ಗಿಲ್ OUT.. ಸಂಜು OPENER – ದುಬಾರಿ ಅರ್ಷದೀಪ್ ಗೂ ಗೇಟ್ ಪಾಸ್?
200+ ಟಾರ್ಗೆಟ್ ಗೆಲ್ಲಲ್ಲ ಯಾಕೆ ಭಾರತ?

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೂರನೇ ಟಿ-20ಐ ಪಂದ್ಯ ನಾಳೆ ನಡೆಯಲಿದ್ದು ಉಭಯ ತಂಡಗಳಿಗೂ ಈ ಮ್ಯಾಚ್ ತುಂಬಾನೇ ಇಂಪಾರ್ಟೆಂಟ್ ಆಗುತ್ತೆ. ಅದ್ರಲ್ಲೂ ಎರಡನೇ ಪಂದ್ಯದಲ್ಲಿ ಹೀನಾಯವಾಗಿ ಸೋತಿರೋ ಭಾರತ ಮಸ್ಟ್ ಌಂಡ್ ಶುಡ್ ಕಂ ಬ್ಯಾಕ್ ಮಾಡ್ಲೇಬೇಕು. ಲಾಸ್ಟ್ ಮ್ಯಾಚಲ್ಲಿ 20 ಓವರ್ಗಳಲ್ಲೂ ಕಂಪ್ಲೀಟ್ ಆಗಿ ಬ್ಯಾಟಿಂಗ್ ಮಾಡದೆ ಆಲೌಟ್ ಆಗಿದ್ರು. ಈ ಸೋಲಿಗೆ ಭಾರತದ ಕಳಪೆ ಬ್ಯಾಟಿಂಗ್ ಕಾರಣ ಆಗಿದ್ರಿಂದ ಮೂರನೇ ಪಂದ್ಯಕ್ಕೆ ಪ್ಲೇಯಿಂಗ್ 11ನಲ್ಲಿ ಮೇಜರ್ ಸರ್ಜರಿಗೆ ಪ್ಲ್ಯಾನ್ ಆಗಿದೆ. ಅದ್ರಲ್ಲೂ ಶುಭ್ಮನ್ ಗಿಲ್ ಪ್ಲೇಯಿಂಗ್ 11ನಿಂದ ಹೊರಬೀಳೋದು ಪಕ್ಕಾ.
ಪ್ರಸ್ತುತ ಟೀಂ ಇಂಡಿಯಾದ ಆಲ್ ಫಾರ್ಮೆಟ್ ಪ್ಲೇಯರ್ ಆಗಿರೋ ಶುಭ್ಮನ್ ಗಿಲ್ ಟಿ-20ಐನಲ್ಲಿ ಕಂಟಿನ್ಯುಯಸ್ ಆಗಿ ಫೇಲ್ಯೂರ್ ಆಗ್ತಿದ್ದಾರೆ. ಗಿಲ್ ಕಳಪೆ ಫಾರ್ಮ್ ಇಡೀ ತಂಡಕ್ಕೆ ಎಫೆಕ್ಟ್ ಆಗ್ತಿದೆ. ಒಂದು ವರ್ಷಕ್ಕಿಂತ ಜಾಸ್ತಿ ಟಿ-20ಐನಿಂದ ಹೊರಗುಳಿದಿದ್ದ ಗಿಲ್ 2025ರ ಏಷ್ಯಾ ಕಪ್ ಮೂಲಕ ತಂಡಕ್ಕೆ ಕಂ ಬ್ಯಾಕ್ ಮಾಡಿದ್ರು. ಗಿಲ್ ಬಂದ್ಮೇಲೆ ಭಾರತ ತಂಡದ ಓಪನರ್ ಆಗಿದ್ದ ಸಂಜು ಸ್ಯಾಮ್ಸನ್ ಅವರನ್ನು ಮಿಡಲ್ ಆರ್ಡರ್ ಗೆ ತಳ್ಳಿದ್ರು. ಬಟ್ ಅಲ್ಲಿ ಕ್ಲಿಕ್ ಆಗ್ಲಿಲ್ಲ ಅಂತಾ ಈಗ ಜಿತೇಶ್ ಶರ್ಮಾಗೆ ಚಾನ್ಸ್ ಸಿಗ್ತಿದೆ. ಹೀಗಾಗಿ ಮುಂದಿನ ಪಂದ್ಯಕ್ಕೆ ಗಿಲ್ ತಂಡದಿಂದ ಹೊರಗುಳಿಯೋ ಚಾನ್ಸಸ್ ಇದೆ.
ಗಿಲ್ ಬದಲಿಗೆ ಸಂಜು ಸ್ಯಾಮ್ಸನ್ ಓಪನರ್?
ಕಟಕ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಶುಭ್ಮನ್ ಗಿಲ್ ಕೇವಲ 4 ರನ್‌ಗಳಿಗೆ ಔಟಾಗಿದ್ರು. ಎರಡನೇ ಪಂದ್ಯದಲ್ಲಿ ಖಾತೆ ತೆರೆಯದೇ ಪೆವಿಲಿಯನ್ ಸೇರಿದ್ರು. ಇದಾದ್ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಶುಭ್ಮನ್ ಗಿಲ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಮಾಜಿ ಕ್ರಿಕೆಟಿಗರು ಕೂಡ ಕೋಚ್ ಮತ್ತು ಬಿಸಿಸಿಐ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪದೇಪದೆ ಫೇಲ್ಯೂರ್ ಆಗ್ತಿದ್ರೂ ಇಷ್ಟೊಂದು ಅವಕಾಶ ಯಾಕೆ ಕೊಡ್ತಿದ್ದಾರೆ ಅಂತಾ ಪ್ರಶ್ನೆ ಮಾಡ್ತಿದ್ದಾರೆ. ಕಳೆದ 14 ಟಿ20ಐ ಇನ್ನಿಂಗ್ಸ್‌ಗಳಲ್ಲಿ ಕೇವಲ 263 ರನ್‌ಗಳನ್ನು ಗಳಿಸಿದ್ದಾರೆ. ಒಂದೇ ಒಂದು ಅರ್ಧಶತಕ ಬಂದಿಲ್ಲ. ಬಟ್ ಸಂಜು ಕಳೆದ ವರ್ಷ ಮೂರು ಶತಕ ಬಾರಿಸಿದ್ರು. ಓಪನರ್ ಆಗಿ ಅಭಿಷೇಕ್ ಜೊತೆ ಒಳ್ಳೆ ಪಾಟ್ನರ್ಶಿಪ್ ಬಂದಿದೆ. ಹೀಗಾಗಿ ಸಂಜುಗೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ನೀಡಿ ಓಪನರ್ ಆಗಿ ಆಡಿಸೋ ಸಾಧ್ಯತೆ ಇದೆ. ಇನ್ನು ಮಾಜಿ ಆಟಗಾರ ಇರ್ಫಾನ್ ಪಠಾಣ್ ಕೂಡ ಗಿಲ್ ಫಾರ್ಮ್ ಬಗ್ಗೆ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಪ್ರಶ್ನೆ ಮಾಡಿದ್ದಾರೆ.
ದುಬಾರಿ ಅರ್ಶದೀಪ್ ಸಿಂಗ್ ಗೂ ತಂಡದಲ್ಲಿಲ್ಲ ಚಾನ್ಸ್!
ಭಾರತದ ಪರ ಹೈಯೆಸ್ಟ್ ಟಿ-20ಐ ವಿಕೆಟ್ ಟೇಕರ್ ಆಗಿರೋ ಅರ್ಶದೀಪ್ ಸಿಂಗ್ ಬೌಲಿಂಗ್ನಲ್ಲಿ ತುಂಬಾನೇ ದುಬಾರಿಯಾಗಿದ್ರು. ಎರಡನೇ ಪಂದ್ಯದಲ್ಲಿ 13.50ರ ಎಕಾನಮಿಯಲ್ಲಿ ರನ್ಸ್ ಬಿಟ್ಟು ಕೊಟ್ಟಿದ್ರು. 4 ಓವರ್ಗಳನ್ನ ಬೌಲ್ ಮಾಡಿ 54 ರನ್ಸ್ ಕೊಟ್ಟಿದ್ರು. ಯಾವುದೇ ವಿಕೆಟ್ ತೆಗೆದಿರಲಿಲ್ಲ. ಅಲ್ದೇ ಒಂದೇ ಓವರ್ನಲ್ಲಿ 7 ವೈಡ್ಗಳನ್ನೂ ಹಾಕಿದ್ರು. ಹೀಗಾಗಿ ಮೂರನೇ ಪಂದ್ಯಕ್ಕೆ ಅರ್ಶದೀಪ್ ಬದಲಿಗೆ ಹರ್ಷಿತ್ ರಾಣಾ ಅವಕಾಶ ಪಡೆಯೋ ಚಾನ್ಸಸ್ ಜಾಸ್ತಿ ಇದೆ. ಉಳಿದಂತೆ ಹಿಂದಿನ ಪಂದ್ಯದ ಆಟಗಾರರೇ ಪ್ಲೇಯಿಂಗ್ 11ನಲ್ಲಿ ಕಂಟಿನ್ಯೂ ಆಗೋ ಸಾದ್ಯತೆ ಇದೆ. ಮುಂದಿನ ಪಂದ್ಯಕ್ಕೆ ಟೀಂ ಇಂಡಿಯಾಗೆ ಇರೋ ದೊಡ್ಡ ಸವಾಲು ಅಂದ್ರೆ ಬ್ಯಾಟಿಂಗ್ ಲೈನಪ್ ಸ್ಟ್ರಾಂಗ್ ಮಾಡೋದು. ಯಾಕಂದ್ರೆ ಬಿಗ್ ಚೇಸ್ ಅಂಥಾ ಬಂದಾಗ ಭಾರತ ಕಂಪ್ಲೀಟ್ ಡಲ್ ಹೊಡೆದಿದೆ.
ಬಿಗ್ ಟಾರ್ಗೆಟ್ ಇದ್ದಾಗ್ಲೇ ಕೈಕೊಡ್ತಾರೆ ಬ್ಯಾಟರ್ಸ್!
ಟಿ-20 ಫಾರ್ಮೆಟ್ನಲ್ಲಿ ಈಗೆಲ್ಲಾ 200ಪ್ಲಸ್ ಸ್ಕೋರ್ ಇದ್ರೂ ಅನಾಯಾಸವಾಗಿ ಟಾರ್ಗೆಟ್ ಚೇಸ್ ಮಾಡ್ತಿದ್ದಾರೆ. ಆದ್ರೆ ಬಲಿಷ್ಠ ಬ್ಯಾಟಿಂಗ್ ಲೈನಪ್ ಇದ್ರೂ ಟೀಂ ಇಂಡಿಯಾಗೆ ಸಾಧ್ಯವಾಗ್ತಿಲ್ಲ. 8ನೇ ಕ್ರಮಾಂಕದವರೆಗೂ ಹೊಡಿಬಡಿ ಆಟಗಾರರನ್ನೇ ಹೊಂದಿರುವ ಟೀಂ ಇಂಡಿಯಾಕ್ಕೆ 200 ರನ್‌ಗಳ ಗುರಿ ಎಂದರೆ ಮೊದ್ಲೇ ಸರೆಂಡರ್ ಆದವ್ರ ಥರ ಆಡ್ತಾರೆ. ಭಾರತ ತಂಡವು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 210+ ರನ್‌ಗಳ ಗುರಿಯನ್ನು ಎಂದಿಗೂ ಚೇಸ್ ಮಾಡೇ ಇಲ್ಲ. ಇಲ್ಲಿಯವರೆಗೆ 7 ಸಲ 210+ ರನ್‌ಗಳ ಗುರಿಯನ್ನು ಬೆನ್ನಟ್ಟಿದೆ. ಆದ್ರೆ ಒಮ್ಮೆಯೂ ಚೇಸ್ ಮಾಡಿ ಗೆದ್ದಿದ್ದೇ ಇಲ್ಲ. ಸೋ ಭಾರತ ಬಿಗ್ ಸ್ಕೋರ್ ಅಂದ್ರೆ ಮೊದ್ಲೇ ಆಗಲ್ಲ ಅನ್ನೋ ಥರ ಸೋಲೊಪ್ಪಿಕೊಳ್ತಿದೆ. ಅದೂ ಕೂಡ ಹತ್ತಿರಕ್ಕೂ ಬರದೆ ಆಲೌಟ್ ಆಗ್ತಿರೋದು ದೊಡ್ಡ ಟೆನ್ಷನ್ ಆಗಿದೆ.
ಇನ್ನ ಸೌತ್ ಆಫ್ರಿಕಾ ಕೂಡ ಬ್ಯಾಟಿಂಗ್ ಹಾಗೇ ಬೌಲಿಂಗ್ನಲ್ಲಿ ತುಂಬಾನೇ ಡೆಪ್ತ್ ಇದೆ. ಪವರ್ ಹಿಟ್ಟಿಂಗ್ ಬ್ಯಾಟರ್ಸ್ ಜೊತೆ ವರ್ಲ್ಡ್ ಕ್ಲಾಸ್ ಬೌಲರ್ಸ್ ಕೂಡ ಇದ್ದಾರೆ. ಆಲ್ರೆಡಿ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿ ಏಕದಿನ ಮಾದರಿಯಲ್ಲಿ ಒಂದು ಪಂದ್ಯ ಗೆದ್ದು ಟಿ-20ಐ ಸರಣಿಯನ್ನ ವಶಪಡಿಸಿಕೊಳ್ಳೋ ಟಾರ್ಗೆಟ್ನಲ್ಲಿದ್ದಾರೆ. ಅದೂ ಅಲ್ದೇ ಟಿ-20ಐನಲ್ಲಿ ಭಾರತವನ್ನ ಕಂಪ್ಳೀಟ್ ಡಾಮಿನೇಟ್ ಮಾಡ್ತಿದೆ. ಈಗಾಗ್ಲೇ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಅತಿ ಹೆಚ್ಚು ಬಾರಿ ಸೋಲಿಸಿದ ತಂಡ ಎಂಬ ವಿಶ್ವದಾಖಲೆ ಬರೆದಿದೆ. ದಕ್ಷಿಣ ಆಫ್ರಿಕಾ ಇದುವರೆಗೆ 13 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಸೋಲಿಸಿದೆ. ಸೋ ಮೂರನೇ ಮ್ಯಾಚಲ್ಲಿ ಭಾರತ ತುಂಬಾನೇ ಎಚ್ಚರಿಕೆಯಿಂದ ಆಡ್ಬೇಕಿದೆ. ಫಾರ್ಮ್ ಕಳ್ಕೊಂಡಿರೋ ಆಟಗಾರರಿಗೆ ಮುಲಾಜಿಲ್ಲದೆ ಗೇಟ್ಪಾಸ್ ಕೊಟ್ಟು ಪಂದ್ಯ ಗೆಲ್ಲೋ ಗುರಿಯೊಂದಿಗೆ ಟೀಂ ಕಟ್ಟಬೇಕಿದೆ.

ನೋಡಿರಿ

