ ಏನೋ. ಪ್ರಸಿದ್ಧ್ ಕೃಷ್ಣ ಅಥವಾ ಕುಲ್ದೀಪ್ ಇಬ್ಬರಲ್ಲಿ ಒಬ್ರಿಗಾದ್ರೂ ಚಾನ್ಸ್ ನೀಡಬಹುದಿತ್ತು.
ಟಾಪ್ ಆರ್ಡರ್ ಬ್ಯಾಟರ್ಗಳನ್ನೇ ನಂಬ್ಕೊಂಡಿದ್ದ ಟೀಂ ಇಂಡಿಯಾದಲ್ಲಿ ಯಾರೊಬ್ಬರೂ ದೊಡ್ಡ ಮೊತ್ತದ ರನ್ಸ್ ಕಲೆ ಹಾಕೋಕೆ ಸಾಧ್ಯ ಆಗ್ಲಿಲ್ಲ. ಸಾಯಿ ಸುದರ್ಶನ್ 61 ರನ್ಸ್ ಕಲೆ ಹಾಕಿದ್ದೇ ದೊಡ್ಡ ಸ್ಕೋರ್ ಆಯ್ತು. ಇನ್ನು ಪಾರ್ಟ್ನರ್ ಶಿಪ್ ಕೂಡ ಫೇಲ್ಯೂರ್ ಆಯ್ತು. ಅದೂ ಸಾಲ್ದು ಅಂತಾ ಫೀಲ್ಡಿಂಗ್ ಅಂತೂ ಕೇಳೋದೇ ಬೇಡ. ಪಾಪ ಬೌಲರ್ಸ್ ವಿಕೆಟ್ ತೆಗೆಯೋ ಅವಕಾಶ ಕ್ರಿಯೇಟ್ ಮಾಡಿದ್ರೂ ಫೀಲ್ಡರ್ಸ್ ಪದೇಪದೆ ಕೈಚೆಲ್ಲಿದ್ರು. ಎಕ್ಸ್ಟ್ರಾ ರನ್ಸ್ ಬಿಟ್ಟುಕೊಟ್ರು. ರನ್ ಔಟ್ ಮಾಡೋ ಅವಕಾಶಗಳನ್ನೂ ಕೈಚೆಲ್ಲಿದ್ರು. ಇದೆಲ್ಲವೂ ಸೇರಿ ಈಗ ಭಾರತದ ಸೋಲಿನ ದವಡೆಗೆ ತಳ್ಳುತ್ತಿದೆ. ಇನ್ನು ಶುಭ್ಮನ್ ಗಿಲ್ ಕ್ಯಾಪ್ಟನ್ಸಿ ಬಗ್ಗೆಯೂ ಚರ್ಚೆಯಾಗ್ತಿದೆ. ಮಾಜಿ ಕೋಚ್ ರವಿ ಶಾಸ್ತ್ರಿ ಈ ಬಗ್ಗೆ ಮಾತ್ನಾಡಿದ್ದಾರೆ. ಗಿಲ್ ತಮ್ಮ ಬೌಲರ್ಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ದೂರಿದ್ದಾರೆ. ಗಿಲ್ ತಮ್ಮ ವೇಗದ ಬೌಲರ್ಗಳ ಮೇಲೆ ಹೆಚ್ಚಿನ ಗಮನ ಹರಿಸಿದರು. ಆದರೆ ಸ್ಪಿನ್ ಬೌಲರ್ಗಳತ್ತ ಗಮನ ಹರಿಸಲಿಲ್ಲ. ಕಳೆದ ಪಂದ್ಯದಲ್ಲಿ ಭಾರತದ ಪರ ನಾಲ್ಕು ವಿಕೆಟ್ ಕಬಳಿಸಿದ್ದ ಸ್ಪಿನ್ ಬೌಲರ್ ವಾಷಿಂಗ್ಟನ್ ಸುಂದರ್ ತಡವಾಗಿ ಬೌಲಿಂಗ್ಗೆ ತಂದ್ರು. ನಾಯಕನಾಗಿ ಸ್ಪಿನ್ ಬೌಲರ್ಗಳ ಮೇಲೂ ಭರವಸೆ ಇಡಬೇಕಾಗುತ್ತದೆ. ಅವರು ಸಹ ಜವಾಬ್ದಾರಿಯನ್ನು ಹೊರಲು ಸಿದ್ಧರಾಗಿರುತ್ತಾರೆ ಎಂದಿದ್ದಾರೆ. ಹಾಗೇ ಗಿಲ್ ಸ್ಪಿನ್ ಬೌಲರ್ಗಳಿಗೆ ದೊಡ್ಡ ಸ್ಪೆಲ್ ನೀಡಲೇ ಇಲ್ಲ. ಚಿಕ್ಕ ಚಿಕ್ಕ ಸ್ಪೆಲ್ಗಳಲ್ಲಿ ಬೌಲಿಂಗ್ ಮಾಡಿಸಿದರು. ಅವರ ಮೇಲೂ ಹೆಚ್ಚಿನ ನಂಬಿಕೆ ಇಟ್ಟಿದರೆ ಒಳ್ಳೆಯದಿತ್ತು. ವಾಷಿಂಗ್ಟನ್ ಸುಂದರ್ ಮೂರನೇ ದಿನದಾಟದ ಎರಡನೇ ಸೆಷನ್ನಲ್ಲಿ ಬೌಲಿಂಗ್ಗೆ ಬಂದ್ರು. ಒಲಿ ಪೋಪ್ಗೆ ಪೆವಿಲಿಯನ್ ದಾರಿ ತೋರಿಸಿದ್ರು. ಬಹುಶಃ ಮೊದ್ಲೇ ಕಳಿಸಿದ್ರೆ ಒಳ್ಳೇದಿತ್ತು ಎಂದಿದ್ದಾರೆ.

ನೋಡಿರಿ

